ʼಸಂಪುಟ ಸರ್ಜರಿ ಮಾಡ್ತೀರೋ, ಸಿಎಂ ಬದಲಾಯಿಸ್ತಿರೋ? ಅದು ನಿಮ್ಮ ಹಣೆಬರಹʼ: ಸಿದ್ದರಾಮಯ್ಯ
ಬೆಂಗಳೂರು: ಒಂದೆಡೆ ಸರ್ಕಾರ ಸಂಪುಟ ಸರ್ಜರಿ ಚರ್ಚೆಯಲ್ಲಿ ಫುಲ್ ಬ್ಯುಸಿಯಾಗಿದೆ. ಇತ್ತಾ ಇದ್ರಿಂದ ಕೆರಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಪುಟ ವಿಸ್ತರಣೆ ಮಾಡ್ತಿರೋ..? ಪುನಾರಚನೆ ಮಾಡ್ತಿರೋ..? ಅಥವಾ ಮುಖ್ಯಮಂತ್ರಿಗಳನ್ನೇ ಬದಲಾಯಿಸ್ತಿರೋ..? ಅದೆಲ್ಲಾ ನಿಮ್ಮ ಪಕ್ಷದ ಹಣೆಬರಹ. ಈ ಸರ್ಕಸ್ನ್ನು ಶೀಘ್ರ ಕೊನೆಗೊಳಿಸಿ, ಆಡಳಿತದ ಗಮನ ಕೊಡಿ ಎಂದು ಸಿದ್ದರಾಮಯ್ಯ ಸರಕಾರಕ್ಕೆ ಚಾಟಿ ಬೀಸಿದ್ದಾರೆ.
ಟ್ವೀಟ್ ಮೂಲಕ ಸರ್ಕಾರವನ್ನ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, 'ಸಂಪುಟ ವಿಸ್ತರಣೆಯೋ, ಪುನಾರಚನೆಯೋ, ಮುಖ್ಯಮಂತ್ರಿಗಳ ಬದಲಾವಣೆಯೋ? ಇವೆಲ್ಲ ನಿಮ್ಮ ಪಕ್ಷದ ಹಣೆಬರಹ ಎಂದು ಬಿಜೆಪಿ ನಾಯಕರನ್ನು ಟೀಕಿಸಿರುವ ಅವರು, ಈ ಸರ್ಕಸ್ ನಲ್ಲಿ ರಾಜ್ಯದ ಆಡಳಿತ ದಿಕ್ಕೆಟ್ಟು ಹೋಗಿದೆ' ಎಂದಿದ್ದಾರೆ.
ಇನ್ನು 'ಹಿಂದೆಲ್ಲಾ ಬಿಜೆಪಿ ನಾಯಕರು, 'ಹೈಕಮಾಂಡ್ ಸಂಸ್ಕೃತಿ' 'ಮೂಲನಿವಾಸಿಗಳು - ವಲಸೆಗಾರರು', 'ಕುಟುಂಬ ರಾಜಕಾರಣ' ಎಂಬಿತ್ಯಾದಿ ಪದಗಳನ್ನು ಜೋಡಿಸಿ ಹಗಲು ರಾತ್ರಿ ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದರು. ಈಗ ಅದೇ ಆರೋಪಗಳನ್ನ ಪರಸ್ಪರ ಮಾಡಿಕೊಂಡು ಅವರೇ ಬೆತ್ತಲಾಗುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.
0 التعليقات: