Wednesday, 18 November 2020

ಕೋವಿಡ್ ಪ್ರತಿರೋಧಕ್ಕೆ ಸಹಾಯ: ಕಾಸರಗೋಡು ಜನರಲ್ ಆಸ್ಪತ್ರೆಗೆ ಮೆಡಿಕಲ್ ಉಪಕರಣಗಳನ್ನು ಕೊಟ್ಟು ಮತ್ತೊಮ್ಮೆ ಮುಹಿಮ್ಮಾತ್ ಸಾಂತ್ವನ


 ಕೋವಿಡ್ ಪ್ರತಿರೋಧಕ್ಕೆ ಸಹಾಯ: ಕಾಸರಗೋಡು ಜನರಲ್ ಆಸ್ಪತ್ರೆಗೆ ಮೆಡಿಕಲ್ ಉಪಕರಣಗಳನ್ನು ಕೊಟ್ಟು ಮತ್ತೊಮ್ಮೆ ಮುಹಿಮ್ಮಾತ್  ಸಾಂತ್ವನ 

ಕಾಸರಗೋಡು : ಜನರಲ್  ಆಸ್ಪತ್ರೆಗೆ ಕೋವಿಡ್  ಪ್ರತಿರೋಧವನ್ನು ಬೆಂಬಲಿಸುತ್ತಾ ಮೆಡಿಕಲ್ ಉಪಕರಣಗಳನ್ನು ತಲುಪಿಸಿ ಪುತ್ತಿಗೆ ಮುಹಿಮ್ಮಾತ್ ಸಂಸ್ಥೆ ಮತ್ತೊಮ್ಮೆ ಮಾದರಿಯಾಯಿತು. ಆಸ್ಪತ್ರೆಯಲ್ಲಿ ಈಗ ಆವಶ್ಯಕವಾಗಿರುವ ತೆರ್ಮಲ್ ಸ್ಕ್ಯಾನರ್, ಡಿಜಿಟಲ್ ತರ್ಮೋ ಮೀಟರ್, ಪಲ್ಸ್ ಆಕ್ಸೀ ಮೀಟರ್, ಆಕ್ಸಿಜನ್ ಮಾಸ್ಕ್, ಆಕ್ಸಿಜನ್ ಫ್ಲೋಮೀಟರ್, ಸ್ಟಿಲೈಝರ್ ಮೀಡಿಯಂ, ಫೂಟ್ ಓಪರೇಶನ್, ಡಿಸ್ಪೆನ್ಸರ್, ಫೂಟ್ ಓಪರೇಟಡ್, ಬಾಸ್ಕೆಟ್ ಮುಂತಾದ ಒಂದುವರೆ ಲಕ್ಷದವರೆಗೆ ಬಲೆಬಾಳುವ ಉಪಕರಣಗಳನ್ನು ಮುಹಿಮ್ಮಾತ್ ಕಾರುಣ್ಯ ಪದ್ಧತಿಯ ಮೂಲಕ ನೀಡಲಾಯಿತು. 

ಕಳೆದ ವರ್ಷಗಳಲ್ಲಿ ಆಸ್ಪತ್ರೆಯ ವಾರ್ಡ್ ನವೀಕರಣ, ಹೀಟಲ್ ಕುಡಿಯುವ ನೀರಿನ ಪದ್ಧತಿ, ಮೋರ್ಚರಿಯ ಮುಂದೆ ವೈಟಿಂಗ್ ಸೆಲ್ಟರ್ , ಮುಂತಾದ ಹಲವಾರು ಸಾಂತ್ವನ ಕಾರ್ಯಗಳನ್ನು ಈ ಆಸ್ಪತ್ರೆಗೆ ಮುಹಿಮ್ಮಾತ್ ಮಾಡಿ ಕೊಟ್ಟಿದೆ.    ಈದ್ ಮಿಲಾದ್ ಪ್ರಯುಕ್ತ ರೋಗಿಗಳಿಗೆ ಮತ್ತು ಸಹಾಯಕರಿಗೆ ಫ್ರೂಟ್ಸ್ ವಿತರಣೆ ವರ್ಷಗಳಿಂದ ನಡೆಯುತ್ತಿದೆ. 

ಮೆಡಿಕಲ್ ಉಪಕರಣಗಳ ವಿತರಣಾ ಕಾರ್ಯಕ್ರಮ ಮುಹಿಮ್ಮಾತ್ ಜನರಲ್ ಸೆಕ್ರೆಟರಿ ಬಿ.ಎಸ್ ಅಬ್ದುಲ್ಲಾ ಕುಞ್ಞಿ ಫೈಝಿ ನಿರ್ವಹಿಸಿದರು. ಜನರಲ್ ಆಸ್ಪತ್ರೆಯ ಸೂಪರೆಂಡ್ ಡಾ ರಾಜಾರಾಮ್ ಸ್ವೀಕರಿಸಿದರು. ನೋಡಲ್ ಆಫೀಸರ್ ಡಾ ಕುಞ್ಞಿ ರಾಮನ್ , ನರ್ಸಿಂಗ್ ಸೂಪರೆಂಡ್ ಸ್ನಿಶಿ, ಸ್ಟೋರ್ ಸೂಪರೆಂಡ್ ಅಜಿತ್ ಕುಮಾರ್, ಮುಹಿಮ್ಮಾತ್ ಫಿನಾನ್ಶಿಯಲ್ ಸೆಕ್ರೆಟರಿ ಹಾಜಿ ಅಮೀರಲಿ ಚೂರಿ , ಪಿ ಆರ್ ಸೆಕ್ರೆಟರಿ ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮೂಸ ಸಖಾಫಿ ಕಳತ್ತೂರ್ ಸ್ವಾಗತ ಮತ್ತು ಅಬೂಬಕರ್ ಕಾಮಿಲ್ ಸಖಾಫಿ ಅನ್ನಡುಕ ಕೃತಜ್ಞತೆ ಸಲ್ಲಿಸಿದರು.

ಸಮೂಹದ ಅನಾಥ ಮತ್ತು ನಿರ್ಗತಿಕರಾಗಿರುವ ಸಾವಿರದ ಐನೂರರಷ್ಟು ಬರುವ ವಿದ್ಯಾರ್ಥಿಗಳ ಜೀವನ ಜ್ಞಾನ ಮಜಲುಗಳಲ್ಲಿನ ಖರ್ಚು ಉಚಿತವಾಗಿ ವಹಿಸಿಕೊಂಡು ಕಾರ್ಯಾಚರಿಸುತ್ತಿರುವ ಮುಹಿಮ್ಮಾತ್, ಜೀವ ಕಾರುಣ್ಯ ರಂಗದಲ್ಲಿ 28 ವರ್ಷವಾಯಿತು. 

  ಇದಲ್ಲದೆ ತಂದೆ ಮರಣಹೊಂದಿದ 12 ವರ್ಷ ವಯಸ್ಸಿಗಿಂತ ಚಿಕ್ಕ 300 ಅನಾಥ ಮಕ್ಕಳ ಖರ್ಚಿಗಾಗಿ ಪ್ರತಿ ತಿಂಗಳು ನಿಶ್ಚಿತ ಮೊತ್ತವನ್ನು ತಲುಪಿಸುವ ಪದ್ಧತಿಯೂ ಮುಹಿಮ್ಮಾತಿನ ಅಂಡರಲ್ಲಿ ನಡೆಯುತ್ತಿದೆ.


SHARE THIS

Author:

0 التعليقات: