Saturday, 7 November 2020

ಎಸ್ ಡಿಪಿಐ ಜೊತೆ ಹೊಂದಾಣಿಕೆ ಮಾಡಿಲ್ಲ: ರಮಾನಾಥ ರೈ

 

ಎಸ್ ಡಿಪಿಐ ಜೊತೆ ಹೊಂದಾಣಿಕೆ ಮಾಡಿಲ್ಲ: ರಮಾನಾಥ ರೈ

ಬಂಟ್ವಾಳ: ಎಸ್.ಡಿ.ಪಿ.ಐ. ಜೊತೆ ಹೊಂದಾಣಿಕೆ ಎಂಬ ಆರೋಪ ನಿರಾಧಾರವಾದುದು. ಒಂದು ಸ್ಥಾನ ಅವರಿಗೆ, ಇನ್ನೊಂದು ಸ್ಥಾನ ನಮಗೆ ಹಂಚಿದರೆ ಅದು ಹೊಂದಾಣಿಕೆ. ಕಾಂಗ್ರೆಸ್ ಎರಡೂ ಸ್ಥಾನಕ್ಕೆ ಸ್ಪರ್ಧಿಸಿ ಎರಡೂ ಸ್ಥಾನವನ್ನು ಗೆದ್ದಿದೆ. ಇದರಲ್ಲಿ ಹೊಂದಾಣಿಕೆಯ ಮಾತೇ ಇಲ್ಲ ಎಂದು ಮಾಜಿ ಸಚಿವ ಬಿ.ರಮಾನಾಥ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಶಾಸಕ ಮತ್ತು ಸಚಿವನಾಗಿದ್ದ ಸಂದರ್ಭದ ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ನೀರು, ರಸ್ತೆ ಸಹಿತ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದ ಫಲವಾಗಿ ಪುರಸಭೆಯ ಚುನಾವಣೆಯಲ್ಲಿ ಇತರ ಪಕ್ಷಗಳಿಗಿಂತ ಕಾಂಗ್ರೆಸ್ ಅತೀ ಹೆಚ್ಚು ಸ್ಥಾನಗಳನ್ನು ಗಳಿಸಿತ್ತು. ಹೆಚ್ಚು ಸ್ಥಾನಗಳನ್ನು ಹೊಂದಿದ್ದ ನಮ್ಮ‌ ಪಕ್ಷದ ಸದಸ್ಯರು ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದರು.

ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ನಾವು ಯಾರ ಜೊತೆಯೂ ಹೊಂದಾಣಿಕೆ ಮಾಡಿಲ್ಲ. ಯಾರಾದರೂ ನಮ್ಮ ಅಭ್ಯರ್ಥಿಗಳನ್ನು ಸ್ವಯಂ ಆಗಿ ಬೆಂಬಲಿಸಿದರೆ ಅದು ಅವರ ಇಷ್ಟ. ಅದಕ್ಕೆ ನಾವು ಬೇಡ ಎನ್ನಲು ಆಗುವುದಿಲ್ಲ ಎಂದರು.

ಕಾಂಗ್ರೆಸ್ ನಲ್ಲಿ ಅಲ್ಪಸಂಖ್ಯಾತರು, ಬಹುಸಂಖ್ಯಾತರು ಎಂಬ ಸಿದ್ಧಾಂತ ಇಲ್ಲ. ಕಾಂಗ್ರೆಸ್ ನಲ್ಲಿ ಇರುವುದು ಜಾತ್ಯಾತೀತ ಸಿದ್ಧಾಂತ ಮಾತ್ರ ಎಂದು ರಮಾನಾಥ ರೈ ಹೇಳಿದರು.


SHARE THIS

Author:

0 التعليقات: