ಸುರಕ್ಷಿತ ಚುನಾವಣೆ ಹೇಳಿಕೆ: ಅಧಿಕಾರಿ ಅಮಾನತುಗೊಳಿಸಿದ ಟ್ರಂಪ್
ವಾಷಿಂಗ್ಟನ್: ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆ ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಸುರಕ್ಷಿತವಾದ ಚುನಾವಣೆ ಎಂದು ಹೇಳಿದ್ದ ಹೋಮ್ ಲ್ಯಾಂಡ್ ಸೆಕ್ಯುರಿಟಿ ವಿಭಾಗದ ಅಧಿಕಾರಿಯನ್ನು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಮಾನತುಗೊಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ ಟ್ವೀಟ್ ಮಾಡಿರುವ ಡೊನಾಲ್ಡ್ ಟ್ರಂಪ್,'ಹೋಮ್ ಲ್ಯಾಂಡ್ ಭದ್ರತಾ ವಿಭಾಗದ ಸೈಬರ್ ಭದ್ರತೆ ಮತ್ತು ಮೂಲಸೌಲಭ್ಯ ಭದ್ರತಾ ಏಜೆನ್ಸಿ(ಸಿಐಎಸ್ಎ) ನಿರ್ದೇಶಕ ಕ್ರಿಸ್ ಕ್ರೆಬ್ಸ್ ಅವರನ್ನು ಅಧಿಕಾರದಿಂದ ಅಮಾನತು ಗೊಳಿಸಿದ್ದೇನೆ' ಎಂದು ಹೇಳಿದ್ದಾರೆ.
0 التعليقات: