ಗುಲ್ಬರ್ಗ : ಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ
ಗುಲ್ಬರ್ಗ : ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಗುಲ್ಬರ್ಗ ಜಿಲ್ಲಾ ಸಮಿತಿಯನ್ನು ಇಂದು ರಝಾ ಏ ಮುಸ್ತಫಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸ್ತಿತ್ವಕ್ಕೆ ತರಲಾಯಿತು.
ಎಸ್ಸೆಸ್ಸೆಫ್ ರಾಜ್ಯ ಪ್ರಭಾರ ಅಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಗುಲ್ಬರ್ಗ ರಝಾ ಏ ಮುಸ್ತಫಾದ ಪ್ರಾಂಶುಪಾಲರಾದ ಮೌಲಾನಾ ಜಾವೆದ್ ಹಝ್ರತ್ ಉದ್ಘಾಟಿಸಿದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮುಸ್ತಫಾ ನಈಮಿ ಹಾವೇರಿ ದಿಕ್ಸೂಚಿ ಭಾಷಣ ಮಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ಖಮರುಝ್ಝಮಾನ್ ಗುಲ್ಬರ್ಗ ಹಾಗೂ ಸಯ್ಯಿದ್ ಸುಫ್ಯಾನ್ ಖಾದ್ರಿ ಮಾತನಾಡಿದರು.
ಎಸ್ಸೆಸ್ಸೆಫ್ ಗುಲ್ಬರ್ಗ ಜಿಲ್ಲೆಯ ಗೌರವಾಧ್ಯಕ್ಷರಾಗಿ ಮೌಲಾನಾ ಜಾವಿದ್ ರಝಾ ಹಝ್ರತ್, ಅಧ್ಯಕ್ಷರಾಗಿ ಮೌಲಾನಾ ಆಲಂ ಬರಕಾತಿ ಸಾಹೇಬ್, ಪ್ರಧಾನ ಕಾರ್ಯದರ್ಶಿಯಾಗಿ ಬದ್ರಝ್ಝಮಾನ್ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ರಫೀಖುದ್ದೀನ್ ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ವಹಜ್ ಇರ್ಫಾನ್ ಹಾಗೂ ಕಾರ್ಯದರ್ಶಿಯಾಗಿ ಸಯ್ಯಿದ್ ಸುಫ್ಯಾನ್ ಖಾದ್ರಿ ರವರನ್ನೂ ಹಾಗೂ ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
0 التعليقات: