Tuesday, 17 November 2020

ಗುಡ್ ನ್ಯೂಸ್: ಇನ್ಮುಂದೆ ಮನೆ ಬಾಗಿಲಲ್ಲೇ ಪಡೆಯಬಹುದು ಜೀವನ್ ಪ್ರಮಾಣ ಪತ್ರ


 ಗುಡ್ ನ್ಯೂಸ್: ಇನ್ಮುಂದೆ ಮನೆ ಬಾಗಿಲಲ್ಲೇ ಪಡೆಯಬಹುದು ಜೀವನ್ ಪ್ರಮಾಣ ಪತ್ರ

ಬೆಂಗಳೂರು : ಭಾರತೀಯ ಅಂಚೆ ಇಲಾಖೆ ವತಿಯಿಂದ ವಿವಿಧ ನಿವೃತ್ತ ಪಿಂಚಣಿದಾರರು ಅಂಚೆ ಕಛೇರಿ ಪೋಸ್ಟ್ ಮ್ಯಾನ್ ಮೂಲಕ ಜೀವನ ಪ್ರಮಾಣ ಪತ್ರ ಸಲ್ಲಿಸುವ ಹೊಸ ಸೌಲಭ್ಯ ಆರಂಭವಾಗಿದ್ದು, ಇನ್ನುಮುಂದೆ ಮನೆ ಬಾಗಿಲಲ್ಲೇ ಜೀವನ್ ಪ್ರಮಾಣ ಪತ್ರ (ಲೈಫ್ ಸರ್ಟಿಫಿಕೇಟ್) ಪಡೆಯಬಹುದಾಗಿದೆ.

ಸರಕಾರದ ಪಿಂಚಣಿ ಪಡೆಯುವವರು ಪ್ರತೀ ವರ್ಷ ನವಂಬರ್ನಲ್ಲಿ `ಜೀವನ್ ಪ್ರಮಾಣ್' ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಪಿಂಚಣಿಯು ಮುಂದುವರಿಯಲು ತಾವು ಜೀವಂತ ಇರುವುದರ ಬಗೆಗೆ ದೃಢೀಕರಣ ಪತ್ರ ನೀಡಬೇಕಾಗುತ್ತದೆ. ಇದನ್ನು ಪಿಂಚಣಿ ಪಡೆಯುವ ಬ್ಯಾಂಕ್ ಶಾಖೆಗಳಲ್ಲಿ ಪಿಂಚಣಿದಾರರು ಕೆಲ ವರ್ಷಗಳ ಹಿಂದಿನವರೆಗೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ನೀಡಬೇತ್ತು.

ಪಿಂಚಣಿದಾರರ ಶ್ರಮ, ಹಣ ಹಾಗೂ ಸಮಯ ಉಳಿತಾಯ ಮಾಡುವ ನಿಟ್ಟಿನಲ್ಲಿ ಸರಕಾರವು ಭಾರತೀಯ ಅಂಚೆ ಇಲಾಖೆಯ ಮುಖಾಂತರ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನ ವತಿಯಿಂದ ಮನೆ ಬಾಗಿಲಲ್ಲಿ ಅಥವಾ ಸಮೀಪದ ಅಂಚೆ ಕಛೇರಿಗಳಲ್ಲಿ `ಜೀವನ್ ಪ್ರಮಾಣ' ಪತ್ರವನ್ನು ಸಲ್ಲಿಸುವ ವ್ಯವಸ್ಥೆಯನ್ನು ಮಾಡಿದೆ. ಮೊಬೈಲ್ ಹಾಗೂ ಬಯೋಮೆಟ್ರಿಕ್ ಮೂಲಕ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

ಈ ಹೊಸ ಸೌಲಭ್ಯದಿಂದ ಯಾವುದೇ ಪಿಂಚಣಿದಾರರು ತಮ್ಮ ಪೋಸ್ಟ್ ಮ್ಯಾನ್ ಅಥವಾ ಅಂಚೆ ಕಚೀರಿಯನ್ನು ಸಂಪರ್ಕಿಸಿ ಈ ಸೇವೆಯ ಪ್ರಯೋಜನವನ್ನು ಪಡೆದು ಕೊಳ್ಳ ಬಹುದು. ಇದರ ಶುಲ್ಕ ಕೇವಲ 70 ರೂ. ನಿಗದಿಪಡಿಸಲಾಗಿದೆ. ಈ ಸೌಲಭ್ಯದ ಉಪಯೋಗವನ್ನು ಕೇಂದ್ರ ,ರಾಜ್ಯ ಸರ್ಕಾರಿ, ಇಲಾಖೆಗಳ, ಹಾಗೂ ಇತರೆ ಸಂಸ್ಥೆಗಳ ನಿವೃತ್ತ ಉದ್ಯೊಗಿಗಳು ,ಜೀವನ್ ಪ್ರಮಾಣ್ ವ್ಯವಸ್ಥೆ ಅಳವಡಿಸಿಕೊಂಡಿರುವ ಯಾವುದೇ ಇಲಾಖೆ, ಸಂಸ್ಥೆಯ ಪಿಂಚಣಿದಾರರೂ ಈ ಸೌಲಭ್ಯ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ಪಿಂಚಣಿದಾರರು ತಮ್ಮ ಮನೆಯ ಬಳಿಯಿರುವ ಅಂಚೆ ಕಚೇರಿಗೆ ಕರೆ ಮಾಡಿ ಪೋಸ್ಟ್ ಮ್ಯಾನ್, ಡಾಕ್ ಸೇವಕರನ್ನು ತಮ್ಮ ಮನೆಗಳಿಗೆ ಕಳಿಸುವಂತೆ ವಿನಂತಿಸಬಹುದು. ಅಥವಾ ತಮ್ಮ ಹತ್ತಿರದ ಆಂಚೆ ಕಚೇರಿಯನ್ನು ನೇರವಾಗಿ ಸಂಪರ್ಕಿಸಿ ವಿವರಗಳನ್ನು ಪಡೆಯಬಹುದು ಎಂದು ಮೈಸೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


SHARE THIS

Author:

0 التعليقات: