Thursday, 12 November 2020

ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ನೂತನ ಬಹರೈನ್ ಪ್ರಧಾನಿ

 

ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ 

 ನೂತನ ಬಹರೈನ್ ಪ್ರಧಾನಿ


ಮನಾಮಾ: ಬಹರೈನ್ ದೇಶವನ್ನು ಸುಮಾರು ಐದು ದಶಕಗಳ ಕಾಲ ಪ್ರಧಾನ ಮಂತ್ರಿಯಾಗಿ ಆಡಳಿತ ನಡೆಸಿದ್ದ ಶೈಖ್ ಖಲಿಫಾ ಬಿನ್ ಸಲ್ಮಾನ್ ಅಲ್ ಖಲಿಫಾ( 84) ಅವರು ಬುಧವಾರ ಅನಾರೋಗ್ಯದಿಂದಾಗಿ ನಿಧನರಾದರು. ಈಗ ಬಹರೈನ್ ಹೊಸ ಪ್ರಧಾನಿಯಾಗಿ ರಾಜಕುಮಾರ ಸಲ್ಮಾನ್ ಬಿನ್ ಹಮದ್ ಅಲ್ ಖಲೀಫಾ ಅವರನ್ನು ನೇಮಕ ಮಾಡಲಾಗಿದೆ.

ಈ ಸಂಬಂಧ ಬಹರೈನ್ ರಾಜ ಹಮದ್ ಬಿನ್ ಖಲೀಫಾ ಆದೇಶ ಹೊರಡಿಸಿದ್ದಾರೆ. ಅಧಿಕೃತ ಗೆಜೆಟ್ ಪ್ರಕಟಗೊಂಡ ಕೂಡಲೇ ರಾಯಲ್ ಆದೇಶ ಜಾರಿಗೆ ಬರಲಿದೆ. ನಂತರ ಫ್ರಿನ್ಸ್ ಸಲ್ಮಾನ್ ಪ್ರಧಾನಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರಿನ್ಸ್ ಸಲ್ಮಾನ್ ಪ್ರಸ್ತುತ ಡೆಪ್ಯೂಟಿ ಕಮಾಂಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

1970 ರಿಂದ ಬಹರೈನ್ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದ ಖಲೀಫಾ ಬಿನ್​ ಸಲ್ಮಾನ್​ ಅಲ್​ ಖಲೀಫಾ ಅವರು ವಿಶ್ವದಲ್ಲೇ ಅತಿ ಹೆಚ್ಚು ಕಾಲ ಪ್ರಧಾನಿಯಾಗಿದ್ದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.


SHARE THIS

Author:

0 التعليقات: