Monday, 23 November 2020

ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್​; ಮುಂಬೈ, ಉ.ಪ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ಮಾರ್ಗಸೂಚಿ ಪ್ರಕಟ


ದೇಶದಲ್ಲಿ ಮತ್ತೆ ಹೆಚ್ಚಿದ ಕೋವಿಡ್​; ಮುಂಬೈ, ಉ.ಪ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೊಸ ಮಾರ್ಗಸೂಚಿ ಪ್ರಕಟ

ಮುಂಬೈ (ನ.23): ದೇಶದಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಸೋಂಕು ಮತ್ತೆ ಹೆಚ್ಚಾಗಿದೆ. ದೆಹಲಿ, ಹಿಮಾಚಲ ಪ್ರದೇಶ, ಅಹಮದಾಬಾದ್​ ಸೇರಿದಂತೆ ಹಲವು ರಾಜ್ಯಗಳಲ್ಲಿ ಸೋಂಕು ಏರುಗತಿ ಕಂಡ ಹಿನ್ನಲೆ ಸಮಾರಂಭಗಳಿಗೆ ಬ್ರೇಕ್​, ರಾತ್ರಿ ಕರ್ಫ್ಯೂ ಸೇರಿದಂತೆ ಹಲವು ನಿರ್ಬಂಧಗಳ ಮೊರೆ ಹೋಗಲು ಸರ್ಕಾರ ನಿರ್ಧರಿಸಿದೆ. ಸೋಂಕು ಹೆಚ್ಚಳದ ಹಿನ್ನಲೆ ಉತ್ತರ ಪ್ರದೇಶ ಸರ್ಕಾರ ಹೊಸ ಮಾರ್ಗ ಸೂಚಿ ಪ್ರಕಟಿಸಿದ್ದು, ಮದುವೆ ಸೇರಿದಂತೆ ಸಮಾರಂಭಗಳಿಗೆ 100 ಜನರಿಗೆ ಮಾತ್ರ ಅವಕಾಶ ನೀಡಿದೆ. ಇನ್ನು ಜನ ಸೇರುವ ಕಾರ್ಯಕ್ರಮಗಳಿಂದ ವೃದ್ಧರು, ಅನಾರೋಗ್ಯ ಪೀಡಿತರು, ಮಕ್ಕಳಿಗೆ ಅವಕಾಶವಿಲ್ಲ. ಅಲ್ಲದೇ ಈ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇನ್ನು ಕಾರ್ಯಕ್ರಮದಲ್ಲಿ ಸುರಕ್ಷತಾ ಕ್ರಮಗಳಾದ ಮಾಸ್ಕ್​ ಧರಿಸುವುದು, ಕೈಗಳ ಸ್ವಚ್ಛತೆ ಕಾಪಾಡುವುದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿದೆ. ಹರಿಯಾಣಕ್ಕೆ ಪ್ರವೇಶಿಸುವ ದೆಹಲಿಗರಿಗೆ ಕೊರೋನಾ ಪರೀಕ್ಷೆ ಕಡ್ಡಾಯವಾಗಿದೆ, ಫರಿದಾಬಾದ್​, ಗುರುಗ್ರಾಮದ ಮೂಲಕ ರಾಜ್ಯ ಪ್ರವೇಶಿಸುವ ಮುನ್ನ ಕೋವಿಡ್​ ಪರೀಕ್ಷೆಗೆ ಒಳಗೊಳ್ಳಬೇಕು. ಅಷ್ಟೇ ಅಲ್ಲದೇ ಗುಜರಾತ್​, ಗೋವಾ, ರಾಜಸ್ಥಾನ ಹಾಗೂ ದೆಹಲಿಯಿಂದ ಮುಂಬೈಗೆ ಆಗಮಿಸುವ ಪ್ರಯಾಣಿಕರು ಆರ್​ಟಿ-ಪಿಸಿಆರ್​ ಪರೀಕ್ಷೆಗೆ ಒಳಗಾಗುವುದು ಕಡ್ಡಾಯ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ. ಹಿಮಾಚಲ ಪ್ರದೇಶದ ನಾಲ್ಕು ಜಿಲ್ಲೆಗಳಲ್ಲಿ ರಾತ್ರಿ ನಿಷೇಧಾಜ್ಞೆ ಹೇರಲಾಗಿದೆ. ಡಿ. 15ರವರೆಗೆ ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ಕರ್ಫ್ಯೂ ವಿಧಿಸಲಾಗಿದೆ. ಪ್ರವಾಸಿಗ ನೆಚ್ಚಿನ ಸ್ಥಳಗಳಾದ ಶಿಮ್ಲಾ, ಮಂಡಿ, ಕಾಂಗ್ರಾ, ಮತ್ತು ಕುಲು ಜಿಲ್ಲೆಗಳಲ್ಲಿ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಇದರ ಜೊತೆ ಡಿ.31ರವರೆಗೆ ಶಾಲಾ-ಕಾಲೇಜು ಮುಚ್ಚಲು ಸರ್ಕಾರ ಸೂಚಿಸಿದೆ.

ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಪಂಜಾಬ್​ನಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆ ಉನ್ನತ್ತ ಮಟ್ಟದ ಕೇಂದ್ರಗಳನ್ನು ಇದರ ನಿರ್ವಹಣೆಗೆ ನಿಯೋಜಿಸಲಾಗಿದೆ, ಈ ತಂಡ ರಾಜ್ಯದಲ್ಲಿ ಸಕ್ರಿಯವಾಗಿರುವ ಪ್ರಕರಣ, ಆಸ್ಪತ್ರೆಯಲ್ಲಿರುವ ಸೋಂಕಿತರ ಸಂಖ್ಯೆ, ಮನೆಯಲ್ಲಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಪ್ರತ್ಯೇಕ ವಾಸಕ್ಕೆ ಮೊರೆ ಹೋದವರು ಸೇರಿದಂತೆ ಪ್ರತಿದಿನ ಹೊಸ ಪ್ರಕರಣಗಳ ಹೆಚ್ಚುತ್ತಿರುವವ ಬಗ್ಗೆ ಕೇಂದ್ರಕ್ಕೆ ವರದಿ ನೀಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಮತ್ತೆ ಸೋಂಕು ಹೆಚ್ಚಳದ ಬಗ್ಗೆ ಕಳವಳಗೊಂಡಿರುವ ಪ್ರಧಾನಿ ಪರಿಸ್ಥಿತಿ ಪರಿಶೀಲಿಸಿ, ಲಸಿಕೆ ವಿತರಣಾ ಕಾರ್ಯತಂತ್ರದ ಕುರಿತು ನಾಳೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಅತಿ ಹೆಚ್ಚು ಪ್ರಕರಣ ಕಮಡಿ ಬರುತ್ತಿರುವ ಎಂಟು ರಾಜ್ಯ ಜೊತೆಗೆಯಲ್ಲಿ ಒಂದು ಕೇಂದ್ರಾಡಳಿತ ರಾಜ್ಯಗಳೊಂದಿಗೆ ಅವರು ಸಭೆ ನಡೆಸಲಿದ್ದಾರೆ.


SHARE THIS

Author:

0 التعليقات: