Wednesday, 4 November 2020

ಮೀಲಾದುನ್ನೆಬಿ; ಜನರಲ್ ಆಸ್ಪತ್ರೆಯಲ್ಲಿ ಮುಹಿಮ್ಮಾತ್ ಸಾಂತ್ವನ

 


ಮೀಲಾದುನ್ನೆಬಿ; ಜನರಲ್ ಆಸ್ಪತ್ರೆಯಲ್ಲಿ ಮುಹಿಮ್ಮಾತ್ ಸಾಂತ್ವನ

ಕಾಸರಗೋಡು: ಕೋವಿಡ್  ಸಂಕಷ್ಟಗಳೆಡೆಯಲ್ಲೂ ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಮರ  ಜನ್ಮ ದಿನದಂದು ಕುಂಬ್ಳೆ ಪುತ್ತಿಗೆ ಮುಹಿಮ್ಮಾತ್ ಸಂಸ್ಥೆಯ ವತಿಯಿಂದ ಕಾಸರಗೋಡು ಜನರಲ್ ಆಸ್ಪತ್ರೆಯ ರೋಗಿಗಳಿಗೂ ವೈದ್ಯರಿಗೂ ಫ್ರೂಟ್ಸ್ ಕಿಟ್ ವಿತರಿಸಲಾಯಿತು.  

ಮುಹಿಮ್ಮಾತ್ ಕೇಂದ್ರ ಕಮಿಟಿ ಸೆಕ್ರೆಟರಿ ಸುಲೈಮಾನ್ ಕರಿವೆಲ್ಲೂರ್ ಕಿಟ್ ವಿತರಣೆ ಉದ್ಘಾಟಿಸಿದರು.  ಜನರಲ್ ಆಸ್ಪತ್ರೆಯ ಅಸಿಸ್ಟೆಂಟ್ ಸೂಪರೆಂಡ್ ಡಾ.ಗೀತ ಸ್ವೀಕರಿಸಿದರು. ನರ್ಸಿಂಗ್  ಸೂಪರೆಂಡ್ ನಿಶಿ, ಸ್ಟಾಪ್ ನರ್ಸ್ ಪವಿತ್ರ, ಡಯಟೀಷನ್ ಹುದೈಫ್, ಮುಹಮ್ಮದ್, ಫತ್ತಾಹ್ ಸಅದಿ, ಅಬ್ದುಲ್ ಅಝೀಝ್ ಹಿಮಮಿ ಗೋಸಾಡ ಭಾಗವಹಿಸಿದರು.  ಮೂಸ ಸಖಾಫಿ ಕಳತ್ತೂರ್ ಸ್ವಾಗತ ಮತ್ತು ಹೆಡ್ ನರ್ಸ್ ಸೂರ್ಯ ಕೆ.ಪಿ ಕೃತಜ್ಞತೆ ಸಲ್ಲಿಸಿದರು.

ಹಲವು ವರ್ಷಗಳಿಂದ ಈದ್ ಮಿಲಾದ್ ಭಾಗವಾಗಿ ಈ ಆಸ್ಪತ್ರೆಯಲ್ಲಿ ಮುಹಿಮ್ಮಾತ್ ಸಾಂತ್ವನ ಕಾರ್ಯಕ್ರಮ ನಡೆಸುತ್ತಿದೆ. ಮಹಿಳೆಯರ ವಾರ್ಡ್ ನವೀಕರಿಸಿದ್ದು ಅಲ್ಲದೆ ವಿವಿಧ ಮೆಡಿಕಲ್ ಉಪಕರಣಗಳನ್ನು ಕೊಟ್ಟಿದೆ.


SHARE THIS

Author:

0 التعليقات: