Wednesday, 4 November 2020

 

ಕರ್ನಾಟಕ ಮುಸ್ಲಿಮ್ ಜಮಾಅತ್ ಮಂಗಳೂರು ತಾಲೂಕು ಸಮಿತಿ ಘೋಷಣೆ

ಮಂಗಳೂರು: ಕರ್ನಾಟಕ ಮುಸ್ಲಿಂ ಜಮಾಅತ್ ಸಂಘಟನೆ ದ.ಕ. ಜಿಲ್ಲಾ ಘಟಕವು ತಾಲೂಕು ಸಮಿತಿ , ಬ್ಲಾಕ್ ಸಮಿತಿ, ಗ್ರಾಮ ಸಮಿತಿ ಅಸ್ತಿತ್ವಕ್ಕೆ ತರಲಾಗಿದ್ದು, 1/11/2020 ರಂದು ಮಂಗಳೂರು ತಾಲೂಕು ಮುಸ್ಲಿಮ್ ಜಮಾಅತ್ ನ ಘೋಷಣಾ ಸಮಾವೇಶವು ಮಿಸ್ಬಾಹ್ ಕಾಲೇಜು ಕಾಟಿಪಳ್ಳದಲ್ಲಿ ನಡೆಯಿತು.

ಮುಸ್ಲಿಮ್ ಜಮಾಅತ್ ಮಂಗಳೂರು ತಾಲೂಕು ಅಧ್ಯಕ್ಷರಾಗಿ ಬಿ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್, ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮೇಯರ್ ಕೆ.ಅಶ್ರಫ್ ಹಾಗೂ ಕೋಶಾಧಿಕಾರಿಯಾಗಿ ಬಿ.ಇಕ್ಬಾಲ್ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಎಚ್ ಐ ಅಬೂಸುಫ್ಯಾನ್ ಮದನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು,  ಜಿಲ್ಲಾ ಕಾರ್ಯಾಧ್ಯಕ್ಷ ಎಸ್ ಎಮ್ ರಷೀದ್ ಹಾಜಿ, ಪ್ರಧಾನ ಕಾರ್ಯದರ್ಶಿ ಬಿ ಎಂ ಮುಮ್ತಾಝ್ ಅಲಿ, ರಾಜ್ಯ ಕಾರ್ಯದರ್ಶಿ ಅಬ್ದುಲ್ ಹಮೀದ್ ಬಜ್ಪೆ , ಎಸ್ಇಡಿಸಿ ರಾಜ್ಯಾಧ್ಯಕ್ಷ. ಕೆಕೆಎಂ ಕಾಮಿಲ್ , ಸಾದಿಖ್ ಮಾಸ್ಟರ್ ಮಲೆಬೆಟ್ಟು ಹಾಗೂ ವಿವಿಧ ಮೊಹಲ್ಲಗಳ ಗಣ್ಯ ನಾಯಕರುಗಳು ಭಾಗವಹಿಸಿದ್ದರು.


SHARE THIS

Author:

0 التعليقات: