Friday, 6 November 2020

BIG NEWS: ಸರ್ಕಾರ ಪಟಾಕಿಗೆ 'ಹಸಿರು'ನಿಶಾನೆ ತೋರಿದ್ದರ ಹಿಂದಿದೆ ಈ ರಹಸ್ಯ

 

BIG NEWS: ಸರ್ಕಾರ ಪಟಾಕಿಗೆ 'ಹಸಿರು'ನಿಶಾನೆ ತೋರಿದ್ದರ ಹಿಂದಿದೆ ಈ ರಹಸ್ಯ

ಬೆಂಗಳೂರು: ಕೊರೋನಾ ರೋಗಿಗಳ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬಳಕೆಗೆ ನಿಷೇಧ ಹೇರಲಾಗಿದೆ. ಆದರೆ, ಪಟಾಕಿಯನ್ನು ಸಂಪೂರ್ಣವಾಗಿ ನಿಷೇಧ ಮಾಡಿಲ್ಲ. ಹಸಿರು ಪಟಾಕಿಗೆ ಅನುಮತಿ ನೀಡಲಾಗಿದೆ.

ಹಸಿರು ಪಟಾಕಿಯಿಂದ ಕಡಿಮೆ ಮಾಲಿನ್ಯ ಉಂಟಾಗುತ್ತದೆ. ಹಾಗಾಗಿ, ಹಸಿರು ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ವಾಯುಮಾಲಿನ್ಯದಿಂದ ಉಸಿರಾಟ ಸಂಬಂಧಿತ ತೊಂದರೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿಯೂ, ಕೊರೊನಾ ಸಂದರ್ಭದಲ್ಲಿ ದೀಪಾವಳಿಗೆ ಪಟಾಕಿ ಹಚ್ಚುವುದರಿಂದ ವಾಯುಮಾಲಿನ್ಯದಲ್ಲಿ ಹೆಚ್ಚಳವಾಗಿ ಕೊರೊನಾ ಸೋಂಕಿತರಿಗೆ ಅಪಾಯವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಂದ ಹಾಗೆ, ಭಾರತದಲ್ಲಿ ವಾಯುಮಾಲಿನ್ಯದಿಂದ ವಾರ್ಷಿಕ 13 ಲಕ್ಷ ಜನ ಸಾಯುತ್ತಿದ್ದಾರೆ. ಉಸಿರಾಟ, ಶ್ವಾಸಕೋಶ ಸಮಸ್ಯೆಯಲ್ಲದೇ, ಗಾಳಿಯಲ್ಲಿರುವ ಸಲ್ಫರ್ ಡೈಯಾಕ್ಸೈಡ್, ಹೈಡ್ರೋಜನ್ ಸಲ್ ಪ್ರೈಡ್ ನಂತಹ ಕಣಗಳು ಹೆಚ್ಚಾಗಿ ಶ್ವಾಸಕೋಶದ ಮೂಲಕ ರಕ್ತನಾಳಗಳಿಗೆ ಸೇರಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇದ್ದು, ಇದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಸ್ತುತ ಕೊರೋನಾ ಹೊತ್ತಲ್ಲಿ ದೀಪಾವಳಿ ಹಬ್ಬ ಬಂದಿದೆ. ಚಳಿಗಾಲ ಕೂಡ ಇರುವುದರಿಂದ ಪಟಾಕಿಯಿಂದ ಸೋಂಕಿತರಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಾಗಿದೆ. ಚಳಿಗಾಲದ ಉಸಿರಾಟದ ಸಮಸ್ಯೆ ಜೊತೆಗೆ ಪಟಾಕಿ ಸೇರಿದರೆ ತೀವ್ರತರ ಸಮಸ್ಯೆ ಎದುರಾಗುತ್ತದೆ. ಈ ಕಾರಣದಿಂದ ಪಟಾಕಿ ನಿಷೇಧಿಸಬೇಕೆಂದು ತಜ್ಞರು ಸರ್ಕಾರಕ್ಕೆ ಸಲಹೆ ನೀಡಿದ್ದು, ಪರಿಶೀಲನೆ ಬಳಿಕ ಸರ್ಕಾರದಿಂದ ಹಸಿರು ಪಟಾಕಿಗೆ ಅವಕಾಶ ನೀಡಲಾಗಿದೆ ಎಂದು ಹೇಳಲಾಗಿದೆ.


SHARE THIS

Author:

0 التعليقات: