Thursday, 12 November 2020

ಅಡಕೆ ಬೆಳೆಗಾರರಿಗೆ ಬಂಪರ್: ಸರಕು ಕ್ವಿಂಟಾಲ್ ಗೆ 75 ಸಾವಿರ ರೂ.

 

ಅಡಕೆ ಬೆಳೆಗಾರರಿಗೆ ಬಂಪರ್: ಸರಕು ಕ್ವಿಂಟಾಲ್ ಗೆ 75 ಸಾವಿರ ರೂ.

ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ಇಲ್ಲಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಡಿಕೆ ದರ ಏರಿಕೆ ಕಂಡಿದೆ. ಎಲ್ಲಾ ರೀತಿಯ ಅಡಕೆ ಧಾರಣೆ ಏರಿಕೆಯಾಗಿದೆ.

ಮಾರುಕಟ್ಟೆಯಲ್ಲಿ ಅಡಕೆ ಬೆಲೆ ಏರಿಕೆ ಕಂಡಿರುವುದು ರೈತರಲ್ಲಿ ಸಂತಸ ತಂದಿದೆ. ಹೊಸ ರಾಶಿ ಕ್ವಿಂಟಾಲ್ ಗೆ 40,159 ರೂ., ಬೆಟ್ಟೆ ಕ್ವಿಂಟಾಲ್ ಗೆ 41,499 ರೂ., ಸರಕು ಕ್ವಿಂಟಾಲ್ ಗೆ 74,996 ರೂಪಾಯಿ ದರ ಇದೆ. ಅದೇ ರೀತಿ ರಾಶಿ ಕ್ವಿಂಟಾಲ್ ಗೆ 39,599 ರೂ., ಗೊರಬಲು ಕ್ವಿಂಟಾಲ್ ಗೆ 31,889 ರೂ. ರಾಶಿ ಕ್ವಿಂಟಾಲ್ ಗೆ 39,599 ರೂ. ದರ ಇದೆ.

ಮಾರುಕಟ್ಟೆಯಲ್ಲಿ ಅಡಕೆಗೆ ಸುಗ್ಗಿಕಾಲ ಇದಾಗಿದ್ದು, ಉತ್ತಮ ದರ ಇರುವುದು ರೈತರಿಗೆ ಸಂತಸ ತಂದಿದೆ. ರಾಜ್ಯದಲ್ಲೇ ಅತಿ ಹೆಚ್ಚಿನ ಅಡಿಕೆ ಮಾರಾಟವಾಗುವ ಶಿವಮೊಗ್ಗ ಮಾರುಕಟ್ಟೆಯಲ್ಲಿ ಅಧಿಕ ದರ ಇದೆ. ಗುಣಮಟ್ಟದಲ್ಲಿ ಉತ್ತಮವಾಗಿರುವ ಮಲೆನಾಡಿನ ಅಡಿಕೆ ಸರಕು ಕ್ವಿಂಟಾಲ್ ಗೆ 75 ಸಾವಿರ ರೂಪಾಯಿ ತಲುಪಿದ್ದು, ಹೊಸ ರಾಶಿ, ಬೆಟ್ಟೆ ಅಡಿಕೆ ದರ 40 ಸಾವಿರ ರೂ. ಗಡಿ ದಾಟಿದೆ. ಧಾರಣೆ ಹೆಚ್ಚಿರುವುದರಿಂದ ಮಾರುಕಟ್ಟೆಗೆ ಇನ್ನೂ ಹೆಚ್ಚಿನ ಪ್ರಮಾಣದ ಅಡಕೆ ಬರಲಿದೆ. ಬೆಲೆ ಏರುಮುಖವಾಗಿಯೇ ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


SHARE THIS

Author:

0 التعليقات: