Wednesday, 18 November 2020

ಶಾಲೆ ಆರಂಭದ ಬೆನ್ನಲ್ಲೇ ಬಿಗ್ ಶಾಕ್ : 72 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು!

 

ಶಾಲೆ ಆರಂಭದ ಬೆನ್ನಲ್ಲೇ ಬಿಗ್ ಶಾಕ್ : 72 ವಿದ್ಯಾರ್ಥಿಗಳಿಗೆ   ಕೊರೊನಾ ಸೋಂಕು!

ನವದೆಹಲಿ : ಕೊರೊನಾ ಭೀತಿಯ ನಡುವೆ ಶಾಲಾ-ಕಾಲೇಜುಗಳ ಪುನಾರಂಭಕ್ಕೆ ಕೇಂದ್ರ ಸರ್ಕಾರವು ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಹರಿಯಾಣದಲ್ಲಿ ಶಾಲೆ ತೆರೆದ ಕೆಲವೇ ದಿನಗಳಲ್ಲಿ 12 ಸರ್ಕಾರಿ ಶಾಲೆಗಳ 72 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಹೌದು, ಶಾಲೆ ಆರಂಭವಾದ 12 ದಿನಕ್ಕೆ ಹರಿಯಾಣದ ರೇವಾರಿ ಪ್ರದೇಶದಲ್ಲಿರುವ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಶಾಲೆಗೆ ತೆರಳಿದ ಎರಡ್ಮೂರು ದಿನಗಳಲ್ಲೇ ವಿದ್ಯಾರ್ಥಿಗಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ ಸಂದರ್ಭದಲ್ಲಿ 72 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ಧೃಡವಾಗಿದೆ.

ಈ ಹಿನ್ನೆಲೆ ಪೋಷಕರಲ್ಲಿ ಆತಂಕ ಮನೆ ಮಾಡಿದ್ದು, ಸಂಪರ್ಕದಲ್ಲಿದ್ದ ಉಳಿದ ವಿದ್ಯಾರ್ಥಿಗಳಿಗೆ ಆತಂಕ ಶುರುವಾಗಿದೆ. ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾದ ಸರ್ಕಾರಿ ಶಾಲೆಗಳನ್ನು ಪುನಃ ಬಂದ್ ಮಾಡುವಂತೆ ಜಿಲ್ಲಾಡಳಿತವು ಆದೇಶ ನೀಡಿದೆ.


SHARE THIS

Author:

0 التعليقات: