Wednesday, 25 November 2020

6.25 ಕೋಟಿ ರೂ. ಮೌಲ್ಯದ ಚಿನ್ನ ಸಾಗಿಸುತ್ತಿದ್ದವರು ಅಂದರ್


 6.25 ಕೋಟಿ ರೂ. ಮೌಲ್ಯದ ಚಿನ್ನ ಸಾಗಿಸುತ್ತಿದ್ದವರು ಅಂದರ್

6.25 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೋರಿವಾಲಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರನ್ನ ಕಂದಾಯ ಗುಪ್ತಚರ ನಿರ್ದೇಶನಾಲಯ ಬಂಧಿಸಿದೆ. ಮುಂಬೈ ರೈಲ್ವೇ ನಿಲ್ದಾಣದಲ್ಲಿ ಗೋಲ್ಡನ್​ ಟೆಂಪಲ್​ ವಿಶೇಷ ರೈಲಿನಿಂದ ಇಳಿದ ಕೂಡಲೇ ಇಬ್ಬರೂ ಆರೋಪಿಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ.

ಶೋಧದ ಸಂದರ್ಭದಲ್ಲಿ ಆರೋಪಿಗಳ ಜಾಕೆಟ್​ನಲ್ಲಿ ಅಡಗಿಸಿದ್ದ ಆರು ಚಿನ್ನದ ಬಾರ್​​ಗಳು 22ರಂದು ದೊರಕಿವೆ. ವಶಕ್ಕೆ ಪಡೆಯಲಾದ ಒಟ್ಟು ಚಿನ್ನದ ಬಾರ್​ಗಳ ತೂಕ 12 ಕಿಲೋಗ್ರಾಂಗಳಾಗಿದೆ. ಕಸ್ಟಮ್ಸ್ ಕಾಯ್ದೆಯಡಿಯಲ್ಲಿ ಇಬ್ಬರೂ ಆರೋಪಿಗಳನ್ನ 14 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.


ಈ ಚಿನ್ನ ಬಾಂಗ್ಲಾದೇಶದಿಂದ ಭಾರತಕ್ಕೆ ತಂದಿದ್ದಿರಬಹುದು ಎಂದು ಪೊಲೀಸರು ಶಂಕಿಸಲಾಗಿದೆ. ಕೊಲ್ಕತ್ತಾ ಮಾರ್ಗವಾಗಿ ಮುಂಬೈಗೆ ಚಿನ್ನವನ್ನ ಸಾಗಿಸಲಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.


SHARE THIS

Author:

0 التعليقات: