Friday, 20 November 2020

5.78 ಕೋಟಿಗೂ ಅಧಿಕ ಸೋಂಕಿತರು

 

5.78 ಕೋಟಿಗೂ ಅಧಿಕ ಸೋಂಕಿತರು

ವಾಷಿಂಗ್ಟನ್: ಜಗತ್ತಿನಾದ್ಯಂತ 5.78 ಕೋಟಿಗೂ ಅಧಿಕ ಜನರು ಕೋವಿಡ್-19 ಸೋಂಕಿಗೆ ಒಳಗಾಗಿದ್ದರೆ, 13 ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಕೊರೊನಾ ವೈರಸ್‌ ವರ್ಡೊ ಮೀಟರ್‌ ತಿಳಿಸಿದೆ.

ಈವರೆಗೆ ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 5,78,95,314ಕ್ಕೆ ಮುಟ್ಟಿದ್ದು, 13,76,806 ಮಂದಿ ಮೃತಪಟ್ಟಿದ್ದಾರೆ. 4,00,97,772 ಸೋಂಕಿತರು ಗುಣಮುಖರಾಗಿದ್ದಾರೆ. ಒಟ್ಟು 1,64,20,736 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

ಸೋಂಕು ಪ್ರಕರಣಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಅಮೆರಿಕದಲ್ಲಿ 1,22,74,702 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಸದ್ಯ 2,60,283 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 73,16,307 ಜನರು ಈ ವರೆಗೆ ಚೇತರಿಸಿಕೊಂಡಿದ್ದಾರೆ.

ಭಾರತದಲ್ಲಿ 90,50,613, ಬ್ರೆಜಿಲ್‌ನಲ್ಲಿ 60,20,164, ರಷ್ಯಾದಲ್ಲಿ 20,39,926, ಕೊಲಂಬಿಯಾದಲ್ಲಿ 12,33,444, ಪೆರುವಿನಲ್ಲಿ 9,46,087, ಚಿಲಿಯಲ್ಲಿ 5,37,585, ಇರಾನ್‌ನಲ್ಲಿ 8,28,377, ಇಂಗ್ಲೆಂಡ್‌ನಲ್ಲಿ 14,73,508, ಸ್ಪೇನ್‌ನಲ್ಲಿ 15,89,219 ಮತ್ತು ದಕ್ಷಿಣ ಆಫ್ರಿಕಾದಲ್ಲಿ 7,62,763 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ.


SHARE THIS

Author:

0 التعليقات: