ಮಾರುತಿ ಎರ್ಟಿಗಾ 5.5 ಲಕ್ಷ ಕಾರು ಸೇಲ್
ನವದೆಹಲಿ: ನೆಕ್ಸ್ಟ್ ಜೆನ್ ಬಹೂಪಯೋಗಿ ವಾಹನ ಎರ್ಟಿಗಾ 2018ರ ನವೆಂಬರ್ನಿಂದ ಹಿಡಿದು ಇಲ್ಲಿತನಕ ಒಟ್ಟು 5.5 ಲಕ್ಷ ಕಾರುಗಳು ಮಾರಾಟವಾಗಿವೆ. ಇದೊಂದು ದಾಖಲೆ ಎಂದು ದೇಶದ ಮುಂಚೂಣಿ ಕಾರು ಉತ್ಪಾದನಾ ಕಂಪನಿ ಮಾರುತಿ ಸುಝುಕಿ ಇಂಡಿಯಾ ತಿಳಿಸಿದೆ.
1.5 ಎಲ್ ಕೆ-ಸೀರೀಸ್ ಪೆಟ್ರೋಲ್ ಇಂಜಿನ್ ಹೊಂದಿರುವ ನೆಕ್ಸ್ಟ್ ಜೆನ್ ಎರ್ಟಿಗಾ, ಸ್ಮಾರ್ಟ್ ಹೈಬ್ರಿಡ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಟೆಕ್ನಾಲಜಿಯನ್ನೂ ಅಳವಡಿಸಿಕೊಂಡಿದೆ. ಇದರಲ್ಲಿ ಎಸ್-ಸಿಎನ್ಜಿ ಆಪ್ಶನ್ ಕೂಡ ಲಭ್ಯವಿದೆ.
ನೆಕ್ಸ್ಟ್ ಜೆನ್ ಎರ್ಟಿಗಾದ ಯಶಸ್ಸಿಗೆ ಈ ಮಾರಾಟ ದಾಖಲೆ ಒಂದು ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಗ್ರಾಹಕರು ಬಹೂಪಯೋಗಿ ವಾಹನಗಳನ್ನು ಯುಟಿಲಿಟಿ ವೆಹಿಕಲ್ಗಳ ಜತೆಗೆ ಹೋಲಿಸಿ ನೋಡುತ್ತಾರೆ. ಬಳಿಕ ಖರೀದಿಸುವ ನಿರ್ಧಾರ ಮಾಡುತ್ತಾರೆ. ದೇಶದಲ್ಲಿ ಟಾಪ್ ಸೆಲ್ಲಿಂಗ್ ಎಂಪಿವಿಗಳಲ್ಲಿ ಎರ್ಟಿಗಾ ಮುಂಚೂಣಿಯಲ್ಲಿದೆ ಎಂದು ಕಮಪನಿಯ ಮಾರ್ಕೆಟಿಂಗ್ ಮತ್ತು ಸೇಲ್ಸ್ ವಿಭಾಗದ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶಶಾಂಕ್ ಶ್ರೀವಾಸ್ತವ ತಿಳಿಸಿದ್ದಾರೆ.
0 التعليقات: