3.97 ಕೋಟಿ ಸೋಂಕಿತರು ಗುಣಮುಖ
ವಾಷಿಂಗ್ಟನ್: ಪ್ರಪಂಚದಾದ್ಯಂತ ಇದುವರೆಗೆ ಒಟ್ಟು 5.72 ಕೋಟಿ ಜನರಿಗೆ ಕೋವಿಡ್-19 ಸೋಂಕು ತಗುಲಿದೆ. ಇದರಲ್ಲಿ 3.97 ಕೋಟಿ ಸೋಂಕಿತರು ಗುಣಮುಖರಾಗಿದ್ದು, 13.64 ಲಕ್ಷ ಮಂದಿ ಮೃತಪಟ್ಟಿದ್ದಾರೆ ಎಂದು ವರ್ಲ್ಡೊ ಮೀಟರ್ ವೆಬ್ಸೈಟ್ ವರದಿ ಮಾಡಿದೆ.
ವಿಶ್ವದಾದ್ಯಂತ ಇಂದು ಹೊಸದಾಗಿ 643,220 ಪ್ರಕರಣಗಳು ಬೆಳಕಿಗೆ ಬಂದಿದ್ದು, 10,703 ಜನರು ಮೃತಪಟ್ಟಿದ್ದಾರೆ. ಇದೇ ವೇಳೆ 3,97,06,460 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಒಟ್ಟಾರೆ 1.61 ಕೋಟಿ ಸಕ್ರಿಯ ಪ್ರಕರಣಗಳಿದ್ದು, ಇದರಲ್ಲಿ 1,01,805 ಜನರ ಸ್ಥಿತಿ ಗಂಭೀರವಾಗಿದೆ.
ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಈ ವರೆಗೆ ಒಟ್ಟು 1,20,66,609 ಪ್ರಕರಣಗಳು ದಾಖಲಾಗಿದ್ದು, 2,58,282 ಜನರು ಮೃತಪಟ್ಟಿದ್ದಾರೆ.
ಅಮೆರಿಕದ ನಂತರದ ಸ್ಥಾನದಲ್ಲಿರುವ ಭಾರತದಲ್ಲಿ 90.04 ಲಕ್ಷ ಪ್ರಕರಣಗಳು ವರದಿಯಾಗಿವೆ. ಉಳಿದಂತೆ ಸೋಂಕು ಪ್ರಕರಣಗಳ ಸಂಖ್ಯೆ ಬ್ರೆಜಿಲ್ನಲ್ಲಿ 59.83 ಲಕ್ಷ, ಫ್ರಾನ್ಸ್ನಲ್ಲಿ 20.86 ಲಕ್ಷ, ರಷ್ಯಾದಲ್ಲಿ 20.51 ಲಕ್ಷ, ಸ್ಪೇನ್ನಲ್ಲಿ 15.74 ಲಕ್ಷಕ್ಕೆ ಏರಿಯಾಗಿವೆ
0 التعليقات: