'ಡ್ರಗ್ಸ್ ಕೇಸ್' : ಕೇರಳ ಮಾಜಿ ಗೃಹ ಸಚಿವರ ಪುತ್ರ 'ಬಿನೇಶ್ ಕೊಡಿಯೇರಿ' 3 ದಿನ 'NCB' ವಶಕ್ಕೆ
ಬೆಂಗಳೂರು : ಡ್ರಗ್ಸ್ ಪ್ರಕರಣದಲ್ಲಿ ಕೇರಳ ಕಮ್ಯೂನಿಷ್ಠ ಪಾರ್ಟಿ ಆಫ್ ಇಂಡಿಯಾ(ಮ್ಯಾಕ್ಸಿಸ್) ನ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ ಅವರ ಪುತ್ರ ಬಿನೇಶ್ ಕೊಡಿಯೇರಿ ಅವರನ್ನು ಎನ್ ಸಿ ಬಿ ಅಧಿಕಾರಿಗಳು 3 ದಿನಗಳ ಕಾಲ ವಶಕ್ಕೆ ಪಡೆದಿದ್ದಾರೆ.
ಬಿನೇಶ್ ಡ್ರಗ್ ಪೆಡ್ಲರ್ ಮಹಮದ್ ಅನೂಫ್ ಗೆ ಐವತ್ತು ಲಕ್ಷ ರೂಪಾಯಿ ನೀಡಿದ ಮಾಹಿತಿ ಮೇರೆಗೆ ಬೆಂಗಳೂರು ಇಡಿ ಅಧಿಕಾರಿಗಳು ಕೇರಳದ ಮಾಜಿ ಗೃಹ ಸಚಿವ ಹಾಗೂ ಸಿಪಿಎಂ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣ ಅವರ ಪುತ್ರ ಬಿನೇಶ್ ಕೊಡಿಯೇರಿ ಅವರನ್ನು ಅಧಿಕಾರಿಗಳು ಬಂಧಿಸಿದ್ದರು
ಇಡಿ ಅಧಿಕಾರಿಗಳ ಬಂಧನದಿಂದ ಜೈಲು ಸೇರಿದ್ದ ಬಿನೇಶ್ ನನ್ನು ಬಾಡಿ ವಾರೆಂಟ್ ಮೂಲಕ ಎನ್ ಸಿ ಬಿ ಅಧಿಕಾರಿಗಳು ನ. 20 ನೇ ತಾರೀಖಿನವರೆಗೆ ವಶಕ್ಕೆ ಪಡೆದಿದ್ದಾರೆ. ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ.
0 التعليقات: