Sunday, 22 November 2020

ಬೆಳಗಾವಿ: ರಿಮೋಟ್ ಕೀ ಹ್ಯಾಕ್ ಮಾಡಿ ಕ್ಷಣಾರ್ಧದಲ್ಲಿ 2 ಹೊಸ ಕಾರು ಕಳವು


ಬೆಳಗಾವಿ: ರಿಮೋಟ್ ಕೀ ಹ್ಯಾಕ್ ಮಾಡಿ ಕ್ಷಣಾರ್ಧದಲ್ಲಿ 2 ಹೊಸ ಕಾರು ಕಳವು

ಬೆಳಗಾವಿ, ನವೆಂಬರ್ 22: ಮನೆ ಮುಂದೆ ನಿಲ್ಲಿಸಿದ್ದ ಎರಡು ಹೊಚ್ಚ ಹೊಸ ಕಾರು ಕ್ಷಣಾರ್ಧದಲ್ಲಿ ಮಾಯವಾಗಿದ್ದು, ಬೆಳಗಾವಿಯಲ್ಲಿ ಹೈಟೆಕ್ ತಂತ್ರಜ್ಞಾನ ಬಳಸಿ ಕಾರು ಕಳ್ಳತನ ಮಾಡಲಾಗಿದೆ.

ಹೈಟೆಕ್ ಟೆಕ್ನಿಕ್ ಬಳಸಿ ಕ್ಷಣಾರ್ಧದಲ್ಲಿ ಎರಡು ಹೊಸ ಇನ್ನೋವಾ ಕಾರು ಕಳ್ಳತನವಾಗಿರುವ ಘಟನೆ ಬೆಳಗಾವಿಯ ಸದಾಶಿವ ನಗರ ಹಾಗೂ ರಾಮತೀರ್ಥ ನಗರದಲ್ಲಿ ಎರಡು ಪ್ರತ್ಯೇಕ ಘಟನೆ ನಡೆದಿವೆ.

ಕಾರಿನ ರಿಮೋಟ್ ಕೀ ಹ್ಯಾಕ್ ಮಾಡಿ ಕ್ಷಣಾರ್ಧದಲ್ಲಿ ಎರಡು ಕಾರು ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದು, ಶಿವಬಸವ ನಗರದ ಡಾ. ಮೃತ್ಯುಂಜಯ ಬೆಲ್ಲದ, ರಾಮತೀರ್ಥ ನಗರದ ಉದ್ಯಮಿ ಅನಿಲ್ ಪಾಟೀಲಗೆ ಸೇರಿದ ಇನ್ನೋವಾ ಕ್ರಿಸ್ಟಾ ಕಾರು ಕಳ್ಳತನವಾಗಿವೆ.

ಹೈಟೆಕ್ ರೀತಿಯಲ್ಲಿ ಕಾರು ಕಳ್ಳತನ ಮಾಡಿದ ಕಿಲಾಡಿಗಳ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಾರು ಕಳ್ಳತನದ ದೃಶ್ಯ ನೋಡಿ ಮಾಲೀಕರಷ್ಟೇ ಅಲ್ಲ, ಪೊಲೀಸರು ಕೂಡಾ ದಂಗಾಗಿದ್ದಾರೆ.

ಕಳ್ಳತನ ಕೃತ್ಯ ಮುಗಿದ ತಕ್ಷಣವೇ ದರೋಡೆಕೋರರು ಸಿಮ್ ಕಾರ್ಡ್ ‌ಚೇಂಜ್ ಮಾಡಿದ್ದು, ಬೆಳಗಾವಿ ಮಹಾನಗರ ‌ಪೊಲೀಸರಿಗೆ ಹೈಟೆಕ್ ಕಳ್ಳರ ಸುಳಿವು ಲಭ್ಯವಾಗಿಲ್ಲ. ಇದೇ ಕಳ್ಳರ ಗ್ಯಾಂಗ್ ಹುಬ್ಬಳ್ಳಿಯಲ್ಲೂ ಹೈಟೆಕ್ ತಂತ್ರಜ್ಞಾನ ಬಳಸಿ ಕೃತ್ಯ ಎಸಗಿದ್ದಾರೆ. ಕಾರು ಕಳ್ಳತನ ಪ್ರಕರಣ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


SHARE THIS

Author:

0 التعليقات: