Friday, 13 November 2020

ಡಿ.24ರೊಳಗೆ 'IMA ವಂಚನೆ ಪ್ರಕರಣ'ದಲ್ಲಿ ಹಣ ಕಳೆದುಕೊಂಡವರು ಅರ್ಜಿ ಸಲ್ಲಿಸಿ - ವಿಶೇಷಾಧಿಕಾರಿ ಹರ್ಷಗುಪ್ತಾ

 

ಡಿ.24ರೊಳಗೆ 'IMA ವಂಚನೆ ಪ್ರಕರಣ'ದಲ್ಲಿ ಹಣ ಕಳೆದುಕೊಂಡವರು ಅರ್ಜಿ ಸಲ್ಲಿಸಿ - ವಿಶೇಷಾಧಿಕಾರಿ ಹರ್ಷಗುಪ್ತಾ

ಬೆಂಗಳೂರು : ರಾಜ್ಯದಲ್ಲಿ ಬಹುದೊಡ್ಡ ತಲ್ಲಣವನ್ನು ಸೃಷ್ಠಿಸಿದ್ದಂತ ಪ್ರಕರಣ ಅಂದ್ರೇ.. ಅದು ಐಎಂಎ ಬಹುಕೋಟಿ ವಂಚನೆ ಪ್ರಕರಣವಾಗಿತ್ತು. ಇಂತಹ ಪ್ರಕರಣದಲ್ಲಿ ಹಣ ಕಳೆದುಕೊಂಡಿರುವರು ನವೆಂಬರ್ 24ರಿಂದ ಡಿಸೆಂಬರ್ 24ರ ಒಳಗಾಗಿ ಆನ್ ಲೈನ್ ಮೂಲಕ ಹಣ ವಾಪಾಸ್ ಪಡೆಯಲು ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಹಣ ಕಳೆದುಕೊಂಡವರಿಗೆ ಗುಡ್ ನ್ಯೂಸ್ ನೀಡಲಾಗಿದೆ.

ಈ ಕುರಿತಂತೆ ಪ್ರಕರಣ ವಿಶೇಷಾಧಿಕಾರಿ ಹರ್ಷಗುಪ್ತಾ ಮಾಹಿತಿ ನೀಡಿದ್ದು, ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹಣ ಕಳೆದುಕೊಂಡಿರುವವರು ನವೆಂಬರ್ 24ರಿಂದ ಡಿ24ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ ಕೂಡ ಆರಂಭಿಸಲಾಗಿದೆ. ಸಹಾಯವಾಣಿ ಸಂಖ್ಯೆ 080-46885959 ಗೂ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿ ತಿಳಿಸಿದ್ದಾರೆ.


SHARE THIS

Author:

0 التعليقات: