Thursday, 19 November 2020

2021ರ ಫೆಬ್ರವರಿ ವೇಳೆಗೆ ಭಾರತದಲ್ಲಿ ಲಭ್ಯವಾಗಲಿದೆ 'ಆಕ್ಸ್ ಫರ್ಡ್' ಕರೋನ ಲಸಿಕೆ


 2021ರ ಫೆಬ್ರವರಿ ವೇಳೆಗೆ ಭಾರತದಲ್ಲಿ ಲಭ್ಯವಾಗಲಿದೆ 'ಆಕ್ಸ್ ಫರ್ಡ್' ಕರೋನ ಲಸಿಕೆ  

ನವದೆಹಲಿ : ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆದರ್ ಪೂನಾವಾಲಾ ಅವರು, ಆಕ್ಸ್ ಫರ್ಡ್ COVID-19 ಲಸಿಕೆಯು 2021ರ ಫೆಬ್ರವರಿ ವೇಳೆಗೆ ಭಾರತದಲ್ಲಿ ಆರೋಗ್ಯ ಆರೈಕೆ ಕಾರ್ಯಕರ್ತರು ಮತ್ತು ವೃದ್ಧರಿಗೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಏಪ್ರಿಲ್ ವೇಳೆಗೆ ಜನಸಾಮಾನ್ಯರಿಗೆ ಇದು ಸಿಗಲಿದೆ ಅಂತ ಹೇಳಿದ್ದಾರೆ. ಅಂದ ಹಾಗೇ ಈ ಲಸಿಕೆಯ ಬೆಲೆ ಗರಿಷ್ಠ 1,000 ರೂ ಆಗಿರಬಹುದು ಅಂತ ಅವರು ಇದೇ ವೇಳೆ ತಿಳಿಸಿದ್ದಾರೆ.

ಮಾಧ್ಯಮವೊಂದು ಏರ್ಪಡಿಸಿದ ಸಂವಾದ ಕಾರ್ಯಕ್ರಮವಲದಲ್ಲಿ ಗುರುವಾರ ಮಾತನಾಡಿದ ಅವರು ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಮಾರ್ಚ್, ಏಪ್ರಿಲ್ ವೇಳೆಗೆ ಸಾರ್ವಜನಿಕರಿಗೆ ಲಸಿಕೆ ಯನ್ನು ನೀಡಲು ಸಾಧ್ಯವಾಗುತ್ತದೆ, ಆದರೂ ಕೂಡ ಜನವರಿ-ಫೆಬ್ರವರಿ 2021 ನಮ್ಮ ಡೆಡ್ ಲೈನ್ ಆಗಿದೆ ಎಂದು ಹೇಳಿದ ಅವರು 2024ರ ವೇಳೆಗೆ ಪ್ರತಿಯೊಬ್ಬ ಭಾರತೀಯನೂ ಲಸಿಕೆಯನ್ನು ಹಾಕಿಸಿಕೊಳ್ಳಲಿದ್ದಾರೆ ಅಂತ ತಿಳಿಸಿದರು.ಇದೇ ವೇಳೆ, ದೇಶದಲ್ಲಿ COVID-19 ಲಸಿಕೆ ಕೋವಿಶೀಲ್ಡ್ ಗಾಗಿ ಹಂತ-3 ವೈದ್ಯಕೀಯ ಪ್ರಯೋಗಗಳಲ್ಲಿ 1,600 ಸ್ಪರ್ಧಿಗಳ ದಾಖಲಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದಾಗಿ ಎಸ್ ಐಐ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಘೋಷಿಸಿದೆ. ದೇಶದಲ್ಲಿ ಲಸಿಕೆಯ ವೈದ್ಯಕೀಯ ಪ್ರಯೋಗಗಳಿಗೆ SII ಮತ್ತು ICIMR ಸಹಯೋಗ ವನ್ನು ಹೊಂದಿವೆ. ಐಸಿಎಂಆರ್ ವೈದ್ಯಕೀಯ ಪ್ರಯೋಗ ಸೈಟ್ ಶುಲ್ಕಗಳಿಗೆ ಧನಸಹಾಯ ವನ್ನು ಒದಗಿಸಿದ್ದರೆ, SII ಕೋವಿಶೀಲ್ಡ್ ಗಾಗಿ ಇತರ ವೆಚ್ಚಗಳನ್ನು ನೋಡಿಕೊಳ್ಳುತ್ತಿದೆ


SHARE THIS

Author:

0 التعليقات: