ಭಯೋತ್ಪಾದನೆ, ಕೋವಿಡ್-19 ಲಸಿಕೆ, ಸ್ವಾವಲಂಬಿ ಭಾರತ:
2020ರ ಬ್ರಿಕ್ಸ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
ಡಿಜಿಟಲ್ ಡೆಸ್ಕ್: ಬ್ರೆಜಿಲ್-ರಷ್ಯಾ-ಭಾರತ-ಚೀನಾ-ದಕ್ಷಿಣ ಆಫ್ರಿಕಾ (ಬ್ರಿಕ್ಸ್) ಶೃಂಗಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಾತನಾಡಿದರು.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆಹ್ವಾನದ ಮೇರೆಗೆ ಮೋದಿ ಅವರು ವರ್ಚುವಲ್ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದು, 'ಜಾಗತಿಕ ಸ್ಥಿರತೆ, ಹಂಚಿಕೆ ಭದ್ರತೆ ಮತ್ತು ನವೀನ ಬೆಳವಣಿಗೆ' ಎಂಬ ಥೀಮ್ ನೊಂದಿಗೆ ಭಾಗವಹಿಸಲಿದ್ದಾರೆ. ಶೃಂಗಸಭೆಯ ಕಾರ್ಯಸೂಚಿಯಲ್ಲಿ ಬ್ರಿಕ್ಸ್ ಸಹಕಾರ, ಬಹುಪಕ್ಷೀಯ ವ್ಯವಸ್ಥೆ ಸುಧಾರಣೆ, ಭಯೋತ್ಪಾದನೆ ನಿಗ್ರಹ ಸಹಕಾರ, ವ್ಯಾಪಾರ, ಆರೋಗ್ಯ ಮತ್ತು ಇಂಧನ ಗಳ ಮೇಲೆ ಪರಿಣಾಮ ಬೀರುವಂತಹ ಪ್ರಮುಖ ಜಾಗತಿಕ ವಿಷಯಗಳು ಸೇರಿವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಟ್ವೀಟ್ ಮಾಡಿದ್ದಾರೆ.
ಮೇ ತಿಂಗಳಲ್ಲಿ ಭಾರತ-ಚೀನಾ ಗಡಿ ಉದ್ವಿಗ್ನತೆ ಕಾಣಿಸಿಕೊಂಡ ನಂತರ ಮೋದಿ ಮತ್ತು ಕ್ಸಿ ಒಂದೇ ವೇದಿಕೆಯಲ್ಲಿ ಇರುವುದು ಇದು ಎರಡನೇ ಬಾರಿ.
0 التعليقات: