Saturday, 14 November 2020

ಭಾರತದಲ್ಲಿ ಕೊವಿಡ್ 19 ಚೇತರಿಕೆ ಪ್ರಮಾಣ ಶೇ 93.04ಕ್ಕೇರಿದೆ

 

ಭಾರತದಲ್ಲಿ ಕೊವಿಡ್ 19 ಚೇತರಿಕೆ ಪ್ರಮಾಣ 

 ಶೇ 93.04ಕ್ಕೇರಿದೆ

ನವದೆಹಲಿ, ನವೆಂಬರ್ 15: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 44,64 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಇಲ್ಲಿಯವರೆಗೆ ದೇಶದಲ್ಲಿ 87,73,017 ಕೊರೊನಾ ಸೋಂಕಿತರಿದ್ದಾರೆ. 24 ಗಂಟೆಯಲ್ಲಿ 530 ಮಂದಿ ಮೃತಪಟ್ಟಿದ್ದಾರೆ, ಒಟ್ಟು 1,29,188 ಮಂದಿ ಸಾವನ್ನಪ್ಪಿದ್ದಾರೆ.

ಭಾರತದಲ್ಲಿಒಟ್ಟಾರೆ ಚೇತರಿಕೆ ಪ್ರಮಾಣ 93.04ಕ್ಕೇರಿದೆ, ಮರಣ ಪ್ರಮಾಣ ಶೇ 1.47ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ವರದಿ ಮಾಡಿದೆ.

ಭಾರತದಲ್ಲಿ 4,80,719 ಸಕ್ರಿಯ ಪ್ರಕರಣಗಳಿವೆ, ಒಟ್ಟು 81,63,572 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಭಾರತದಲ್ಲಿ ಇಲ್ಲಿಯವರೆಗೆ 12,40,31,230 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಶುಕ್ರವಾರದಂದು 9,29,491 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಹೇಳಿದೆ.

ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 5.3 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು, 37,316,525 ಮಂದಿ ಚೇತರಿಕೆ ಹೊಂದಿದ್ದಾರೆ. ಜಾಗತಿಕವಾಗಿ 38,618,590 ಪ್ರಕರಣಗಳು ಮುಕ್ತಾಯಗೊಂಡಿವೆ. ಟಾಪ್ 10ರಲ್ಲಿರುವ ಎಲ್ಲಾ ದೇಶಗಳಲ್ಲಿ ಕನಿಷ್ಠ 10 ಲಕ್ಷ ಸೋಂಕಿತರಿದ್ದಾರೆ.


SHARE THIS

Author:

0 التعليقات: