ತಾಜುಲ್ ಉಲಮ ಏಳನೇ ಉರೂಸ್ ಮುಬಾರಕ್ ನವಂಬರ್ 16 ರಂದು; ಕಾರ್ಯಕ್ರಮಕ್ಕೆ ಅಂತಿಮ ರೂಪ ನೀಡಲಾಯಿತು
ಎಟ್ಟಿಕುಳಂ: ನವೆಂಬರ್ 16 ರಂದು ನಡೆಯುವ ತಾಜುಲ್ ಉಲಮ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ರವರ ಏಳನೇ ಉರೂಸ್ ಮುಬಾರಕಿಗೆ ಚೆಯರ್ಮ್ಯಾನ್ ಮುಹಮ್ಮದ್ ಕುಞ್ಞಿ ಬಾಖವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸ್ವಾಗತ ಸಂಘವು ಅಂತಿಮ ರೂಪ ನೀಡಿತು. ಸಯ್ಯಿದ್ ಹಾಮಿದ್ ಇಂಬಿಚ್ಚಿ ತಂಙಳರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಿದ ಕನ್ವೆನ್ಶನ್ ಅಬ್ದುಲ್ ಹಕೀಂ ಸಅದಿ ತಳಿಪ್ಪರಂಬ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಸ್ವಾಗತಿಸಿದರು. ಸಿರಾಜ್ ಇರುವೇರಿ ಕೃತಜ್ಞತೆ ಸಲ್ಲಿಸಿದರು.
ಬೆಳಗ್ಗೆ 9:00 ಗಂಟೆಗೆ ನಡೆಯಲಿರುವ ತಾಜುಲ್ ಉಲಮ ಮಕ್ಬರ ಝಿಯಾರತಿಗೆ ಮುಹಮ್ಮದ್ ಕುಞ್ಞಿ ಬಾಖವಿ ಪೀಡಿಗ ನೇತೃತ್ವ ಕೊಡುವರು. 9:30 ಕ್ಕೆ ಸಯ್ಯಿದ್ ಹಾಮಿದ್ ಇಂಬಿಚ್ಚಿ ತಂಙಳ್ ಅಲ್ ಬುಖಾರಿ ಧ್ವಜಾರೋಹಣ ನಡೆಸುವರು. 10:00 ಗಂಟೆಗೆ ನಡೆಯುವ ತಾಜುಲ್ ಉಲಮ ಮೌಲಿದ್ ಮಜ್ಲಿಸಿಗೆ ಸಯ್ಯಿದ್ ಅತಾವುಳ್ಳ ತಂಙಳ್ ಮಂಜೇಶ್ವರ ಪ್ರಾರ್ಥನೆಯೊಂದಿಗೆ ಚಾಲನೆ ನೀಡುವರು. 11:00 ಗಂಟೆಗೆ ನಡೆಯುವ ಖತ್ಮುಲ್ ಕುರ್ಆನ್ ಸಂಗಮಕ್ಕೆ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರ ನೇತೃತ್ವ ಕೊಡುವರು .
ಸಂಜೆ 4:30 ಕ್ಕೆ ಆನ್ಲೈನ್ ಮೂಲಕ ಸಮಾರೋಪ ಪ್ರಾರ್ಥನಾ ಸಂಗಮ ನಡೆಯಲಿದೆ. ಸಯ್ಯಿದ್ ಅಲಿ ಬಾಫಕಿ ತಂಙಳರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಿರುವ ಕಾರ್ಯಕ್ರಮಕ್ಕೆ ಸಮಸ್ತ ಪ್ರಸಿಡೆಂಟ್ ಇ. ಸುಲೈಮಾನ್ ಮಸ್ಲಿಯಾರ್ ಉದ್ಘಾಟನೆ ನಡೆಸುವರು. ಸಮಸ್ತ ಕೇಂದ್ರ ಮುಶಾವರಾಂಗ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ಅಧ್ಯಕ್ಷತೆ ವಹಿಸುವರು. ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಪ್ರಭಾಷಣ ಮಾಡುವರು ಮತ್ತು ಸಯ್ಯಿದ್ ಇಬ್ರಾಹಿಮ್ ಖಲೀಲುಲ್ ಬುಖಾರಿ ಅನುಸ್ಮರಣಾ ಭಾಷಣ ಮಾಡುವರು. ಎಂ. ಅಲಿಕುಞ್ಞಿ ಮುಸ್ಲಿಯಾರ್ ಶಿರಿಯ ಆಶಿರ್ವಚನ ಭಾಷಣ ನಡೆಸುವರು. ಪೊನ್ಮಳ ಅಬ್ದುಲ್ ಖಾದರ್ ಮುಸ್ಲಿಯಾರ್, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಕೆ.ಪಿ ಅಬೂಬಕರ್ ಮುಸ್ಲಿಯಾರ್ ಪಟ್ಟುವಂ, ಎ.ಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕೋತ್, ಕೂಟಂಬಾರ ಅಬ್ದುರ್ರಹ್ಮಾನ್ ದಾರಿಮಿ, ಅಬ್ದುಲ್ ಖಾದರ್ ಮದನಿ ಕಲ್ತರ, ಬಾದುಶ ಸಖಾಫಿ ಆಲಪ್ಪುಝ, ಅಬ್ದುಲ್ ಲತೀಫ್ ಸಅದಿ ಪಯಶ್ಶಿ, ರಾಶಿದ್ ಬುಖಾರಿ, ವೈ ಅಬ್ದುಲ್ಲಾ ಕುಞ್ಞಿ ಹಾಜಿ ಯೇನಪೋಯ ಮುಂತಾದವರು ಭಾಷಣ ಮಾಡುವರು.
0 التعليقات: