Sunday, 15 November 2020

ಬೆಂಗಳೂರಿನಲ್ಲಿ 'ಪಟಾಕಿ ಸಿಡಿತ'ದಿಂದ '15ಕ್ಕೂ ಹೆಚ್ಚು ಮಂದಿ'ಗೆ ಗಾಯ

 

ಬೆಂಗಳೂರಿನಲ್ಲಿ 'ಪಟಾಕಿ ಸಿಡಿತ'ದಿಂದ '15ಕ್ಕೂ ಹೆಚ್ಚು   ಮಂದಿ'ಗೆ ಗಾಯ


ಬೆಂಗಳೂರು : ಬೆಳಕಿನ ಹಬ್ಬದ ದಿನದಂದು ನಗರದಲ್ಲಿ ಪಟಾಕಿ ಸಿಡಿಸಲು ಹೋದ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಪಟಾಕಿ ಸಿಡಿಸಿದವರು ಹಾಗೂ ಬೇರೆಯವರು ಹಚ್ಚಿದ ಪಟಾಕಿ ಕಿಡಿ ತಗುಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೋವಿಡ್ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮಾರ್ಗಸೂಚಿಗಳೊಂದಿಗೆ ಆರೋಗ್ಯಕ್ಕೆ ಹಾನಿಕಾರಕ ಪಟಾಕಿ ನಿಷೇಧಿಸಿತ್ತು. ಹಸಿರು ಪಟಾಕಿಗೆ ಅವಕಾಶ ನೀಡಿತ್ತು. ಹೀಗೆ ನೀಡಿದ್ದರ ನಡುವೆಯೂ ಹಾನಿ ಮಾತ್ರ ತಪ್ಪಿಲ್ಲ. ನಿನ್ನೆ ಸುಮಾರು 15 ಜನರಿಗೆ ಗಾಯವಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಂದಹಾಗೇ ಮಿಂಟೋ ಆಸ್ಪತ್ರೆಯಲ್ಲಿ ಒಬ್ಬರು, ನಾರಾಯಣ ಆಸ್ಪತ್ರೆಯಲ್ಲಿ ನಾಲ್ಕು ಮಂದಿ, ನೇತ್ರಧಾಮದಲ್ಲಿ ಮೂವರು ಪಟಾಕಿಯಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ನಾಲ್ವರಿಗೆ ತೀವ್ರ ಗಾಯಗಳಾಗಿವೆ.

ಹಸಿರು ಪಟಾಕಿಗೆ ಮಾತ್ರವೇ ಅವಕಾಶ ನೀಡಿದ್ದರಿಂದಾಗಿ ಕಳೆದ ಬಾರಿಗಿಂತ ಹೆಚ್ಚು ಅನಾಹುತಗೊಂಡಿಲ್ಲ. ಪಟಾಕಿ ಹಚ್ಚುವಾಗ ಜಾಗ್ರತೆ ವಹಿಸೋದು ಮರೆಯಬೇಡಿ.SHARE THIS

Author:

0 التعليقات: