Sunday, 22 November 2020

ಯುಎಸ್ ನಲ್ಲಿ ಕೊರೊನಾ ಅಬ್ಬರ: 12 ಮಿಲಿಯನ್ ಗಡಿ ದಾಟಿದ ಕೇಸ್


ಯುಎಸ್ ನಲ್ಲಿ ಕೊರೊನಾ ಅಬ್ಬರ: 12 ಮಿಲಿಯನ್ ಗಡಿ ದಾಟಿದ ಕೇಸ್


ವಾಷಿಂಗ್ಟನ್ : ಅಮೆರಿಕದಲ್ಲಿ ಕೊರೊನಾ ವೈರಸ್​ ಪಾಸಿಟಿವ್​ ಪ್ರಕರಣಗಳ ಸಂಖ್ಯೆ 12 ಮಿಲಿಯನ್ ದಾಟಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ. ಸಾಂಕ್ರಾಮಿಕ ಸೋಂಕಿನಿಂದ ಯುಎಸ್​ನಲ್ಲಿ ಇದುವರೆಗೆ 255,414 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಕೊರೊನಾ ಹಿಂದಿಗಿಂತಲೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.

195,500ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಅಮೆರಿಕದಲ್ಲಿ ಒಂದೇ ದಿನ ಅತಿ ಹೆಚ್ಚು ಹಾಗೂ ಕೆಲ ವಾರಗಳಲ್ಲಿ ಇದೇ ಮೊದಲ ಬಾರಿಗೆ ತೀವ್ರ ಏರಿಕೆ ಕಂಡುಬಂದಿದೆ. ಈ ಹಿಂದೆ ಜುಲೈನಲ್ಲಿ ಒಂದೇ ದಿನ 77,100 ಪ್ರಕರಣಗಳು ಕಂಡುಬಂದಿದ್ದು ಈವರೆಗಿನ ದಾಖಲೆಯಾಗಿತ್ತು.


SHARE THIS

Author:

0 التعليقات: