Wednesday, 18 November 2020

ಭಾರತದ ಮೊದಲ ಮಹಿಳಾ ಪ್ರಧಾನಿ ದಿ. ಇಂದಿರಾಗಾಂಧಿ ಅವರ 103ನೇ ಜನ್ಮದಿನ


 ಭಾರತದ ಮೊದಲ ಮಹಿಳಾ ಪ್ರಧಾನಿ ದಿ. ಇಂದಿರಾಗಾಂಧಿ ಅವರ 103ನೇ ಜನ್ಮದಿನ

ನವದೆಹಲಿ, ನ.19 (ಹಿ.ಸ) : ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆ ಎಂದೇ ಖ್ಯಾತರಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಗಣ್ಯರು, ನಾಯಕರು ದಿವಂಗತ ಮಾಜಿ ಪ್ರಧಾನಿಯನ್ನು ಸ್ಮರಿಸಿಕೊಂಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರ ರಾಹುಲ್ ಗಾಂಧಿ ದೆಹಲಿಯಲ್ಲಿ ಇಂದಿರಾ ಗಾಂಧಿ ಸ್ಮಾರಕಕ್ಕೆ ತೆರಳಿ ಪುಷ್ಪನಮನ ಸಲ್ಲಿಸಿದ್ದಾರೆ. ಕೇಂದ್ರ ಕಾಂಗ್ರೆಸ್ ಮತ್ತು ಕರ್ನಾಟಕ ಕಾಂಗ್ರೆಸ್ ನಾಯಕರು ಇಂದಿರಾ ಗಾಂಧಿಯವರನ್ನು ಸ್ಮರಿಸಿಕೊಂಡಿದ್ದಾರೆ.

ಇಂದಿರಾ ಗಾಂಧಿಯವರ ಬಲಿಷ್ಠ ನಾಯಕತ್ವ ಇಂದಿಗೆ ಸಹ ಮಾದರಿ ಎಂದಿದ್ದಾರೆ. 1917ರ ನವೆಂಬರ್ 19ರಂದು ಜನಿಸಿದ್ದ ಇಂದಿರಾ ಗಾಂಧಿ ಭಾರತದ ಪ್ರಧಾನ ಮಂತ್ರಿಯಾಗಿ 1966ರಿಂದ 1977ರವರೆಗೆ ಮೊದಲ ಬಾರಿ ನಂತರ 1980ರಿಂದ ಅವರ ಹತ್ಯೆಯಾಗುವವರೆಗೆ 1984ರವರೆಗೆ ಸೇವೆ ಸಲ್ಲಿಸಿದ್ದರು. ನಾಯಕತ್ವ, ದೂರದೃಷ್ಟಿ, ನಿಜವಾದ ನಾಯಕತ್ವ ಮತ್ತು ನಮ್ಮ ತಾಯಿನಾಡಿನ ಮಗಳಾದ ಇಂದಿರಾ ಗಾಂಧಿ ನಮ್ಮ ದೇಶದ ನಾಗರಿಕರಿಗೆ ಪ್ರಧಾನ ಮಂತ್ರಿಗಿಂತ ಹೆಚ್ಚಿನವರಾಗಿದ್ದರು. ಶ್ರೇಷ್ಠತೆ ಮತ್ತು ಸಮೃದ್ಧಿಯ ಅನ್ವೇಷಣೆಯಲ್ಲಿ ಪುನರುಜ್ಜೀವನಗೊಳಿಸುವ ಶಕ್ತಿಯಾಗಿದ್ದರು ಎಂದು ಕಾಂಗ್ರೆಸ್ ಪಕ್ಷ ಸ್ಮರಿಸಿದೆ.SHARE THIS

Author:

0 التعليقات: