Friday, 6 November 2020

ಇಸ್ರೋದ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಉಡಾವಣೆಗೆ ಕ್ಷಣಗಣನೆ

 

ಇಸ್ರೋದ ಭೂ ವೀಕ್ಷಣಾ ಉಪಗ್ರಹ ಇಒಎಸ್ -01 ಉಡಾವಣೆಗೆ ಕ್ಷಣಗಣನೆ 

ಬೆಂಗಳೂರು, ನವೆಂಬರ್ 06: ಭೂಮಿಯ ವೀಕ್ಷಣಾ ಉಪಗ್ರಹ ಇಒಎಸ್-01ರ ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತಿಳಿಸಿದೆ. ಭಾರತದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ತನ್ನ 51 ನೇ ಮಿಷನ್ (ಪಿಎಸ್ಎಲ್ ವಿಸಿ 49) ನಲ್ಲಿ ಇಒಎಸ್ -01 ಅನ್ನು ಪ್ರಾಥಮಿಕ ಉಪಗ್ರಹವಾಗಿ ಒಂಬತ್ತು ಅಂತರರಾಷ್ಟ್ರೀಯ ಗ್ರಾಹಕ ಉಪಗ್ರಹಗಳೊಂದಿಗೆ ಸಾಗಿಸಲಿದೆ. ಕೊರೊನಾ ಬಿಕ್ಕಟ್ಟಿನ ನಡುವೆಯೂ ಇಸ್ರೋ ಮಹತ್ವದ ಹೆಜ್ಜೆ: 59 ದೇಶಗಳ ಜತೆ ಒಪ್ಪಂದ ನವೆಂಬರ್ 7 ರಂದು ಉಪಗ್ರಹ ಉಡಾವಣೆಯಾಗಲಿದೆ. ಕೊರೊನಾ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಇಸ್ರೋದ ಅಂತರಿಕ್ಷ ಕಾರ್ಯಕ್ರಮಗಳು ಸ್ಥಗಿತವಾಗಿದ್ದು ಇದೀಗ ಶನಿವಾರದಿಂದ ಮತ್ತೆ ಚಾಲನೆ ಸಿಕ್ಕಲಿದೆ. ಶನಿವಾರ ಮಧ್ಯಾಹ್ನ 3:02 ಕ್ಕೆ ಪಿಎಸ್​ಎಲ್​ವಿ-ಸಿ49 ವಾಹನದೊಡನೆ ಇಒಎಸ್ -01,ಇತರೆ ಒಂಬತ್ತು ಅಂತರರಾಷ್ಟ್ರೀಯ ಗ್ರಾಹಕರ ಉಪಗ್ರಹಗಳು ಸೇರಿ ಹತ್ತು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಸೇರಿಸಲಿದೆ. ಗ್ರಾಹಕ ಉಪಗ್ರಹಗಳನ್ನು ಬಾಹ್ಯಾಕಾಶ ಇಲಾಖೆಯ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್ಎಸ್ಐಎಲ್) ನೊಂದಿಗೆ ವಾಣಿಜ್ಯ ಒಪ್ಪಂದದಡಿಯಲ್ಲಿ ಉಡಾವಣೆ ಮಾಡಲಾಗುತ್ತಿದೆ ಎಂದು ಸಂಸ್ಥೆ ಹೇಳಿದೆ. ಗ್ರಾಹಕ ಉಪಗ್ರಹಗಳಲ್ಲಿ ತಂತ್ರಜ್ಞಾನ ಪ್ರದರ್ಶನಕ್ಕಾಗಿ ಲಿಥುವೇನಿಯಾದಿಂದ ಒಂದು, ಮತ್ತು ಲಕ್ಸೆಂಬರ್ಗ್ ಮತ್ತು ಯುಎಸ್ಎಯಿಂದ ತಲಾ ನಾಲ್ಕು ಸಮುದ್ರ ಕಾರ್ಯಾಚರಣೆಗೆ ಸಂಬಂಧಿಸಿದ ಉಪಗ್ರಹಗಳು ಹಾಗೂ ಮಲ್ಟಿ-ಮಿಷನ್ ರಿಮೋಟ್ ಸೆನ್ಸಿಂಗ್ ಸೇರಿದೆ. ಪಿಎಸ್‌ಎಲ್‌ವಿ-ಸಿ 49 / ಇಒಎಸ್ -01 ಮಿಷನ್ ಉಡಾವಣೆಯ ಕ್ಷಣಗಣನೆ ಇಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ(ಎಸ್‌ಡಿಎಸ್‌ಸಿ)ದಲ್ಲಿ ಶುಕ್ರವಾರ ಮಧ್ಯಾಹ್ನ 1:02 ಗಂ (ಐಎಸ್‌ಟಿ) ಯಿಂದ ಪ್ರಾರಂಭವಾಯಿತು" ಎಂದು ಇಸ್ರೋ ತಿಳಿಸಿದೆ.SHARE THIS

Author:

0 التعليقات: