Monday, 30 November 2020

 'ಹೆಂಡತಿಗೆ ದುಡಿಯುವ ಸಾಮರ್ಥ್ಯ'ವಿದೆ ಎಂದು 'ಜೀವಾಂಶ ಕಡಿತ'ಗೊಳಿಸಲಾಗದು - ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

'ಹೆಂಡತಿಗೆ ದುಡಿಯುವ ಸಾಮರ್ಥ್ಯ'ವಿದೆ ಎಂದು 'ಜೀವಾಂಶ ಕಡಿತ'ಗೊಳಿಸಲಾಗದು - ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು


 'ಹೆಂಡತಿಗೆ ದುಡಿಯುವ ಸಾಮರ್ಥ್ಯ'ವಿದೆ ಎಂದು 'ಜೀವಾಂಶ ಕಡಿತ'ಗೊಳಿಸಲಾಗದು - ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು

ನವದೆಹಲಿ : ಪತ್ನಿ ದುಡಿಯುತ್ತಿದ್ದಾಳೆ ಎನ್ನುವ ಕಾರಣಕ್ಕಾಗಿ ಅನೇಕ ಗಂಡಂದಿರು ಜೀವನಾಂಶ ಕಡಿತಗೊಳಿಸುವಂತೆ ಕೋರ್ಟ್ ಗೆ ಮನವಿ ಮಾಡುತ್ತಿದ್ದರು. ಇಂತಹ ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದೇ ಹೆಂಡತಿಗೆ ದುಡಿಯುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೆ, ಜೀವನಾಂಶ ಕಡಿತ ಮಾಡಲು ಸಮರ್ಪಕ ಕಾರಣವಲ್ಲ ಎಂಬುದಾಗಿ ಹೇಳಿದೆ.

ಬೆಂಗಳೂರಿನ ವ್ಯಕ್ತಿಯೊಬ್ಬರು ಹೆಂಡತಿಗೆ 50 ಸಾವಿರ ಜೀವನಾಂಶ ನೀಡಬೇಕು ಎಂಬ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದಂತ ಅರ್ಜಿಯೊಂದರ ವಿಚಾರಣೆ ನಡೆಸಿದಂತ ದೆಹಲಿ ಹೈಕೋರ್ಟ್ ನ ನ್ಯಾಯಮೂರ್ತಿ ಮನೋಜ್ ಕುಮಾರ್ ಓಹ್ ರಿ ಅವರ ಪೀಠವು, ಹೆಂಡತಿಗೆ ದುಡಿಯುವ ಸಾಮರ್ಥ್ಯ ಇದೆ ಎಂಬುದು ಕುಟುಂಬ ನ್ಯಾಯಾಲಯವು ನಿಗದಿ ಮಾಡಿರುವ ಜೀವನಾಂಶವನ್ನು ಕಡಿತ ಮಾಡಲು ಸಮರ್ಪಕ ಕಾರಣ ಆಗುವುದಿಲ್ಲ ಎಂಬು ತಿಳಿಸಿದೆ.

ಅರ್ಜಿದಾರ ವ್ಯಕ್ತಿಯು ತಿಂಗಳಿಗೆ ₹1.68 ಲಕ್ಷ ದುಡಿಯುತ್ತಿದ್ದಾರೆ. ತಮ್ಮ ಹೆಂಡತಿಯು ಸ್ವತಂತ್ರವಾಗಿ ವಕೀಲಿಕೆ ಮಾಡಿ ಕೊಂಡಿದ್ದಾರೆ ಎಂದು ಆ ವ್ಯಕ್ತಿ ವಾದಿಸಿದ್ದರು. ಆದರೆ, ಹೆಂಡತಿಯು ಇದನ್ನು ನಿರಾಕರಿಸಿದ್ದಾರೆ. ವಕೀಲ ವೃತ್ತಿ ಕೈಗೊಳ್ಳುವ ಅರ್ಹತೆ ತಮಗೆ ಇದೆ. ಆದರೆ, ಸದ್ಯಕ್ಕೆ ತಾವು ಹೆತ್ತವರನ್ನೇ ಪೂರ್ಣವಾಗಿ ಅವಲಂಬಿಸಿರುವುದಾಗಿ ತಿಳಿಸಿದ್ದಾರೆ.

ಜೀವನಾಂಶಕ್ಕೆ ಸಂಬಂಧಿಸಿ, ಹೆಂಡತಿಗೆ ದುಡಿಯುವ ಸಾಮರ್ಥ್ಯ ಇದೆ ಎಂದು ವಾದಿ ಸಿದ ಅರ್ಜಿಗಳು ಈ ಹಿಂದೆಯೂ ಈ ನ್ಯಾಯಾಲಯದ ಮುಂದೆ ಬಂದಿದ್ದವು. ದುಡಿಯುವ ಸಾಮರ್ಥ್ಯ ಮತ್ತು ನಿಜವಾದ ದುಡಿಮೆ ಎರಡು ಭಿನ್ನ ವಿಷಯಗಳು ಎಂದು ದೆಹಲಿ ಹೈಕೋರ್ಟ್ ನ್ಯಾಯ ಪೀಠವು ತಿಳಿಸಿದೆ.

ವಿಚಾರಣಾ ನ್ಯಾಯಾಲಯದ ತೀರ್ಪನ್ನು ಬದಲಾಯಿಸದೆ ಇರಲು ಹೈಕೋರ್ಟ್‌ ನಿರ್ಧರಿಸಿದೆ. ಅರ್ಜಿದಾರ ವ್ಯಕ್ತಿಯ ತಿಂಗಳ ಸಂಬಳದ ಮೊತ್ತವನ್ನು ಮೂರು ಭಾಗ ಮಾಡಿ ಒಂದು ಭಾಗವನ್ನು ಹೆಂಡತಿಗೆ ಜೀವನಾಂಶವಾಗಿ ನೀಡಲು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು. ಈ ಆದೇಶವು ಸಂಪೂರ್ಣವಾಗಿ ಸಮರ್ಥನೀಯ ಎಂದು ದೆಹಲಿ ಹೈಕೋರ್ಟ್‌ ಎತ್ತಿ ಹಿಡಿದಿದೆ.

 ಸಂವಿಧಾನದಲ್ಲಿ ಏನಿದೆ ಅಂತಾ ಈಶ್ವರಪ್ಪ ಅವರು ಓದಲಿ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು

ಸಂವಿಧಾನದಲ್ಲಿ ಏನಿದೆ ಅಂತಾ ಈಶ್ವರಪ್ಪ ಅವರು ಓದಲಿ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು


 ಸಂವಿಧಾನದಲ್ಲಿ ಏನಿದೆ ಅಂತಾ ಈಶ್ವರಪ್ಪ ಅವರು ಓದಲಿ - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು

ದೇವನಹಳ್ಳಿ : 'ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ನಾವು ಮುಸಲ್ಮಾನರಿಗೆ ಟಿಕೆಟ್ ನೀಡುವುದಿಲ್ಲ ಎಂದಿರುವ ಈಶ್ವರಪ್ಪನವರು, ಸಂವಿಧಾನ ಓದಬೇಕು. ಅದರಲ್ಲಿರುವ ಆಶಯ ಏನು ಎಂದು ತಿಳಿದುಕೊಳ್ಳಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ದೇವನಹಳ್ಳಿಯ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ಬಿಜೆಪಿಯವರ ಸಿದ್ಧಾಂತವೇ ಅದು. ಅವರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಗೌರವವೂ ಇಲ್ಲ. ಅವರು ಸಂವಿಧಾನ ಸುಡಬೇಕು ಅಂತಲೇ ಕಾಯುತ್ತಿದ್ದಾರೆ. ಈಶ್ವರಪ್ಪ ಅವರಿಂದ ಸಂವಿಧಾನವನ್ನು ಓದಿಸಿ. ಅವರಿಗೆ ಅದರ ಆಶಯಗಳು ಅರ್ಥವಾಗಲಿ. ಬಿಜೆಪಿಯವರು ತಮ್ಮ ಪಕ್ಷದಲ್ಲಿರುವ ಅಲ್ಪಸಂಖ್ಯಾತರ ಘಟಕವನ್ನು ವಿಸರ್ಜಿಸುವುದು ಉತ್ತಮ' ಎಂದು ಟೀಕಿಸಿದರು.

'ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಬೇಕು ಎಂದು ನಾವು ನ್ಯಾಯಾಲಯದ ಮೆಟ್ಟಿಲೇರಿದ್ದೆವು. ನಮ್ಮ ನಿರೀಕ್ಷೆಯಂತೆ ಈಗ ಚುನಾವಣೆ ಘೋಷಣೆಯಾಗಿದೆ. ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆ ಇದು. ಈ ಚುನಾವಣೆ ನಡೆಯಬೇಕು ಎಂಬುದು ನಮ್ಮ ಚಿಂತನೆ. ಬೆಂಗಳೂರು ಪಾಲಿಕೆ ಚುನಾವಣೆಯೂ ನಡೆಯಬೇಕು ಎಂಬುದು ನಮ್ಮ ಬಯಕೆ ಎಂದರು.

ಈಗಾಗಲೇ ಅವರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ನಡೆದಿವೆ. ಹೀಗಾಗಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸುವುದರಲ್ಲಿ ಅಭ್ಯಂತರವಿಲ್ಲ. ಕೋವಿಡ್ ನಿಯಮ ಪಾಲನೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸರ್ಕಾರ ಹಾಗೂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ರಾಜ್ಯದ ಸಮಸ್ಯೆ ಹಾಗೂ ಸರ್ಕಾರದ ಕೆಲವು ನಿರ್ಣಯಗಳನ್ನು ನಾವು ಗಮನಿಸಿದ್ದೇವೆ. ಈ ವಿಚಾರವಾಗಿ ನಾನೊಬ್ಬ ತೀರ್ಮಾನ ಮಾಡುವುದಿಲ್ಲ. ಎಲ್ಲ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುವುದು. ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದು, ಇಂದು ಹಿರಿಯ ನಾಯಕರೆಲ್ಲ ಸೇರಿ ಚರ್ಚಿಸಿ, ಅವರ ಸಲಹೆ ಪಡೆಯುತ್ತೇನೆ ಎಂದು ತಿಳಿಸಿದರು.

ಸಂತೋಷ್ ಅವರು ಈಗ ಯಾವ ಹೇಳಿಕೆ ಬೇಕಾದರೂ ನೀಡಲಿ. ತಮ್ಮ ಆಂತರಿಕ ವಿಚಾರ ಮುಚ್ಚಿಕೊಳ್ಳಲು ಏನಾದರೂ ಹೇಳಲಿ. ರಾಜಕೀಯ ಕಾರಣಕ್ಕಾಗಿ ಅವರಿಂದ ಈ ಹೇಳಿಕೆ ಕೊಡಿಸಲಾಗಿದೆ. ಸಂತೋಷ ಅವರು ಯಾಕೆ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎಂಬುದರ ಬಗ್ಗೆಯೇ ಅವರ ಧರ್ಮಪತ್ನಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕಾದರೂ ತನಿಖೆ ನಡೆಯಬೇಕೋ ಬೇಡವೋ? ಅವರು ಯಾವುದೋ ಸಾಮಾನ್ಯ ಹುದ್ದೆಯಲ್ಲಿ ಇರುವವರಲ್ಲ, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಹೀಗಾಗಿ ಇವರ ಆತ್ಮಹತ್ಯೆ ಯತ್ನ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.

'ಚುನಾವಣೆಗಳ ಗೆಲುವು, ಸೋಲಿನ ಫಲಿತಾಂಶದ ಬಗ್ಗೆ ನಾವು ಆತಂಕ ಪಡುವುದಿಲ್ಲ. ಉಪಚುನಾವಣೆಗಳೇ ಬೇರೆ, ಪ್ರಮುಖ ಚುನಾವಣೆಗಳೇ ಬೇರೆ. ನಾವು ಭವಿಷ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಉಪ ಚುನಾವಣೆ ಫಲಿತಾಂಶದಿಂದ ನಾವು ನಮ್ಮ ಪಕ್ಷದ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಮಗೆ ನಮ್ಮ ಸಿದ್ಧಾಂತಗಳೇ ಮುಖ್ಯ. ಬಿಜೆಪಿಯ ಆಂತರಿಕ ವಿಚಾರವಾಗಿ ನಾವು ಮಾತನಾಡುವುದಿಲ್ಲ ಎಂದರು.

 ಮಧ್ಯಪ್ರದೇಶ: ಪತ್ನಿಗೆ ಮತಾಂತರವಾಗುವಂತೆ ಮತ್ತು ಉರ್ದು ಕಲಿಯಲು ಪೀಡಿಸುತ್ತಿದ್ದ ವ್ಯಕ್ತಿಯ ಬಂಧನ

ಮಧ್ಯಪ್ರದೇಶ: ಪತ್ನಿಗೆ ಮತಾಂತರವಾಗುವಂತೆ ಮತ್ತು ಉರ್ದು ಕಲಿಯಲು ಪೀಡಿಸುತ್ತಿದ್ದ ವ್ಯಕ್ತಿಯ ಬಂಧನ


 ಮಧ್ಯಪ್ರದೇಶ: ಪತ್ನಿಗೆ ಮತಾಂತರವಾಗುವಂತೆ ಮತ್ತು ಉರ್ದು ಕಲಿಯಲು ಪೀಡಿಸುತ್ತಿದ್ದ ವ್ಯಕ್ತಿಯ ಬಂಧನ

ಶಾದೋಲ್: 2018 ರಲ್ಲಿ ಪ್ರೀತಿಸಿ ವಿವಾಹವಾಗಿದ್ದ ಪತ್ನಿಯನ್ನು ಮತಾಂತರವಾಗಲು, ಉರ್ದು, ಅರೇಬಿಕ್ ಭಾಷೆಗಳನ್ನು ಕಲಿಯಲು ಪೀಡಿಸುತ್ತಿದ್ದ ಇರ್ಶಾದ್ ಖಾನ್ ನ್ನು ಮಧ್ಯಪ್ರದೇಶದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 1968 ರ ಪ್ರಕಾರ ಬಂಧಿಸಲಾಗಿದೆ.

ಪ್ರೀತಿಸಿ ವಿವಾಹವಾಗಿದ್ದ ಯುವತಿ ಪ್ರಾಪ್ತ ವಯಸ್ಕಳಾಗಿದ್ದ ಕಾರಣ ಇರ್ಶಾದ್ ಖಾನ್ ಹಾಗೂ ಆ ಯುವತಿ ವಿವಾಹವಾಗಿದ್ದರು, ಪೊಲೀಸರು ಈ ಸಂಬಂಧ ಹೇಳಿಕೆಯನ್ನೂ ಪಡೆದಿದ್ದರು.

ಆದರೆ ನ.27 ರಂದು ಆಕೆ ತನ್ನ ಪೋಷಕರ ಮನೆಗೆ ಬಂದಿದ್ದಾಗ ಖಾನ್ ಪೊಲೀಸ್ ಠಾಣೆ ಮೆಟ್ಟಿಲೇರಿ ತನ್ನ ಪತ್ನಿಯನ್ನು ಬಲವಂತವಾಗಿ ತವರು ಮನೆಯಲ್ಲೇ ಉಳಿಸಿಕೊಳ್ಳಲಾಗಿದೆ ಎಂದು ದೂರು ನೀಡಿದ್ದ. ಈ ಬಳಿಕ ಪೋಷಕರೂ ಸಹ ಪೊಲೀಸ್ ಠಾಣೆಗೆ ಬಂದು ಇರ್ಶಾದ್ ಖಾನ್ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದರು.

ಹಿಂದೂ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನ ಪತಿ ತನಗೆ ಮತಾಂತರವಾಗುವುದಕ್ಕೆ ಹಾಗೂ ಅರೇಬಿಕ್, ಉರ್ದು ಭಾಷೆಗಳನ್ನು ಕಲಿಯುವುದಕ್ಕೆ ಒತ್ತಾಯಿಸುತ್ತಿದ್ದಾನೆ ಎಂದು ದೂರು ನೀಡಿದ್ದಾಳೆ

ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ 498ಎ, ಸೆಕ್ಷನ್ 3,4,5 ರ ಅಡಿಯಲ್ಲಿ ಇರ್ಶಾದ್ ಖಾನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.

 ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ; ಯಡಿಯೂರಪ್ಪ

ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ; ಯಡಿಯೂರಪ್ಪ


 ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ; ಯಡಿಯೂರಪ್ಪ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಘೋಷಣೆಗೂ ಸಂಪುಟ ವಿಸ್ತರಣೆಗೂ ಸಂಬಂಧವಿಲ್ಲ. ಇನ್ನು ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಆಗುತ್ತೇನೋ ನೋಡೋಣ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾರ್ಮಿಕ‌ವಾಗಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಅಭಿವೃದ್ಧಿ ಕೆಲಸ, ಇತರ ಚಟುವಟಿಕೆ ಮಾಡುವಂತಿಲ್ಲ ಎಂದರು.

ಪಂಚಾಯ್ತಿ ಚುನಾವಣೆ ಪಕ್ಷಾತೀತವಾಗಿ ನಡೆದರೂ ಯಾರು ಯಾವ ಪಕ್ಷದವರು ಎಂಬುದು ಗೊತ್ತಾಗುತ್ತದೆ. ಸಂಘಟನೆ ದೃಷ್ಟಿಯಿಂದ ಪಂಚಾಯ್ತಿ ಚುನಾವಣೆಯೂ ಮುಖ್ಯ. ತಳಮಟ್ಟದಲ್ಲಿ ಪಕ್ಷವನ್ನು ಬಲಪಡಿಸಬೇಕಾದರೆ ಒಳ್ಳೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು. ಇದು ಲೋಕಸಭೆ, ವಿಧಾನಸಭೆ ಚುನಾವಣೆಯಷ್ಟೇ ಮಹತ್ವವಾದುದು ಎಂದು ಯಡಿಯೂರಪ್ಪ ಹೇಳಿದರು.

ಇದೀಗಾಗಲೇ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ತಂಡಗಳು ಪ್ರವಾಸ ಮಾಡುತ್ತಿದೆ, ಈಗಾಗಲೇ ಗ್ರಾಮ ಸ್ವಾರಾಜ್ ಸಮಾವೇಶಗಳನ್ನು ಮಾಡುತ್ತಿದ್ದೇವೆ. ಪಕ್ಷದ ಸಂಘಟನೆಯತ್ತ ಹೆಚ್ಚು ಗಮನ ಹರಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

 ರಜನಿಕಾಂತ್ ರಾಜಕೀಯ ಪ್ರವೇಶ ಇನ್ನೂ ಅಸ್ಪಷ್ಟ: ಶೀಘ್ರವೇ ನಿರ್ಧಾರ ಪ್ರಕಟ ಎಂದ ಸೂಪರ್ ಸ್ಟಾರ್

ರಜನಿಕಾಂತ್ ರಾಜಕೀಯ ಪ್ರವೇಶ ಇನ್ನೂ ಅಸ್ಪಷ್ಟ: ಶೀಘ್ರವೇ ನಿರ್ಧಾರ ಪ್ರಕಟ ಎಂದ ಸೂಪರ್ ಸ್ಟಾರ್


 ರಜನಿಕಾಂತ್ ರಾಜಕೀಯ ಪ್ರವೇಶ ಇನ್ನೂ ಅಸ್ಪಷ್ಟ: ಶೀಘ್ರವೇ ನಿರ್ಧಾರ ಪ್ರಕಟ ಎಂದ ಸೂಪರ್ ಸ್ಟಾರ್

ಚೆನ್ನೈ: ನಟ ರಜನಿ ಕಾಂತ್ ಅವರ ರಾಜಕೀಯ ಪ್ರವೇಶ ಕುರಿತಂತೆ ಇನ್ನೂ ಅವರ ನಿರ್ಧಾರ ಅನಿಶ್ಚಿತತೆಯಿಂದ ಕೂಡಿದೆ. ಇಂದು ನಡೆದ ರಜಿನಿ ಮಕ್ಕಳ್ ಮಂಡ್ರಮ್ ನ ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ಯಾವುದೇ ನಿರ್ದಾರ ಕೈಗೊಳ್ಳಲಾಗಲಿಲ್ಲ, ಹೀಗಾಗಿ ಸಭೆ ಅಂತ್ಯವಾಯಿತು.

ಪೋಯಸ್ ಗಾರ್ಡನ್ ನಲ್ಲಿ ನಡೆದ ಸಭೆಯ ನಂತರ ಮಾತನಾಡಿದ ರಜನಿಕಾಂತ್, ಜಿಲ್ಲಾ ಕಾರ್ಯದರ್ಶಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ, ಹಾಗೂ ನಾನು ನನ್ನ ನಿಲುವನ್ನು ತಿಳಿಸಿದ್ದೇನೆ, ನಾನು ಯಾವುದೇ ನಿರ್ಧಾರ ತೆಗೆದುಕೊಂಡರು ಆ ನಿರ್ಧಾರಕ್ಕೆ ಅವರು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ. ಹಿಗಾಗಿ ನಾನು ಶೀಘ್ರವೇ ಒಂದು ನಿರ್ಧಾರಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಕೋಡಂಬಕ್ಕಂನ ರಾಘವೇಂದ್ರ ಮಂಟಪದಲ್ಲಿ ಸಮಾಲೋಚನಾ ಸಭೆ ನಡೆಯಿತು. ಒಟ್ಟು 36 ಜಿಲ್ಲಾ ಕಾರ್ಯದರ್ಶಿಗಳನ್ನು ನಟ ಆಹ್ವಾನಿಸಿದ್ದರು. ಸೂಚನೆ ಪ್ರಕಾರ ಬೆಳಗ್ಗೆ 9 ಗಂಟೆಗೆ ಕಾರ್ಯದರ್ಶಿಗಳು ಹಾಜರಾಗಿದ್ದರು.

ಕೊರೋನಾ ಪರೀಕ್ಷೆಗಾಗಿ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ ಎಲ್ಲಾ ಜಿಲ್ಲಾ ಕಾರ್ಯದರ್ಶಿಗಳನ್ನು ಮಂಟಪಕ್ಕೆ ಬಿಡಲಾಯಿತು.

ರಜನಿಕಾಂತ್ 9.45ಕ್ಕೆ ಮಂಟಪಕ್ಕೆ ಆಗಮಿಸಿದರು, ಬೆಳಗ್ಗೆ 10 ಗಂಟೆಗೆ ಸಭೆ ಆರಂಭವಾಯಿತು, ಎಲ್ಲಾ ಜಿಲ್ಲಾ ಕಾರ್ಯದರ್ಶಿಗಳು ನಟನ ಆರೋಗ್ಯದ ಬಗ್ಗೆ ಟ್ವೀಟ್ ಮಾಡಿದ ನಂತರ ಅವರ ಆರೋಗ್ಯದ ಬಗ್ಗೆ ವಿಚಾರಿಸಿದರು.

ನನ್ನ ಹೆಸರಿನಲ್ಲಿ ಪತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದು ನನ್ನದಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ನನ್ನ ಆರೋಗ್ಯದ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿರುವ ವಿವರಗಳು ನಿಜ. ನನ್ನ ರಾಜಕೀಯ ನಿಲುವಿನ ಬಗ್ಗೆ ಸೂಕ್ತ ಸಂದರ್ಭದಲ್ಲಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳಿದ್ದಾರೆ.

ಕೊರೊನಾದಿಂದ ಪೋಷಕರು ಚೇತರಿಸಿಕೊಂಡಿದ್ದಕ್ಕೆ 100 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಅಕ್ಕಿ ಚೀಲ ನೀಡಿದ ಪುತ್ರ

ಕೊರೊನಾದಿಂದ ಪೋಷಕರು ಚೇತರಿಸಿಕೊಂಡಿದ್ದಕ್ಕೆ 100 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಅಕ್ಕಿ ಚೀಲ ನೀಡಿದ ಪುತ್ರ

 

ಕೊರೊನಾದಿಂದ ಪೋಷಕರು ಚೇತರಿಸಿಕೊಂಡಿದ್ದಕ್ಕೆ 100 ಮಂದಿ ಆಸ್ಪತ್ರೆ ಸಿಬ್ಬಂದಿಗೆ ಅಕ್ಕಿ ಚೀಲ ನೀಡಿದ ಪುತ್ರ

ತಮಿಳುನಾಡಿನ ವ್ಯಕ್ತಿಯೊಬ್ಬರು 100 ಮಂದಿ ಆರೋಗ್ಯ ಕಾರ್ಯಕರ್ತರಿಗೆ ತಲಾ 5 ಕೆಜಿ ತೂಕದ ಅಕ್ಕಿ ಚೀಲಗಳನ್ನ ನೀಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ಚೆನ್ನೈನ ರಾಜೀವ್​ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ಈ ವ್ಯಕ್ತಿಯ ವೃದ್ಧ ಪೋಷಕರು ಕೊರೊನಾದಿಂದ ಚೇತರಿಕೆ ಕಂಡಿದ್ದರು. ಐಸಿಯುನಲ್ಲಿದ್ದ ವೃದ್ಧ ಪೋಷಕರು ಆಸ್ಪತ್ರೆ ಸಿಬ್ಬಂದಿಯ ಅವಿರತ ಪರಿಶ್ರಮದಿಂದಾಗಿ ಕೊರೊನಾ ಜಯಿಸಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಈ ವ್ಯಕ್ತಿಯ ತಂದೆ - ತಾಯಿ ಇಬ್ಬರೂ 70 ವರ್ಷ ಮೇಲ್ಪಟ್ಟವರು. ಕೊರೊನಾದಿಂದ ಗಂಭೀರ ಪರಿಣಾಮ ಎದುರಿಸುತ್ತಿದ್ದ ಇವರ ಪೋಷಕರನ್ನ 8 ದಿನಗಳ ಕಾಲ ನಮ್ಮ ಆಸ್ಪತ್ರೆಯ ಕೋವಿಡ್​​ ಐಸಿಯುವಿನಲ್ಲಿ ಇಡಲಾಗಿತ್ತು. ಇದೀಗ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು ಅವರನ್ನ ಡಿಸ್ಚಾರ್ಜ್ ಮಾಡಲಾಗಿದೆ ಅಂತಾ ರಾಜೀವ್​ ಗಾಂಧಿ ಆಸ್ಪತ್ರೆ ವೈದ್ಯ ಡಾ. ಇ. ಥೆರನಿರಾಜನ್​ ಹೇಳಿದ್ರು.

ತನ್ನ ಪೋಷಕರ ಜೀವ ಉಳಿಸಿದ ಆಸ್ಪತ್ರೆ ಸಿಬ್ಬಂದಿ ಅವಿರತ ಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದ ವ್ಯಕ್ತಿ ಆಸ್ಪತ್ರೆ ಸಿಬ್ಬಂದಿಗೆ ತಲಾ 5 ಕೆಜಿಯ ಒಟ್ಟು 100 ಚೀಲ ಅಕ್ಕಿಯನ್ನ ಕೃತಜ್ಞತಾ ರೂಪದಲ್ಲಿ ನೀಡಿದ್ದಾರೆ.

 `ನಿವಾರ್' ಬೆನ್ನಲ್ಲೇ ತಮಿಳುನಾಡಿಗೆ ಮತ್ತೊಂದು ಚಂಡಮಾರುತದ ಭೀತಿ!

`ನಿವಾರ್' ಬೆನ್ನಲ್ಲೇ ತಮಿಳುನಾಡಿಗೆ ಮತ್ತೊಂದು ಚಂಡಮಾರುತದ ಭೀತಿ!


 `ನಿವಾರ್' ಬೆನ್ನಲ್ಲೇ ತಮಿಳುನಾಡಿಗೆ ಮತ್ತೊಂದು ಚಂಡಮಾರುತದ ಭೀತಿ!

ಚೆನ್ನೈ : ನಿವಾರ್ ಚಂಡಮಾರುತದ ಬೆನ್ನಲ್ಲೇ ತಮಿಳುನಾಡು ರಾಜ್ಯಕ್ಕೆ ಮತ್ತೊಂದು ಚಂಡಮಾರುತ ಪ್ರವೇಶಕ್ಕೆ ಸಿದ್ಧವಾಗಿದ್ದು, ತಮಿಳುನಾಡಿನ ಕರಾವಳಿಯಲ್ಲಿ ಮತ್ತೆ ಅಲರ್ಟ್ ಘೋಷಿಸಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತ ಸೃಷ್ಟಿಯಾಗಿದ್ದು, ಡಿಸೆಂಬರ್ 2 ರಂದು ತಮಿಳುನಾಡು ಮತ್ತು ಪುದುಚೇರಿ ಕರಾವಳಿ ಭಾಗಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಡಿಸೆಂಬರ್ 2 ರಂದು ಅಪ್ಪಳಿಸಲಿರುವ ಚಂಡಮಾರುತಕ್ಕೆ ಬುರೆವಿ ಎಂದು ಹೆಸರಿಡಲಾಗಿದ್ದು, ಡಿಸೆಂಬರ್ 2 ರಂದು ತಮಿಳುನಾಡು ಕರಾವಳಿಗೆ ಎಂಟ್ರಿ ಕೊಡಲಿದ್ದು, ತಮಿಳುನಾಡು-ಪುದುಚೇರಿ ಕರಾವಳಿಯಲ್ಲಿ ಅಲರ್ಟ್ ಘೋಷಿಸಲಾಗಿದೆ.

Sunday, 29 November 2020

 ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ

ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ


 ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಪ್ರಕಟ: ಎರಡು ಹಂತಗಳಲ್ಲಿ ಮತದಾನ

ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು ಸೋಮವಾರ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕವನ್ನು ಪ್ರಕಟಿಸಿದೆ. ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ನೀತಿಸಂಹಿತೆ ಜಾರಿಯಲ್ಲಿರಲಿದೆ.

ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಡಿಸೆಂಬರ್​ 22 ಹಾಗೂ ಎರಡನೇ ಹಂತದ ಚುನಾವಣೆ ಡಿ.27ಕ್ಕೆ ನಿಗದಿಯಾಗಿದೆ. ಇಂದಿನಿಂದ ಡಿ.31ರವರೆಗೂ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ.

ರಾಜ್ಯ ಚುನಾವಣಾ ಆಯೋಗ ಇಂದು ಬೆಳಗ್ಗೆ 11.30ಕ್ಕೆ ಗ್ರಾಮ ಪಂಚಾಯಿತಿ ಚುನಾವಣಾ ದಿನಾಂಕ ಪ್ರಕಟಿಸಿದೆ. ಈ ಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ಎಲ್ಲ ಹೊಸ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ, ಉದ್ಘಾಟನೆಗೆ ಬ್ರೇಕ್ ಬೀಳಲಿದೆ.

ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೊಂದು ಮತ ಸಮರಕ್ಕೆ ಇಳಿಯಲಿವೆ. ಬಿಜೆಪಿ ಈಗಾಗಲೇ ಗ್ರಾಮ ಸ್ವರಾಜ್ ಸಮಾವೇಶದ ಮೂಲಕ ಚುನಾವಣಾ ರಣಕಹಳೆ ಮೊಳಗಿಸಿದೆ. ಜೆಡಿಎಸ್ ಕೂಡ ಪ್ರಮುಖರ ಸಭೆ ನಡೆಸಿ ತೊಡೆ ತಟ್ಟಲು ರೆಡಿಯಾಗಿದೆ. ಕಾಂಗ್ರೆಸ್ ಈಗ ತಾನೆ ಚುನಾವಣಾ ತಯಾರಿಗೆ ಮುಂದಾಗಿದೆ.

ಸುಮಾರು 5800 ಗ್ರಾಮ ಪಂಚಾಯಿತಿಗಳ 85000 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಬೇರು ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಈ ಚುನಾವಣೆ ಪ್ರಮುಖ‌ ಪಾತ್ರವಹಿಸಲಿದೆ. ಹಾಗಾಗಿ ಈ ಚುನಾವಣೆಯನ್ನು ಮೂರು ರಾಜಕೀಯ ಪಕ್ಷಗಳು ಪ್ರತಿಷ್ಠೆಯ ಪ್ರಶ್ನೆಯನ್ನಾಗಿಸಿಕೊಳ್ಳಲಿವೆ.

 ಚೀನಾದಿಂದ ಇದೀಗ ಅಣೆಕಟ್ಟು ವಾರ್​ ಶುರು! ಭಾರತ, ಬಂಗ್ಲಾಕ್ಕೆ ಅಪಾಯ.

ಚೀನಾದಿಂದ ಇದೀಗ ಅಣೆಕಟ್ಟು ವಾರ್​ ಶುರು! ಭಾರತ, ಬಂಗ್ಲಾಕ್ಕೆ ಅಪಾಯ.


 ಚೀನಾದಿಂದ ಇದೀಗ ಅಣೆಕಟ್ಟು ವಾರ್​ ಶುರು! ಭಾರತ, ಬಂಗ್ಲಾಕ್ಕೆ ಅಪಾಯ.

ಬೀಜಿಂಗ್: ಭಾರತ, ಅಮೆರಿಕ ಮಾತ್ರವಲ್ಲದೇ ಇದಾಗಲೇ ಹಲವಾರು ದೇಶಗಳ ವೈರತ್ವ ಕಟ್ಟಿಕೊಂಡಿರುವ ಕರೊನಾ ತವರು ಚೀನಾ ಇದೀಗ ಮತ್ತೊಂದು ಕುತಂತ್ರ ಕೆಲಸ ಮಾಡಲು ಹೊರಟಿಸಿದೆ. ನೆರೆಯ ಭಾರತ ಮತ್ತು ಬಾಂಗ್ಲಾದೇಶಕ್ಕೆ ಅಪಾಯ ತಂದೊಡ್ಡಬಲ್ಲುದಾದಂಥ ಅಣೆಕಟ್ಟಿನ ನಿರ್ಮಾಣಕ್ಕೆ ಇದು ಮುಂದಾಗಿದೆ.

ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಅಡ್ಡಲಾಗಿ ಟಿಬೆಟ್‌ನಲ್ಲಿ ಚೀನಾ ಬೃಹತ್ ಅಣೆಕಟ್ಟು ನಿರ್ಮಿಸಲಿದೆ. ಈ ಮೂಲಕ ಬ್ರಹ್ಮಪುತ್ರ ನದಿಗೆ ಬೃಹತ್ ಜಲವಿದ್ಯುತ್ ಯೋಜನೆ ನಿರ್ಮಿಸಲು ಉದ್ದೇಶಿಸಿದೆ. ಈ ಕುರಿತು ಚೀನಾದ ವಿದ್ಯುತ್ ಯೋಜನೆ ನಿರ್ಮಾಣ ಸಂಸ್ಥೆಯ ಅಧ್ಯಕ್ಷ ಯಾನ್ ಜಿಯಾಂಗ್ ಮಾಹಿತಿ ನೀಡಿದ್ದಾರೆ.

ಚೀನಾದ 14ನೇ ಪಂಚವಾರ್ಷಿಕ ಯೋಜನೆಯ ಭಾಗವಾಗಿ ಈ ಪ್ರಸ್ತಾಪವನ್ನು ಮುಂದಿರಿಸಲಾಗಿದ್ದು, ಮುಂದಿನ ವರ್ಷ ಅನುಷ್ಠಾನಕ್ಕೆ ಬರಲಿದೆ ಎಂದು ಅವರು ಹೇಳಿದ್ದಾರೆ. 2021-2025ರ ದೀರ್ಘಾವಧಿ ಯೋಜನೆಯ ಭಾಗವಾಗಿ ಮತ್ತು ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಕೇಂದ್ರ ಸಮಿತಿಯು 2035ರವರೆಗೆ ರೂಪಿಸಿರುವ ಗುರಿಗಳ ಅಡಿಯಲ್ಲಿ ಈ ಪ್ರಸ್ತಾವವನ್ನು ಸ್ಪಷ್ಟವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಯಾನ್ ಜಿಯಾಂಗ್ ತಿಳಿಸಿದ್ದಾರೆ.

ಬ್ರಹ್ಮಪುತ್ರ ನದಿಗೆ ಟಿಬೆಟಿಯನ್ನರು ಯಾರ್ಲಂಗ್​ ಝಾಂಗ್ಬೋ ನದಿ ಎಂದು ಕರೆಯುತ್ತಾರೆ. ಈ ನದಿಯ ಕೆಳಹರಿವಿನ ಪ್ರದೇಶವನ್ನು ಜಲವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳಲು ಚೀನಾ ತೀರ್ಮಾನಿಸಿದೆ. ಇದರಿಂದ ಚೀನಾದ ಜಲ ಸಂಪನ್ಮೂಲಗಳ ನಿರ್ವಹಣೆ ಮತ್ತು ಆಂತರಿಕ ಭದ್ರತೆಗೆ ನೆರವಾಗಲಿದೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

ಆದರೆ ಈ ಅಣೆಕಟ್ಟು ನಿರ್ಮಾಣವಾದರೆ ಪಕ್ಕದ ಭಾರತ ಮತ್ತು ಬಾಂಗ್ಲಾದೇಶಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಅಲ್ಲಗಳೆದಿರುವ ಚೀನಾ, ಎಲ್ಲಾ ದೇಶಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಯೋಜನೆ ರೂಪಿಸುತ್ತಿರುವುದಾಗಿ ಹೇಳಿದೆ.

ಏನೇ ಹೇಳಿದರೂ ಅದು ಚೀನಾ. ಕುತಂತ್ರ ಬುದ್ಧಿಗೆ ಹೆಸರುವಾಸಿಯಾಗಿದ್ದೇ. ಬೇರೆ ದೇಶಗಳಿಗೆ ಅದರಲ್ಲಿಯೂ ಭಾರತದ ವಿರುದ್ಧ ಸಂಚುರೂಪಿಸುತ್ತಿರುವ ಉದ್ದೇಶಪೂರ್ವಕವಾಗಿಯಾದರೂ ಹಾನಿಯುಂಟು ಮಾಡುವ ಎಲ್ಲಾ ಸಾಧ್ಯತೆಗಳು ಇವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎನ್ನುವುದನ್ನು ಕಾದುನೋಡಬೇಕಿದೆ.

 ಖಾಸಗಿ ಕಾಲೇಜುಗಳಲ್ಲಿ ಕೃಷಿ ಕೋರ್ಸ್ ನಡೆಸಲು ಸರ್ಕಾರದ ಅನುಮತಿ ಸಾಧ್ಯತೆ!

ಖಾಸಗಿ ಕಾಲೇಜುಗಳಲ್ಲಿ ಕೃಷಿ ಕೋರ್ಸ್ ನಡೆಸಲು ಸರ್ಕಾರದ ಅನುಮತಿ ಸಾಧ್ಯತೆ!


 ಖಾಸಗಿ ಕಾಲೇಜುಗಳಲ್ಲಿ ಕೃಷಿ ಕೋರ್ಸ್ ನಡೆಸಲು ಸರ್ಕಾರದ ಅನುಮತಿ ಸಾಧ್ಯತೆ!

ಬೆಂಗಳೂರು: ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ದೇಶದ್ಯಾಂತ ರೈತರ ಪ್ರತಿಭಟನೆ ಭುಗಿಲೆದ್ದಿದೆ, ಇದೇ ವೇಳೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ಖಾಸಗಿ ಕಾಲೇಜುಗಳಿಗೆ ಕೃಷಿ ಕೋರ್ಸ್‌ಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ ಯೋಜನೆ ರೂಪಿಸುತ್ತಿದೆ.

ಹೊಸ ಭೂ ಸುಧಾರಣಾ ತಿದ್ದುಪಡಿ ಕಾಯಿದೆಯಿಂದ ಯಾರಾದರೂ ರಾಜ್ಯದಲ್ಲಿ ಭೂಮಿ ಖರೀದಿಸಲು ಅನುಕೂಲ ಇರುವುದರಿಂದ ಹಾಗೂ ಕೊರೋನಾ ಕಾರಣದಿಂದ ಜನ ಮತ್ತೆ ಹಳ್ಳಿಗಳತ್ತ ಮುಖ ಮಾಡುತ್ತಿದ್ದಾರೆ, ಹಾಗಾಗಿ ಕೃಷಿ ಸಂಬಂಧಿತ ಕೋರ್ಸ್ ಗಳ ಬೇಡಿಕೆ ಹೆಚ್ಚುತ್ತಿದೆ.

ಕರ್ನಾಟಕದಲ್ಲಿ ಕೃಷಿ ಸಂಬಂಧಿತ ಆರು ವಿವಿಗಳಿವೆ, ಬೆಂಗಳೂರು, ಧಾರವಾಡ, ಶಿವಮೊಗ್ಗ ಮತ್ತು ರಾಯಚೂರಿನಲ್ಲಿನ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಬೀದರ್‌ನ ಪಶುವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಬಾಗಲ ಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಇದರ ಅಡಿಯಲ್ಲಿ 26 ಸರ್ಕಾರಿ ಕಾಲೇಜುಗಳು ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡುತ್ತಿವೆ.

ಪ್ರತಿ ವರ್ಷ ಪ್ರವೇಶಾತಿ ಸಮಯದಲ್ಲಿ ಸುಮಾರು 4 ದಾಖಲಾತಿ ಮಾಡಲಾಗುತ್ತದೆ, ಈ ಆರು ವಿವಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಡಿಯಲ್ಲಿ ಬರುತ್ತವೆ. ಈ ವರ್ಷ ಸುಮಾರು 25 ಸಾವಿರದಿಂದ 35 ಸಾವಿರ ಅರ್ಜಿಗಳು ಬರುವ ಸಾಧ್ಯತೆಯಿದೆ. 4 ಸಾವಿರ ಸೀಟುಗಳಿಗೆ 1 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಯಾವಾಗಲೂ ಕೃಷಿ ಕೋರ್ಸ್ ಗಳಿಗೆ ಬೇಡಿಕೆ ಇರುತ್ತದೆ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಇತರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಖಾಸಗಿ ಕಾಲೇಜುಗಳಲ್ಲಿ ಕೃಷಿ ಕೋರ್ಸ್ ಗಳನ್ನು ನಡೆಸಲು ಅನುಮತಿ ನೀಡಿವೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

ಅಲ್ಲಿ ಒಂದು ವಿಶ್ವವಿದ್ಯಾನಿಲಯವಿದ್ದು ಅಲ್ಲಿನ ಕಾಲೇಜುಗಳು ಈ ವಿವಿ ಅಡಿಯಲ್ಲಿ ಬರಲಿವೆ, ಹೀಗಾಗಿ ನಾವು ಕೂಡ ಅದೇ ರೀತಿಯ ಯೋಜನೆ ರೂಪಿಸಲು ಸಿದ್ಧತೆ ನಡೆಸುತ್ತಿದ್ದೇವೆ, ನಗರ ಪ್ರದೇಶಗಳಲ್ಲಿ ಯುವ ಜನತೆ ಕೃಷಿ ಬಗ್ಗೆ ಉತ್ಸಾಹ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.

2009 ರಲ್ಲಿ ರಾಜ್ಯ ಸರ್ಕಾರ ಕೃಷಿ ವಿಜ್ಞಾನ ವಿವಿಗಳ ಮಸೂದೆ ಪಾಸು ಮಾಡಿದ್ದು ಅದರಲ್ಲಿ ಖಾಸಗಿ ಕಾಲೇಜುಗಳು ಕೃಷಿ ಕೋರ್ಸ್ ನಡೆಸಲು ಅವಕಾಶ ನೀಡಿದೆ, ಆದರೆ 2017ರ ವರೆಗೆ ಅದರಲ್ಲಿ ಹೆಚ್ಚಿನ ಕೆಲಸವಾಗಿಲ್ಲ.

2017 ರಲ್ಲಿ ಸರ್ಕಾರ ಮಾನ್ಯತೆಗಾಗಿ ಅರ್ಜಿ ಕರೆಯಿತು, ಆರು ಖಾಸಗಿ ಕಾಲೇಜುಗಳು ಅರ್ಜಿ ಸಲ್ಲಿಸಿದವು, ಅವುಗಳಲ್ಲಿ ಮೂರು ಕಾಲೇಜು ಮಾತ್ರ ಅರ್ಹತೆ ಪಡೆದವು, ತಾಂತ್ರಿಕ ಸಮಿತಿ ಶಿಪಾರಸ್ಸಿನ ಪ್ರಕಾರ ಕಾಲೇಜುಗಳು 75 ಎಕರೆ ಭೂಮಿ ಹೊಂದಿರಬೇಕಾಗಿದೆ.

ಭೂ ಸುಧಾರಣಾ ತಿದ್ದುಪಡಿ ಕಾಯಿದೆ ಸಹಾಯದಿಂದ ಯುವಕರು ಕೃಷಿ ಕಡೆಗೆ ಆಕರ್ಷಿತರಾಗುತ್ತಿದ್ದಾರೆ ಹೀಗಾಗಿ ಹಳ್ಳಿ ಕಡೆ ವಾಪಾಸಾಗುತ್ತಿದ್ದಾರೆ, ಅನೇಕ ಕೃಷಿ ತಜ್ಞರು ಇರುವ ಕಾರಣ ಕೃಷಿ ಒಂದು ಉದ್ಯಮವಾಗಬಹುದು ಎಂದ ನಿವೃತ್ತ ರಿಜಿಸ್ಟ್ರಾರ್ ಎ ಬಿ ಪಾಟೀಲ್ ತಿಳಿಸಿದ್ದಾರೆ.

 ನಾಳೆಯಿಂದ ರಾಜ್ಯಾದ್ಯಂತ ವೈದ್ಯಕೀಯ ಕಾಲೇಜುಗಳು ಆರಂಭ

ನಾಳೆಯಿಂದ ರಾಜ್ಯಾದ್ಯಂತ ವೈದ್ಯಕೀಯ ಕಾಲೇಜುಗಳು ಆರಂಭ


 ನಾಳೆಯಿಂದ ರಾಜ್ಯಾದ್ಯಂತ ವೈದ್ಯಕೀಯ ಕಾಲೇಜುಗಳು ಆರಂಭ

ಬೆಂಗಳೂರು, ನ.30- ಕೋವಿಡ್-19 ಕಾರಣಗಳಿಂದ ಕಳೆದ ಎಂಟು ತಿಂಗಳಿನಿಂದ ಮುಚ್ಚಲ್ಪಟ್ಟಿದ್ದ ವೈದ್ಯಕೀಯ ಕಾಲೇಜುಗಳು ನಾಳೆಯಿಂದ ರಾಜ್ಯಾದ್ಯಂತ ಆರಂಭವಾಗಲಿವೆ. ರಾಜ್ಯದಲ್ಲಿ ಕೋವಿಡ್ ಸೋಂಕು ಅಧಿಕೃತವಾಗಿ ಕಾಲಿಟ್ಟು ಲಾಕ್‍ಡೌನ್ ಘೋಷಣೆ ಮಾಡಿದ ಬಳಿಕ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು.

ರಾಜ್ಯದ ಎಲ್ಲಾ ವೈದ್ಯಕೀಯ ಕಾಲೇಜುಗಳು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತರಗತಿಗಳು ಮಂಗಳವಾರ ಆರಂಭವಾಗಲಿವೆ. ಎನ್‍ಎಂಸಿ, ಯುಜಿಸಿ ಮಾರ್ಗಸೂಚಿಗಳ ಅನ್ವಯ ಕಾಲೇಜು ಆರಂಭಿಸಲಾಗುತ್ತಿದೆ. ಕಾಲೇಜುಗಳನ್ನು ಡಿ.1ರಿಂದ ಪುನರಾರಂಭಗೊಳಿಸಿ ತಕ್ಷಣವೇ ಪ್ರಾಯೋಗಿಕ ತರಗತಿಗಳನ್ನು ನಡೆಸಬೇಕು.

ವಿದ್ಯಾರ್ಥಿಗಳಿಗೆ ಬೋಧನೆಯನ್ನು ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ಮಾದರಿಯಲ್ಲಿ ನಡೆಸಬಹುದು ಎಂದು ಸೂಚನೆ ಕೊಡಲಾಗಿದೆ. ಪ್ರಾಕ್ಟಿಕಲ್ ಕ್ಲಾಸ್‍ಗಳನ್ನು ನಡೆಸಬೇಕು. ಬೋಧನಾ ತರಗತಿಗೆ ಆನ್ ಲೈನ್ ಅಥವ ಕಾಲೇಜಿಗೆ ಬರುವ ಆಯ್ಕೆ ವಿದ್ಯಾರ್ಥಿಗಳಿಗೆ ಮುಕ್ತವಾಗಿಡಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ನ.17ರಿಂದ ಕರ್ನಾಟಕದಲ್ಲಿ ಅಂತಿಮ ವರ್ಷದ ಪದವಿ ಕಾಲೇಜುಗಳು ಆರಂಭವಾಗಿವೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಇದೇ ಮಾದರಿಯಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ.

ಕಾಲೇಜಿನ ಕೊಠಡಿಗಳ ಸ್ಯಾನಿಸೈಟ್, ವಿದ್ಯಾರ್ಥಿಗಳು, ಸಿಬ್ಬಂದಿ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದೆ ಎಂದು ಯುಜಿಸಿ ಸುತ್ತೋಲೆಯಲ್ಲಿ ತಿಳಿಸಿದೆ. ಬಾಕಿ ಇರುವ ಪಠ್ಯಗಳನ್ನು ಪೂರ್ಣಗೊಳಿಸಲು ಅನುಕೂಲವಾಗುವಂತೆ ವೇಳಾಪಟ್ಟಿಯನ್ನು ಸಿದ್ಧಗೊಳಿಸಬೇಕು. ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗಲು ಪೋಷಕರ ಒಪ್ಪಿಗೆ ಪತ್ರವನ್ನು ಕಡ್ಡಾಯವಾಗಿ ತರಬೇಕಿದೆ.

  ನೌಷಾದ್ ಹಿಮಮಿ  ಪೇರಾಲ್ ರವರ ತಂದೆ ಬಂಬ್ರಾಣಿ ಅಬ್ದುಲ್ಲಾ ವಫಾತಾದರು

ನೌಷಾದ್ ಹಿಮಮಿ ಪೇರಾಲ್ ರವರ ತಂದೆ ಬಂಬ್ರಾಣಿ ಅಬ್ದುಲ್ಲಾ ವಫಾತಾದರು


  ನೌಷಾದ್ ಹಿಮಮಿ  ಪೇರಾಲ್ ರವರ ತಂದೆ ಬಂಬ್ರಾಣಿ ಅಬ್ದುಲ್ಲಾ ವಫಾತಾದರು

ಕಾಸರಗೋಡು: ನೌಷಾದ್ ಹಿಮಮಿ  ಪೇರಾಲ್ ರವರ ತಂದೆ ಬಂಬ್ರಾಣಿ ಅಬ್ದುಲ್ಲಾ(65) ವಫಾತಾದರು. ಪತ್ನಿ ಜಮೀಲ ಮತ್ತು ಮಕ್ಕಳಾದ ಮಜೀದ್, ಸಾಜಿದ, ಇರ್ಶಾದ್, ನೌಷಾದ್ ಮುಂತಾದವರನ್ನು ಅಗಲಿದ್ದಾರೆ.

 ವಿವಾದಿತ ಗೋಡೆ ಬರಹ: ಷಡ್ಯಂತ್ರವನ್ನು ಶೀಘ್ರ ಪತ್ತೆ ಹಚ್ಚಬೇಕು- ಯು.ಟಿ.ಖಾದರ್

ವಿವಾದಿತ ಗೋಡೆ ಬರಹ: ಷಡ್ಯಂತ್ರವನ್ನು ಶೀಘ್ರ ಪತ್ತೆ ಹಚ್ಚಬೇಕು- ಯು.ಟಿ.ಖಾದರ್


 ವಿವಾದಿತ ಗೋಡೆ ಬರಹ: ಷಡ್ಯಂತ್ರವನ್ನು ಶೀಘ್ರ ಪತ್ತೆ ಹಚ್ಚಬೇಕು- ಯು.ಟಿ.ಖಾದರ್

ಮಂಗಳೂರು, ನ. 29:ನಗರದ ಜನರೆಡೆಯೆಲ್ಲಿ ಆತಂಕ ಸೃಷ್ಟಿಸಿರುವ,ದೇಶದ್ರೋಹದ ಗೋಡೆ ಬರಹದ ಹಿಂದಿನ ಷಡ್ಯಂತ್ರ ಬಹಿರಂಗ ಪಡಿಸುವ ಮತ್ತು ಇಂತಹ ದೇಶ ದ್ರೋಹಿಗಳನ್ನು ಗಡಿಪಾರು ಮಾಡುವ ಹೊಣೆಗಾರಿಕೆ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಸೇರಿದ್ದು, ಈ ಬಗ್ಗೆ ರಾಜ್ಯದ ಮುಖ್ಯ ಮಂತ್ರಿ ಹಾಗೂ ಕೇಂದ್ರ ಸರಕಾರವನ್ನು ತನಿಖೆಗೆ ಆಗ್ರಹಿಸುವುದಾಗಿ ಶಾಸಕ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಹಿಂದೆಯೂ ಮಂಗಳೂರು ವಿಮಾನ ನಿಲ್ದಾಣದ ಬಳಿ ಬಾಂಬ್ ಇಟ್ಟ ಬಗ್ಗೆ ಸುದ್ದಿಯಾಯಿತು. ಬಳಿಕ ಈ ಬಗ್ಗೆ ಸಾಕಷ್ಟು ವದಂತಿ ಹಬ್ಬಿತ್ತು. ಇದಕ್ಕೊಂದು ತಾರ್ಕಿಕ ಅಂತ್ಯ ಕಂಡು ಹಿಡಿಯಲು ಸಾಧ್ಯವಾಗಿಲ್ಲ, ಇದರಿಂದ ಜನರು ಪರಸ್ಪರ ಅನುಮಾನ ಪಡುವಂತಾಯಿತು. ಈಗ ಮತ್ತೆ ಗೋಡೆ ಬರಹ ಅದು ಜಿಲ್ಲೆಯ ಹೃದಯ ಭಾಗದಲ್ಲಿ ನಿರಂತರ ವಾಗಿ ನಡೆಯುತ್ತಿದೆ. ಈ ರೀತಿಯ ಕೃತ್ಯ ನಡೆಸುವುದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ತ್ವರಿತವಾಗಿ ಬಹಿರಂಗ ಪಡಿಸಬೇಕು.

ಇಂತಹ ದೇಶ ದ್ರೋಹಿ ಕ್ರತ್ಯದಲ್ಲಿ ತೊಡಗಿರುವವರನ್ನು ದೇಶದಿಂದಲೇ ಗಡಿಪಾರು ಮಾಡುವುದು ಸೂಕ್ತ. ಸರಕಾರದ ಗುಪ್ತಚರ ಇಲಾಖೆಗಳಿಗೆ ಇದರ ಹಿಂದೆ ಯಾರಿದ್ದಾರೆ ಎಂದು ಏಕೆ ಪತ್ತೆ ಹಚ್ಚಲು ಸಾಧ್ಯ ವಾಗುತ್ತಿಲ್ಲ. ನಗರದ ಜನರ ಮಧ್ಯೆ ಸಂಶಯ ಮೂಡಿಸುವ ಕೆಲಸ ನಡೆಸುವರನ್ನು ತಕ್ಷಣ ಬಂಧಿಸಿ ಜನರ ಸಂಶಯ ನಿವಾರಣೆ ಮಾಡಬೇಕು. ಈ ಕೃತ್ಯವನ್ನು ಕಾಂಗ್ರೆಸ್ ಖಂಡಿಸುತ್ತದೆ ಮತ್ತು ಈ ಬಗ್ಗೆ 15 ದಿನಗಳ ಒಳಗೆ ಯಾವೂದೇ ಪತ್ತೆ ಕಾರ್ಯ ನಡೆಯದೆ ಇದ್ದರೆ ಕಾಂಗ್ರೆಸ್ ಉಗ್ರಹೋರಾಟ ನಡೆಸಲು ಹಿಂಜರಿಯುದಿಲ್ಲ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಕಾಂಗ್ರೆಸ್ ಮುಖಂಡ ಈಶ್ವರ ಉಳ್ಳಾಲ್, ಪ್ರತಿಭಾ ಕುಳಾಯಿ, ದಿನೇಶ್ ಪೂಜಾರಿ, ಸುರೇಶ್ ಭಟ್ನಗರ ಮೊದಲಾದವರು ಉಪಸ್ಥಿತರಿದ್ದರು.

'ಮನ್‌ ಕಿ ಬಾತ್‌'ನಲ್ಲಿ ಸಲೀಂ ಅಲಿ, ಜೊನಾಸ್ ಮಾಸೆಟ್ಟಿ ನೆನಪು

'ಮನ್‌ ಕಿ ಬಾತ್‌'ನಲ್ಲಿ ಸಲೀಂ ಅಲಿ, ಜೊನಾಸ್ ಮಾಸೆಟ್ಟಿ ನೆನಪು


'ಮನ್‌ ಕಿ ಬಾತ್‌'ನಲ್ಲಿ ಸಲೀಂ ಅಲಿ, ಜೊನಾಸ್ ಮಾಸೆಟ್ಟಿ ನೆನಪು

ನವದೆಹಲಿ: ಭಾರತಕ್ಕೆ ವಾಪಸಾದ ವಾರಾಣಸಿಯ 'ಅನ್ನಪೂರ್ಣಾ ದೇವಿ ವಿಗ್ರಹ', ಪಕ್ಷಿ ತಜ್ಞ ಸಲೀಂ ಅಲಿಯವರ ನೆನಪು, ಕರ್ತಾಪುರ್ ಸಾಹಿಬ್ ಕಾರಿಡಾರ್, ವಿದೇಶದಲ್ಲಿ ಭಾರತೀಯರೊಬ್ಬರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕಾರ.. ಇಂಥ ಹಲವು ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಮಾಸಿಕ ರೇಡಿಯೊ ಕಾರ್ಯಕ್ರಮ 'ಮನ್‌ ಕಿ ಬಾತ್‌'ನಲ್ಲಿ ಉಲ್ಲೇಖಿಸಿದರು.

ಪ್ರಧಾನಿಯವರು ಆರಂಭದಲ್ಲಿ ನೂತನ ಕೃಷಿ ಕಾಯ್ದೆಗಳಿಂದ ರೈತರಿಗೆ ಆಗುವ ಪ್ರಯೋಜನಗಳನ್ನು ಪ್ರಸ್ತಾಪಿಸುತ್ತಾ, ತಮ್ಮ ಮಾತುಗಳನ್ನು 1913ರಲ್ಲಿ ವಾರಾಣಸಿಯಿಂದ ಕಳುವಾಗಿದ್ದ 'ಅನ್ನಪೂರ್ಣಾ ದೇವಿ ವಿಗ್ರಹ' ವಿಚಾರದತ್ತ ಹೊರಳಿಸಿದರು. ಕೆನಡಾ ದೇಶದವರು ಆ ವಿಗ್ರಹವನ್ನು ಮರಳಿ ಭಾರತಕ್ಕೆ ಕಳುಹಿಸಲು ಒಪ್ಪಿದ್ದನ್ನು ಸ್ಮರಿಸಿದರು.

ನಂತರ ಶಿಕ್ಷಣ ಸಂಸ್ಥೆಗಳು ತಮ್ಮ ಹಳೆಯ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಬಳಸಿಕೊಳ್ಳಬೇಕೆಂದು ಒತ್ತಿ ಹೇಳಿದರು.

ಸೋಮವಾರ ಸಿಖ್ಖರ ಧರ್ಮಗುರು ಗುರುನಾನಕ್ ದೇವ್ ಅವರ ಜನ್ಮದಿನ. ಇದರ ಅಂಗವಾಗಿ ಗುರುನಾನಕ್ ಅವರ ಉದಾತ್ತ ಆದರ್ಶಗಳನ್ನು ನೆನಪಿಸಿಕೊಂಡ ಮೋದಿಯವರು, ಸಿಖ್‌ ಗುರುಗಳು ಮತ್ತು ಗುರದ್ವಾರಗಳಿಗೆ ಸಂಬಂಧಿಸಿದ ವಿವಿಧ ಕಾರ್ಯಗಳಲ್ಲಿ ಭಾಗಿಯಾಗಿರುವುದು ತಮ್ಮ ಅದೃಷ್ಟ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ, ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ಕರ್ತಾಪುರ್ ಸಾಹಿಬ್ ಕಾರಿಡಾರ್ ತೆರೆದಿದ್ದನ್ನು ಐತಿಹಾಸಿಕ ಘಟನೆ ಎಂದು ಅವರು ಶ್ಲಾಘಿಸಿದರು. ಜತೆಗೆ ಕಚ್‌ನಲ್ಲಿರುವ ಗುರುದ್ವಾರದ ಕುರಿತು ಮಾತನಾಡಿದರು.

ಭಾರತೀಯ ಪಕ್ಷಿ ವಿಜ್ಞಾನಿ ಡಾ. ಸಲೀಂ ಅಲಿ ಅವರ ಕಾರ್ಯವನ್ನು ಸ್ಮರಿಸಿದ ಪ್ರಧಾನಿಯವರು, 'ದೇಶದಲ್ಲಿ ಪ‍ಕ್ಷಿ ವೀಕ್ಷಣೆಯ ಬಗ್ಗೆ ಆಸಕ್ತಿ ಹೊಂದಿರುವ ಅನೇಕ ಸಂಘ ಸಂಸ್ಥೆಗಳಿವೆ. ಇವರೆಲ್ಲ ಪಕ್ಷಿ ವೀಕ್ಷಣೆಗೆ ಸಂಬಂಧಿಸಿದಂತೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿರುವುದಾಗಿ ಭಾವಿಸಿದ್ದೇನೆ' ಎಂದು ಹೇಳಿದರು.

'ಭಾರತೀಯ ಸಂಸ್ಕೃತಿ ಪ್ರಪಂಚದಾದ್ಯಂತ ಜನಪ್ರಿಯತೆ ಗಳಿಸುತ್ತಿದೆ' ಎಂದ ಅವರು, ಅಂಥದ್ದೊಂದು ಪ್ರಯತ್ನ ಬ್ರೆಜಿಲ್‌ನಲ್ಲಿ ನಡೆದಿದೆ. ಬ್ರೆಜಿಲ್ ಮೂಲದ ಜೊನಾಸ್ ಮಾಸೆಟ್ಟಿಯವರು ವೇದಾಂತ ಮತ್ತು ಭಗವದ್ಗೀತೆಯನ್ನು ಜನಪ್ರಿಯಗೊಳಿಸುತ್ತಿದ್ದಾರೆ. ನಮ್ಮ ಸಂಸ್ಕೃತಿ ಮತ್ತು ನೀತಿಗಳನ್ನು ಜನಪ್ರಿಯಗೊಳಿಸಲು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ' ಎಂದರು.

ಇದೇ ವೇಳೆ ನ್ಯೂಜಿಲೆಂಡ್‌ನ ಹ್ಯಾಮಿಲ್ಟನ್ ವೆಸ್ಟ್ ಸಂಸದ ಗೌರವ್ ಶರ್ಮಾ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದನ್ನು ಪ್ರಧಾನಿ ಶ್ಲಾಘಿಸಿದರು.

ಹೈದರಾಬಾದ್ ಚುನಾವಣೆ ಪ್ರಚಾರಕ್ಕೆ ಟ್ರಂಪ್ ಬರುವುದು ಬಾಕಿ ಇದೆ: ಉವೈಸಿ

ಹೈದರಾಬಾದ್ ಚುನಾವಣೆ ಪ್ರಚಾರಕ್ಕೆ ಟ್ರಂಪ್ ಬರುವುದು ಬಾಕಿ ಇದೆ: ಉವೈಸಿ


ಹೈದರಾಬಾದ್ ಚುನಾವಣೆ ಪ್ರಚಾರಕ್ಕೆ ಟ್ರಂಪ್ ಬರುವುದು ಬಾಕಿ ಇದೆ: ಉವೈಸಿ

ಹೈದರಾಬಾದ್: ಹೈದರಾಬಾದ್ ಮಹಾನಗರ ಪಾಲಿಕೆಯ ಚುನಾವಣೆಗೆ ಘಟಾನುಘಟಿ ನಾಯಕರನ್ನು ಪ್ರಚಾರ ಕಣಕ್ಕೆ ನಿಯೋಜಿಸಿರುವ ಬಿಜೆಪಿಯ ನಡೆಯನ್ನು ಟೀಕಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ, ಇನ್ನು ಹೈದರಾಬಾದ್‌ನಲ್ಲಿ ಬಿಜೆಪಿ ಪರ ಪ್ರಚಾರ ನಡೆಸಲು ಬಾಕಿ ಇರುವ ಏಕೈಕ ವ್ಯಕ್ತಿಯೆಂದರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂದು ವ್ಯಂಗ್ಯವಾಡಿದ್ದಾರೆ.

ಹೈದರಾಬಾದ್ ‌ನ ಲ್ಯಾಂಗರ್‌ಹೌಸ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಶನಿವಾರ ಮಾತನಾಡಿದ ಉವೈಸಿ, ಬಿಜೆಪಿ ಪರ ನಾಯಕರು ಪ್ರಚಾರ ನಡೆಸುತ್ತಿರುವ ರೀತಿ ನೋಡಿದರೆ ಇದು ಇನ್ನು ಮುಂದೆ ಇದು ಹೈದರಾಬಾದ್ ಮುನ್ಸಿಪಲ್ ಚುನಾವಣೆ ಆಗಿ ಕಾಣುತ್ತಿಲ್ಲ ಎಂದರು.

ಡಿಸೆಂಬರ್ 1 ರಂದು ನಡೆಯಲಿರುವ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಗೆ ಬಿಜೆಪಿ ಪ್ರಚಾರಕ್ಕಾಗಿ ಪ್ರಮುಖ ನಾಯಕರನ್ನು ಕರೆ ತಂದಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರಿಂದ ಹಿಡಿದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ತನಕ ಪ್ರಮುಖ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ನಗರದಲ್ಲಿ ಚುನಾವಣೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳಲ್ಲಿ ಇಂದು ಭಾಗವಹಿಸಲಿದ್ದಾರೆ.

Saturday, 28 November 2020

 ನಿಮ್ಮ ಇಡೀ ಪೀಳಿಗೆಯು ಕೊನೆಗೊಳ್ಳುತ್ತದೆ ಆದರೆ ಹೈದರಾಬಾದ್ ಎಂಬ ಹೆಸರು ಹಾಗೇ ಇರುತ್ತದೆ: ಆದಿತ್ಯನಾಥ್ ಗೆ ಓವೈಸಿ ತಿರುಗೇಟು

ನಿಮ್ಮ ಇಡೀ ಪೀಳಿಗೆಯು ಕೊನೆಗೊಳ್ಳುತ್ತದೆ ಆದರೆ ಹೈದರಾಬಾದ್ ಎಂಬ ಹೆಸರು ಹಾಗೇ ಇರುತ್ತದೆ: ಆದಿತ್ಯನಾಥ್ ಗೆ ಓವೈಸಿ ತಿರುಗೇಟು


 ನಿಮ್ಮ ಇಡೀ ಪೀಳಿಗೆಯು ಕೊನೆಗೊಳ್ಳುತ್ತದೆ ಆದರೆ ಹೈದರಾಬಾದ್ ಎಂಬ ಹೆಸರು ಹಾಗೇ ಇರುತ್ತದೆ: ಆದಿತ್ಯನಾಥ್ ಗೆ ಓವೈಸಿ ತಿರುಗೇಟು

ಹೈದರಾಬಾದ್: ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದಾದರೆ ನಗರದ ಹೆಸರನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ "ಉತ್ತರ ಪ್ರದೇಶ ಮುಖ್ಯಂತ್ರಿಗಳಾದ ನಿಮ್ಮ ಪೀಳಿಗೆಯು ಕೊನೆಗೊಳ್ಳಬಹುದು ಆದರೆ ನಗರವನ್ನು ಹೈದರಾಬಾದ್ ಎಂದೇ ಕರೆಯಲಾಗುತ್ತದೆ" ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಗೆ ಮುನ್ನ ಹೈದರಾಬಾದ್‌ನ ಮಲ್ಕಜಗಿರಿ ಪ್ರದೇಶದಲ್ಲಿ ನಡೆದ ಮೆಗಾ ರೋಡ್ ಶೋ ಸಂದರ್ಭದಲ್ಲಿ ಆದಿತ್ಯನಾಥ್ ಅವರು ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ನಗರಕ್ಕೆ ಭಾಗ್ಯನಗರ ಎಂದು ಮರುನಾಮಕರಣ ಮಾಡಲಾಗುವುದು ಎಂದು ಹೇಳಿದ್ದರು.

"... ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾವು ಫೈಜಾಬಾದ್ ಅನ್ನು ಅಯೋಧ್ಯೆ ಮತ್ತು ಅಲಹಾಬಾದ್ ಅನ್ನು ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಿದ್ದೇವೆ. ಹಾಗಾದರೆ ಹೈದರಾಬಾದ್ ಅನ್ನು ಭಾಗ್ಯನಗರ ಎಂದು ಏಕೆ ಮರುನಾಮಕರಣ ಮಾಡಲಾಗುವುದಿಲ್ಲ?" ಆದಿತ್ಯನಾಥ್ ಹೇಳಿದ್ದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಓವೈಸಿ : "... ನಿಮ್ಮ ಇಡೀ ಪೀಳಿಗೆಯು ಕೊನೆಗೊಳ್ಳುತ್ತದೆ ಆದರೆ ಹೈದರಾಬಾದ್ ಹೆಸರು ಮಾತ್ರ ಹಾಗೆಯೇ ಉಳಿಯುತ್ತದೆ, ಚುನಾವಣೆಗಳು ಹೈದರಾಬಾದ್ ಮತ್ತು ಭಾಗ್ಯನಗರ ನಡುವೆ ನಡೆಯುತ್ತವೆ, ಮತ್ತು ಹೈದರಾಬಾದ್ ಅನ್ನು ಮರುನಾಮಕರಣ ಮಾಡದಿರಲು ನೀವು ಬಯಸಿದರೆ ಮಜಿಗಳಿಗೆ ಮತ ನೀಡಿ" ಎಂದಿದ್ದಾರೆ.

ಜಿಐಎಂಸಿ ಚುನಾವಣೆಗೆ ಮುನ್ನ ತಮ್ಮ ಪಕ್ಷದ ಪರ ಪ್ರಚಾರ ನಡೆಸುತ್ತಿರುವಾಗ ಎಐಎಂಐಎಂ ಮುಖ್ಯಸ್ಥರು ಶನಿವಾರ ಸಂಜೆ ಈ ಹೇಳಿಕೆ ನಿಡಿದ್ದಾರೆ.

150 ಸದಸ್ಯರ ಜಿಎಚ್‌ಎಂಸಿಗೆ ಚುನಾವಣೆ ಡಿಸೆಂಬರ್ 1 ರಂದು ನಡೆಯಲಿದ್ದು, ಮತ ಎಣಿಕೆ ಡಿಸೆಂಬರ್ 4 ರಂದು ನಡೆಯಲಿದೆ.


 ಕೃಷಿ ಮಸೂದೆ ವಿರುದ್ಧ ಮುಂದುವರೆದ ಪ್ರತಿಭಟನೆ: ಅಮಿತ್ ಶಾ ಮನವಿ ಸ್ವೀಕರಿಸಿ ಎಂದ ಸಿಎಂ ಅಮರೀಂದರ್ ಸಿಂಗ್, ನಾವೇಕೆ ಪ್ರತಿಭಟನೆ ಸ್ಥಳಾಂತರಿಸಬೇಕು- ರೈತರ ಪ್ರಶ್ನೆ

ಕೃಷಿ ಮಸೂದೆ ವಿರುದ್ಧ ಮುಂದುವರೆದ ಪ್ರತಿಭಟನೆ: ಅಮಿತ್ ಶಾ ಮನವಿ ಸ್ವೀಕರಿಸಿ ಎಂದ ಸಿಎಂ ಅಮರೀಂದರ್ ಸಿಂಗ್, ನಾವೇಕೆ ಪ್ರತಿಭಟನೆ ಸ್ಥಳಾಂತರಿಸಬೇಕು- ರೈತರ ಪ್ರಶ್ನೆ


 ಕೃಷಿ ಮಸೂದೆ ವಿರುದ್ಧ ಮುಂದುವರೆದ ಪ್ರತಿಭಟನೆ: ಅಮಿತ್ ಶಾ ಮನವಿ ಸ್ವೀಕರಿಸಿ ಎಂದ ಸಿಎಂ ಅಮರೀಂದರ್ ಸಿಂಗ್, ನಾವೇಕೆ ಪ್ರತಿಭಟನೆ ಸ್ಥಳಾಂತರಿಸಬೇಕು- ರೈತರ ಪ್ರಶ್ನೆ

ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಿರೋಧಿಸಿ ದೆಹಲಿ ಚಲೋ ಕೈಗೊಂಡಿರುವ ಪಂಜಾಬ್ ಹಾಗೂ ಹರಿಯಾಣ ರೈತರು ದೆಹಲಿ ಗಡಿಯಲ್ಲೇ ತಮ್ಮ ಹೋರಾಟವನ್ನು ಮುಂದುವರೆಸಿದ್ದು, ಈ ಪ್ರತಿಭಟನೆ ಭಾನುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. 

ಈ ನಡುವೆ ನಿನ್ನೆಯಷ್ಟೇ ಅಮಿತ್ ಶಾ ಅವರು, ನಿಗದಿತ ಸ್ಥಳದಲ್ಲಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿಕೊಂಡಿದ್ದು, ಈ ಮನವಿಯನ್ನು ಸ್ವೀಕರಿಸುವಂತೆ ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರು ಆಗ್ರಹಿಸಿದ್ದಾರೆ. ಆದರೆ, ಈ ಆಗ್ರಹವನ್ನು ತಿರಸ್ಕರಿಸಿರುವ ರೈತ ಸಂಘಟನೆಗಳು, ನಾವೇಕೆ ಪ್ರತಿಭಟನೆಯನ್ನು ಸ್ಥಳಾಂತರಿಸಬೇಕೆಂದು ಪ್ರಶ್ನಿಸುತ್ತಿವೆ. 

ರೈತರು ಪೊಲೀಸರು ನಿಗದಿಪಡಿಸಿದ ಸ್ಥಳದಲ್ಲಿಯೇ ಪ್ರತಿಭಟನೆ ನಡೆಸಬೇಕು ಮತ್ತು ಶಾಂತಿಯುತ ಹೋರಾಟ ನಡೆಸಬೇಕು. ಪ್ರತಿಭಟನೆ ನಡೆಸುವ ಸ್ಥಳದಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯಗಳು, ಶೌಚಾಲಯ, ಆಂಬ್ಯುಲೆನ್ಸ್‌ ಮತ್ತು ನೀರಿನ ಪೂರೈಕೆಯಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಪ್ರತಿಭಟನೆಯನ್ನು ನಿಗದಿತ ಸ್ಥಳಕ್ಕೆ ಸ್ಥಳಾಂತರಿಸಿದರೆ ಅದು ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲಕರವಾಗಲಿದೆ. ಸರ್ಕಾರ ರೈತರೊಂದಿಗೆ ಮಾತುಕತೆಗೆ ಡಿ.3ಕ್ಕೂ ಮುನ್ನ ಮಾತುಕತೆ ನಡೆಸಬೇಕಾದಲ್ಲಿ ಅವರು ನಿಗದಿತ ಸ್ಥಳಕ್ಕೆ ತೆರಳುವುದು ಅನಿವಾರ್ಯ ಎಂದು ಅಮಿತ್ ಶಾ ಅವರು ಹೇಳಿದ್ದರು. 

ಈ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಅಮರೀಂದರ್ ಸಿಂಗ್ ಅವರು, ರೈತರ ಪ್ರತೀ ಆಗ್ರಹಗಳನ್ನು, ಸಮಸ್ಯೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರ ಸಿದ್ಧವಿದೆ. ರೈತರು ದೆಹಲಿಯಲ್ಲಿ ನಿಗದಿಪಡಿಸಿರುವ ಸ್ಥಳಕ್ಕೆ ತಮ್ಮ ಪ್ರತಿಭಟನೆಯನ್ನು ಸ್ಥಳಾಂತರಿಸಿದ್ದೇ ಆದರೆ, ಸಮಸ್ಯೆ ಬಗೆಹರಿಸುತ್ತೇವೆಂದು ಹೇಳಿದ್ದಾರೆ. ಹೀಗಾಗಿ ರೈತ ಸಂಘಟನೆಗಳು ಮನವಿಗೆ ಸ್ಪಂದನೆ ನೀಡಬೇಕಿದೆ ಎಂದು ಹೇಳಿದ್ದಾರೆ. 

ಎರಡೂ ಕಡೆಗಳಿಂದಲೂ ಕುಳಿತು ಮಾತುಕತೆ ನಡೆಸಿದಾಗ ಮಾತ್ರ ಸಮಸ್ಯೆ ಬಗೆಹರಿಯುತ್ತದೆ. ಹೆದ್ದಾರಿಗಳನ್ನು ಬಂದ್ ಮಾಡುವುದು, ಜನರಿಗೆ ಸಮಸ್ಯೆ ತಂದೊಡ್ಡುವುದು ರೈತರ ಉದ್ದೇಶವಲ್ಲ. ತಮ್ಮ ಧ್ವನಿ ಕೇಳುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು ಉದ್ದೇಶವಾಗಿದೆ. ಕೇಂದ್ರ ಸರ್ಕಾರ ಗಮನ ಸೆಳೆಯುವ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. 

ಅಮರೀಂದರ್ ಸಿಂಗ್ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ರೈತ ಸಂಘಟನೆಗಳು, ರಾಮ್'ಲೀಲಾ ಮೈದಾನದ್ಲಿ ಪ್ರತಿಭಟನೆಗಳು ನಡೆಯುತ್ತವೆ. ಆದರೆ, ನಾವೇಕೆ ಖಾಸಗಿ ಸೌಲಭ್ಯಗಳನ್ನು ಹೊಂದಿರುವ ನಿರಂಕಾರಿ ಭವನಕ್ಕೆ ತೆರಳಬೇಕು? ನಾವಿಂದು ಇಲ್ಲಿಯೇ ಇರುತ್ತೇವೆಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕೈಟ್ ಅವರು ಹೇಳಿದ್ದಾರೆ. 

ಅಮಿತ್ ಅವರು ಷರತ್ತುಗಳನ್ನು ನೀಡಿ ಮಾತುಕತೆಗೆ ಕರೆಯುತ್ತಿದ್ದಾರೆ. ಇದು ಸರಿಯಲ್ಲ. ಯಾವುದೇ ಷರತ್ತುಗಳನ್ನೂ ಹಾಕದೆ ಚರ್ಚೆಗೆ, ಮಾತುಕತೆಗೆ ಹೃದಯದಿಂದ ಕರೆಯಬೇಕು. ನಾಳೆ ಬೆಳಿಗ್ಗೆ ಮತ್ತೆ ನಾವು ಸಭೆ ನಡೆಸಿ ನಮ್ಮ ನಿಲುವು ಕುರಿತು ನಿರ್ಧಾರ ಕೈಗೊಳ್ಳಲಿದ್ದೇವೆಂದು ತಿಳಿಸಿದ್ದಾರೆ. 


 ನರೇಂದ್ರ ಮೋದಿ ಮನ್ ಕೀ ಬಾತ್ ಭಾಷಣ; ಮುಖ್ಯಾಂಶಗಳು

ನರೇಂದ್ರ ಮೋದಿ ಮನ್ ಕೀ ಬಾತ್ ಭಾಷಣ; ಮುಖ್ಯಾಂಶಗಳು


 ನರೇಂದ್ರ ಮೋದಿ ಮನ್ ಕೀ ಬಾತ್ ಭಾಷಣ; ಮುಖ್ಯಾಂಶಗಳು

ನವದೆಹಲಿ, ನವೆಂಬರ್ 29 : ಭಾರತದ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.

ಭಾನುವಾರ ಪ್ರಧಾನಿ ನರೇಂದ್ರ ಮೋದಿ 'ಮನ್ ಕೀ ಬಾತ್' ತಿಂಗಳ ರೇಡಿಯೋ ಕಾರ್ಯಕ್ರಮದ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಮನ್ ಕೀ ಬಾತ್ ಸರಣಿಯ 71ನೇ ಕಾರ್ಯಕ್ರಮ ಇದಾಗಿದೆ.

ದೇಶದ ಎಲ್ಲಾ ಜನರಿಗೆ ನಮಸ್ಕಾರಗಳು, ದೇಶದ ಜನರಿಗೆ ಸಿಹಿಸುದ್ದಿಯನ್ನು ನೀಡುತ್ತೇನೆ, "ಕೆನಡಾದಿಂದ ಅನ್ನಪೂರ್ಣ ದೇವಿಯ ಪ್ರತಿಮೆ ದೇಶಕ್ಕೆ ವಾಪಸ್ ಆಗುತ್ತಿದೆ" ಎಂದು ಮೋದಿ ಭಾಷಣವನ್ನು ಆರಂಭಿಸಿದರು.

ಹಲವು ವರ್ಷಗಳಿಂದ ಭಾರತ ಪುರಾತನ ಪ್ರತಿಮೆಯನ್ನು ವಾಪಸ್ ತರುವ ಕೆಲಸವನ್ನು ಮಾಡುತ್ತಿದೆ. ವಾರಣಾಸಿಯಿಂದ ಕಾಣೆಯಾಗಿದ್ದ ಅನ್ನಪೂರ್ಣ ದೇವಿಯ ಪ್ರತಿಮೆಯನ್ನು ವಾಪಸ್ ತರಲಾಗುತ್ತಿದೆ. ಭಾರತದ ಕಡೆಯಿಂದ ಕೆನಡಾಕ್ಕೆ ಅಭಿನಂದನೆಗಳು ಎಂದರು.

ಇಂದು ತಂತ್ರಜ್ಞಾನದ ಸಹಾಯದಿಂದಾಗಿ ನಾವು ದೆಹಲಿಯ ಮ್ಯೂಸಿಯಂ ಅನ್ನು ಮನೆಯಲ್ಲಿಯೇ ಕುಳಿತು ವೀಕ್ಷಿಸಬಹುದಾಗಿದೆ. ವರ್ಚುವಲ್ ಮ್ಯೂಸಿಯಂನಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು.

ಮೇಘಾಲಯ ರಾಜ್ಯದ ಶಿಲ್ಲಾಂಘ್‌ನ ಫೋಟೋವೊಂದನ್ನು ಮನ್ ಕೀ ಬಾತ್‌ನಲ್ಲಿ ತೋರಿಸಿದ ಮೋದಿ, ಇದು ಜಪಾನ್‌ ಪೋಟೋವಲ್ಲ ನಮ್ಮ ದೇಶದ ಚಿತ್ರ. ಕೋವಿಡ್ ಸಮಯದಲ್ಲಿ ಪ್ರಕೃತಿಯೊಂದಿಗೆ ಕಾಲ ಕಳೆಯಲು ನಮಗೆ ಅವಕಾಶ ಸಿಕ್ಕಿದೆ ಎಂದರು.

ಭಾರತಕ್ಕೆ ಭೇಟಿ ನೀಡಿದ ಹಲವಾರು ವಿದೇಶಿಗರು ತಮ್ಮ ದೇಶಕ್ಕೆ ವಾಪಸ್ ಆದ ಬಳಿಕ ಇಲ್ಲಿಯ ಪಾಕೃತಿಕ ಸೌಂದರ್ಯವನ್ನು ಅಲ್ಲಿಯ ಜನರಿಗೆ ತಿಳಿಸುತ್ತಿದ್ದಾರೆ. ಭಾರತೀಯ ಸಂಸ್ಕೃತಿ, ಪರಂಪರೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಬ್ರೆಜಿಲ್‌ನಲ್ಲಿ ಜೋಸಮ್ ಇಂತಹ ಕೆಲಸ ಮಾಡುತ್ತಿದ್ದಾರೆ. ಇಂಜಿನಿಯರಿಂಗ್ ಕಲಿಯಲು ದೇಶಕ್ಕೆ ಬಂದಿದ್ದ ಅವರು ಅಲ್ಲಿ ಈಗ ವೇದಾಂತದ ತರಗತಿಗಳನ್ನು ನಡೆಸುತ್ತಿದ್ದಾರೆ. ವೇದಾಂತದ ಪ್ರಚಾರಕ್ಕೆ ಅವರು ತಂತ್ರಜ್ಞಾನದ ಬಳಕೆ ಮಾಡುತ್ತಿದ್ದಾರೆ ಎಂದು ಹೇಳಿದರು.

ನ್ಯೂಜಿಲೆಂಡ್‌ನಲ್ಲಿ ನೂತನ ಸಂಸದರು ಪ್ರಾಚೀನ ಭಾಷೆಯಾದ ಸಂಸ್ಕೃತದಲ್ಲಿ ಪ್ರಮಾಣ ವಚವನ್ನು ಸ್ವೀಕರಿಸಿದರು. ನಾನು ಭಾರತದ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರಿಗೆ ಜನರ ಸೇವೆ ಮಾಡಲು ಇನ್ನಷ್ಟು ಶಕ್ತಿ ಸಿಗಲಿ ಎಂದು ಹಾರೈಸಿದರು.

ಭಾರತೀಯ ಸಂಸ್ಕೃತಿ ಅನೇಕ ರಾಷ್ಟ್ರಗಳಿಗೆ ಮಾದರಿಯಾಗಿದೆ. ಹಲವು ದೇಶಗಳು ನಮ್ಮ ಸಂಸ್ಕೃತಿ ಅರಿಯುವ ಪ್ರಯತ್ನ ಮಾಡುತ್ತಿವೆ. ನಮ್ಮ ದೇಶದ ಸಂಸ್ಕೃತಿ ಬಗ್ಗೆ ಮಾತನಾಡುವಾಗ ಸಿಖ್ ಸಮಯದಾಯದ ಬಗ್ಗೆ ಮಾತನಾಡಬೇಕು.

ಗುರುನಾನಾಕ್ ಜಯಂತಿಯ ಶುಭಾಶಯಗಳನ್ನು ಪ್ರಧಾನಿ ನರೇಂದ್ರ ಮೋದಿ ಕೋರಿದರು. ಸಲೀಂ ಅಲಿ ಅವರ ಜನ್ಮದಿನವನ್ನು ಮೋದಿ ನೆನಪು ಮಾಡಿಕೊಂಡರು.

ದೇಶದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪಾತ್ರ ದೊಡ್ಡದು. ಐಐಟಿ ದೆಹಲಿ, ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ದೇಶದ ವಿವಿಧ ವಿಶ್ವವಿದ್ಯಾಲಯಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಸಿಕ್ಕಿದೆ.

ಇಂತಹ ಕಾರ್ಯಕ್ರಮಗಳಿಗೆ ಅಕ್ಕ-ಪಕ್ಕದ ಶಾಲೆಗಳ ವಿದ್ಯಾರ್ಥಿಗಳನ್ನು ಅತಿಥಿಗಳಾಗಿ ಕರೆಸಬೇಕು ಎಂದು ಹೇಳಿದ್ದೇನೆ. ವಿದ್ಯಾರ್ಥಿಗಳು ಪದಕ ಪಡೆಯುವುದು ಬೇರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಲಿದೆ. ನಾನು ಸಹ ಡಾಕ್ಟರ್, ಇಂಜಿನಿಯರ್ ಆಗಬೇಕು ಎಂಬ ಕನಸನ್ನು ಅವರಲ್ಲಿ ಬಿತ್ತಲಿದೆ ಎಂದು ಮೋದಿ ಹೇಳಿದರು.

ಇಂದು ನಾವು ಆತ್ಮ ನಿರ್ಭರ ಭಾರತದ ಬಗ್ಗೆ ಮಾತನಾಡುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ನಾವು ಅರಬಿಂದೊ ಘೋಷ್ ನೆನಪು ಮಾಡಿಕೊಳ್ಳಬೇಕು. ಬಂಗಾಳದಲ್ಲಿ ಅವರು ಮಾಡಿ ವೋಕಲ್ ಫಾರ್ ಲೋಕಲ್ ಕಾರ್ಯಗಳನ್ನು ತಿಳಿಯಬೇಕು, ಅವರ ಬಗ್ಗೆ ನಾವು ಓದಿ ತಿಳಿದುಕೊಳ್ಳಬೇಕು ಎಂದರು.

ಅರಬಿಂದೊ ಘೋಷ್ ನಮ್ಮ ಶಿಕ್ಷಣ ವ್ಯವಸ್ಥೆ ಪುಸ್ತಕ, ಪರೀಕ್ಷೆಗಳಿಗೆ ಸೀಮಿತವಾರಬಾರದು ಎಂದು ಹೇಳಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ಯುವಕರ ಭವಿಷ್ಯದ ತರಬೇತಿಯ ಮಾರ್ಗವಾಗಬೇಕು ಎಂದು ಹೇಳಿದ್ದರು. ನಾವು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇದನ್ನು ಸಾಕಾರಗೊಳಿಸಿದ್ದೇವೆ ಎಂದು ಮೋದಿ ಹೇಳಿದರು.

ಹೊಸ ಕೃಷಿ ಮಸೂದೆ ಜೀತೇಂದ್ರ ಎಂಬ ರೈತನಿಗೆ ಹೇಗೆ ಸಹಾಯಕವಾಗಿದೆ ಎಂದು ಮೋದಿ ಮನ್ ಕೀ ಬಾತ್‌ನಲ್ಲಿ ವಿವರಣೆ ನೀಡಿದರು. ಮೊದಲು ಫಲಸು ಮಾರಿ ತಿಂಗಳು ಕಳೆದರೂ ರೈತ ಜೀತೇಂದ್ರಗೆ ಹಣ ಸಿಗುತ್ತಿರಲಿಲ್ಲ. ಈಗ ಮೂರು ದಿನದಲ್ಲಿ ಹಣ ಸಿಗುತ್ತಿದೆ ಎಂದು ಮೋದಿ ವಿವರಣೆಯನ್ನು ನೀಡಿದರು. ಈಗ ಜೀತೇಂದ್ರ ಅವರು ಆನ್‌ಲೈನ್ ಮೂಲಕ ಬೆಳೆಗಳನ್ನು ಮಾರಾಟ ಮಾಡಲು ಉಳಿದ ರೈತರಿಗೆ ಸಹ ಮಾರ್ಗದರ್ಶನವನ್ನು ನೀಡುತ್ತಿದ್ದಾರೆ.

ಇಡೀ ವಿಶ್ವಕ್ಕೆ ಕೋವಿಡ್ ಮೊದಲ ಪ್ರಕರಣ ಪತ್ತೆಯಾಗಿ ಒಂದು ವರ್ಷವಾಗಿದೆ. ಇದನ್ನು ನಾವು ಸಂತಸದಿಂದ ನೆನಪು ಮಾಡಿಕೊಳ್ಳಬೇಕಿಲ್ಲ. ಆದರೆ, ಕೋವಿಡ್ ಇನ್ನೂ ನಮ್ಮ ನಡುವೆಯೇ ಇದೆ ಎಂಬುದನ್ನು ಮರೆಯಬಾರದು.

ಲಾಕ್ ಡೌನ್‌ನಿಂದ ಆರಂಭವಾದ ಮಾತು ಇಂದು ವ್ಯಾಕ್ಸಿನ್ ತನಕ ಬಂದು ನಿಂತಿದೆ. ಮಕ್ಕಳು, ಹಿರಿಯರ ಬಗ್ಗೆ ನಾವು ಸದಾ ಕಾಳಜಿ ವಹಿಸಬೇಕು. ಕೋವಿಡ್ ಪತ್ತೆಯಾದ ಬಳಿಕ ಹಲವಾರು ಬದಲಾವಣೆಗಳು ಆಗಿವೆ.

ಮುಂದಿನ ಮನ್ ಕೀ ಬಾತ್‌ನಲ್ಲಿ ನಾವು ಭೇಟಿಯಾದಾಗ ವರ್ಷದ ಅಂತ್ಯದಲ್ಲಿ ನಾವು ಇರುತ್ತೇವೆ. ಎಲ್ಲರೂ ಆರೋಗ್ಯವಾಗಿರಿ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾತನ್ನು ಮುಗಿಸಿದರು. ಹೈದ್ರಾಬಾದ್: ದ್ವೇಷಕಾರಿ ಭಾಷಣ, ಅಕ್ಬರುದ್ದೀನ್ ಓವೈಸಿ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು

ಹೈದ್ರಾಬಾದ್: ದ್ವೇಷಕಾರಿ ಭಾಷಣ, ಅಕ್ಬರುದ್ದೀನ್ ಓವೈಸಿ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು


 ಹೈದ್ರಾಬಾದ್: ದ್ವೇಷಕಾರಿ ಭಾಷಣ, ಅಕ್ಬರುದ್ದೀನ್ ಓವೈಸಿ ವಿರುದ್ಧ ಕೇಸ್ ದಾಖಲಿಸಿದ ಪೊಲೀಸರು

ಹೈದ್ರಾಬಾದ್: ದ್ವೇಷ ಹರಡುವ ಭಾಷಣಗಳಿಂದಲೇ ಪ್ರಸಿದ್ಧಿಯಾಗಿರುವ ಆಲ್ ಇಂಡಿಯಾ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖಂಡ ಅಕ್ಬರುದ್ದೀನ್ ಓವೈಸಿ ಮತ್ತು ತೆಲಂಗಾಣ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಬಂಡಿ ಸಂಜಯ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆಯ ( ಐಪಿಸಿ) ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ ಆರ್ ನಗರ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಗ್ರೇಟರ್ ಹೈದ್ರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಅಕ್ಬರುದ್ದೀನ್, ನೆಕ್ಲೇಸ್ ರಸ್ತೆ ನಿರ್ಮಿಸಲಾಗಿರುವ ಪಿವಿ ನರಸಿಂಹ ರಾವ್ ( ಜ್ಞಾನ ಭೂಮಿ) ಮತ್ತು ಎನ್ ಟಿ ರಾಮ ರಾವ್ ( ಎನ್ ಟಿಆರ್ ಘಾಟ್ ) ಸ್ಮಾರಕಗಳನ್ನು ತೆರವುಗೊಳಿಸಲು ಒತ್ತಾಯಿಸಿದ್ದರು.

ಇದಕ್ಕೂ ಮುನ್ನ ಚುನಾವಣಾ ಪ್ರಚಾರ ಭಾಷಣ ಮಾಡಿದ್ದ ತೆಲಂಗಾಣ ಬಿಜೆಪಿ ಅಧ್ಯಕ್ಷರು, ಗ್ರೇಟರ್ ಹೈದ್ರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ ಒಂದು ಬಾರಿ ಗೆದ್ದರೆ, ಅಕ್ರಮವಾಗಿ ವಾಸಿಸುತ್ತಿರುವ ರೋಹಿಂಗ್ಯಗಳನ್ನು ಓಡಿಸಲು ಸರ್ಜಿಕಲ್ ಸ್ಟ್ರೈಕ್ ನಡೆಸಲಾಗುವುದು ಎಂದು ಹೇಳಿಕೆ ನೀಡಿದ್ದರು.


ಡಿಸೆಂಬರ್ 1 ರಂದು ಗ್ರೇಟರ್ ಹೈದ್ರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ನಡೆಯಲಿದ್ದು, ಡಿಸೆಂಬರ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.


ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ; ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ; ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ


ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ; ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು(ನ.28): ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ. ಆಗ ರಾಜ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಎಂಟಿಬಿ ನಾಗರಾಜ್ ಸೇರಿ ಬಿಜೆಪಿ ವಲಸಿಗರ ಸಭೆ ವಿಚಾರವಾಗಿ, ನಾನು ಅದರ ಬಗ್ಗೆ ಮಾತನಾಡಲ್ಲ. ಅವರು ಮಾಡಲಿ, ಬಿಡಲಿ ನಮಗೇನು? ಇವರು ವ್ಯಾಪಾರ ಮಾಡಿಕೊಂಡು ಅಲ್ಲಿಗೆ ಹೋದವರು. ಅವರ ವ್ಯಾಪಾರ ನನಗೇನು ಗೊತ್ತು? ಎಂದು ಬಿಜೆಪಿ ವಲಸಿಗರ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲ ಅಧಿವೇಶನ ವಿಚಾರಕ್ಕೆ ಅಸೆಂಬ್ಲಿ ಪ್ರಾರಂಭವಾದ ನಂತರ ಗೊತ್ತಾಗುತ್ತೆ. ಅಲ್ಲಿ ಏನು ಮಾತನಾಡ್ತೇವೆ ನೋಡಿ. ಪ್ರವಾಹ, ಬೇರೆ ಬೇರೆ ವಿಚಾರ ಇವೆ ಅಲ್ಲಿ ಮಾತನಾಡೋದನ್ನ ನೀವೇ ನೋಡುವಿರಂತೆ ಎಂದು ಮಾಧ್ಯಮಗಳಿಗೆ ಹೇಳಿದರು. ನಿಮಗೆ ಪ್ರಚಾರದ ಹುಚ್ಚಿದ್ದರೆ ರಾಜೀನಾಮೆ ನೀಡಿ ಎಲೆಕ್ಷನ್​​ಗೆ ನಿಂತ್ಕೊಳಿ; ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾ.ರಾ.ಮಹೇಶ್ ಕಿಡಿ

ಇನ್ನು, ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಒಬಿಸಿ ಪಟ್ಟಿಗೆ ಬರುವವರಿಗೆ ಒಂದು ಕಮೀಷನ್ ಇದೆ. ಪರ್ಮನೆಂಟ್ ಒಬಿಸಿ ಆಯೋಗ ಇದೆ. ಪಟ್ಟಿಗೆ ಸೇರಿಸೋದು, ಡಿಲೀಟ್ ಮಾಡೋದು ಅದಕ್ಕೆ ಸೇರಿದೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸೇರಿರುತ್ತೆ. ಆಯೋಗ ಮಾಡಬಹುದೆಂದು ವರದಿ ನೀಡಬೇಕು. ವರದಿ ನಂತರ ಅದರ ಬಗ್ಗೆ ಗಮನಹರಿಸಬಹುದು. ಒಬಿಸಿಗೆ ಸೇರಿಸಿ ಎಂದು ಕೇಳೋದು ತಪ್ಪಿಲ್ಲ. ಸಂವಿಧಾನದ 334 ವಿಧಿಯಲ್ಲೇ ತಿಳಿಸಲಾಗಿದೆ. ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳೋಕೋ, ಯಾಕೋ? ನನಗೇನು ಗೊತ್ತು ಎಂದು ಕಿಡಿಕಾರಿದ್ದಾರೆ.

ಇನ್ನು, ಸಿಎಂ ರಾಜಕೀಯ ಕಾರ್ಯದರ್ಶಿ ಎನ್ .ಆರ್.ಸಂತೋಷ್ ಆತ್ಮಹತ್ಯೆ ಪ್ರಯತ್ನ ವಿಚಾರವಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಸಂತೋಷ್ ಯಾರ್ರೀ, ನಮಗೇನು‌ ಗೊತ್ತು? ಅವರ ಸಮಸ್ಯೆ ನಮಗೇನು ಗೊತ್ತು? ಅದು ಅವರ ವೈಯುಕ್ತಿಕ ವಿಚಾರ. ರಾಜಕೀಯ ಒತ್ತಡ, ಅದೆಲ್ಲ ಇದೆ ಅನ್ನೋದು ನನಗೇನು ಗೊತ್ತು? ವಿಚಾರಣೆ ನಂತರ ಎಲ್ಲವೂ ಬರುತ್ತೆ ಎಂದರು.

ನವದೆಹಲಿ: ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದ ಮೊದಲ ಹಂತದ ಡಿಡಿಸಿ(ಜಿಲ್ಲಾ ಅಭಿವೃದ್ಧಿ ಮಂಡಳಿ) ಮತ್ತು ಪಂಚಾಯತ್ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿರುವುದಾಗಿ ವರದಿ ತಿಳಿಸಿದೆ. ವಿವಿಧ ಮತಗಟ್ಟೆಯಲ್ಲಿ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 2ಗಂಟೆಗೆ ಮುಕ್ತಾಯವಾಗಿರುವುದಾಗಿ ಚುನಾವಣಾ ಆಯೋಗದ ಮೂಲಗಳು ಹೇಳಿದೆ.

ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿನಿಂದ ಎಂಟು ಹಂತಗಳ ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ (ಡಿಡಿಸಿ) ಚುನಾವಣೆ ನಡೆಯಲಿದ್ದು, 2019 ಆ.5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮತ್ತು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದೆ.

ಡಿಡಿಸಿ(ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ) ಮೊದಲ ಹಂತದ ಚುನಾವಣೆಗಾಗಿ 2,146 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ಎಂದು ರಾಜ್ಯ ಚುನಾವಣಾಧಿಕಾರಿ ಕೆಕೆ ಶರ್ಮಾ ತಿಳಿಸಿದ್ದಾರೆ.

ಚುನಾವಣೆಯಿಂದ ಕೆಲವು ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂಬ ವಿಶ್ವಾಸ ಜನರದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ಪ್ರಾಮುಖ್ಯತೆ ಪಡೆದಿದೆ. ಈ ಕಾರಣದಿಂದಾಗಿಯೇ ನಾನು ಬೆಳಗ್ಗೆಯೇ ಮತ ಚಲಾಯಿಸಿರುವುದಾಗಿ ಬಂಡಿಪೋರಾ ಜಿಲ್ಲೆಯ ಮತದಾರರೊಬ್ಬರು ಇಂಡಿಯಾ ಟುಡೆ ಟಿವಿ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಅಧಿಕೃತ ಮಾಹಿತಿ ಪ್ರಕಾರ, ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದಲ್ಲಿ 280 ಕ್ಷೇತ್ರಗಳಿದ್ದು, ಇದರಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2ಗಂಟೆವರೆಗೆ ಮತದಾನ ನಡೆದಿದೆ. ಮೊದಲ ಹಂತದ ಡಿಡಿಸಿ ಚುನಾವಣೆಯಲ್ಲಿ ಒಟ್ಟು 296 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 207 ಮಂದಿ ಪುರುಷರು, 89 ಮಹಿಳೆಯರು ಸೇರಿದ್ದಾರೆ ಎಂದು ವರದಿ ವಿವರಿಸಿದೆ.

 ಜಮ್ಮು-ಕಾಶ್ಮೀರ: ಮೊದಲ ಹಂತದ ಡಿಡಿಸಿ, ಪಂಚಾಯತ್ ಉಪಚುನಾವಣೆ ಮತದಾನ ಅಂತ್ಯ

ಜಮ್ಮು-ಕಾಶ್ಮೀರ: ಮೊದಲ ಹಂತದ ಡಿಡಿಸಿ, ಪಂಚಾಯತ್ ಉಪಚುನಾವಣೆ ಮತದಾನ ಅಂತ್ಯ


 ಜಮ್ಮು-ಕಾಶ್ಮೀರ: ಮೊದಲ ಹಂತದ ಡಿಡಿಸಿ, ಪಂಚಾಯತ್ ಉಪಚುನಾವಣೆ ಮತದಾನ ಅಂತ್ಯ

ನವದೆಹಲಿ: ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದ ಮೊದಲ ಹಂತದ ಡಿಡಿಸಿ(ಜಿಲ್ಲಾ ಅಭಿವೃದ್ಧಿ ಮಂಡಳಿ) ಮತ್ತು ಪಂಚಾಯತ್ ಉಪ ಚುನಾವಣೆ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿರುವುದಾಗಿ ವರದಿ ತಿಳಿಸಿದೆ. ವಿವಿಧ ಮತಗಟ್ಟೆಯಲ್ಲಿ ಬೆಳಗ್ಗೆ 7ಗಂಟೆಗೆ ಮತದಾನ ಆರಂಭವಾಗಿದ್ದು, ಮಧ್ಯಾಹ್ನ 2ಗಂಟೆಗೆ ಮುಕ್ತಾಯವಾಗಿರುವುದಾಗಿ ಚುನಾವಣಾ ಆಯೋಗದ ಮೂಲಗಳು ಹೇಳಿದೆ.

ಕೇಂದ್ರಾಡಳಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದಿನಿಂದ ಎಂಟು ಹಂತಗಳ ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ (ಡಿಡಿಸಿ) ಚುನಾವಣೆ ನಡೆಯಲಿದ್ದು, 2019 ಆ.5ರಂದು ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಮತ್ತು ಕೇಂದ್ರಾಡಳಿತ ಪ್ರದೇಶ ಎಂದು ಘೋಷಣೆ ಮಾಡಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದೆ.

ಡಿಡಿಸಿ(ಜಿಲ್ಲಾ ಅಭಿವೃದ್ಧಿ ಸಂಸ್ಥೆಗಳ) ಮೊದಲ ಹಂತದ ಚುನಾವಣೆಗಾಗಿ 2,146 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು ಎಂದು ರಾಜ್ಯ ಚುನಾವಣಾಧಿಕಾರಿ ಕೆಕೆ ಶರ್ಮಾ ತಿಳಿಸಿದ್ದಾರೆ.

ಚುನಾವಣೆಯಿಂದ ಕೆಲವು ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂಬ ವಿಶ್ವಾಸ ಜನರದ್ದಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ಪ್ರಾಮುಖ್ಯತೆ ಪಡೆದಿದೆ. ಈ ಕಾರಣದಿಂದಾಗಿಯೇ ನಾನು ಬೆಳಗ್ಗೆಯೇ ಮತ ಚಲಾಯಿಸಿರುವುದಾಗಿ ಬಂಡಿಪೋರಾ ಜಿಲ್ಲೆಯ ಮತದಾರರೊಬ್ಬರು ಇಂಡಿಯಾ ಟುಡೆ ಟಿವಿ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ಅಧಿಕೃತ ಮಾಹಿತಿ ಪ್ರಕಾರ, ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು ಕಾಶ್ಮೀರದಲ್ಲಿ 280 ಕ್ಷೇತ್ರಗಳಿದ್ದು, ಇದರಲ್ಲಿ ಮೊದಲ ಹಂತದಲ್ಲಿ 43 ಕ್ಷೇತ್ರಗಳಿಗೆ ಬೆಳಗ್ಗೆ 7ರಿಂದ ಮಧ್ಯಾಹ್ನ 2ಗಂಟೆವರೆಗೆ ಮತದಾನ ನಡೆದಿದೆ. ಮೊದಲ ಹಂತದ ಡಿಡಿಸಿ ಚುನಾವಣೆಯಲ್ಲಿ ಒಟ್ಟು 296 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 207 ಮಂದಿ ಪುರುಷರು, 89 ಮಹಿಳೆಯರು ಸೇರಿದ್ದಾರೆ ಎಂದು ವರದಿ ವಿವರಿಸಿದೆ.

 ಬಂಟ್ವಾಳ: ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಚಾಲನೆ

ಬಂಟ್ವಾಳ: ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಚಾಲನೆ


 ಬಂಟ್ವಾಳ: ಬಿಜೆಪಿ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಚಾಲನೆ

ಬಂಟ್ವಾಳ: ಇಲ್ಲಿನ ಬಿ.ಸಿ ರೋಡಿನಲ್ಲಿ ಶನಿವಾರ ಗ್ರಾಮ ಸ್ವರಾಜ್ಯ ಸಮಾವೇಶಕ್ಕೆ ಉಪ ಮುಖ್ಯ ಮಂತ್ರಿ ಡಾ. ಅಶ್ವತ್ಥನಾರಾಯಣ ಚಾಲನೆ ನೀಡಿದರು. ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಬಿಜೆಪಿ ಹಮ್ಮಿಕೊಂಡಿದ್ದು, ಸಮಾವೇಶಕ್ಕೂ ಮೊದಲು ಮೆರವಣಿಗೆ ನಡೆಯಿತು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್ ಮೂಡಬಿದಿರೆ, ಶಾಸಕ ರಾಜೇಶ್ ನಾಯ್ಕ್, ಸಂಸದರಾದ ಶೋಭಾ ಕರಂದ್ಲಾಜೆ, ಮುನಿಸ್ವಾಮಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಇದ್ದರು.

ಇದಕ್ಕೂ ಮೊದಲು ಮಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ, 'ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ಮುಕ್ತ ಭಾರತ ಗುರಿಯನ್ನು ಸಾಧಿಸಿರುವ ಬಿಜೆಪಿಯು ಗ್ರಾಮೀಣ ಮಟ್ಟದಲ್ಲೂ ಯಶಸ್ಸು ಸಾಧಿಸಲಿದೆ' ಎಂದು ಹೇಳಿದರು.

'ಕಾಂಗ್ರೆಸ್‌ ಇದೀಗ ರಾಜಕಾರಣದಲ್ಲಿ ಅಪ್ರಸ್ತುತವಾಗಿದೆ. ನಾಯಕತ್ವದ ಕೊರತೆ, ಜನವಿರೋಧಿ ನೀತಿಗಳು, ರಾಷ್ಟ್ರದ ಹಿತಾಸಕ್ತಿ ಬಗ್ಗೆ ರಾಜಿ... ಇತ್ಯಾದಿ ಕಾರಣಗಳಿಂದ ಜನಮಾನಸದಿಂದ ಮರೆಯಾಗಿ ಬಿಡುತ್ತಿದೆ ಎಂದರು.

ಲೋಕಮಾನ್ಯ ಬಾಲಗಂಗಾದರ ತಿಲಕರು ಹಾಗೂ ಮಹಾತ್ಮ ಗಾಂಧಿ ಹೇಳಿದ್ದ ಸ್ವರಾಜ್ಯವನ್ನು ಕಾಂಗ್ರೆಸ್, ಹೇಳಿಕೆಗೆ ಮಾತ್ರ ಸೀಮಿತಗೊಳಿಸಿದ್ದರೆ, ಬಿಜೆಪಿ ಜಾರಿ ಮಾಡುತ್ತಿದೆ. ಬಿಜೆಪಿ ಮತ್ತು ನಾಗರಿಕರ ಚಿಂತನೆ ಒಂದೇ ಆಗಿದೆ. ಬಿಜೆಪಿ ಉದ್ದೇಶಗಳು ಜನರ ಜೀವನದ ಭಾಗವಾಗಿದೆ ಎಂದರು.

'ಭಾರತವು ಅವಲಂಬನೆ ಮುಕ್ತವಾಗಿ ಆತ್ಮನಿರ್ಭರತೆಯತ್ತ ಹೆಜ್ಜೆ ಇಡುತ್ತಿದೆ. ಪಾಕಿಸ್ತಾನ ಅಪ್ರಸ್ತುತವಾದರೆ, ಚೀನಾದಂತಹ ರಾಷ್ಟ್ರಗಳನ್ನೂ ಲೆಕ್ಕಿಸುತ್ತಿಲ್ಲ' ಎಂದರು.

 ಕೋವಿಡ್ ಲಸಿಕೆ ಪ್ರಗತಿ ಪರಿಶೀಲನೆ: ಅಹಮದಾಬಾದ್‌ಗೆ ಮೋದಿ ಭೇಟಿ

ಕೋವಿಡ್ ಲಸಿಕೆ ಪ್ರಗತಿ ಪರಿಶೀಲನೆ: ಅಹಮದಾಬಾದ್‌ಗೆ ಮೋದಿ ಭೇಟಿ


 ಕೋವಿಡ್ ಲಸಿಕೆ ಪ್ರಗತಿ ಪರಿಶೀಲನೆ: ಅಹಮದಾಬಾದ್‌ಗೆ ಮೋದಿ ಭೇಟಿ

ಅಹಮದಾಬಾದ್: ಕೊರೊನಾ ಸೋಂಕಿನ ಚಿಕಿತ್ಸೆಗೆ ಲಸಿಕೆ ಅಭಿವೃದ್ಧಿ ಕುರಿತ ಪ್ರಗತಿ ಪರಿಶೀಲನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇಲ್ಲಿನ ಜೈಡಸ್‌ ಕ್ಯಾಡಿಲಾ ಸಂಸ್ಥೆಯ ಉತ್ಪಾದನಾ ಘಟಕಕ್ಕೆ ಶನಿವಾರ ಭೇಟಿ ನೀಡಿದ್ದರು.

ಪಿಪಿಇ ಕಿಟ್‌ ಧರಿಸಿದ್ದ ಮೋದಿ ಅವರು ಲಸಿಕೆ ಅಭಿವೃದ್ಧಿಪಡಿಸುವ ಪ್ರಕ್ರಿಯೆಯನ್ನು ವೀಕ್ಷಿಸಿದ್ದು, ಬಳಿಕ ಸಂಸ್ಥೆಯ ಪ್ರವರ್ತಕರು ಮತ್ತು ಕಾರ್ಯನಿರ್ವಾಹಕ ಪ್ರತಿನಿಧಿಗಳ ಜೊತೆಗೆ ಚರ್ಚಿಸಿ ಮಾಹಿತಿ ಪಡೆದರು.

ದೆಹಲಿಯಿಂದ ವಿಮಾನದಲ್ಲಿ ಬಂದಿಳಿದ ಮೋದಿ ನೇರವಾಗಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದರು. ಸುಮಾರು ಒಂದು ಗಂಟೆ ಘಟಕದಲ್ಲಿ ಉಳಿದಿದ್ದ ಅವರು ನಂತರ ಹೈದರಾಬಾದ್‌ಗೆ ತೆರಳಲು ನಿರ್ಗಮಿಸಿದರು.

ಕೋವಿಡ್ ವಿರುದ್ಧದ ಲಸಿಕೆ 'ಝೈಕೋವ್‌-ಡಿ'ಯ ಮೊದಲನೇ ಹಂತದ ಪ್ರಯೋಗ ಪೂರ್ಣಗೊಂಡಿದ್ದು, 2ನೇ ಹಂತದ ಪ್ರಯೋಗವು ಆಗಸ್ಟ್‌ನಲ್ಲಿ ಆರಂಭವಾಗಿದೆ ಎಂದು ಜೈಡಸ್‌ ಕ್ಯಾಡಿಲಾ ಸಂಸ್ಥೆ ತಿಳಿಸಿದೆ.

ಹೈದರಾಬಾದ್‌ನಲ್ಲಿ ಮೋದಿ ಅವರು ಭಾರತ್‌ ಬಯೋಟೆಕ್‌ ಸಂಸ್ಥೆಯ ಘಟಕಕ್ಕೆ ಭೇಟಿ ನೀಡುವರು. ಬಳಿಕ ಅವರು ಪುಣೆಗೆ ತೆರಳಲಿದ್ದು, ಅಲ್ಲಿ ಅವರು ಸೆರಂ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾಗೆ (ಎಸ್‌ಐಐ) ಭೇಟಿ ನೀಡುವರು.

ಕೊರೊನಾ ಸೋಂಕು ವಿರುದ್ಧದ ಲಸಿಕೆಯ ಬಿಡುಗಡೆಗೆ ಮುನ್ನ ಅದರ ಉತ್ಪಾದನೆ ಮತ್ತು ವಿತರಣಾ ವ್ಯವಸ್ಥೆಯ ಕುರಿತು ಮಾಹಿತಿ ಪಡೆಯುವ ಕ್ರಮವಾಗಿ ಪ್ರಧಾನಿ ಮೋದಿ ಈ ಭೇಟಿ ಹಮ್ಮಿಕೊಂಡಿದ್ದಾರೆ ಎನ್ನಲಾಗಿದೆ.

 ಉಪ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ: ಸಚಿವ ಕೆ.ಎಸ್. ಈಶ್ವರಪ್ಪ

ಉಪ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ: ಸಚಿವ ಕೆ.ಎಸ್. ಈಶ್ವರಪ್ಪ


 ಉಪ ಚುನಾವಣೆಯಲ್ಲಿ ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ: ಸಚಿವ ಕೆ.ಎಸ್. ಈಶ್ವರಪ್ಪ

ಬೆಳಗಾವಿ: 'ಮುಂಬರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ನಾವು ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡುವುದಿಲ್ಲ' ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಬೆಳಗಾವಿ ಹಿಂದುತ್ವದ ಕೇಂದ್ರ. ಇಲ್ಲಿ ನಾವು ಶಂಕರಾಚಾರ್ಯರ, ರಾಣಿ ಚನ್ನಮ್ಮ ಇಲ್ಲವೇ ಸಂಗೊಳ್ಳಿರಾಯಣ್ಣನ ಶಿಷ್ಯರಿಗೆ ಟಿಕೆಟ್ ನೀಡುತ್ತೇವೆ. ಆದರೆ ಮುಸ್ಲಿಮರಿಗೆ ಕೊಡುವುದಿಲ್ಲ' ಎಂದು ಹೇಳಿದರು.

'ಹಿಂದೂಗಳಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದನ್ನು ಪಕ್ಷ ತೀರ್ಮಾನಿಸಲಿದೆ. ಡಿ.4ರಂದು ಇಲ್ಲಿ ಸಮನ್ವಯ ಸಮಿತಿ ಸಭೆ ಹಾಗೂ ಡಿ. 5ರಂದು ರಾಜ್ಯ ಕಾರ್ಯಕಾರಿಣಿ ನಡೆಯಲಿದೆ. ಆ ಸಭೆಗಳಲ್ಲಿ ಅಭ್ಯರ್ಥಿಗಳ ವಿಷಯ ಚರ್ಚೆಗೆ ಬರಬಹುದು' ಎಂದು ಪ್ರತಿಕ್ರಿಯಿಸಿದರು.

Friday, 27 November 2020

 ಪರ್ಸನಲ್ ವಿಡಿಯೋ ಇಟ್ಟುಕೊಂಡು ಸಿಎಂ ಕಾರ್ಯದರ್ಶಿ ಸಂತೋಷ್​ಗೆ ಸಚಿವರ ಬ್ಲ್ಯಾಕ್ ಮೇಲ್ : ಡಿಕೆ ಶಿವಕುಮಾರ್

ಪರ್ಸನಲ್ ವಿಡಿಯೋ ಇಟ್ಟುಕೊಂಡು ಸಿಎಂ ಕಾರ್ಯದರ್ಶಿ ಸಂತೋಷ್​ಗೆ ಸಚಿವರ ಬ್ಲ್ಯಾಕ್ ಮೇಲ್ : ಡಿಕೆ ಶಿವಕುಮಾರ್


 ಪರ್ಸನಲ್ ವಿಡಿಯೋ ಇಟ್ಟುಕೊಂಡು ಸಿಎಂ ಕಾರ್ಯದರ್ಶಿ ಸಂತೋಷ್​ಗೆ ಸಚಿವರ ಬ್ಲ್ಯಾಕ್ ಮೇಲ್ : ಡಿಕೆ ಶಿವಕುಮಾರ್

ಕಾರವಾರ: ವೈಯಕ್ತಿಕ ವಿಡಿಯೋ ಇಟ್ಟುಕೊಂಡು ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಗೆ ಎಂಎಲ್​ಸಿ ಹಾಗೂ ಮಿನಿಸ್ಟರ್ ಒಬ್ಬರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕಾರಣದಿಂದ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.

ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕಾರ್ಯದರ್ಶಿ ಎನ್.ಆರ್.ಸಂತೋಷ್ ಅವರ ಪರ್ಸನಲ್ ವಿಡಿಯೋ ಮಾಡಿ ಎಂಎಲ್​ಸಿ ಹಾಗೂ ಒಬ್ಬರು ಮಿನಿಸ್ಟರ್​ಗೆ ನೀಡಿದ್ದರು. ಅದನ್ನು ದೆಹಲಿ ನಾಯಕರಿಗೆ ಕೊಟ್ಟಿರುವ ಬಗ್ಗೆ ತಿಂಗಳ ಹಿಂದೆಯೇ ನನಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬೇಸರಗೊಂಡು ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ತಿಳಿಸಿದರು.

ಈ ವೈಯಕ್ತಿಕ ವಿಡಿಯೋದಲ್ಲಿ ಯಾವುದೋ ಗೌಪ್ಯ ವಿಚಾರ ಅಡಗಿದೆ. ವಿಡಿಯೋ ತೆಗೆದುಕೊಂಡಿದ್ದವರು ಸಿಎಂ ಮತ್ತು ಅವರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು. ಸತ್ಯಾಂಶ ಏನಿದೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.

 ಝೈಡಸ್ ಬಯೋಟೆಕ್ ಪಾರ್ಕ್ ನಲ್ಲಿ ಪ್ರಧಾನಿ ಮೋದಿ : ವಿಜ್ಞಾನಿಗಳೊಂದಿಗೆ ಸಮಾಲೋಚನೆ

ಝೈಡಸ್ ಬಯೋಟೆಕ್ ಪಾರ್ಕ್ ನಲ್ಲಿ ಪ್ರಧಾನಿ ಮೋದಿ : ವಿಜ್ಞಾನಿಗಳೊಂದಿಗೆ ಸಮಾಲೋಚನೆ


 ಝೈಡಸ್ ಬಯೋಟೆಕ್ ಪಾರ್ಕ್ ನಲ್ಲಿ ಪ್ರಧಾನಿ ಮೋದಿ : ವಿಜ್ಞಾನಿಗಳೊಂದಿಗೆ ಸಮಾಲೋಚನೆ

ನವದೆಹಲಿ: ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯ ಪರಿಶೀಲನೆ ನಡೆಸಲು ಮುಂದಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ಅಹಮದಾಬಾದ್'ಗೆ ಭೇಟಿ ನೀಡಿದ್ದು, ಝೈಡಸ್ ಬಯೋಟೆಕ್ ಪಾರ್ಕ್'ಗೆ ತೆರಳಿ ವಿಜ್ಞಾನಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಝೈಡಸ್ ಕ್ಯಾಡಿಲಾ ಕಂಪನಿಯು ಈಗಾಗಲೇ ಕೊರೋನಾಗೆ ಝೈಕೋವಿಡ್-ಡಿ ಎಂಬ ಲಸಿಕೆ ಅಭಿವೃದ್ಧಿ ಪಡಿಸಿದ್ದು, ಅದು 2ನೇ ಹಂತ ಪೂರ್ಣಗೊಳಿಸಿದೆ ಎಂದು ತಿಳಿದುಬಂದಿದೆ.

ಝೈಡಸ್ ಬಯೋಟೆಕ್ ಪಾರ್ಕ್'ಗೆ ಭೇಟಿ ನೀಡಿದ ಬಳಿಕ ಮಧ್ಯಾಹ್ನ 12.30ರ ವೇಳೆಗ ಪುಣೆಯ ಸೀರಂ ಇನ್'ಸ್ಟಿಟ್ಯೂಟ್'ಗೆ ಭೇಟಿ ನೀಡಲಿದ್ದಾರೆ. ಸೀರಂ ಇನ್ ಸ್ಟಿಟ್ಯೂಟ್ ಬ್ರಿಟನ್'ನ ಆಕ್ಸ್'ಫರ್ಡ್ ವಿವಿ ಮತ್ತು ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಮತ್ತು ಪ್ರಯೋಗಕ್ಕೆ ಒಳಪಡಿಸುವ ಗುತ್ತಿಗೆ ಪಡೆದುಕೊಂಡಿದೆ.

ಮಧ್ಯಾಹ್ನದ ಬಳಿಕ ಪ್ರಧಾನಿ ಹೈದರಾಬಾದ್'ನಿಂದ 50 ಕಿ.ಮೀ ದೂರದ ಹಕೀಂಪೇಟ್'ನಲ್ಲಿರುವ ಭಾರತ್ ಬಯೋಟೆಕ್ ಘಟಕಕ್ಕೆ ಭೇಟಿ ನೀಡಲಿದ್ದಾರೆ.

 ಖೈದಿಗಳಿಗಾಗಿ ಜೈಲಿನಲ್ಲೇ ಎಟಿಎಂ ಆರಂಭ..!

ಖೈದಿಗಳಿಗಾಗಿ ಜೈಲಿನಲ್ಲೇ ಎಟಿಎಂ ಆರಂಭ..!


 ಖೈದಿಗಳಿಗಾಗಿ ಜೈಲಿನಲ್ಲೇ ಎಟಿಎಂ ಆರಂಭ..!


ಬಿಹಾರದ ಪೂರ್ನಿಯಾದಲ್ಲಿರುವ ಕೇಂದ್ರ ಕಾರಾಗೃಹದಲ್ಲಿರುವ ಖೈದಿಗಳಿಗೆ ಎಟಿಎಂ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಸಾಮಾನ್ಯವಾಗಿ ತಮ್ಮನ್ನು ನೋಡಲು ಜೈಲಿಗೆ ಬರುವ ಕುಟುಂಬಸ್ಥರು ಖೈದಿಗಳಿಗೆ ದುಡ್ಡು ತಂದು ಕೊಡುತ್ತಾರೆ.

ಈ ಮೂಲಕ ಖೈದಿಗಳನ್ನು ನೋಡಲು ಬರುವ ಅವರ ಕುಟುಂಬಸ್ಥರು ದೊಂಬಿ ಮಾಡುವುದನ್ನು ತಡೆಗಟ್ಟುವುದು ಜೈಲಿನ ಆಡಳಿತ ಸಿಬ್ಬಂದಿಯ ಉದ್ದೇಶವಾಗಿದೆ.

ಖೈದಿಗಳು ಪ್ರತಿನಿತ್ಯ ಎಂಟು ಗಂಟೆಗಳ ಕಾಲ ಕೆಲಸ ಮಾಡಿ 52-103 ರೂ.ಗಳವರೆಗೂ ಸಂಪಾದನೆ ಮಾಡುತ್ತಾರೆ. ಅವರು ಸಂಪಾದಿಸಿದ ದುಡ್ಡನ್ನು ಅವರವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಪ್ರತಿಯೊಬ್ಬ ಖೈದಿಯೂ ಸಹ ತನ್ನೊಂದಿಗೆ 500 ರೂ.ಗಳನ್ನು ಇಟ್ಟುಕೊಳ್ಳಬಹುದಾಗಿದೆ. ಈ ಜೈಲಿನಲ್ಲಿರುವ 750 ಖೈದಿಗಳ ಪೈಕಿ 600 ಮಂದಿಗೆ ಬ್ಯಾಂಕ್ ಖಾತೆಗಳಿದ್ದು, 400 ಮಂದಿಗೆ ಎಟಿಎಂ ಕಾರ್ಡ್ ವಿತರಿಸಲಾಗಿದೆ.

ಇತ್ತೀಚೆಗೆ ಕೋವಿಡ್‌-19 ಸಮಯದಲ್ಲಿ ಖೈದಿಗಳು ಮುಖದ ಮಾಸ್ಕ್‌ಗಳನ್ನು ತಯಾರಿಸಿ ಕೋಸಿ ಹಾಗೂ ಸೀಮಾಂಚಲ ಪ್ರದೇಶಗಳಲ್ಲಿರುವ ಜನರಿಗೆ ವಿತರಿಸಲು ನೆರವಾಗಿದ್ದಾರೆ.


 ಕೊರೋನಾ ಲಸಿಕೆ ಉತ್ಪಾದನೆ, ವಿತರಣೆ ಬಗ್ಗೆ ಪರಾಮರ್ಶೆ: ಪ್ರಧಾನಿ ಮೋದಿ ಇಂದು 3 ನಗರಗಳಿಗೆ ಭೇಟಿ

ಕೊರೋನಾ ಲಸಿಕೆ ಉತ್ಪಾದನೆ, ವಿತರಣೆ ಬಗ್ಗೆ ಪರಾಮರ್ಶೆ: ಪ್ರಧಾನಿ ಮೋದಿ ಇಂದು 3 ನಗರಗಳಿಗೆ ಭೇಟಿ


 ಕೊರೋನಾ ಲಸಿಕೆ ಉತ್ಪಾದನೆ, ವಿತರಣೆ ಬಗ್ಗೆ ಪರಾಮರ್ಶೆ: ಪ್ರಧಾನಿ ಮೋದಿ ಇಂದು 3 ನಗರಗಳಿಗೆ ಭೇಟಿ

ನವದೆಹಲಿ: ಕೋವಿಡ್-19 ಲಸಿಕೆ ಉತ್ಪಾದನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳ ಬಗ್ಗೆ ಪರಾಮರ್ಶೆ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಖುದ್ದಾಗಿ ಶನಿವಾರ 3 ನಗರಗಳಿಗೆ ಭೇಟಿ ನೀಡುತ್ತಿದ್ದಾರೆ.

ಅವರು ಅಹಮದಾಬಾದ್ ನ ಝಿಡಸ್ ಬಯೊಟೆಕ್ ಪಾರ್ಕ್, ಹೈದರಾಬಾದ್ ನ ಭರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಗೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.

ನಮ್ಮ ದೇಶದಲ್ಲಿ ಶೇಕಡಾ 70ಕ್ಕೆ ಹತ್ತಿರದಷ್ಟು ಮಂದಿ 10 ವರ್ಷಕ್ಕಿಂತ ಮೇಲ್ಪಟ್ಟವರು ಸಾರ್ಸ್-ಕೋವಿಡ್-2 ಸಾಂಕ್ರಾಮಿಕಕ್ಕೆ ಒಳಗಾಗುತ್ತಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಎರಡನೇ ರಾಷ್ಟ್ರೀಯ ಶೂನ್ಯಸಮೀಕ್ಷೆ ಹೇಳುತ್ತದೆ. ಅಂದರೆ ಕಳೆದ ಆಗಸ್ಟ್ ಹೊತ್ತಿಗೆ 74.3 ಮಿಲಿಯನ್ ಮಂದಿ ಸೋಂಕಿಗೆ ಒಳಗಾಗಿದ್ದಾರೆ. ಶೇಕಡಾ 10ಕ್ಕಿಂತ ಕಡಿಮೆ ಮಂದಿ ಒಟ್ಟಾರೆ ವೈರಸ್ ಗೆ ಒಳಗಾಗಬಹುದು ಎಂದು ಅಂದಾಜಿಸಲಾಗಿದೆ.

ಕೊರೋನಾ ಲಸಿಕೆ ಅಧ್ಯಯನ ವೇಳೆ ಪ್ರಮಾಣದಲ್ಲಿ ಪ್ರಮುಖ ತಪ್ಪಾಗಿದೆ ಎಂದು ಅಸ್ಟ್ರಾಝೆನೆಕಾ ಈಗಾಗಲೇ ತಪ್ಪು ಒಪ್ಪಿಕೊಂಡಿರುವುದರ ಮಧ್ಯೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳುವ ಪ್ರಕಾರ, ಶೇಕಡಾ 70 ರಷ್ಟು ಕಡಿಮೆ ಪರಿಣಾಮಕಾರಿತ್ವದಲ್ಲಿದ್ದರೂ ಸಹ, ಅಸ್ಟ್ರಾಜೆನೆಕಾ-ಆಕ್ಸ್‌ಫರ್ಡ್ ಲಸಿಕೆ ವೈರಸ್ ವಿರುದ್ಧ ಕಾರ್ಯಸಾಧ್ಯವಾಗಿದೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕೋವಿಡ್-19 ಲಸಿಕೆ ಉತ್ಪಾದನೆ ಮತ್ತು ವಿತರಣೆಗಳ ಸಾಧ್ಯತೆ ಬಗ್ಗೆ ಪರಾಮರ್ಶೆ ನಡೆಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಗೆ ಭೇಟಿ ನೀಡುತ್ತಿದ್ದಾರೆ.

 ಶೀಘ್ರವೇ ರಾಜ್ಯದಲ್ಲಿ `ಗೋಹತ್ಯೆ' ನಿಷೇಧ ಕಾಯ್ದೆ ಮಂಡನೆ : ಸಚಿವ ಪ್ರಭು ಚವ್ಹಾಣ್

ಶೀಘ್ರವೇ ರಾಜ್ಯದಲ್ಲಿ `ಗೋಹತ್ಯೆ' ನಿಷೇಧ ಕಾಯ್ದೆ ಮಂಡನೆ : ಸಚಿವ ಪ್ರಭು ಚವ್ಹಾಣ್


 ಶೀಘ್ರವೇ ರಾಜ್ಯದಲ್ಲಿ `ಗೋಹತ್ಯೆ' ನಿಷೇಧ ಕಾಯ್ದೆ ಮಂಡನೆ : ಸಚಿವ ಪ್ರಭು ಚವ್ಹಾಣ್


ಬೆಂಗಳೂರು : ಪಕ್ಷದ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪ್ರಕಾರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತರಲು ಬಿಜೆಪಿ ಸರ್ಕಾರ ಬದ್ಧವಾಗಿದ್ದು, ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಡಿಸೆಂಬರ್ 7 ರಂದು ಪ್ರಾರಂಭವಾಗಲಿರುವ ವಿಧಾನ ಮಂಡಲದ ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಮಂಡಿಸಲಾಗುವುದು. ಪರಿಷ್ಕೃತ ಮತ್ತು ಸಮಗ್ರ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದರು.

  ಸಿಎಂ ರಾಜಕೀಯ ಕಾರ್ಯದರ್ಶಿ `ಎನ್.ಆರ್. ಸಂತೋಷ್' ಆತ್ಮಹತ್ಯೆಗೆ ಯತ್ನ!

ಸಿಎಂ ರಾಜಕೀಯ ಕಾರ್ಯದರ್ಶಿ `ಎನ್.ಆರ್. ಸಂತೋಷ್' ಆತ್ಮಹತ್ಯೆಗೆ ಯತ್ನ!

 

ಸಿಎಂ ರಾಜಕೀಯ ಕಾರ್ಯದರ್ಶಿ `ಎನ್.ಆರ್. ಸಂತೋಷ್' ಆತ್ಮಹತ್ಯೆಗೆ ಯತ್ನ!

ಬೆಂಗಳೂರು : ಸಿಎಂ ಬಿ.ಎಸ್. ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಸದ್ಯ ಅವರನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಡಾಲರ್ಸ್ ಕಾಲೋನಿಯಲ್ಲಿ ಅವರ ನಿವಾಸದಲ್ಲಿ ರಾತ್ರಿ 8 ಗಂಟೆ ಸುಮಾರಿಗೆ 12 ನಿದ್ರೆ ಮಾತ್ರೆ ಸೇವಿಸಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು. ಕೂಡಲೇ ಇದನ್ನು ಗಮನಿಸಿದ ಅವರ ಪತ್ನಿ ಸಮೀಪದ ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ಸಂತೋಷ್ ಅವರನ್ನು ತುರ್ತು ನಿಗಾ ಘಟಕದಲ್ಲಿ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

 ಪಾಕಿಸ್ತಾನದಲ್ಲಿ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಶಿಕ್ಷೆ: ಏನಿದು?

ಪಾಕಿಸ್ತಾನದಲ್ಲಿ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಶಿಕ್ಷೆ: ಏನಿದು?


ಪಾಕಿಸ್ತಾನದಲ್ಲಿ ಅತ್ಯಾಚಾರಿಗಳಿಗೆ ಕೆಮಿಕಲ್ ಕ್ಯಾಸ್ಟ್ರೇಶನ್ ಶಿಕ್ಷೆ: ಏನಿದು?


ಇಸ್ಲಾಮಾಬಾದ್: ಅತ್ಯಾಚಾರಿಗಳಿಗೆ ರಾಸಾಯನಿಕ ಬಳಸಿ ಪುರುಷತ್ವ ಹರಣ ಮಾಡುವುದು (ಕೆಮಿಕಲ್ ಕ್ಯಾಸ್ಟ್ರೇಶನ್) ಮತ್ತು ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದ ಎರಡು ಸುಗ್ರೀವಾಜ್ಞೆಗಳಿಗೆ ಪಾಕಿಸ್ತಾನ ಸಚಿವ ಸಂಪುಟ ಅನುಮೋದನೆ ನೀಡಿದೆ.

ಕಾನೂನು ಸಚಿವ ಫರೋಗ್ ನಸೀಮ್ ನೇತೃತ್ವದ ಸಚಿವ ಸಂಪುಟ ಸಮಿತಿಯು 'ಅತ್ಯಾಚಾರ ತಡೆ (ತನಿಖೆ ಮತ್ತು ವಿಚಾರಣೆ) ಸುಗ್ರೀವಾಜ್ಞೆ 2020' ಹಾಗೂ 'ಅಪರಾಧ ಕಾನೂನು (ತಿದ್ದುಪಡಿ) ಸುಗ್ರೀವಾಜ್ಞೆ 2020'ಗೆ ಗುರುವಾರ ಅನುಮೋದನೆ ನೀಡಿದೆ ಎಂದು 'ಡಾನ್ ನ್ಯೂಸ್' ಪತ್ರಿಕೆ ವರದಿ ಮಾಡಿದೆ.

ಮೊದಲ ಬಾರಿಯ ಹಾಗೂ ಪುನರಾವರ್ತಿತ ಅಪರಾಧಿಗಳನ್ನು ಸಾಮಾನ್ಯ ಜೀವನಕ್ಕೆ ಮರುರೂಪಿಸುವ ಪ್ರಕ್ರಿಯೆಯಾಗಿ ಕೆಮಿಕಲ್ ಕ್ಯಾಸ್ಟ್ರೇಶನ್ ಪರಿಚಯಿಸಲಾಗಿದೆ ಎಂದು ವರದಿ ಹೇಳಿದೆ.

ಅಂತರರಾಷ್ಟ್ರೀಯ ನಿಯಮಗಳ ಪ್ರಕಾರ, ರಾಸಾಯನಿಕ ಬಳಸಿ ಪುರುಷತ್ವ ಹರಣ ಪ್ರಕ್ರಿಯೆಗೆ ಒಳಪಡಿಸುವ ಮುನ್ನ ಅಪರಾಧಿಯ ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ ಎಂದು ಸಚಿವ ನಸೀಮ್ ಹೇಳಿದ್ದಾರೆ.

ಒಪ್ಪಿಗೆ ಪಡೆಯದೆ ರಾಸಾಯನಿಕ ಬಳಸಿ ಪುರುಷತ್ವ ಹರಣಕ್ಕೆ ಆದೇಶಿಸಿದಲ್ಲಿ ಅಪರಾಧಿಯು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು ಎಂದೂ ಅವರು ಹೇಳಿದ್ದಾರೆ.


ಒಪ್ಪದಿದ್ದರೆ ಏನಾಗುತ್ತದೆ?

ಅಪರಾಧಿಯು ರಾಸಾಯನಿಕ ಬಳಸಿ ಪುರುಷತ್ವ ಹರಣಕ್ಕೆ ಒಪ್ಪಿಗೆ ಸೂಚಿಸದಿದ್ದಲ್ಲಿ ಪಾಕಿಸ್ತಾನ ದಂಡ ಸಂಹಿತೆಯ (ಪಿಪಿಸಿ) ಅಡಿಯಲ್ಲಿ ಆತನಿಗೆ ಮರಣದಂಡನೆ ವಿಧಿಸಬಹುದಾಗಿದೆ. ಅಥವಾ 25 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಆದಾಗ್ಯೂ, ಶಿಕ್ಷೆ ಏನೆಂಬುದು ನಿರ್ಧರಿಸುವುದು ನ್ಯಾಯಾಲಯಕ್ಕೆ ಬಿಟ್ಟ ವಿಚಾರ. ನ್ಯಾಯಾಧೀಶರು ರಾಸಾಯನಿಕ ಬಳಸಿ ಪುರುಷತ್ವ ಹರಣಕ್ಕೆ ಆದೇಶಿಸಬಹುದು ಅಥವಾ ಪಿಪಿಸಿ ಅಡಿಯಲ್ಲಿ ಶಿಕ್ಷೆ ನೀಡಿ ಆದೇಶಿಸಬಹುದು ಎಂದೂ ಅವರು ಹೇಳಿದ್ದಾರೆ.


 ಕೊರೊನಾ ಬುಲೆಟಿನ್ : ರಾಜ್ಯದಲ್ಲಿ ಇಂದು ಹೊಸದಾಗಿ 1526 ಮಂದಿಗೆ ಸೋಂಕು ಧೃಡ, 12 ಬಲಿ

ಕೊರೊನಾ ಬುಲೆಟಿನ್ : ರಾಜ್ಯದಲ್ಲಿ ಇಂದು ಹೊಸದಾಗಿ 1526 ಮಂದಿಗೆ ಸೋಂಕು ಧೃಡ, 12 ಬಲಿ


 ಕೊರೊನಾ ಬುಲೆಟಿನ್ : ರಾಜ್ಯದಲ್ಲಿ ಇಂದು ಹೊಸದಾಗಿ 1526 ಮಂದಿಗೆ ಸೋಂಕು ಧೃಡ, 12 ಬಲಿ

ಡಿಜಿಟಲ್ ಡೆಸ್ಕ್ : ರಾಜ್ಯದಲ್ಲಿ ಇಂದು ಹೊಸದಾಗಿ 1526 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು, 12 ಮಂದಿ ಬಲಿಯಾಗಿದ್ದಾರೆ.

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣದಲ್ಲಿ ಕುಸಿತ ಕಂಡು ಬಂದಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 1526 ಮಂದಿಗೆ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದ್ದು,ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 8,81,086ಕ್ಕೆ ಏರಿಕೆಯಾದರೆ, ಸಾವಿನ ಸಂಖ್ಯೆ 11,736ಕ್ಕೆ ಏರಿಕೆ ಆಗಿದೆ. ರಾಜ್ಯದಲ್ಲಿ ಒಟ್ಟಾರೆ ಗುಣಮುಖಿತರ ಸಂಖ್ಯೆ 8,43,950ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 25,379ಕ್ಕೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 808 ಮಂದಿಗೆ ಸೋಂಕು ತಗುಲಿದ್ದು, 6 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

 ಐಎಫ್‌ಎಸ್ ಅಧಿಕಾರಿ ಅಕ್ರಮ ಸಂಪತ್ತು: ಬ್ಯಾಂಕ್ ನಲ್ಲಿ 9.4 ಕೋಟಿ, ವಿಮಾನ ಪ್ರಯಾಣಕ್ಕೆ 3 ಕೋಟಿ ವೆಚ್ಚ

ಐಎಫ್‌ಎಸ್ ಅಧಿಕಾರಿ ಅಕ್ರಮ ಸಂಪತ್ತು: ಬ್ಯಾಂಕ್ ನಲ್ಲಿ 9.4 ಕೋಟಿ, ವಿಮಾನ ಪ್ರಯಾಣಕ್ಕೆ 3 ಕೋಟಿ ವೆಚ್ಚ


 ಐಎಫ್‌ಎಸ್ ಅಧಿಕಾರಿ ಅಕ್ರಮ ಸಂಪತ್ತು: ಬ್ಯಾಂಕ್ ನಲ್ಲಿ 9.4 ಕೋಟಿ, ವಿಮಾನ ಪ್ರಯಾಣಕ್ಕೆ 3 ಕೋಟಿ ವೆಚ್ಚ


ಭುವನೇಶ್ವರ್: ವಿಜಿಲೆನ್ಸ್ ಇತಿಹಾಸದಲ್ಲೇ ದೊಡ್ಡ ಮೊತ್ತದ ಅಕ್ರಮ ಸಂಪತ್ತನ್ನು ಪತ್ತೆ ಹಚ್ಚಿದ್ದು 1987ರ ಬ್ಯಾಚಿನ ಐಎಫ್‌ಎಸ್ ಅಧಿಕಾರಿಯೊಬ್ಬರನ್ನು ಬೇಟೆಯಾಡಿದೆ.

ಹಿರಿಯ ಐಎಫ್‌ಎಸ್ ಅಧಿಕಾರಿ ಅಭಯ್ ಕಾಂತ್ ಪಾಠಕ್ ವಿರುದ್ಧ ರಾಜ್ಯ ವಿಜಿಲೆನ್ಸ್ ತನ್ನ ಅತಿದೊಡ್ಡ ಕಾರ್ಯಾಚರಣೆಯನ್ನು ನಡೆಸಿದೆ. ಅಭಯ್ ಕಾಂತ್ ಅವರು ತಮ್ಮ ಮಗ ಆಕಾಶ್ ಅವರ ಬ್ಯಾಂಕ್ ಖಾತೆಗಳಲ್ಲಿ 9.4 ಕೋಟಿ ರೂಪಾಯಿ ಇಟ್ಟಿದ್ದಾರೆ. ಅದರಲ್ಲೂ ಭುವನೇಶ್ವರದಲ್ಲಿನ ಎರಡು ಎಟಿಎಂಗಳ ಮೂಲಕ ಕನಿಷ್ಠ 8.4 ಕೋಟಿ ರೂ. ನಗದು ಜಮೆ ಮಾಡಿದ್ದರು. ಇದನ್ನು ವಿಜಿಲೆನ್ಸ್ ಪತ್ತೆ ಹಚ್ಚಿದ್ದು ವಂಚನೆ ಆರೋಪ ಎದುರಿಸುತ್ತಿರುವ ಆಕಾಶ್ ಅವರನ್ನು ಪುಣೆಯಿಂದ ಭುವನೇಶ್ವರಕ್ಕೆ ಕರೆತರಲಾಗಿದೆ.

ಆಕಾಶ್ ತಾನು ಟಾಟಾ ಮೋಟಾರ್ಸ್‌ನ ಸಾರಿಗೆ ವಿಭಾಗದ ಎಂಡಿ ಎಂದು ಸುಳ್ಳು ಹೇಳಿಕೊಂಡಿದ್ದು ಈ ಸಂಬಂಧ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿದೆ. ಭುವನೇಶ್ವರದಲ್ಲಿ ಐ ಟಿ ಇ ಆರ್ ನಿಂದ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಆಕಾಶ್ ಅವರು ಪುಣೆಯಲ್ಲಿ ಮಾಸಿಕ 5 ಲಕ್ಷ ಬಾಡಿಗೆಯ ಎರಡು ಬೆಲೆಬಾಳುವ ಫ್ಲ್ಯಾಟ್‌ಗಳು, ಕಚೇರಿ ಮತ್ತು ತೋಟದ ಮನೆಗಳನ್ನು ಹೊಂದಿದ್ದಾರೆ. ಇದೇ ವೇಳೆ ಅವರ ಬಳಿ ಹಲವಾರು ಐಷಾರಾಮಿ ಕಾರುಗಳ ಒಡೆಯರಾಗಿದ್ದಾರೆ.

ಅಧಿಕೃತ ಪ್ರಕಟಣೆಯ ಪ್ರಕಾರ, ಭುವನೇಶ್ವರ, ಪುಣೆ, ಪಾಟ್ನಾ, ಮುಂಬೈ, ಜಮ್ಶೆಡ್ಪುರ ಮತ್ತು ದೆಹಲಿಯಂತಹ ನಗರಗಳಿಗೆ ಚಾರ್ಟರ್ ವಿಮಾನಗಳನ್ನು ಬಳಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಕೆಲವು ಟ್ರಿಪ್‌ಗಳನ್ನು ಕೈಗೊಂಡಿದ್ದರು. ಆಕಾಶ್ ಜುಹು(ಮುಂಬೈನಲ್ಲಿ) ನಿಂದ ಪುಣೆಗೆ ಚಾರ್ಟರ್ ಫ್ಲೈಟ್ ಬಳಸಿದ್ದಾರೆ. ಇದಕ್ಕಾಗಿ 13 ಆಸನಗಳ ಚಾರ್ಟೆಡ್ ವಿಮಾವನ್ನು 25 ಲಕ್ಷ ರೂಪಾಯಿಗೆ ಬುಕ್ ಮಾಡಿದ್ದರು. ಒಟ್ಟಾರೆ ವಿಮಾನಯಾನಕ್ಕೆ ಬರೋಬ್ಬರಿ 3 ಕೋಟಿ ರುಪಾಯಿ ವೆಚ್ಚ ಮಾಡಿದ್ದಾರೆ.

ಅಭಯ್ ಮತ್ತು ಅವರ ಕುಟುಂಬ ಸದಸ್ಯರು ಮಲೇಷ್ಯಾ, ಹಾಂಗ್ ಕಾಂಗ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಅರಬ್ ಎಮಿರೇಟ್ಸ್, ಮಾಲ್ಡೀವ್ಸ್‌ಗೆ ವಿದೇಶ ಪ್ರವಾಸ ಕೈಗೊಂಡಿದ್ದು, ವಿವರಗಳನ್ನು ವಿಜಿಲೆನ್ಸ್ ಅಧಿಕಾರಿಗಳು ಪಡೆದುಕೊಂಡಿದ್ದಾರೆ. 1987 ರ ಬ್ಯಾಚ್ ಐಎಫ್‌ಎಸ್ ಅಧಿಕಾರಿಯ ಅಧಿಕೃತ ಸ್ಥಾನ ಮತ್ತು ಅವರ ಅಧಿಕಾರವಧಿಯಲ್ಲಿ ನಡೆಸಿದ ಚಟುವಟಿಕೆಗಳ ಬಗ್ಗೆ ವಿಜಿಲೆನ್ಸ್ ಶೀಘ್ರದಲ್ಲೇ ತನಿಖೆ ಪ್ರಾರಂಭಿಸುತ್ತದೆ.

ರಾಜ್ಯ ಅರಣ್ಯ ಇಲಾಖೆಯಲ್ಲಿ ಜೂನ್ 2018ರಿಂದ ಅವರು ಅರಣ್ಯೀಕರಣ ಮತ್ತು ಯೋಜನೆ ವಿಭಾಗದಲ್ಲಿ ಹೆಚ್ಚುವರಿ ಪಿಸಿಸಿಎಫ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.


ಸಾರಿಗೆ ಸಚಿವ ಸ್ಥಾನಕ್ಕೆ ʼಸುವೇಂದು ಅಧಿಕಾರಿʼ ದಿಢೀರ್ ರಾಜೀನಾಮೆ

ಸಾರಿಗೆ ಸಚಿವ ಸ್ಥಾನಕ್ಕೆ ʼಸುವೇಂದು ಅಧಿಕಾರಿʼ ದಿಢೀರ್ ರಾಜೀನಾಮೆ


ಸಾರಿಗೆ ಸಚಿವ ಸ್ಥಾನಕ್ಕೆ ʼಸುವೇಂದು ಅಧಿಕಾರಿʼ ದಿಢೀರ್ ರಾಜೀನಾಮೆ


ಡಿಜಿಟಲ್‌ ಡೆಸ್ಕ್:‌ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿ ಇರುವಾಗ್ಲೇ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ದೊಡ್ಡ ಆತಂಕವೊಂದು ಎದುರಾಗಿದೆ. ತೃಣಮೂಲ ಪಕ್ಷದ ಜತೆ ಮುನಿಸಿಕೊಂಡಿದ್ದ ಟಿಎಂಸಿ ಹಿರಿಯ ನಾಯಕ ಸುವೇಂದು ಅಧಿಕಾರಿ ತಮ್ಮ ಸಾರಿಗೆ ಖಾತೆ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ.


ಮಮತಾ ಬ್ಯಾನರ್ಜಿ ಹಾಗೂ ರಾಜ್ಯಪಾಲ ಜಗ್​ದೀಪ್​ ಧನ್​ಖಾರ್ ಅವರಿಗೆ ಫ್ಯಾಕ್ಸ್ ಮೂಲಕ ತಮ್ಮ ರಾಜೀನಾಮೆ ಪತ್ರವನ್ನ ಕಳುಹಿಸಿರುವ ಅಧಿಕಾರಿ, ಪತ್ರದಲ್ಲಿ ' ನಾನು ಸಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕೂಡಲೇ ನನ್ನ ರಾಜೀನಾಮೆಯನ್ನು ಸ್ವೀಕರಿಸಲು ನಿರ್ಧಾರ ತೆಗೆದುಕೊಳ್ಳಬೇಕು. ರಾಜ್ಯದ ಜನತೆಗೆ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿರುವುದಾಗಿ ಅಭಿನಂದನೆ ಸಲ್ಲಿಸುತ್ತೇನೆ. ನಾನು ಪ್ರಾಮಾಣಿಕವಾಗಿ, ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದೇನೆ' ಎಂದು ವಿವರಿಸಿದ್ದಾರೆ.

 

 'IMA' ಬಹುಕೋಟಿ ವಂಚನೆ ಪ್ರಕರಣ ; 'ರೋಷನ್ ಬೇಗ್' ಜಾಮೀನು ಅರ್ಜಿ ವಿಚಾರಣೆ ನ.30 ಕ್ಕೆ ಮುಂದೂಡಿಕೆ

'IMA' ಬಹುಕೋಟಿ ವಂಚನೆ ಪ್ರಕರಣ ; 'ರೋಷನ್ ಬೇಗ್' ಜಾಮೀನು ಅರ್ಜಿ ವಿಚಾರಣೆ ನ.30 ಕ್ಕೆ ಮುಂದೂಡಿಕೆ


'IMA' ಬಹುಕೋಟಿ ವಂಚನೆ ಪ್ರಕರಣ ; 'ರೋಷನ್ ಬೇಗ್' ಜಾಮೀನು ಅರ್ಜಿ ವಿಚಾರಣೆ ನ.30 ಕ್ಕೆ ಮುಂದೂಡಿಕೆ

ಬೆಂಗಳೂರು : ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ದ ಆರೋಪಿ ಮಾಜಿ ಸಚಿವ ರೋಷನ್ ಬೇಗ್ ಅವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಅರ್ಜಿ ವಿಚಾರಣೆಯನ್ನು ನ.30 ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.

ರೋಷನ್ ಬೇಗ್ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ನಗರದ ಜಯದೇವ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಅವರನ್ನು ಸಿಸಿಬಿ ಕಸ್ಟಡಿಗೆ ಪಡೆಯಲು ಸಾಧ್ಯವಾಗಿಲ್ಲ ಎಂದು ಸಿಬಿಐ ವಿಶೇಷ ಕೋರ್ಟ್ ಗೆ ಎಸ್ ಪಿಪಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆ ಕೋರ್ಟ್ ಅರ್ಜಿ ವಿಚಾರಣೆಯನ್ನು ನ.30 ಕ್ಕೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಮನ್ಸೂರ್ ಖಾನ್‌ನಿಂದ ಸುಮಾರು 200 ಕೋಟಿ ರೂ. ಗೂ ಹೆಚ್ಚು ಹಣವನ್ನು ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪವಿದೆ. ಜೊತೆಗೆ ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪವಿದೆ. ಪ್ರತಿಭಟನಾ ನಿರತ ರೈತರಿಗೆ ರಾಷ್ಟ್ರ ರಾಜಧಾನಿ ಪ್ರವೇಶಿಸಲು ಅವಕಾಶ

ಪ್ರತಿಭಟನಾ ನಿರತ ರೈತರಿಗೆ ರಾಷ್ಟ್ರ ರಾಜಧಾನಿ ಪ್ರವೇಶಿಸಲು ಅವಕಾಶ


 ಪ್ರತಿಭಟನಾ ನಿರತ ರೈತರಿಗೆ ರಾಷ್ಟ್ರ ರಾಜಧಾನಿ ಪ್ರವೇಶಿಸಲು ಅವಕಾಶ

ನವದೆಹಲಿ : 'ಪ್ರತಿಭಟನಾ ನಿರತ ರೈತರಿಗೆ ರಾಷ್ಟ್ರ ರಾಜಧಾನಿಪ್ರವೇಶಿಸಲು ಅವಕಾಶ ನೀಡಲಾಗುವುದು. ಬುರಾರಿ ಪ್ರದೇಶದ ನಿರಂಕಾರಿ ಸಮಗಮ್ ಮೈದಾನದಲ್ಲಿ ಅವರು ಪ್ರತಿಭಟನೆ ನಡೆಸಲು ಅನುಮತಿ ನೀಡಲಾಗುವುದು' ಎಂದು ದೆಹಲಿ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ - ಹರಿಯಾಣ ಹಾಗೂ ಸುತ್ತಮುತ್ತಲ ರಾಜ್ಯಗಳ ರೈತರು ಗುರುವಾರ ದೆಹಲಿ ಚಲೋ ಆಂದೋಲನ ಆರಂಭಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ದೆಹಲಿಯವರೆಗೆ ಪಾದಯಾತ್ರೆಯನ್ನು ಕೈಗೊಂಡಿದ್ದರು, ಆದರೆ ದೆಹಲಿಯತ್ತ ಆಗಮಿಸುತ್ತಿದ್ದ ರೈತರನ್ನು ದೆಹಲಿ ಪೊಲೀಸರು ತಡೆದಿದ್ದ ಘಟನೆ ನಡೆದಿತ್ತು.

 ನಿರೀಕ್ಷೆಗಿಂತ ವೇಗವಾಗಿ ಆರ್ಥಿಕ ಚೇತರಿಕೆ: ಶಕ್ತಿಕಾಂತ ದಾಸ್

ನಿರೀಕ್ಷೆಗಿಂತ ವೇಗವಾಗಿ ಆರ್ಥಿಕ ಚೇತರಿಕೆ: ಶಕ್ತಿಕಾಂತ ದಾಸ್


 ನಿರೀಕ್ಷೆಗಿಂತ ವೇಗವಾಗಿ ಆರ್ಥಿಕ ಚೇತರಿಕೆ: ಶಕ್ತಿಕಾಂತ ದಾಸ್

ಮುಂಬೈ: ದೇಶದ ಅರ್ಥ ವ್ಯವಸ್ಥೆಯು ನಿರೀಕ್ಷೆಗಿಂತಲೂ ಹೆಚ್ಚು ವೇಗವಾಗಿ ಚೇತರಿಕೆ ಕಂಡಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. ಆದರೆ, ಹಬ್ಬಗಳ ಸಂದರ್ಭದ ಖರೀದಿ ಭರಾಟೆ ಮುಗಿದ ನಂತರ ಮಾರುಕಟ್ಟೆಯಲ್ಲಿ ಬೇಡಿಕೆಯು ಎಷ್ಟು ಸ್ಥಿರವಾಗಿ ಇರುತ್ತದೆ ಎಂಬುದನ್ನು ಗಮನಿಸಬೇಕು ಎಂದು ಅವರು ಹೇಳಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಅರ್ಥ ವ್ಯವಸ್ಥೆಯು ಶೇಕಡ (-)23.9ರಷ್ಟು ಕುಸಿತ ಕಂಡಿದೆ. ಇಡೀ ಹಣಕಾಸು ವರ್ಷ ದಲ್ಲಿ ಜಿಡಿಪಿಯು ಶೇಕಡ (-)9.5ರಷ್ಟು ಕುಸಿತ ಕಾಣಲಿದೆ ಎಂದು ಆರ್‌ಬಿಐ ಅಂದಾಜಿಸಿದೆ. ಅರ್ಥ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂದಿದ್ದರೂ, ಕೊರೊನಾ ಸೋಂಕು ಯುರೋಪಿನ ಕೆಲವು ಕಡೆ ಗಳಲ್ಲಿ ಹಾಗೂ ಭಾರತದ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವುದು ಅರ್ಥ ವ್ಯವಸ್ಥೆಯ ಪಾಲಿಗೆ ಅಪಾಯಕಾರಿ ಎಂದು ಹೇಳಿದ್ದಾರೆ.

 ರಾಜೀವ್‌ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಪೆರೋಲ್‌ ವಿಸ್ತರಿಸಿದ ಸುಪ್ರೀಂ ಕೋರ್ಟ್

ರಾಜೀವ್‌ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಪೆರೋಲ್‌ ವಿಸ್ತರಿಸಿದ ಸುಪ್ರೀಂ ಕೋರ್ಟ್


 ರಾಜೀವ್‌ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ಪೆರೋಲ್‌ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಎ.ಜಿ. ಪೆರರಿವಲನ್‌ಗೆ ವೈದ್ಯಕೀಯ ತಪಾಸಣೆಗಾಗಿ ನೀಡಿದ್ದ ಪೆರೋಲ್‌ ಅನ್ನು ಸುಪ್ರೀಂಕೋರ್ಟ್‌ ಒಂದು ವಾರದ ಅವಧಿಗೆ ವಿಸ್ತರಿಸಿದೆ.

ಈ ಹಿಂದೆಯೂ ನವೆಂಬರ್‌ 23ರ ತನಕ ಪೆರೋಲ್‌ ವಿಸ್ತರಿಸಲಾಗಿತ್ತು. ಇದೀಗ ವೈದ್ಯಕೀಯ ಕಾರಣಗಳಿಂದ ಮತ್ತೆ ವಾರದ ಅವಧಿಗೆ ವಿಸ್ತರಿಸಲಾಗಿದೆ.

ವೈದ್ಯರ ಭೇಟಿ ಸಂದರ್ಭದಲ್ಲಿ ಪೆರರಿವಲನ್‌ಗೆ ಪೊಲೀಸ್ ಬೆಂಗಾವಲು ನೀಡುವಂತೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶಿಸಲಾಗಿತ್ತು ಎಂದು ನ್ಯಾಯಮೂರ್ತಿಗಳಾದ ಎಲ್‌.ನಾಗೇಶ್ವರ ರಾವ್‌ ಮತ್ತು ಎಸ್‌.ರವೀಂದ್ರ ಭಟ್ ಅವರಿದ್ದ ಪೀಠವು ಶುಕ್ರವಾರ ಹೇಳಿದೆ.

ಶಸ್ತ್ರಚಿಕಿತ್ಸೆಗಾಗಿ ಪೆರೋಲ್‌ ಅನ್ನು 90 ದಿನಗಳ ಕಾಲ ವಿಸ್ತರಿಸಬೇಕು ಎಂದು ಅರ್ಜಿ ಸಲ್ಲಿಸಲಾಗಿತ್ತು. ಆದರೆ ಅರ್ಜಿದಾರ ಮತ್ತು ತಮಿಳುನಾಡು ಸರ್ಕಾರ ಪರ ವಕೀಲರ ವಾದವನ್ನು ಗಮನದಲ್ಲಿಟ್ಟುಕೊಂಡು, ಪೆರೋಲ್‌ ಅನ್ನು ಕೇವಲ ಒಂದು ವಾರ ವಿಸ್ತರಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

 ಪಾಕಿಸ್ತಾನದಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ: ಶೆಲ್ಲಿಂಗ್ ನಲ್ಲಿ ಭಾರತದ ಇಬ್ಬರು ಸೈನಿಕರು ಹುತಾತ್ಮ

ಪಾಕಿಸ್ತಾನದಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ: ಶೆಲ್ಲಿಂಗ್ ನಲ್ಲಿ ಭಾರತದ ಇಬ್ಬರು ಸೈನಿಕರು ಹುತಾತ್ಮ


 ಪಾಕಿಸ್ತಾನದಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ: ಶೆಲ್ಲಿಂಗ್ ನಲ್ಲಿ ಭಾರತದ ಇಬ್ಬರು ಸೈನಿಕರು ಹುತಾತ್ಮ

ಶ್ರೀನಗರ: ಪದೇ ಪದೇ ಕಾಲು ಕರೆದು ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನ, ಭಾರತೀಯ ಪೋಸ್ಟ್ ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ತೀವ್ರ ಶೆಲ್ಲಿಂಗ್ ನಲ್ಲಿ ಭಾರತ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಎಲ್ ಒಸಿ (ಗಡಿ ನಿಯಂತ್ರಣ ರೇಖೆ)ಯಲ್ಲಿನ ಸುಂದರ್ ಬನ್ ಸೆಕ್ಟರ್ ನಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ ಸೇನೆಯ ತೀವ್ರ ಶೆಲ್ಲಿಂಗ್ ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ. ಹುತಾತ್ಮ ಯೋಧರನ್ನು ನಾಯಕ್ ಪ್ರೇಮ್ ಬಹದ್ದೂರ್ ಖತ್ರಿ ಮತ್ತು ರೈಫಲ್ಮನ್ ಸುಖ್ಬೀರ್ ಸಿಂಗ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ಸೈನಿಕರನ್ನು ಸೇನಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಇನ್ನು ಗುರುವಾರ ಕೂಡ ಸುಬೇದಾರ್ ಸ್ವತಂತ್ರ ಸಿಂಗ್ ಎಂಬ ಯೋಧರು ಪೂಂಚ್ ಜಿಲ್ಲೆಯ ಕಿರ್ನಿ ಮತ್ತು ಕಸ್ಬಾ ಸೆಕ್ಟರ್ ನಲ್ಲಿ ಪಾಕಿಸ್ತಾನದ ಶೆಲ್ಲಿಂಗ್ ನಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

Thursday, 26 November 2020

 ಬೆಳಗ್ಗೆ ಬಂದ ಅಮಿತ್​ ಷಾ ಫೋನ್​ ಕರೆಗೆ ಸಿಎಂ ನಿರ್ಧಾರವೇ ಬದಲಾಯ್ತು!

ಬೆಳಗ್ಗೆ ಬಂದ ಅಮಿತ್​ ಷಾ ಫೋನ್​ ಕರೆಗೆ ಸಿಎಂ ನಿರ್ಧಾರವೇ ಬದಲಾಯ್ತು!


 ಬೆಳಗ್ಗೆ ಬಂದ ಅಮಿತ್​ ಷಾ ಫೋನ್​ ಕರೆಗೆ ಸಿಎಂ ನಿರ್ಧಾರವೇ ಬದಲಾಯ್ತು!

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಸಚಿವ ಸಂಪುಟ ಸಭೆ ನಡೆದಿದ್ದು, ಇದಕ್ಕೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಮಹತ್ವದ ವಿಚಾರ ಬಗ್ಗೆ ಮಾಹಿತಿ ನೀಡಿದರು.

ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ಬಗ್ಗೆ ಇಂದು ಸಿಎಂ ತೀರ್ಮಾನ ಮಾಡಬೇಕಿತ್ತು. ಆದರೆ ಅವರು ಒಬಿಸಿಗೆ ಸೇರಿಸುವ ಶಿಫಾರಸಿನಿಂದ ಸದ್ಯಕ್ಕೆ ಹಿಂದೆ ಸರಿದಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ಅವರೇ ಮಾತನಾಡಿದ್ದು, ನಾನು ದೆಹಲಿಗೆ ಹೋಗಿ ಬಂದ ನಂತರ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಮಿತ್ ಷಾ ಜತೆ ಈಗಷ್ಟೇ ಮಾತನಾಡಿದ್ದೇನೆ. ಇನ್ನೆರಡು ದಿನದಲ್ಲಿ ಪಟ್ಟಿ ಬರಲಿದೆ ಎಂದರು.

ವೀರಶೈವ ಲಿಂಗಾಯತ ವಿಚಾರ ಕ್ಯಾಬಿನೆಟ್ ಅಜೆಂಡಾ ನೋಡಿ ಹೈಕಮಾಂಡ್ ಶಾಕ್ ಆಗಿದೆ. ಹಾಗಾಗಿ ಶುಕ್ರವಾರ ಬೆಳಗ್ಗೆಯೇ ಸಿಎಂ ಯಡಿಯೂರಪ್ಪಗೆ ಕರೆ ಮಾಡಿ ಮಾತುಕತೆ ನಡೆಸಿದ ಅಮಿತ್ ಷಾ, ಸದ್ಯ ಯಾವುದೇ ಸಮುದಾಯದ ನಿರ್ಧಾರ ಬೇಡ. ಎರಡ್ಮೂರು ದಿನದಲ್ಲಿ ಸಂಪುಟ ವಿಚಾರದಲ್ಲಿ ಗ್ರೀನ್ ಸಿಗ್ನಲ್ ಕೊಡ್ತೀವಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಿಗಮ ಮಂಡಳಿಗೆ ಸರಣಿ ನೇಮಕ ಮಾಡಿದ್ದ ಬಿಎಸ್​ವೈ ಶುಕ್ರವಾರ ತುರ್ತು ಸಂಪುಟ ಸಭೆಯ ಜತೆಗೆ ರಾಜ್ಯದ ಸಂಸದರ ಸಭೆಯನ್ನೂ ಕರೆದಿದ್ದರು. ಇಂದೇ ಕೆಲ ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದೂ ಹೇಳಲಾಗಿತ್ತು. ಇದೀಗ ಕೇಂದ್ರದ ಜತೆ ಮಾತನಾಡಿ ಸಾಧಕ-ಬಾಧಕಗಳ ಬಗ್ಗೆ ಸಮಾಲೋಚಿಸಲು ಸಿಎಂ ನಿರ್ಧರಿಸಿದ್ದಾರೆ.

 ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ ಸಿಎಂ ಬಿಎಸ್ ವೈ

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ ಸಿಎಂ ಬಿಎಸ್ ವೈ


 ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಸಿಹಿಸುದ್ದಿ ನೀಡಿದ ಸಿಎಂ ಬಿಎಸ್ ವೈ

ಬೆಂಗಳೂರು : ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರ್ಜರಿ ಸಿಹಿಸುದ್ದಿ ನೀಡಿದ್ದು, 2-3 ದಿನಗಳಲೇ ಸಚಿವ ಸಂಪುಟ ವಿಸ್ತರಣೆ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವ ಸಂಪುಟ ಸಂಬಂಧ ಈಗಷ್ಟೇ ಕೇಂದ್ರ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿದ್ದೇನೆ. ಈ ಸಂಬಂಧ ದೆಹಲಿಗೆ ಹೋಗಿ 2-3 ದಿನಗಳಲ್ಲೇ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

 ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ : ಐವರು ಕೊರೊನಾ ಸೋಂಕಿತರು ಸಾವು

ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ : ಐವರು ಕೊರೊನಾ ಸೋಂಕಿತರು ಸಾವು


ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ : ಐವರು ಕೊರೊನಾ ಸೋಂಕಿತರು ಸಾವು

ರಾಜ್ ಕೋಟ್ : ಗುಜರಾತ್ ನ ರಾಜ್ ಕೋಟ್ ನ ಕೋವಿಡ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಐವರು ಕೊರೊನಾ ಸೋಂಕಿತರು ಮೃತಪಟ್ಟಿರುವ ಘಟನೆ ನಡೆದಿದೆ.

ಗುಜರಾತ್ ರಾಜ್ ಕೋಟ್ ನಗರದ ಉದಯ ಶಿವಾನಂದ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಐವರು ಸಾವನ್ನಪ್ಪಿದ್ದಾರೆ.

ಕೋವಿಡ್ ಆಸ್ಪತ್ರೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಸೋಂಕಿತರು ಹೊರಬರಲಾಗದೇ ಬೆಂಕಿಯ ಕೆನ್ನಾಲಗೆಗೆ ಬಲಿಯಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಅಗ್ನಿ ಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಚಾರಣೆ ನಡೆಸುತ್ತಿದ್ದಾರೆ.

ಗುಜರಾತ್‌ನ ರಾಜ್‌ಕೋಟ್ ನಗರದಲ್ಲಿನ ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪರಿಣಾಮ ಶುಕ್ರವಾರ ಮುಂಜಾನೆ ಆರು ಮಂದಿ ಸಾವನ್ನಪ್ಪಿದ್ದಾರೆ. ರಾಜ್‌ಕೋಟ್‌ನ ಶಿವಾನಂದ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಆರಂಭದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಶಿವಾನಂದ್ ಆಸ್ಪತ್ರೆ ಕರೋನವೈರಸ್ ಗೊತ್ತುಪಡಿಸಿದ ವೈದ್ಯಕೀಯ ಸೌಲಭ್ಯವಾಗಿರುವುದರಿಂದ, ಘಟನೆಯ ಸಮಯದಲ್ಲಿ ಐಸಿಯು ಒಳಗೆ 11 ರೋಗಿಗಳು ಇದ್ದರು. ಐಸಿಯುನಿಂದ ಬೆಂಕಿ ಪ್ರಾರಂಭವಾಯಿತು ಎಂದು ಹೇಳುತ್ತಿದ್ದರೂ, ಬೆಂಕಿಯ ಕಾರಣವನ್ನು ಇನ್ನೂ ಕಂಡುಹಿಡಿಯಬೇಕಾಗಿಲ್ಲ.

ರಾಜ್‌ಕೋಟ್ ಅಗ್ನಿಶಾಮಕ ಇಲಾಖೆಯು ಬೆಂಕಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಎಲ್ಲಾ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ರಾಜ್‌ಕೋಟ್‌ನ ಶಿವಾನಂದ್ ಆಸ್ಪತ್ರೆಯಲ್ಲಿ ಶುಕ್ರವಾರ ಸಂಭವಿಸಿದ ಬೆಂಕಿಯಲ್ಲಿ ಹಲವಾರು ರೋಗಿಗಳು ತೀವ್ರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.


 ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ : ವಿಶೇಷ ಎಕ್ಸ್‌ ಪ್ರೆಸ್ ರೈಲು ಸೇವೆ ಅವಧಿ ವಿಸ್ತರಣೆ

ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ : ವಿಶೇಷ ಎಕ್ಸ್‌ ಪ್ರೆಸ್ ರೈಲು ಸೇವೆ ಅವಧಿ ವಿಸ್ತರಣೆ


ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್ : ವಿಶೇಷ ಎಕ್ಸ್‌ ಪ್ರೆಸ್ ರೈಲು ಸೇವೆ ಅವಧಿ ವಿಸ್ತರಣೆ


ಮೈಸೂರು: ನೈಋತ್ಯ ರೈಲ್ವೆ ಇಲಾಖೆ ಮೈಸೂರು ಭಾಗದ ರೈಲ್ವೇ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ಮೈಸೂರಿನಿಂದ ವಿವಿಧ ಸ್ಥಳಗಳಿಗೆ ಆರಂಭಿಸಿದ್ದ ಹಬ್ಬದ ವಿಶೇಷ ಎಕ್ಸ್‌ ಪ್ರೆಸ್ ರೈಲು ಸೇವೆ ಅವಧಿಯನ್ನ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಅದ್ರಂತೆ, ಕೆಲವು ರೈಲುಗಳು ಡಿಸೆಂಬರ್ ತನಕ, ಮತ್ತೆ ಕೆಲವು ರೈಲುಗಳು 2021ರ ಜನವರಿ ತನಕ ಸಂಚಾರ ನಡೆಸಲಿವೆ


ಈ ಪ್ರಕಟಣೆಯನ್ನ ಬಿಡುಗಡೆ ಮಾಡಿರುವ ಇಲಾಖೆ, ಮೈಸೂರು-ವಾರಣಾಸಿ, ಮೈಸೂರು-ಅಜ್ಮೇರ್ ಸೇರಿದಂತೆ ವಿವಿಧ ರೈಲುಗಳ ಸೇವೆ ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರು ಇದರ ಉಪಯೋಗ ಪಡೆಬೋದು ಎಂದಿದೆ.


ಈ ಮೂಲಕ ಮೈಸೂರಿನಿಂದ ಸಂಚರಿಸುವ ಒಟ್ಟು 8 ರೈಲುಗಳ ಸಂಚಾರದ ಅವಧಿ ವಿಸ್ತರಣೆ ಮಾಡಲಾಗಿದ್ದು, ಇವುಗಳಲ್ಲಿ ಪ್ರತಿದಿನ ಸಂಚರಿಸುವ, ಜೊತೆಗೆ ವಾರಕ್ಕೆರಡು ಬಾರಿ ಸಂಚರಿಸುವ ರೈಲುಗಳೂ ಸೇರಿವೆ.

 ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ : ಈ ವರ್ಷ ವಿದ್ಯಾರ್ಥಿಗಳಿಗೆ ಸಿಗೋಲ್ಲ ಸೈಕಲ್!

ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ : ಈ ವರ್ಷ ವಿದ್ಯಾರ್ಥಿಗಳಿಗೆ ಸಿಗೋಲ್ಲ ಸೈಕಲ್!


ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ : ಈ ವರ್ಷ ವಿದ್ಯಾರ್ಥಿಗಳಿಗೆ ಸಿಗೋಲ್ಲ ಸೈಕಲ್!


ಬೆಂಗಳೂರು : ರಾಜ್ಯದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದ್ದು, ಆರ್ಥಿಕ ಬಿಕ್ಕಟ್ಟಿನಿಂದಾಗಿ ರಾಜ್ಯ ಸರ್ಕಾರ ಈ ವರ್ಷ ಸೈಕಲ್ ಖರೀದಿಯನ್ನು ಕೈ ಬಿಡಲು ನಿರ್ಧರಿಸಿದೆ ಎನ್ನಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉನ್ನತ ಮಟ್ಟದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದ್ದು, ಈ ವರ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಪಠ್ಯ ಪುಸ್ತಕ ನೀಡಿ, ಮುಂದಿನ ವರ್ಷ ಸೈಕಲ್ ನೀಡಲು ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಸಮವಸ್ತ್ರಕ್ಕಾಗಿ ಟೆಂಡರ್ ಕರೆದು, ರಾಜ್ಯ ಸರ್ಕಾರ ಸ್ವಾಮ್ಯದ ಕಂಪನಿ ಕರ್ನಾಟಕ ಜವಳಿ ಅಭಿವೃದ್ಧಿ ನಿಗಮ ಮತ್ತು ಇತರೆ ಖಾಸಗಿ ಸಂಸ್ಥೆಗಳಿಗೆ ಆದೇಶವನ್ನು ನೀಡಿದೆ. ಆದರೆ ಸೈಕಲ್ ಟೆಂಡರ್ ಪ್ರಕ್ರಿಯೆ ಆರಂಭಿಸಿಲ್ಲ ಎನ್ನಲಾಗಿದೆ.`

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 86 ಮಂದಿಗೆ ಕೊರೋನಾ ಪಾಸಿಟಿವ್

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 86 ಮಂದಿಗೆ ಕೊರೋನಾ ಪಾಸಿಟಿವ್


ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 86 ಮಂದಿಗೆ ಕೊರೋನಾ ಪಾಸಿಟಿವ್


ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 86 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, 84 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.


67 ಮಂದಿ ಗುಣಮುಖರಾಗಿದ್ದಾರೆ. 1033 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಇದುವರೆಗೆ 21459 ಮಂದಿಗೆ ಸೋಂಕು ತಗಲಿದ್ದು, 20198 ಮಂದಿ ಗುಣಮುಖರಾಗಿದ್ದಾರೆ. 228 ಮಂದಿ ಮೃತಪಟ್ಟಿದ್ದಾರೆ. 7223 ಮಂದಿ ನಿಗಾದಲ್ಲಿದ್ದಾರೆ.

 ಕಾಸರಗೋಡು : ಬೈಕ್ - ಆಟೋರಿಕ್ಷಾ ನಡುವೆ ಢಿಕ್ಕಿ ; ಓರ್ವ ಮೃತ್ಯು

ಕಾಸರಗೋಡು : ಬೈಕ್ - ಆಟೋರಿಕ್ಷಾ ನಡುವೆ ಢಿಕ್ಕಿ ; ಓರ್ವ ಮೃತ್ಯು


 ಕಾಸರಗೋಡು : ಬೈಕ್ - ಆಟೋರಿಕ್ಷಾ ನಡುವೆ ಢಿಕ್ಕಿ ; ಓರ್ವ ಮೃತ್ಯು


ಕಾಸರಗೋಡು: ಬೈಕ್ ಹಾಗೂ ಆಟೋ ರಿಕ್ಷಾ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ಮೃತ ಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡು ಘಟನೆ ರಾಷ್ಟ್ರೀಯ ಹೆದ್ದಾರಿಯ ಉಪ್ಪಳ ಹನಫಿ ಬಝಾರ್ ನಲ್ಲಿ ಗುರುವಾರ ಸಂಜೆಯ ಸುಮಾರಿಗೆ ನಡೆದಿದೆ.


ಮೃತರನ್ನು ಚೆರ್ಕಳ ಮಾಸ್ತಿಕುಂಡು, ಪೊವ್ವಲ್ ನಿವಾಸಿ ಮಸೂದ್ (25) ಎಂದು ಗುರುತಿಸಲಾಗಿದೆ. ಜೊತೆಗಿದ್ದ ಸಂದೀಪ್ ಉನ್ನಿ (24) ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.


ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.


 ಗೂಗಲ್ ಪೇಗೂ ಪೇ ಮಾಡ್ಬೇಕು; ಹಣ ಕಳಿಸೋದಕ್ಕೂ ಸದ್ಯದಲ್ಲೇ ಚಾರ್ಜ್​

ಗೂಗಲ್ ಪೇಗೂ ಪೇ ಮಾಡ್ಬೇಕು; ಹಣ ಕಳಿಸೋದಕ್ಕೂ ಸದ್ಯದಲ್ಲೇ ಚಾರ್ಜ್​


ಗೂಗಲ್ ಪೇಗೂ ಪೇ ಮಾಡ್ಬೇಕು; ಹಣ ಕಳಿಸೋದಕ್ಕೂ ಸದ್ಯದಲ್ಲೇ ಚಾರ್ಜ್​

ನವದೆಹಲಿ: ಒಂದರಿಂದ ಸಾವಿರಾರು ರೂಪಾಯಿಗಳವರೆಗೆ ಕುಳಿತಲ್ಲಿಂದಲ್ಲೇ ಕ್ಷಣಮಾತ್ರದಲ್ಲಿ ಖರ್ಚಿಲ್ಲದೆ ಕಳುಹಿಸಲು ಅದೆಷ್ಟೋ ಮಂದಿ ಗೂಗಲ್ ಪೇ ಬಳಸುತ್ತಿದ್ದಾರೆ. ಆದರೆ ಹೀಗೆ ಗೂಗಲ್ ಪೇ ಮೂಲಕ ಉಚಿತವಾಗಿ ಹಣ ಕಳುಹಿಸುವ ವ್ಯವಸ್ಥೆ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ!

ಹೌದು.. ಸದ್ಯದಲ್ಲೇ ಗೂಗಲ್​ ಪೇ ಮೂಲಕ ಹಣ ಕಳುಹಿಸುವುದಕ್ಕೂ ಶುಲ್ಕ ಪಡೆಯಲಾಗುತ್ತದೆ. ಮುಂದೆ ಹಣ ಕಳುಹಿಸುವುದಕ್ಕೆ ಎಷ್ಟು ಶುಲ್ಕ ವಿಧಿಸಲಾಗುತ್ತದೆ ಎಂಬ ಬಗ್ಗೆ ಗೂಗಲ್ ಪೇ ಸ್ಪಷ್ಟವಾಗಿ ಹೇಳದಿದ್ದರೂ, ಗೂಗಲ್​ ಪೇ ವ್ಯವಸ್ಥೆ ಮುಂದೆ ಉಚಿತವಾಗಿ ಲಭಿಸುವುದಿಲ್ಲ ಎಂಬ ಮಾಹಿತಿಯನ್ನು ಅದು ಬಿಟ್ಟುಕೊಟ್ಟಿದೆ. ಅಮೆರಿಕದ ಬಳಕೆದಾರರಿಗೆ ಸಾಕಷ್ಟು ಹೊಸ ಫೀಚರ್ಸ್​ ಒದಗಿಸಿರುವ ಗೂಗಲ್ ಪೇ ಅಲ್ಲಿನ ತನ್ನ ಲೋಗೋ ಕೂಡ ಬದಲಿಸಿದೆ.

2021ರ ಜನವರಿಯಿಂದ ಗೂಗಲ್​ ಪೇ ಸದ್ಯದ ಹಣ ವರ್ಗಾವಣೆ ವ್ಯವಸ್ಥೆ ಸ್ಥಗಿತಗೊಳಿಸಲಿದ್ದು, ಬದಲಿಗೆ ಇನ್​ಸ್ಟಂಟ್ ಮನಿ ಟ್ರಾನ್ಸ್​​ಫರ್ ಸಿಸ್ಟಮ್​ ಅಳವಡಿಸಲಿದೆ. ಆ ಬಳಿಕ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತದೆ ಎನ್ನಲಾಗಿದೆ.

 ಡಿ.31ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ: ಡಿಜಿಸಿಎ ಆದೇಶ

ಡಿ.31ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ: ಡಿಜಿಸಿಎ ಆದೇಶ


 ಡಿ.31ರವರೆಗೆ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ: ಡಿಜಿಸಿಎ ಆದೇಶ

ಮುಂಬೈ: ನಾಗರಿಕ ವಿಮಾನಯಾನ ನಿಯಂತ್ರಣಾ ಪ್ರಾಧಿಕಾರ (ಡಿಜಿಸಿಎ) ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧವನ್ನು ಡಿಸೆಂಬರ್ 31ರವರೆಗೂ ವಿಸ್ತರಿಸಿದೆ.

ಈ ನಿರ್ಬಂಧವು ಡಿಜಿಸಿಎ ಅನುಮತಿ ನೀಡಿರುವ ವಿಮಾನಗಳಿಗೆ ಮತ್ತು ಅಂತಾರಾಷ್ಟ್ರೀಯ ಸರಕು ಸಾಗಣೆ ವಿಮಾನ ಸಂಚಾರಕ್ಕೆ ಅನ್ವಯವಾಗುವುದಿಲ್ಲ ಎಂದು ಅಧಿಕೃತ ಸುತ್ತೋಲೆ ತಿಳಿಸಿದೆ.

ಕೊರೊನಾ ವೈಸರ್ ಹಿನ್ನೆಲೆಯಲ್ಲಿ ಮಾರ್ಚ್ 23ರಿಂದ ಜಾರಿಯಲ್ಲಿರುವ ಅಂತಾರಾಷ್ಟ್ರೀಯ ವಿಮಾನಯಾನ ನಿರ್ಬಂಧ ನವೆಂಬರ್ 30ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಮೇಲೆ ಹೇರಿರುವ ನಿರ್ಬಂಧವನ್ನು ವರ್ಷದ ಅಂತ್ಯದವರೆಗೂ ವಿಸ್ತರಿಸಿ ಡಿಜಿಸಿಎ ಆದೇಶ ಹೊರಡಿಸಿದೆ.

ಕೆಲ ದೇಶಗಳ ನಡುವೆ ಮಾಡಿಕೊಂಡಿರುವ ಒಪ್ಪಂದದಂತೆ ನಿರ್ದಿಷ್ಟ ಸಮಯದಲ್ಲಿ ವಿಮಾನಗಳ ಹಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ.


ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್‌.ಸಿ ಕೊಹ್ಲಿ ನಿಧನ..!

ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್‌.ಸಿ ಕೊಹ್ಲಿ ನಿಧನ..!


ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಫ್‌.ಸಿ ಕೊಹ್ಲಿ ನಿಧನ..!

ನವದೆಹಲಿ: ಭಾರತೀಯ ಕಂಪ್ಯೂಟರ್ ಉದ್ಯಮದ ಪಿತಾಮಹ ಎಂದೇ ಗುರುತಿಸಿಕೊಂಡಿರುವ 96 ವರ್ಷದ ಫಕೀರ್ ಚಂದ್ ಕೊಹ್ಲಿ ನಿಧನರಾಗಿದ್ದಾರೆ.

ಎಫ್‌ಸಿ ಕೊಹ್ಲಿಯವ್ರು ಭಾರತದ ಅತೀ ದೊಡ್ಡ ಸಾಫ್ಟ್‌ವೇರ್ ಕನ್ಸಲ್‌ಟೆನ್ಸಿಯಾದ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸ್(TCS) ಸಂಸ್ಥಾಪಕ ಹಾಗೂ ಮೊದಲ ಸಿಇಒ ಆಗಿದ್ದರು.

ಮಾರ್ಚ್ 19, 1924ರಂದು ಪಾಕಿಸ್ತಾನದ ಪೇಶಾವರದಲ್ಲಿ ಹುಟ್ಟಿದ ಎಫ್‌.ಸಿ ಕೊಹ್ಲಿ, ಭಾರತದಲ್ಲಿ ತಮ್ಮ ವೃತ್ತಿ ಆರಂಭಿಸಿದರು. 1951ರಲ್ಲಿ ಟಾಟಾ ಎಲೆಕ್ಟ್ರಿಕ್ ಕಂಪನಿ ಸೇರಿಕೊಂಡರು. ದೆಹಲಿ ಚಲೋ: ರೈತರು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ತಡೆಯಲು ಗಡಿ ಬಂದ್ ಮಾಡಿದ ಪೊಲೀಸರು

ದೆಹಲಿ ಚಲೋ: ರೈತರು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ತಡೆಯಲು ಗಡಿ ಬಂದ್ ಮಾಡಿದ ಪೊಲೀಸರು


 ದೆಹಲಿ ಚಲೋ: ರೈತರು ರಾಷ್ಟ್ರ ರಾಜಧಾನಿ ಪ್ರವೇಶಿಸದಂತೆ ತಡೆಯಲು ಗಡಿ ಬಂದ್ ಮಾಡಿದ ಪೊಲೀಸರು

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಿಧ ಕೃಷಿ ಮಸೂದೆ ವಿರೋಧಿಸಿ ಪಂಜಾಬ್ - ಹರಿಯಾಣ ಹಾಗೂ ಸುತ್ತಮುತ್ತಲ ರಾಜ್ಯಗಳ ರೈತರು ಗುರುವಾರ ದೆಹಲಿ ಚಲೋ ಆಂದೋಲನ ಆರಂಭಿಸಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ರೈತರು ದೆಹಲಿ-ಹರಿಯಾಣ ಹೆದ್ದಾರಿಯಲ್ಲಿ ಜಮಾಯಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ದೆಹಲಿಯವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ದೆಹಲಿ ಸಮೀಪ ಇರುವ ರಾಜ್ಯಗಳಾದ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ರಾಜಸ್ತಾನದಿಂದ ರೈತರು ಟ್ರ್ಯಾಕ್ಟರ್ ಮೂಲಕ ಆಗಮಿಸುತ್ತಿದ್ದಾರೆ.

ಇಂದಿನಿಂದ ದೆಹಲಿಯಲ್ಲಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ರೈತರು ತೀರ್ಮಾನಿಸಿದ್ದಾರೆ. 30ಕ್ಕೂ ಹೆಚ್ಚು ರೈತ ಪರ ಸಂಘಟನೆಗಳು ಅಭಿಯಾನದಲ್ಲಿ ಭಾಗಿಯಾಗಿವೆ. ಮುನ್ನೆಚ್ಚರಿಕಾ ಕ್ರಮಲವಾಗಿ ದೆಹಲಿ-ಹರಿಯಾಣ ಹೆದ್ದಾರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸದಂತೆ ತಡೆಯಲು ಗಡಿಗಳನ್ನು ಬಂದ್ ಮಾಡಲಾಗಿದೆ. 

ದೆಹಲಿಯ ನೆರೆಯ ನಗರಗಳಾದ ಫರಿದಾಬಾದ್, ಘಾಜಿಯಾಬಾದ್ ಮತ್ತು ನೊಯಿಡಾದಲ್ಲಿಯೇ ರೈತರನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.

ನವೆಂಬರ್ 26 ಮತ್ತು 27 ರಂದು ದೆಹಲಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. 

ಇನ್ನು ರೈತರ ಪ್ರತಿಭಟನೆಗೆ ಬೆಂಬಲ ಘೋಷಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು, "ಕೇಂದ್ರ ಸರ್ಕಾರದ ಎಲ್ಲಾ ಮೂರು ಮಸೂದೆಗಳು ರೈತರ ವಿರುದ್ಧವಾಗಿವೆ. ಮಸೂದೆಯನ್ನು ಹಿಂತೆಗೆದುಕೊಳ್ಳುವ ಬದಲು, ಶಾಂತಿಯುತವಾಗಿ ನಡೆಸುತ್ತಿರುವ ಪ್ರತಿಭಟನೆಯನ್ನು ಜಲ ಫಿರಂಗಿಗಳನ್ನು ಬಳಸಿ ಹತ್ತಿಕ್ಕಲಾಗುತ್ತಿದೆ. ಅವರ ವಿರುದ್ಧದ ದೌರ್ಜನ್ಯ ದೊಡ್ಡ ತಪ್ಪು. ಶಾಂತಿಯುತ ಪ್ರತಿಭಟನೆ ನಡೆಸುವುದು ಅವರ ಸಾಂವಿಧಾನಿಕ ಹಕ್ಕು" ಎಂದು ಹೇಳಿದ್ದಾರೆ.