ಅಸ್ಸಾದಾತ್' ಕೃತಿ ನಾಳೆ ಬಿಡುಗಡೆ
ಬೆಳ್ತಂಗಡಿ: ಪ್ರವಾದಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ರವರ ವಂಶಸ್ಥರಿಗೆ 'ಅಹ್ಲ್ ಬೈತ್' ಎಂಬ ಹೆಸರಲ್ಲಿ ಇಸ್ಲಾಮಿನಲ್ಲಿ ಪ್ರತ್ಯೇಕ ಸ್ಥಾನ, ಗೌರವ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬೆಳ್ತಂಗಡಿ ತಾಲೂಕಿನಲ್ಲಿ ಗಣನೀಯ ಸಂಖ್ಯೆಯಲ್ಲಿದ್ದು ವಿವಿಧೆಡೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯ ಮೂಲಕ ಸಕ್ರಿಯರಾಗಿ, ಜನಾದರಣೀಯರಾಗಿರುವ ಹಲವು ಸಾದಾತುಗಳ ಪರಿಚಯವನ್ನು ಹೊಂದಿರುವ 'ಅಸ್ಸಾದಾತ್' ಎಂಬ ಕೃತಿ ಯನ್ನು ಹೊರತರುವ ಪ್ರಯತ್ನ ವನ್ನು ಬೆಳ್ತಂಗಡಿ ತಾಲೂಕಿನ ಮುರ -ನಾವೂರು ಜಮಾತಿನ ಅನಿವಾಸಿ ಗಲ್ಫ್ ಸಂಘಟನೆಯಾದ 'ಬದ್ರುಲ್ ಹುದಾ ಗಲ್ಫ್ ಅಸೋಸಿಯೇಶನ್' ಮಾಡಿದೆ. ಈ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜಿಸಲಾಗಿದ್ದು ತಾಲೂಕಿನ 10 ಜಮಾತಿನಲ್ಲಿ ಇದೇ ಅಕ್ಟೋಬರ್ 23 ರಂದು ಶುಕ್ರವಾರ ಜುಮಾ ನಮಾಜಿನ ನಂತರ ಸ್ಥಳೀಯ ಸಾದಾತುಗಳು, ಉಲಮಾಗಳು ಹಾಗೂ ಜಮಾತಿನ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಏಕಕಾಲಕ್ಕೆ ಬಿಡುಗಡೆಗೊಳ್ಳಲಿದೆ. ಎಂದು ಸಂಘಟನೆಯ ಅಧ್ಯಕ್ಷ ಇಲ್ಯಾಸ್ ಮದನಿ ನಾವೂರು (ತಾಯಿಫ್, ಸೌದಿ ಅರೇಬಿಯಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃತಿ ಬಿಡುಗಡೆ ಗೊಳ್ಳಲಿರುವ ಸ್ಥಳಗಳು: ಮುರ, ಗುರುವಾಯನಕೆರೆ, ಕಾಜೂರು, ಕಿಲ್ಲೂರು, ಬೆಳ್ತಂಗಡಿ, ಬೆಳಾಲು, ಕುಪ್ಪೆಟ್ಟಿ, ಮನ್ಶರ್ ಗೇರುಕಟ್ಟೆ, ಜಮಲಾಬಾದ್, ಅಳಕೆ
0 التعليقات: