ತಾಜ್ ಮಹಲ್ ನಲ್ಲಿ ಕೇಸರಿ ಧ್ವಜ ಹಾರಿಸಿ, ಶಿವ ಸ್ತೋತ್ರ ಪಠಣೆ
ಆಗ್ರಾ(28-10-2020): ತಾಜ್ಮಹಲ್ನಲ್ಲಿ ದಸರಾ ದಿನದಂದು ಕೇಸರಿ ಧ್ವಜ ಹಾರಿಸಿ ಶಿವ ಸ್ತೋತ್ರವನ್ನು ಹಿಂದೂ ಜಾಗರಣ ವೇದಿಕೆಯ ಸದಸ್ಯರು ಪಠಿಸಿದ್ದಾರೆ.
ಹಿಂದೂ ಜಾಗರಣ ವೇದಿಕೆ ತಾಜ್ಮಹಲ್ ಪ್ರೇಮ ಸ್ಮಾರಕದಲ್ಲಿ ಕೇಸರಿ ಧ್ವಜವನ್ನು ಹಾರಿಸಿ ಟೀಕೆಗೆ ಗುರಿಯಾಗಿದ್ದಾರೆ. ಹಿಂದೂ ಜಾಗರಣ ವೇದಿಕೆ ಪದಾಧಿಕಾರಿ ಗೌರವ್ ಠಾಕೂರ್ ತಾಜ್ ಸಂಕೀರ್ಣದ ಒಳಗೆ ಶಿವ ಸ್ತೋತ್ರ ಪಠಿಸಿದ್ದಾರೆ. ಠಾಕೂರ್ ಸಂಕೀರ್ಣದಲ್ಲಿ ಕೂತು ಶಿವ ಸ್ತೋತ್ರ ಪಠಿಸುತ್ತಿರುವ ವೇಳೆ ಕಾರ್ಯಕರ್ತನೊಬ್ಬ ಕೇಸರಿ ಧ್ವಜವನ್ನು ಹಾರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗೌರವ್ ಠಾಕೂರ್ ತಾಜ್ ಮಹಲನ್ನು ಶಿವನ ದೇವಾಲಯ ಎಂದು ನಾವು ನಂಬಿದ್ದೇವೆ. ಶಿವನ ಮಂದಿರವನ್ನು ನೆಲಸಮ ಮಾಡಿದ ಮೊಘಲ್ ಚಕ್ರವರ್ತಿ ಶಹಜಹಾನ್ ಇದನ್ನ ಸ್ಮಾರಕ ಮಾಡಿದ್ದಾನೆ. ಹೀಗಾಗಿ ನಾವಿಲ್ಲಿ ಶಿವನ ಸ್ತೋತ್ರ ಪಠಿಸಿದ್ದೇವೆ ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದಾರೆ.
0 التعليقات: