Wednesday, 28 October 2020

ಮತ್ತೊಬ್ಬರ ಕಷ್ಟಗಳನ್ನು ತಿಳಿದು ಕಾರ್ಯಾಚರಿಸಬೇಕು; ಈದ್ ಮೀಲಾದ್ ಸಂದೇಶದಲ್ಲಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್


ಮತ್ತೊಬ್ಬರ ಕಷ್ಟಗಳನ್ನು ತಿಳಿದು ಕಾರ್ಯಾಚರಿಸಬೇಕು; ಈದ್ ಮೀಲಾದ್ ಸಂದೇಶದಲ್ಲಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್

ಕಲ್ಲಿಕೋಟೆ: ಪ್ರೀತಿ, ಸಹನೆ ಮತ್ತು ಐಕ್ಯತೆಯ ಪ್ರವಾದಿ ಸಂದೇಶಗಳನ್ನು ಎತ್ತಿ ಹಿಡಿದು ಈದ್ ಮಿಲಾದ್ ಕಾರ್ಯಕ್ರಮಗಳನ್ನು ಎಲ್ಲಾ ಸ್ಥಳಗಳಲ್ಲೂ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆಸಬೇಕೆಂದು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಮನುಷ್ಯರು ಪರಸ್ಪರ ಅರಿತುಕೊಂಡು ಸಹಾಯ ಮಾಡುವ ಅವಸ್ಥೆಯಾಗಿದೆ ಇದು. ಕೋವಿಡ್ ಹಲವರ ಜೀವನವನ್ನು ಸಂಕಷ್ಟದಲ್ಲಾಗಿಸಿದೆ. ನಮ್ಮ ಸುತ್ತಲೂ ಇರುವವರ ಕಷ್ಟಗಳನ್ನು ಅರಿತುಕೊಂಡು, ಸಾಧ್ಯವಾಗುವ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಾಗಬೇಕು.

ಮನುಷ್ಯರಿಗೂ ಇನ್ನುಳಿದ ಜೀವ ಜಾಲಗಳಿಗೂ ಸಹಾಯ ಮಾಡಲು ಮತ್ತು ಕಾರುಣ್ಯದ ಮನಸ್ಸಿನವರಾಗಲು ವಿಶ್ವ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಂ ಕಲಿಸಿಕೊಟ್ಟಿದ್ದಾರೆ. ಆನ್ಲೈನಿನ ಸಾಧ್ಯತೆಗಳನ್ನು ಸಾಧ್ಯವಾದಷ್ಟು    ಉಪಯೋಗಿಸಿಕೊಂಡು ಜನರು  ಜಮಾಯಿಸುವುದನ್ನು ಕಡಿಮೆಗೊಳಿಸಿ ಮೌಲಿದ್ ಕಾರ್ಯಕ್ರಮ, ಪ್ರವಾದಿ ಪ್ರೇಮ ಹಾಡು ಮತ್ತು ಪ್ರವಾದಿ ವರ್ಣನಾ ಕಾರ್ಯಕ್ರಮ ಮಾಡಬೇಕು  ಎಂದು ಅವರು ಹೇಳಿದರು.


SHARE THIS

Author:

0 التعليقات: