ನಿಯಮ ಉಲ್ಲಂಘನೆಯನ್ನು ಮಾನವ ಹಕ್ಕುಗಳ ಅಡಿಯಲ್ಲಿ ಕ್ಷಮಿಸಲು ಸಾಧ್ಯವಿಲ್ಲ: ವಿಶ್ವಸಂಸ್ಥೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯ
ಭಾರತದಲ್ಲಿ ಎನ್ ಜಿಒ ಗಳಿಗೆ ವಿಧಿಸಲಾಗುತ್ತಿರುವ ನಿರ್ಬಂಧಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಬಂಧನದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಮಾನವಹಕ್ಕುಗಳ ಕಮಿಷನರ್ ಮೈಕಲ್ ಬ್ಯಾಚೆಲೆಟ್ ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ನವದೆಹಲಿ: ಭಾರತದಲ್ಲಿ ಎನ್ ಜಿಒ ಗಳಿಗೆ ವಿಧಿಸಲಾಗುತ್ತಿರುವ ನಿರ್ಬಂಧಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಬಂಧನದ ಬಗ್ಗೆ ಆತಂಕ ವ್ಯಕ್ತಪಡಿಸಿರುವ ವಿಶ್ವಸಂಸ್ಥೆ ಮಾನವಹಕ್ಕುಗಳ ಕಮಿಷನರ್ ಮೈಕಲ್ ಬ್ಯಾಚೆಲೆಟ್ ಗೆ ಭಾರತ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ನಿಯಮ ಉಲ್ಲಂಘನೆಗಳನ್ನು ಮಾನವಹಕ್ಕುಗಳ ಅಡಿಯಲ್ಲಿ ಕ್ಷಮಿಸಲು ಆಗುವುದಿಲ್ಲ, ಈ ಕುರಿತು ಸರಿಯಾದ ಹೆಚ್ಚು ತಿಳುವಳಿಕೆಯ ದೃಷ್ಟಿಯನ್ನು ವಿಶ್ವಸಂಸ್ಥೆಯ ಭಾಗವಗಿರುವ ಸಂಸ್ಥೆಯಿಂದ ನಿರೀಕ್ಷಿಸುತ್ತೇವೆ ಎಂದು ಭಾರತ ತೀಕ್ಷ್ಣ ಉತ್ತರ ನೀಡಿದೆ.
ಭಾರತ ಪ್ರಜಾಪ್ರಭುತ್ವವನ್ನು ಹೊಂದಿರುವ ರಾಷ್ಟ್ರವಾಗಿದ್ದು, ಕಾನೂನಿನ ನಿಯಮಗಳು ಹಾಗೂ ಸ್ವಾಯತ್ತ ನ್ಯಾಯಾಂಗದ ಆಧಾರದಲ್ಲಿದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅನುರಾಗ್ ಶ್ರೀವಾಸ್ತವ ವಿಶ್ವಸಂಸ್ಥೆಗೆ ತಿಳಿಸಿದ್ದಾರೆ.
ಎಫ್ ಸಿಆರ್ ಎ ಕುರಿತಂತೆ ಮಾನವ ಹಕ್ಕುಗಳಿಗೆ ಇರುವ ವಿಶ್ವಸಂಸ್ಥೆ ವಿಭಾಗದ ಹೈ ಕಮಿಷನರ್ ಅವರಿಂದ ಕೆಲವು ಪ್ರತಿಕ್ರಿಯೆಗಳು ಬಂದಿವೆ. ಭಾರತ ಪ್ರಜಾಪ್ರಭುತ್ವವನ್ನು ಹೊಂದಿರುವ ರಾಷ್ಟ್ರವಾಗಿದ್ದು, ಕಾನೂನಿನ ನಿಯಮಗಳು ಹಾಗೂ ಸ್ವಾಯತ್ತ ನ್ಯಾಯಾಂಗದ ಆಧಾರದಲ್ಲಿದೆ, ಕಾನೂನುಗಳನ್ನು ರೂಪಿಸುವುದು ಸಾರ್ವಭೌಮ ಹಕ್ಕು, ಕಾನೂನುಗಳ ಉಲ್ಲಂಘನೆಯನ್ನು ಮಾನವಹಕ್ಕುಗಳ ಹೆಸರಿನಲ್ಲಿ ಕ್ಷಮಿಸಲು ಸಾಧ್ಯವಿಲ್ಲ ಎಂದು ಶ್ರೀವಾಸ್ತವ ಹೇಳಿದ್ದಾರೆ.
0 التعليقات: