ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಡಿಹೊಗಳಿದ 'ಬಿಜೆಪಿ ಅಭ್ಯರ್ಥಿ'
ಬೆಂಗಳೂರು : ರಾಜ್ಯದಲ್ಲಿ ಉಪ ಚುನಾವಣೆಯ ಕಾವು ರಂಗೇರಿದೆ. ದಿನಕ್ಕೊಂದು ವಿದ್ಯಾಮಾನಗಳಿಗೂ ಕಾರಣವಾಗುತ್ತಿದೆ. ಕಾಂಗ್ರೆಸ್-ಬಿಜೆಪಿ ವಾಕ್ ಸಮರದ ನಡುವೆಯೂ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ, ಹಾಡಿಹೊಗಳಿದ್ದಾರೆ.
ಹೌದು.. ಬಿಜೆಪಿಯ ನೋಟು, ಕಾಂಗ್ರೆಸ್ ಗೆ ವೋಟು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಾತಿಗೆ ತಿರುಗೇಟು ನೀಡಿರುವಂತ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ, ಡಿಕೆ ಶಿವಕುಮಾರ್ ಬೆಂಬಲಕ್ಕಿ ಇರೋದು ಕೇವಲ ಓರ್ವ ಶಾಸಕರಷ್ಟೇ, ಸಿದ್ದರಾಮಯ್ಯ ಅವರ ಬೆಂಬಲಕ್ಕೆ 65 ಶಾಸಕರಿದ್ದಾರೆ ಎಂಬುದಾಗಿ ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ.
0 التعليقات: