Tuesday, 27 October 2020

ಅಚ್ಚರಿಯಾಗುತ್ತದೆ ಈ ಕೆಲಸದ ಸಂಬಳ ಎಷ್ಟೆಂದು ತಿಳಿದರೆ!


 ಅಚ್ಚರಿಯಾಗುತ್ತದೆ ಈ ಕೆಲಸದ ಸಂಬಳ ಎಷ್ಟೆಂದು ತಿಳಿದರೆ!

ಬ್ರಿಟನ್​​ ರಾಜಮನೆತನದಲ್ಲಿ ಕೆಲಸ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಈ ರೀತಿ ಕೆಲಸ ಖಾಲಿ ಇದೆ ಅಂತಾ ಸ್ವತಃ ರಾಜಮನೆತನ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪೋಸ್ಟ್ ಮಾಡಿದೆ. ಅಂದಹಾಗೆ ಇಲ್ಲಿ ಮನೆಗೆಲಸಕ್ಕೆ ಅಂತಾ ಅರ್ಜಿ ಆಹ್ವಾನಿಸಲಾಗಿದೆ. ಕೆಲಸಕ್ಕೆ ಆಯ್ಕೆಯಾದ ವ್ಯಕ್ತಿಗೆ ಅರಮನೆಯಲ್ಲೇ ವಾಸ್ತವ್ಯ ಹೂಡಬಹುದಾಗಿದೆ.

ಈ ಜಾಬ್​ಗೆ ಆಯ್ಕೆಯಾದ ವ್ಯಕ್ತಿಗೆ ಅರಮನೆಯ ಒಳಾಂಗಣ ಹಾಗೂ ವಸ್ತುಗಳನ್ನ ನೋಡಿಕೊಳ್ಳುವುದು. ಅರಮನೆಯ ಸ್ವಚ್ಚತೆಯ ಜವಾಬ್ದಾರಿಯನ್ನ ನೀಡಲಾಗುತ್ತೆ.

ಇದೊಂದು ಪರ್ಮನೆಂಟ್​ ಕೆಲಸವಾಗಿದ್ದು ಮೊದಲ 13 ತಿಂಗಳು ತರಬೇತಿ ಅವಧಿಯಾಗಿ ಇರಲಿದೆ. ಬಳಿಕ ಅವರು ಪೂರ್ಣ ಪ್ರಮಾಣದ ಸಿಬ್ಬಂದಿಯಾಗಿ ನೇಮಕವಾಗುತ್ತಾರೆ.

ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಗ್ಲೀಷ್​ ಹಾಗೂ ಗಣಿತದ ಜ್ಞಾನ ಹೊಂದಿರಬೇಕು ಮತ್ತು ಮನೆಗೆಲಸದಲ್ಲಿ ಅರ್ಹತೆ ಹೊಂದಿರಬೇಕು ಅಂತಾ ಹೇಳಲಾಗಿದೆ. ಕೆಲಸಕ್ಕೆ ಆಯ್ಕೆಯಾದ ವ್ಯಕ್ತಿ ಆರಂಭಿಕ ಸಂಬಳವಾಗಿ 18.5 ಲಕ್ಷ ರೂಪಾಯಿ ಪಡೆಯಲಿದ್ದಾನೆ. ಹಾಗೂ 33 ದಿನ ರಜೆ ಹಾಕಲು ಅವಕಾಶ ಇದೆ ಅಂತಾ ರಾಜಮನೆತನ ಹೇಳಿದೆ.


SHARE THIS

Author:

0 التعليقات: