Monday, 26 October 2020

ಕಲ್ಲಿದ್ದಲು ಹಗರಣ - ಕೇಂದ್ರ ಮಾಜಿ ಸಚಿವ ದಿಲೀಪ್ ರಾಯ್ ಸೇರಿ ಮೂವರಿಗೆ ಜೈಲು ಶಿಕ್ಷೆ

 ಕಲ್ಲಿದ್ದಲು ಹಗರಣ - ಕೇಂದ್ರ ಮಾಜಿ ಸಚಿವ ದಿಲೀಪ್ ರಾಯ್ ಸೇರಿ ಮೂವರಿಗೆ ಜೈಲು ಶಿಕ್ಷೆ

ನವದೆಹಲಿ, ಅ.26 (ಹಿ.ಸ) : ಜಾರ್ಖಂಡ್​ನ ಕಲ್ಲಿದ್ದಲು ಹಗರಣ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ)ದ ವಿಶೇಷ ನ್ಯಾಯಾಲಯ ಕೇಂದ್ರ ಮಾಜಿ ಸಚಿವ ದಿಲೀಪ್​ ರಾಯ್​ ಹಾಗು ಇತರೆ ಮೂವರು ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

1999ರಲ್ಲಿ ಜಾರ್ಖಂಡ್​ನ ಕಲ್ಲಿದ್ದಲು ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ರಾಜ್ಯ ಸಚಿವರಾಗಿದ್ದ ದಿಲೀಪ್​ ರಾಯ್ ಅವರ ಪಿತೂರಿ ಇರುವುದು ಸಾಬೀತಾಗಿತ್ತು.

ಅಕ್ಟೋಬರ್​ 6 ರಂದು ದಿಲೀಪ್​ ರಾಯ್​ ಜೊತೆ ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್, ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲ್​ರನ್ನು ಅಪರಾಧಿಗಳೆಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭಾರತ್ ಪರಾಶರ್ ತೀರ್ಪು ನೀಡಿತ್ತು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣದ ಕುರಿತು ಇಂದು ವಿಚಾರಣೆ ನಡೆಸಿರುವ ಸಿಬಿಐ ಸ್ಪೆಷಲ್​​ ಕೋರ್ಟ್​, ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.


SHARE THIS

Author:

0 التعليقات: