ಮುಹಿಮ್ಮಾತ್ ಮದ್ಹುರ್ರಸೂಲ್ ಕಾರ್ಯಕ್ರಮಕ್ಕೆ ಚಾಲನೆ; ಸಯ್ಯಿದ್ ಬಾಹಸನ್ ತಂಙಳ್ ಉದ್ಘಾಟಿಸಿದರು
ಕಾಸರಗೋಡು ಅ 19: ಪುತ್ತಿಗೆ ಮುಹಿಮ್ಮಾತ್ ಸಂಸ್ಥೆಯ ಮದ್ಹುರ್ರಸೂಲ್ ಫೌಂಡೇಷನಿನ ಭಾಗವಾಗಿ ರಬೀಉಲ್ ಅವ್ವಲ್ 1 ರಿಂದ 12 ರವರೆಗೆ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆಯುವ ಪುಣ್ಯ ಪ್ರವಾದಿ ಮದ್ಹ್ ಮಜ್ಲಿಸಿಗೆ ನಿನ್ನೆ ಚಾಲನೆಯಾಯಿತು.
ಎಸ್.ವೈ.ಎಸ್ ಕಾಸರಗೋಡು ಜಿಲ್ಲಾ ಅಧ್ಯಕ್ಷ ಸಯ್ಯಿದ್ ಬಾಹಸನ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ಅಬ್ದುರ್ರಹ್ಮಾನ್ ಅಹ್ಸನಿ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಮುಹಿಮ್ಮಾತ್ ಫಿನಾನ್ಶಿಯಲ್ ಸೆಕ್ರೆಟರಿ ಹಾಜಿ ಅಮೀರಲಿ ಚೂರಿ, ಅಬೂಬಕರ್ ಕಾಮಿಲ್ ಸಖಾಫಿ, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಫತ್ತಾಹ್ ಸಅದಿ, ಅಬ್ದುಸ್ಸಲಾಂ ಅಹ್ಸನಿ, ಶರೀಫ್ ಸಖಾಫಿ ಭಾಗವಹಿಸಿದರು. ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಪ್ರಾರ್ಥನೆ ನಡೆಸಿದರು. ಸಂಸ್ಥೆಯ ಜನರಲ್ ಸೆಕ್ರೆಟರಿ ಬಿ.ಎಸ್ ಅಬ್ದುಲ್ಲಾಕುಞ್ಞಿ ಫೈಝಿ ಸ್ವಾಗತ ಮತ್ತು ಮೂಸ ಸಖಾಫಿ ಕಳತ್ತೂರ್ ಕೃತಜ್ಞತೆ ಸಲ್ಲಿಸಿದರು.
0 التعليقات: