Saturday, 17 October 2020

ಮುಹಿಮ್ಮಾತ್ ಮಿಲಾದ್ ಕಾರ್ಯಕ್ರಮದ ದ್ವಜಾರೋಹಣ ನಡೆಯಿತು. ಪ್ರಕೀರ್ತನಾ ಮಜ್ಲಿಸ್ ನಾಳೆ ಕುಂಬೋಲ್ ತಂಙಳ್ ಉದ್ಘಾಟಿಸಿವರು

 

ಮುಹಿಮ್ಮಾತ್ ಮಿಲಾದ್ ಕಾರ್ಯಕ್ರಮದ 

 ದ್ವಜಾರೋಹಣ ನಡೆಯಿತು. 
 ಪ್ರಕೀರ್ತನಾ ಮಜ್ಲಿಸ್ ನಾಳೆ ಕುಂಬೋಲ್ ತಂಙಳ್                 ಉದ್ಘಾಟಿಸಿವರು


ಕಾಸರಗೋಡು: ಪುತ್ತಿಗೆ ಮುಹಿಮ್ಮಾತ್ ಸಂಸ್ಥೆಯ ಮದ್ಹುರ್ರಸೂಲ್ ಫೌಂಡೇಶನಿನ ಅಂಡರಲ್ಲಿ ಒಂದು ತಿಂಗಳ ಕಾಲ ನಡೆಯುವ ವೀಲಾದ್ ಕಾರ್ಯಕ್ರಮದ ದ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮುಹಿಮ್ಮಾತ್ ವೈಸ್ ಪ್ರೆಸಿಡೆಂಟ್ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ದ್ವಜಾರೋಹಣ ನಡೆಸಿದರು. ಮುಹಿಮ್ಮಾತ್ ಜನರಲ್ ಸೆಕ್ರಟರಿ ಬಿ.ಎಸ್ ಅಬ್ದುಲ್ಲ ಕುಞ್ಞಿ ಫೈಝಿ, ಫಿನಾನ್ಶಿಯಲ್ ಸೆಕ್ರೆಟರಿ ಹಾಜೀ ಅಮೀರಲಿ ಚೂರಿ, ಜನರಲ್ ಮೆನೇಜರ್ ಉಮರ್ ಸಖಾಫಿ ಕರ್ನೂರ್, ಸಯ್ಯಿದ್ ಹಾಮಿದ್ ಅನ್ವರ್ ಅಹ್ದಲ್ ತಂಙಳ್, ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ ಕಳತ್ತೂರ್, ವೈ.ಎಂ ಅಬ್ದುರ್ರಹ್ಮಾನ್ ಅಹ್ಸನಿ, ಅಬೂಬಕರ್ ಕಾಮಿಲ್ ಸಖಾಫಿ, ಅಬ್ದುಸ್ಸಲಾಂ ಅಹ್ಸನಿ ಮತ್ತು ಫತ್ತಾಹ್ ಸಅದಿ ಭಾಗವಹಿಸಿದರು.


ಕಾರ್ಯಕ್ರಮದ ಭಾಗವಾಗಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಹನ್ನೆರಡು ದಿನ ಮುಂದುವರಿಯುವ ಪುಣ್ಯ ನೆಬಿ ಮದ್ಹ್ ಮಜ್ಲಿಸ್ ಕಾರ್ಯಕ್ರಮ ಸಮಸ್ತ ಕೇಂದ್ರ  ಮುಶಾವರಾಂಗ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ನಾಳೆ ಉದ್ಘಾಟಿಸಿವರು.


ಕಾರ್ಯಕ್ರಮದ ಭಾಗವಾಗಿ ಬುಶ್ರಾಲನಾ, ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಿಟ್ ವಿತರಣೆ, ಪ್ರಕೀರ್ತನಾ ಮಜ್ಲಿಸ್, ತಬರ್ರುಕ್, ಬುರ್ದಾ ಆಲಾಪನೆ ಮುಂತಾದ ಹಲವು ಕಾರ್ಯಕ್ರಮಗಳು ನಡೆಯಲಿದೆ. ಆನ್ಲೈನ್ ವ್ಯವಸ್ಥೆಯ ಮೂಲಕ ಅಧಿಕ ಜನರಿಗೆ ಕಾರ್ಯಕ್ರಮಗಳನ್ನು  ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು.







SHARE THIS

Author:

0 التعليقات: