Sunday, 25 October 2020

ಮೈಸೂರು ದಸರಾ: ಜಂಬೂ ಸವಾರಿಗೆ ಕ್ಷಣಗಣನೆ, ಇಂದು ನಂದಿ ಧ್ವಜಕ್ಕೆ ಸಿಎಂ ಯಡಿಯೂರಪ್ಪ ಪೂಜೆ


 ಮೈಸೂರು ದಸರಾ: ಜಂಬೂ ಸವಾರಿಗೆ ಕ್ಷಣಗಣನೆ, ಇಂದು ನಂದಿ ಧ್ವಜಕ್ಕೆ ಸಿಎಂ ಯಡಿಯೂರಪ್ಪ ಪೂಜೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಿರ್ಣಾಯಕ ಹಂತ ತಲುಪಿದ್ದು, ಸೋಮವಾರದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಿರ್ಣಾಯಕ ಹಂತ ತಲುಪಿದ್ದು, ಸೋಮವಾರದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ಸೋಂಕು ನಿಯಂತ್ರಣ ಕ್ರಮಗಳ ನಡುವೆ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಜಂಬೂ ಸವಾರಿ ಅರಮನೆಗೆ ಮಾತ್ರ ಸೀಮಿತವಾಗಿದೆ.

ಸೋಮವಾರ ನಡೆಯಲಿರುವ ಜಂಬೂ ಸವಾರಿಗೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಎಸ್ ಟಿ ಸೋಮಶೇಖರ್ ಅವರು ತಿಳಿಸಿದ್ದಾರೆ

ಆಯುಧಪೂಜೆಯ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ನಡೆಯುತ್ತಿರುವ ಅರಮನೆಗೆ ಬೇಟಿ ನೀಡಿ ಗಜ ಪಡೆಗಳಿಗೆ ಪೋಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ಕೊವಿಡ್ 19 ರ ಸಲಹ ಸಮಿತಿಯವರು ನೀಡಿರುವ ಸಲಹೆ ಸೂಚನೆಗಳನ್ನು ಚಾಚು ತಪ್ದದೆ ಪಾಲಿಸುತ್ತಿದ್ದು, ಜಂಬೂಸವಾರಿ ಕಾರ್ಯಕ್ರಮಕೆ 300 ಜನರಿಗಷ್ಟೆ ಅನುಮತಿ ನೀಡಲಾಗಿದೆ ಎಂದರು. 

ಇಂದು ಮಧ್ಯಾಹ್ನ 2.59ಕ್ಕೆ ಸಿಎಂ ಯಡಿಯೂರಪ್ಪ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಚಿನ್ನದ ಅಂಬಾರಿಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ವೇಳೆ ಸಿಎಂ ಸೇರಿ ಆರು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಬಾರಿ ಜಂಬೂಸವಾರಿ ಮೆರವಣಿಗೆ ಅರಮನೆಗೆ ಮಾತ್ರ ಸೀಮಿತವಾಗಿದ್ದು, 30 ರಿಂದ 40 ನಿಮಿಷಗಳ ಒಳಗೆ ಮುಗಿಯಲಿದೆ. ಸೋಮವಾರ ಅರಮನೆ ಸುತ್ತ ಇರುವ ಎಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಆಹ್ವಾನಿತರಿಗೆ ಮಾತ್ರ ಅರಮನೆ ಒಳಗಡೆ ಪ್ರವೇಶವಿದ್ದು, ಸಾರ್ವಜನಿಕರಿಗೆ ಅರಮನೆ ಪ್ರವೇಶ ಇರುವುದಿಲ್ಲ. ಜಂಬೂಸವಾರಿ ದಿನ ಅರಮನೆ ಸುತ್ತ ಇರುವ ಎಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಇರುತ್ತದೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಕಲಾವಿದರು ವೀರಗಾಸೆ, ನಾದಸ್ವರ, ಸಾಂಸ್ಕೃತಿಕ ತಂಡ, ಅಶ್ವಪಡೆ, ಪೊಲೀಸ್ ಬ್ಯಾಂಡ್, ಒಂದು ಸ್ತಬ್ಧ ಚಿತ್ರದಲ್ಲಿ ಭಾಗವಹಿಸುವ ಜನರಿಗೆ ಮಾತ್ರ ಅರಮನೆ ಒಳಗೆ ಪ್ರವೇಶ ಇರುತ್ತದೆ. ಉಳಿದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.


SHARE THIS

Author:

0 التعليقات: