ಎಸ್ಸೆಸ್ಸೆಫ್ : ರಾಜ್ಯ ನಾಯಕರ ಜಿಲ್ಲಾ ಪರ್ಯಟನೆಗೆ ಶಿವಮೊಗ್ಗದಲ್ಲಿ ಚಾಲನೆ
ಶಿವಮೊಗ್ಗ : ರಾಜ್ಯದ ಪ್ರತಿ ಜಿಲ್ಲೆಗಳ ನಾಯಕರೊಂದಿಗೆ ಸಮಾಲೋಚನೆ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚಿಸಲು ಎಸ್ಸೆಸ್ಸೆಫ್ ಹಮ್ಮಿಕೊಂಡ ಮಿಷನ್-2020 ರಾಜ್ಯ ನಾಯಕರ ಜಿಲ್ಲಾ ಪ್ರವಾಸಕ್ಕೆ ಅಕ್ಟೋಬರ್ 17 ರಂದು ಶಿವಮೊಗ್ಗದಲ್ಲಿ ಚಾಲನೆ ನೀಡಲಾಯಿತು. ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಸಯ್ಯಿದ್ ಶಹೀದುದ್ದೀನ್ ಅಲ್ ಬುಖಾರಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಡಗು, ರಾಜ್ಯ ಕಾರ್ಯದರ್ಶಿಗಳಾದ ಸಿರಾಜುದ್ದೀನ್ ಸಖಾಫಿ, ಯಾಕೂಬ್ ಸಅದಿ, ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ವಿಷಯ ಮಂಡಿಸಿದರು. ರಾಜ್ಯ ಉಪಾಧ್ಯಕ್ಷ ಹಾಫಿಝ್ ಸುಫ್ಯಾನ್ ಸಖಾಫಿ, ಕಾರ್ಯದರ್ಶಿ ಅಶ್ರಫ್ ಅಮ್ಜದಿ ಉಡುಪಿ, ಇಸ್ಮಾಯಿಲ್ ಮಾಸ್ಟರ್, ಹುಸೈನ್ ಸಅದಿ ಹುಬ್ಬಳ್ಳಿ, ನವಾಝ್ ಭಟ್ಕಳ್ ಹಾಗೂ ಇನ್ನಿತರ ರಾಜ್ಯ ಹಾಗೂ ಜಿಲ್ಲಾ ನಾಯಕರು ಭಾಗವಹಿಸಿದರು. ಕೆಎಂ ಮುಸ್ತಫಾ ನಈಮಿ ಹಾವೇರಿ ಕಾರ್ಯಕ್ರಮ ನಿರೂಪಿಸಿದರು.
0 التعليقات: