Tuesday, 27 October 2020

ಸಂಚಾರ ನಿಯಮ ಉಲ್ಲಂಘನೆ : ಬೆಂಗಳೂರಿನಲ್ಲಿ 7 ದಿನದಲ್ಲಿ ಪೊಲೀಸರು ಸಂಗ್ರಹಿಸಿದ ದಂಡ ಎಷ್ಟು ಗೊತ್ತಾ?


 ಸಂಚಾರ ನಿಯಮ ಉಲ್ಲಂಘನೆ : ಬೆಂಗಳೂರಿನಲ್ಲಿ 7 ದಿನದಲ್ಲಿ ಪೊಲೀಸರು ಸಂಗ್ರಹಿಸಿದ ದಂಡ ಎಷ್ಟು ಗೊತ್ತಾ?

ಬೆಂಗಳೂರು : ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರಿಂದ 7 ದಿನದಲ್ಲಿ ಒಟ್ಟು 3.63 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.

ನೋ ಪಾರ್ಕಿಂಗ್, ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ಸಂಚರಿಸುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದು, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿರುವ ಬಗ್ಗೆ 28,201 ಪ್ರಕರಣಗಳು ದಾಖಲಾಗಿದ್ದು, 1.02 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.

ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವ ಬಗ್ಗೆ 17,105 ಪ್ರಕರಣಗಳು ದಾಖಲಾಗಿದ್ದು, 62.38 ಲಕ್ಷ ರೂ. ಸಂಗ್ರಹವಾಗಿದೆ. ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದ 4,827 ಪ್ರಕರಣಗಳು ದಾಖಲಾಗಿದ್ದು, 22,92 ಲಕ್ಷ ರೂ. ದಂಡ ಸಂಗ್ರಹ ಹಾಗೂ ನಿಷೇಧಿತ ರಸ್ತೆಗಳಲ್ಲಿ ಸಂಚಾರ ಮಾಡಿರುವ 3,790 ಪ್ರಕರಣಗಳಿಂದ 14.45 ಲಕ್ಷ ರೂ. ಮತ್ತು ಸಂಚಾರ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿರುವ 2,448 ಪ್ರಕರಣಗಳಿಂದ 16.83 ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.


SHARE THIS

Author:

0 التعليقات: