Monday, 26 October 2020

ಆರ್ ಆರ್ ನಗರ ಉಪ ಚುನಾವಣೆ ಹಿನ್ನಲೆ : ಫ್ಲೇಯಿಂಗ್ ಸ್ಕ್ವಾಡ್ ನಿಂದ 7 ಲಕ್ಷ ಹಣ ವಶಕ್ಕೆ


 ಆರ್ ಆರ್ ನಗರ ಉಪ ಚುನಾವಣೆ ಹಿನ್ನಲೆ : ಫ್ಲೇಯಿಂಗ್ ಸ್ಕ್ವಾಡ್ ನಿಂದ 7 ಲಕ್ಷ ಹಣ ವಶಕ್ಕೆ

ಬೆಂಗಳೂರು : ರಾಜರಾಜೇಶ್ವರಿ ನಗರ ಉಪ ಚುನಾವಣೆ ಕಾವೇರಿದೆ. ಇಂದು ಕ್ಷೇತ್ರದಲ್ಲಿ ಘಟಾನುಗಟಿ ನಾಯಕರು ಮತ ಪ್ರಚಾರಕ್ಕೆ ಇಳಿಯಲಿದ್ದಾರೆ. ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆಯುತ್ತಿರುವ ಚುನಾವಣೆಯಲ್ಲಿ ಆಕ್ರಮ ಹಣ ಆಮಿಷ ಜೋರಾಗಿದೆ. ಇದರ ಮಧ್ಯೆ ಫ್ಲೇಯಿಂಗ್ ಸ್ಕ್ವಾಡ್ ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ.


ರಾಜರಾಜೇಶ್ವರಿ ನಗರ ಉಪ ಚುನಾವಣೆ ಕಾವು ಏರಿದ ಬೆನ್ನಲ್ಲೇ, ಫ್ಲೇಯಿಂಗ್ ಸ್ಕ್ವಾಡ್ ಕಾರ್ಯಾಚರಣೆ ಕೂಡ ಚುರುಕುಗೊಂಡಿದೆ. ಇಂದು ಮುತ್ತುರಾಯನಗರ ಚೆಕ್ ಪೋಸ್ಟ್ ಬಳಿಯಲ್ಲಿ ಫ್ಲೇಯಿಂಗ್ ಸ್ಕ್ವಾಡ್ ನಿಂದ ಹೊಂಡಾ ಆಯಂಕ್ಟೀವಾ ಬೈಕ್ ನಲ್ಲಿ ತೆರಳುತ್ತಿದ್ದಂತ ಇಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಲಕ್ಷ ಹಣ ದೊರೆತಿದೆ. ಹೀಗಾಗಿ 7 ಲಕ್ಷ ಹಣ, ರಮೇಶ್, ಮಾಣಿಕ್ ಚಂದ್ ಹಾಗೂ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SHARE THIS

Author:

0 التعليقات: