Monday, 19 October 2020

ಫೆಬ್ರವರಿ ವೇಳೆಗೆ ಭಾರತದ ಶೇ.50 ರಷ್ಟು ಮಂದಿಗೆ ಕೊರೋನಾ ಸೋಂಕು!?

 ಫೆಬ್ರವರಿ ವೇಳೆಗೆ ಭಾರತದ ಶೇ.50 ರಷ್ಟು ಮಂದಿಗೆ ಕೊರೋನಾ ಸೋಂಕು!?

ನವದೆಹಲಿ: 130 ಕೋಟಿ ಭಾರತೀಯರ ಪೈಕಿ 2021 ರ ಫೆಬ್ರವರಿ ವೇಳೆಗೆ ಕನಿಷ್ಟ ಶೇ.50 ರಷ್ಟು ಭಾರತೀಯರಿಗೆ ಕೊರೋನಾ ಸೋಂಕು ತಗುಲಿರಲಿದೆ ಎನ್ನುತ್ತಿದೆ ಸರ್ಕಾರದ ಸಮಿತಿ 

ಭಾರತದಲ್ಲಿ ಈಗಾಗಲೇ 75 ಲಕ್ಷ ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆಯಲ್ಲಿ ಅಮೆರಿಕಾದ ನಂತರದ ಸ್ಥಾನದಲ್ಲಿದೆ. 

ನಮ್ಮ ಲೆಕ್ಕಾಚಾರದ ಮಾದರಿಯಲ್ಲಿ ಈಗಾಗಲೇ ಶೇ.30 ರಷ್ಟು ಜನಕ್ಕೆ ಕೊರೋನಾ ಸೋಂಕು ತಗುಲಿದೆ, ಇದು ಫೆಬ್ರವರಿ ವೇಳೆಗೆ ಶೇ.50 ರಷ್ಟಾಗಲಿದೆ ಎಂದು ಐಐಟಿ ಕಾನ್ಪುರದ ಪ್ರೊಫೆಸರ್ ಮಣೀಂದ್ರ ಅಗರ್ವಾಲ್ ರಾಯ್ಟರ್ಸ್ ಗೆ ಹೇಳಿಕೆ ನೀಡಿದ್ದಾರೆ. 

ಕೇಂದ್ರದ ಸೀರಿಯಾಲಾಜಿಕಲ್ ಸಮೀಕ್ಷೆಗಳಿಗಿಂತಲೂ ಈ ಸಮೀಕ್ಷೆ ಸೋಂಕು ಹೆಚ್ಚಳವಾಗುವ ಸಾಧ್ಯತೆಯನ್ನು ತೋರುತ್ತಿದ್ದು ಸೆಪ್ಟೆಂಬರ್ ವರೆಗೂ ಶೇ.14 ರಷ್ಟು ಮಂದಿಗೆ ಮಾತ್ರ ಸೋಂಕು ತಗುಲಿದೆ ಎಂದು ಆ ವರದಿಯಲ್ಲಿ ಹೇಳಲಾಗಿದೆ. 

ವರದಿಯಾಗದ ಪ್ರಕರಣಗಳನ್ನೂ ಸಹ ಈ ಹೊಸ ಮಾದರಿಯ ಸಮೀಕ್ಷೆಯಲ್ಲಿ ಸೇರಿಸಲಾಗಿದ್ದು, ವರದಿಯಾಗಿರುವುದು ಹಾಗೂ ವರದಿಯಾಗದೇ ಉಳಿದಿರುವ ಪ್ರಕರಣಗಳೆಂದು ಪ್ರತ್ಯೇಕ ಮಾಡಲಾಗಿದೆ ಎಂದು ಅಗರ್ವಾಲ್ ಮಾಹಿತಿ ನೀಡಿದ್ದಾರೆ. 

ಸಾಮಾಜಿಕ ಅಂತರ ಹಾಗೂ ಸೂಕ್ತ ಕ್ರಮಗಳನ್ನು ಕೈಗೊಳ್ಳದೇ ಇದ್ದರೆ ಒಂದೇ ತಿಂಗಳಲ್ಲಿ ಕೊರೋನಾ ಪ್ರಕರಣ 2.6 ಮಿಲಿಯನ್ ದಾಟುವ ಸಾಧ್ಯತೆಯೂ ಇದೆ ಎಂದು ಸಮಿತಿ ಎಚ್ಚಹ್ರಿಸಿದೆ. 


SHARE THIS

Author:

0 التعليقات: