Monday, 12 October 2020

ಐಪಿಎಲ್-2020: ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ- ಎಬಿಡಿ ಜೋಡಿ

 

ಐಪಿಎಲ್-2020: ಕೆಕೆಆರ್ ವಿರುದ್ಧದ   ಪಂದ್ಯದಲ್ಲಿ ದಾಖಲೆ ನಿರ್ಮಿಸಿದ ಕೊಹ್ಲಿ-     ಎಬಿಡಿ ಜೋಡಿ

ಶಾರ್ಜಾ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಜೋಡಿ ದಾಖಲೆಯೊಂದನ್ನು ನಿರ್ಮಾಣ ಮಾಡಿದೆ.

ಶಾರ್ಜಾದಲ್ಲಿ ನಡೆದ ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಇಬ್ಬರು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಉತ್ತಮ ಜೊತೆಯಾಟ ಪ್ರದರ್ಶಿಸಿದರು. ಆರ್ ಸಿಬಿಯ ಮೊದಲೆರಡು ವಿಕೆಟ್ ಉರುಳಿದ ಬಳಿಕ ಜೊತೆಯಾದ ವಿಶ್ವದ ಇಬ್ಬರು ಶ್ರೇಷ್ಟ  ಬ್ಯಾಟ್ಸ್‌ಮನ್‌ಗಳಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್‌ ಶತಕದ ಜೊತೆಯಾಟದ ಮೂಲಕ ಆರ್‌ಸಿಬಿಗೆ ಬೃಹತ್ ಮೊತ್ತವನ್ನ ಕಲೆಹಾಕಿದರು. ಎಬಿಡಿ ಅಜೇಯ 73ರನ್‌ಗಳಿಸಿದರೆ, ಕೊಹ್ಲಿ ಅಜೇಯ 33 ರನ್‌ ಕಲೆಹಾಕಿದರು. 


ಈ ಜೋಡಿಯು ಕೆಕೆಆರ್ ವಿರುದ್ಧ ಶತಕ ಜೊತೆಯಾಟದ ಜೊತೆಗೆ ಐಪಿಎಲ್‌ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತು. ಕೊಹ್ಲಿ-ಎಬಿಡಿ ಐಪಿಎಲ್‌ನಲ್ಲಿ 3000ಕ್ಕೂ ಹೆಚ್ಚು ರನ್‌ಗಳ ಜೊತೆಯಾಟದ ಮೈಲುಗಲ್ಲ ಸ್ಥಾಪಿಸಿದ್ದಾರೆ. ಜೊತೆಗೆ ಐಪಿಎಲ್ ನಲ್ಲಿ ಅತಿ ಹೆಚ್ಚು ಶತಕದ ಜೊತೆಯಾಟ ಕೂಡಾ ಇದೇ ಜೋಡಿ ಸಂಪಾದಿಸಿದೆ. ಕೊಹ್ಲಿ ಒಟ್ಟು 19 ಬಾರಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದಾರೆ. 


ಅತಿ ಹೆಚ್ಚು ಬಾರಿ ಶತಕದ ಜೊತೆಯಾಟ ಸಾಧಿಸಿದ ಟಾಪ್ 5 ಜೋಡಿಗಳು

10: ವಿರಾಟ್ ಕೊಹ್ಲಿ- ಎಬಿ ಡಿ ವಿಲಿಯರ್ಸ್

9: ವಿರಾಟ್ ಕೊಹ್ಲಿ- ಕ್ರಿಸ್ ಗೇಲ್  6: ಶಿಖರ್ ಧವನ್- ಡೇವಿಡ್ ವಾರ್ನರ್ 

5; ಜಾನಿ ಬೈರ್ಸ್ಟೋ-ಡೇವಿಡ್ ವಾರ್ನರ್ 

5: ಗೌತಮ್ ಗಂಭೀರ್- ರಾಬಿನ್ ಉತ್ತಪ್ಪ


ಮೂರನೇ ಸ್ಥಾನಕ್ಕೇರಿದ RCB

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದ ಚಾಂಪಿಯನ್ ತಂಡ ಮುಂಬೈ ಇಂಡಿಯನ್ ನಿನ್ನೆ ಮತ್ತೆ ನಂ1 ಸ್ಥಾನಕ್ಕೇರಿದೆ. ಇಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 82 ರನ್ ಗಳಿಂದ ಗೆಲುವು ಸಾಧಿಸಿದ ಆರ್ ಸಿಬಿ ಮತ್ತೆ ಮೂರನೇ ಸ್ಥಾನಕ್ಕೇರಿದೆ. 


SHARE THIS

Author:

0 التعليقات: