Tuesday, 20 October 2020

ಆಮೆಗತಿಯಲ್ಲಿ ಸಾಗಿದೆ ಕೊರೊನಾ ಟೆಸ್ಟ್: 10 ದಿನ ಕಳೆದ್ರೂ ಬಾರದ ವರದಿ, ಜನರಲ್ಲಿ ಆತಂಕ!

 ಆಮೆಗತಿಯಲ್ಲಿ ಸಾಗಿದೆ ಕೊರೊನಾ ಟೆಸ್ಟ್: 10 ದಿನ ಕಳೆದ್ರೂ ಬಾರದ ವರದಿ, ಜನರಲ್ಲಿ ಆತಂಕ!

ಕೊರೊನಾ ವೈರಸ್ ಟೆಸ್ಟ್ ಆಮೆಗತಿಯಲ್ಲಿ ಸಾಗುತ್ತಿದೆ. ವರದಿ ವಿಳಂಬವಾಗುವ ಕಾರಣ ಕೋವಿಡ್‌ ಸೋಂಕು ಪ್ರಕರಣ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಮಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು 7 ಲಕ್ಷ ದಾಟಿದ್ದು, ಇನ್ನೂ ನಿರೀಕ್ಷಿತ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿಲ್ಲ. ರಾಜ್ಯ ಸರಕಾರ ಕೊರೊನಾ ನಿಯಂತ್ರಣಕ್ಕೆ ನಾನಾ ರೀತಿಯ ಕಸರತ್ತು ನಡೆಸಿದರೂ ದ.ಕ. ಸೇರಿದಂತೆ ಕೆಲವೊಂದು ಜಿಲ್ಲೆಗಳಲ್ಲಿ ಕೊರೊನಾ ಟೆಸ್ಟ್‌ ವರದಿ ವಿಳಂಬ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇದರಿಂದ ಸರಕಾರದ ಕೊರೊನಾ ನಿಯಂತ್ರಣ ತರುವ ಸಾಹಸ ಆಮೆಗತಿಯಲ್ಲಿ ಸಾಗುತ್ತಿದೆ.

   ರಾಜ್ಯ ಸರಕಾರ ನಿರ್ದೇಶನ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಕೊರೊನಾ ಪರೀಕ್ಷೆ ಪ್ರಮಾಣವನ್ನು ಹೆಚ್ಚಿಸಲಾಗಿದ್ದು, ಸಮಾರೋಪಾದಿಯಲ್ಲಿ ಸ್ವಾಬ್‌ ಸಂಗ್ರಹ ನಡೆಯುತ್ತಿದೆ. ರಾಜ್ಯದಲ್ಲಿ ಒಟ್ಟು 2084 ಸ್ಕಾಬ್‌ ಸಂಗ್ರಹಣಾ ಕೇಂದ್ರಗಳಿದ್ದು, ನಾನಾ ಜಿಲ್ಲೆಗಳಲ್ಲಿ ಒಟ್ಟು 98 ಟೆಸ್ಟಿಂಗ್‌ ಲ್ಯಾಬ್‌ಗಳಿವೆ. ರಾಜ್ಯದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾಬ್‌ ಸಂಗ್ರಹಕ್ಕೆ ಆದೇಶ ಮಾಡಲಾಗಿದೆ. ಇದರಿಂದ ಪ್ರತಿ ಜಿಲ್ಲಾ ಟೆಸ್ಟ್‌ ಲ್ಯಾಬ್‌ನಲ್ಲೂಒತ್ತಡ ಹೆಚ್ಚಾಗಿದೆ. ಇದರಿಂದ ಕೆಲವು ಜಿಲ್ಲೆಯವರು ಅನ್ಯ ಜಿಲ್ಲೆಗಳಿಗೆ ಸ್ವಾಬ್‌ ಕಳುಹಿಸಿಕೊಡುತ್ತಿದ್ದಾರೆ.

ಸೋಂಕಿತರಿಗೆ ಇಲ್ಲ ಆಕ್ಸಿಜನ್‌ ಕೊರತೆ, 18 ರಾಜ್ಯಗಳ 246 ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆ!

ಆರ್‌ಟಿ-ಪಿಸಿಆರ್‌ ವಿಳಂಬ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷಾ ವರದಿ ಖಾಸಗಿ ಆಸ್ಪತ್ರೆಯಲ್ಲಾದರೆ 48 ಗಂಟೆಯೊಳಗೆ ಸಿಗುತ್ತದೆ. ಸರಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಿದ ತಪಾಸಣಾ ವರದಿ 5ರಿಂದ 10 ದಿನವೂ ತಗಲುತ್ತದೆ. ಜಿಲ್ಲಾ ಆಸ್ಪತ್ರೆಯಲ್ಲಿ ಒತ್ತಡ ಜಾಸ್ತಿಯಿದ್ದ ಕಾರಣ ಕೆಲವು ಖಾಸಗಿ ಆಸ್ಪತ್ರೆ, ಮೆಡಿಕಲ್‌ ಕಾಲೇಜಿಗೆ ಸ್ವಾಬ್ ಕಳುಹಿಸಲಾಗುತ್ತಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ಅವರ ಲ್ಯಾಬ್ನ ತಪಾಸಣೆಗೆ ಮೊದಲ ಆದ್ಯತೆ ನೀಡಿ, ಬಳಿಕ ಜಿಲ್ಲಾಸ್ಪತ್ರೆಯಿಂದ ಬಂದ ತಪಾಸಣೆ ನಡೆಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ರಾಜ್ಯದಲ್ಲಿ ಕೊಂಚ ಏರಿದ ಕೊರೊನಾ..! 6,000+ ಹೊಸ ಕೇಸ್‌, 66 ಜನ ಸಾವು


ವಿಳಂಬ ಅಪಾಯಕಾರಿ

ಟೆಸ್ಟ್‌ ಲ್ಯಾಬ್‌ಗೆ ಕಳಿಸಿದ ವ್ಯಕ್ತಿ ಒಂದೆರಡು ದಿನ ಮನೆಯಲ್ಲಿದ್ದು, ಬಳಿಕ ಜ್ವರ ಕಡಿಮೆಯಾದರೆ ಊರಿಡೀ ಸುತ್ತಾಡುತ್ತಾನೆ. 10ದಿನಗಳ ಬಳಿಕ ಇಂತಹ ವ್ಯಕ್ತಿಯ ವರದಿ ಪಾಸಿಟಿವ್‌ ಬಂದರೆ ಆತ ಆಗಲೇ ಊರಿಡೀ ಪಸರಿಸಿರುತ್ತಾನೆ. ವರದಿ ವಿಳಂಬವಾಗುವ ಕಾರಣ ಕೋವಿಡ್‌ ಸೋಂಕು ಪ್ರಕರಣ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.ಆಮೆಗತಿಯಲ್ಲಿ ಸಾಗಿದೆ ಕೊರೊನಾ ಟೆಸ್ಟ್: 10 ದಿನ ಕಳೆದ್ರೂ ಬಾರದ ವರದಿ, ಜನರಲ್ಲಿ ಆತಂಕ!


ಕೊರೊನಾ ವೈರಸ್ ಟೆಸ್ಟ್ ಆಮೆಗತಿಯಲ್ಲಿ ಸಾಗುತ್ತಿದೆ. ವರದಿ ವಿಳಂಬವಾಗುವ ಕಾರಣ ಕೋವಿಡ್‌ ಸೋಂಕು ಪ್ರಕರಣ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಇಳಿಕೆಯಾಗುತ್ತಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

 
SHARE THIS

Author:

0 التعليقات: