Wednesday, 28 October 2020

ಮತ್ತೊಬ್ಬರ ಕಷ್ಟಗಳನ್ನು ತಿಳಿದು ಕಾರ್ಯಾಚರಿಸಬೇಕು; ಈದ್ ಮೀಲಾದ್ ಸಂದೇಶದಲ್ಲಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್

ಮತ್ತೊಬ್ಬರ ಕಷ್ಟಗಳನ್ನು ತಿಳಿದು ಕಾರ್ಯಾಚರಿಸಬೇಕು; ಈದ್ ಮೀಲಾದ್ ಸಂದೇಶದಲ್ಲಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್


ಮತ್ತೊಬ್ಬರ ಕಷ್ಟಗಳನ್ನು ತಿಳಿದು ಕಾರ್ಯಾಚರಿಸಬೇಕು; ಈದ್ ಮೀಲಾದ್ ಸಂದೇಶದಲ್ಲಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್

ಕಲ್ಲಿಕೋಟೆ: ಪ್ರೀತಿ, ಸಹನೆ ಮತ್ತು ಐಕ್ಯತೆಯ ಪ್ರವಾದಿ ಸಂದೇಶಗಳನ್ನು ಎತ್ತಿ ಹಿಡಿದು ಈದ್ ಮಿಲಾದ್ ಕಾರ್ಯಕ್ರಮಗಳನ್ನು ಎಲ್ಲಾ ಸ್ಥಳಗಳಲ್ಲೂ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ನಡೆಸಬೇಕೆಂದು ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಹೇಳಿದರು. ಮನುಷ್ಯರು ಪರಸ್ಪರ ಅರಿತುಕೊಂಡು ಸಹಾಯ ಮಾಡುವ ಅವಸ್ಥೆಯಾಗಿದೆ ಇದು. ಕೋವಿಡ್ ಹಲವರ ಜೀವನವನ್ನು ಸಂಕಷ್ಟದಲ್ಲಾಗಿಸಿದೆ. ನಮ್ಮ ಸುತ್ತಲೂ ಇರುವವರ ಕಷ್ಟಗಳನ್ನು ಅರಿತುಕೊಂಡು, ಸಾಧ್ಯವಾಗುವ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಾಗಬೇಕು.

ಮನುಷ್ಯರಿಗೂ ಇನ್ನುಳಿದ ಜೀವ ಜಾಲಗಳಿಗೂ ಸಹಾಯ ಮಾಡಲು ಮತ್ತು ಕಾರುಣ್ಯದ ಮನಸ್ಸಿನವರಾಗಲು ವಿಶ್ವ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಂ ಕಲಿಸಿಕೊಟ್ಟಿದ್ದಾರೆ. ಆನ್ಲೈನಿನ ಸಾಧ್ಯತೆಗಳನ್ನು ಸಾಧ್ಯವಾದಷ್ಟು    ಉಪಯೋಗಿಸಿಕೊಂಡು ಜನರು  ಜಮಾಯಿಸುವುದನ್ನು ಕಡಿಮೆಗೊಳಿಸಿ ಮೌಲಿದ್ ಕಾರ್ಯಕ್ರಮ, ಪ್ರವಾದಿ ಪ್ರೇಮ ಹಾಡು ಮತ್ತು ಪ್ರವಾದಿ ವರ್ಣನಾ ಕಾರ್ಯಕ್ರಮ ಮಾಡಬೇಕು  ಎಂದು ಅವರು ಹೇಳಿದರು.

Tuesday, 27 October 2020

ತಾಜ್ ಮಹಲ್ ನಲ್ಲಿ ಕೇಸರಿ ಧ್ವಜ ಹಾರಿಸಿ, ಶಿವ ಸ್ತೋತ್ರ ಪಠಣೆ

ತಾಜ್ ಮಹಲ್ ನಲ್ಲಿ ಕೇಸರಿ ಧ್ವಜ ಹಾರಿಸಿ, ಶಿವ ಸ್ತೋತ್ರ ಪಠಣೆ

 

ತಾಜ್ ಮಹಲ್ ನಲ್ಲಿ ಕೇಸರಿ ಧ್ವಜ ಹಾರಿಸಿ, ಶಿವ ಸ್ತೋತ್ರ ಪಠಣೆ

ಆಗ್ರಾ(28-10-2020): ತಾಜ್​ಮಹಲ್​ನಲ್ಲಿ ದಸರಾ ದಿನದಂದು ಕೇಸರಿ ಧ್ವಜ ಹಾರಿಸಿ ಶಿವ ಸ್ತೋತ್ರವನ್ನು ಹಿಂದೂ ಜಾಗರಣ ವೇದಿಕೆಯ ಸದಸ್ಯರು ಪಠಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆ ತಾಜ್​ಮಹಲ್​ ಪ್ರೇಮ ಸ್ಮಾರಕದಲ್ಲಿ ಕೇಸರಿ ಧ್ವಜವನ್ನು ಹಾರಿಸಿ ಟೀಕೆಗೆ ಗುರಿಯಾಗಿದ್ದಾರೆ. ಹಿಂದೂ ಜಾಗರಣ ವೇದಿಕೆ ಪದಾಧಿಕಾರಿ ಗೌರವ್​ ಠಾಕೂರ್​ ತಾಜ್ ಸಂಕೀರ್ಣದ ಒಳಗೆ ಶಿವ ಸ್ತೋತ್ರ ಪಠಿಸಿದ್ದಾರೆ. ಠಾಕೂರ್​ ಸಂಕೀರ್ಣದಲ್ಲಿ ಕೂತು ಶಿವ ಸ್ತೋತ್ರ ಪಠಿಸುತ್ತಿರುವ ವೇಳೆ ಕಾರ್ಯಕರ್ತನೊಬ್ಬ ಕೇಸರಿ ಧ್ವಜವನ್ನು ಹಾರಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೌರವ್​ ಠಾಕೂರ್ ತಾಜ್ ಮಹಲನ್ನು ಶಿವನ ದೇವಾಲಯ ಎಂದು ನಾವು ನಂಬಿದ್ದೇವೆ. ಶಿವನ ಮಂದಿರವನ್ನು ನೆಲಸಮ ಮಾಡಿದ ಮೊಘಲ್​ ಚಕ್ರವರ್ತಿ ಶಹಜಹಾನ್​ ಇದನ್ನ ಸ್ಮಾರಕ ಮಾಡಿದ್ದಾನೆ. ಹೀಗಾಗಿ ನಾವಿಲ್ಲಿ ಶಿವನ ಸ್ತೋತ್ರ ಪಠಿಸಿದ್ದೇವೆ ಎಂದು ಹೇಳಿ ವಿವಾದವನ್ನು ಸೃಷ್ಟಿಸಿದ್ದಾರೆ.

ಪದವಿ ಪ್ರವೇಶ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಪದವಿ ಪ್ರವೇಶ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ


 ಪದವಿ ಪ್ರವೇಶ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ದಾವಣಗೆರೆ : ದ್ವಿತೀಯ ಪಿಯುಸಿ ಅಂಕಪಟ್ಟಿ ವಿತರಣೆಯ ವಿಳಂಬದ ಕಾರಣದಿಂದಾಗಿ ದಾವಣಗೆರೆ ವಿಶ್ವವಿದ್ಯಾಲಯವು ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದಿನವನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ವಿದ್ಯಾರ್ಥಿಗಳು ದಾವಣಗೆರೆ ವಿವಿ ಅಧೀನದ ಕಾಲೇಜುಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶಕ್ಕೆ 2020 ರ ನವೆಂಬರ್ 7 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಪದವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 23 ಕೊನೆಯ ದಿನವಾಗಿತ್ತು.

ವಿದ್ಯಾರ್ಥಿಗಳು ದಂಡ ಶುಲ್ಕ ಸಹಿತ ಪ್ರವೇಶ ಅರ್ಜಿ ಸಲ್ಲಿಸಲು ಅ.29 ಕೊನೆಯ ದಿನವಾಗಿತ್ತು. ಆದರೆ ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ಮತ್ತು ಕಾಲೇಜು ಪ್ರಾಚಾರ್ಯರ ಮನವಿಯ ಮೇರೆಗೆ ಪ್ರವೇಶ ಅರ್ಜಿ ಸ್ವೀಕಾರಕ್ಕೆ ಅವಧಿ ವಿಸ್ತರಿಸಲಾಗಿದೆ.

 ಸಂಚಾರ ನಿಯಮ ಉಲ್ಲಂಘನೆ : ಬೆಂಗಳೂರಿನಲ್ಲಿ 7 ದಿನದಲ್ಲಿ ಪೊಲೀಸರು ಸಂಗ್ರಹಿಸಿದ ದಂಡ ಎಷ್ಟು ಗೊತ್ತಾ?

ಸಂಚಾರ ನಿಯಮ ಉಲ್ಲಂಘನೆ : ಬೆಂಗಳೂರಿನಲ್ಲಿ 7 ದಿನದಲ್ಲಿ ಪೊಲೀಸರು ಸಂಗ್ರಹಿಸಿದ ದಂಡ ಎಷ್ಟು ಗೊತ್ತಾ?


 ಸಂಚಾರ ನಿಯಮ ಉಲ್ಲಂಘನೆ : ಬೆಂಗಳೂರಿನಲ್ಲಿ 7 ದಿನದಲ್ಲಿ ಪೊಲೀಸರು ಸಂಗ್ರಹಿಸಿದ ದಂಡ ಎಷ್ಟು ಗೊತ್ತಾ?

ಬೆಂಗಳೂರು : ಬೆಂಗಳೂರಿನಲ್ಲಿ ಸಂಚಾರಿ ಪೊಲೀಸರು ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರಿಂದ 7 ದಿನದಲ್ಲಿ ಒಟ್ಟು 3.63 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.

ನೋ ಪಾರ್ಕಿಂಗ್, ಸಿಗ್ನಲ್ ಜಂಪ್, ಹೆಲ್ಮೆಟ್ ಧರಿಸದೆ ಸಂಚರಿಸುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದು, ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸಿರುವ ಬಗ್ಗೆ 28,201 ಪ್ರಕರಣಗಳು ದಾಖಲಾಗಿದ್ದು, 1.02 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.

ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವ ಬಗ್ಗೆ 17,105 ಪ್ರಕರಣಗಳು ದಾಖಲಾಗಿದ್ದು, 62.38 ಲಕ್ಷ ರೂ. ಸಂಗ್ರಹವಾಗಿದೆ. ಕಾರುಗಳಲ್ಲಿ ಸೀಟ್ ಬೆಲ್ಟ್ ಧರಿಸದ 4,827 ಪ್ರಕರಣಗಳು ದಾಖಲಾಗಿದ್ದು, 22,92 ಲಕ್ಷ ರೂ. ದಂಡ ಸಂಗ್ರಹ ಹಾಗೂ ನಿಷೇಧಿತ ರಸ್ತೆಗಳಲ್ಲಿ ಸಂಚಾರ ಮಾಡಿರುವ 3,790 ಪ್ರಕರಣಗಳಿಂದ 14.45 ಲಕ್ಷ ರೂ. ಮತ್ತು ಸಂಚಾರ ಸಮಯದಲ್ಲಿ ಮೊಬೈಲ್ ಬಳಕೆ ಮಾಡಿರುವ 2,448 ಪ್ರಕರಣಗಳಿಂದ 16.83 ಲಕ್ಷ ರೂ. ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

 ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರಿಗೆ ಹಿಗ್ಗಾಮುಗ್ಗ ಜಾಡಿಸಿದ ಸಿದ್ಧರಾಮಯ್ಯ

ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರಿಗೆ ಹಿಗ್ಗಾಮುಗ್ಗ ಜಾಡಿಸಿದ ಸಿದ್ಧರಾಮಯ್ಯ

 

ಭಾಷಣಕ್ಕೆ ಅಡ್ಡಿಪಡಿಸಿದ ಬಿಜೆಪಿ ಕಾರ್ಯಕರ್ತರಿಗೆ ಹಿಗ್ಗಾಮುಗ್ಗ ಜಾಡಿಸಿದ ಸಿದ್ಧರಾಮಯ್ಯ

ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರದ ಯಶವಂತಪುರ ಬಿ.ಕೆ. ನಗರದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಭಾಷಣಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಈ ವೇಳೆ ಸಿದ್ಧರಾಮಯ್ಯನವರು ಬಿಜೆಪಿ ಕಾರ್ಯಕರ್ತರನ್ನು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.

‘ಸೋಲುವ ಭಯದಿಂದ ಬಂದು ಗಲಾಟೆ ಮಾಡುತ್ತಿದ್ದೀರಿ. ರೌಡಿಗಳು ಇವರು. ಸೋಲುವ ಭಯದಿಂದ ರೌಡಿಸಂ ಮಾಡುತ್ತಿದ್ದಾರೆ. ಮುನಿರತ್ನ ನಾಯ್ಡು ನಿಮ್ಮನ್ನು ಕಳುಹಿಸಿದ್ದಾರೆ ಎಂದು ಗೊತ್ತಿದೆ. ನಾವು ಹೆದರುವುದಿಲ್ಲ. ಮತದಾರರು ನೋಡುತ್ತಿದ್ದಾರೆ ಎಂದು ಸಿದ್ಧರಾಮಯ್ಯನವರು ಹೇಳುವ ವಿಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ.


ಅಚ್ಚರಿಯಾಗುತ್ತದೆ ಈ ಕೆಲಸದ ಸಂಬಳ ಎಷ್ಟೆಂದು ತಿಳಿದರೆ!

ಅಚ್ಚರಿಯಾಗುತ್ತದೆ ಈ ಕೆಲಸದ ಸಂಬಳ ಎಷ್ಟೆಂದು ತಿಳಿದರೆ!


 ಅಚ್ಚರಿಯಾಗುತ್ತದೆ ಈ ಕೆಲಸದ ಸಂಬಳ ಎಷ್ಟೆಂದು ತಿಳಿದರೆ!

ಬ್ರಿಟನ್​​ ರಾಜಮನೆತನದಲ್ಲಿ ಕೆಲಸ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ನೀವು ಕೂಡ ಅರ್ಜಿ ಸಲ್ಲಿಸಬಹುದಾಗಿದೆ.

ಈ ರೀತಿ ಕೆಲಸ ಖಾಲಿ ಇದೆ ಅಂತಾ ಸ್ವತಃ ರಾಜಮನೆತನ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಪೋಸ್ಟ್ ಮಾಡಿದೆ. ಅಂದಹಾಗೆ ಇಲ್ಲಿ ಮನೆಗೆಲಸಕ್ಕೆ ಅಂತಾ ಅರ್ಜಿ ಆಹ್ವಾನಿಸಲಾಗಿದೆ. ಕೆಲಸಕ್ಕೆ ಆಯ್ಕೆಯಾದ ವ್ಯಕ್ತಿಗೆ ಅರಮನೆಯಲ್ಲೇ ವಾಸ್ತವ್ಯ ಹೂಡಬಹುದಾಗಿದೆ.

ಈ ಜಾಬ್​ಗೆ ಆಯ್ಕೆಯಾದ ವ್ಯಕ್ತಿಗೆ ಅರಮನೆಯ ಒಳಾಂಗಣ ಹಾಗೂ ವಸ್ತುಗಳನ್ನ ನೋಡಿಕೊಳ್ಳುವುದು. ಅರಮನೆಯ ಸ್ವಚ್ಚತೆಯ ಜವಾಬ್ದಾರಿಯನ್ನ ನೀಡಲಾಗುತ್ತೆ.

ಇದೊಂದು ಪರ್ಮನೆಂಟ್​ ಕೆಲಸವಾಗಿದ್ದು ಮೊದಲ 13 ತಿಂಗಳು ತರಬೇತಿ ಅವಧಿಯಾಗಿ ಇರಲಿದೆ. ಬಳಿಕ ಅವರು ಪೂರ್ಣ ಪ್ರಮಾಣದ ಸಿಬ್ಬಂದಿಯಾಗಿ ನೇಮಕವಾಗುತ್ತಾರೆ.

ಕೆಲಸಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇಂಗ್ಲೀಷ್​ ಹಾಗೂ ಗಣಿತದ ಜ್ಞಾನ ಹೊಂದಿರಬೇಕು ಮತ್ತು ಮನೆಗೆಲಸದಲ್ಲಿ ಅರ್ಹತೆ ಹೊಂದಿರಬೇಕು ಅಂತಾ ಹೇಳಲಾಗಿದೆ. ಕೆಲಸಕ್ಕೆ ಆಯ್ಕೆಯಾದ ವ್ಯಕ್ತಿ ಆರಂಭಿಕ ಸಂಬಳವಾಗಿ 18.5 ಲಕ್ಷ ರೂಪಾಯಿ ಪಡೆಯಲಿದ್ದಾನೆ. ಹಾಗೂ 33 ದಿನ ರಜೆ ಹಾಕಲು ಅವಕಾಶ ಇದೆ ಅಂತಾ ರಾಜಮನೆತನ ಹೇಳಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಮತ್ತು ಮೊಮ್ಮಗ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ: ಸಿದ್ದರಾಮಯ್ಯ ಆರೋಪ

ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಮತ್ತು ಮೊಮ್ಮಗ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ: ಸಿದ್ದರಾಮಯ್ಯ ಆರೋಪ

 

ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಮತ್ತು ಮೊಮ್ಮಗ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದಾರೆ: ಸಿದ್ದರಾಮಯ್ಯ ಆರೋಪ

ಬೆಂಗಳೂರು: ಮುಖ್ಯಮಂತ್ರಿಯವರ ಮಗ, ಮೊಮ್ಮಗ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.

ರಾಜರಾಜೇಶ್ವರಿ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕುಸುಮಾ ಅವರ ಪರವಾಗಿ ಮತಯಾಚನೆ ಮಾಡುತ್ತಾ ಅವರು ಸುದ್ದಿಗಾರರ ಜೊತೆಗೆ ಮಾತನಾಡುತ್ತಿದ್ದರು. ಮುಖ್ಯಮಂತ್ರಿಯವರ ಪುತ್ರ, ಮೊಮ್ಮಗ ಜೆಸಿಬಿಯಲ್ಲಿ ಹಣ ದೋಚುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈ ಕ್ಷೇತ್ರದಲ್ಲಿ ಅಪರಾಧ ಪ್ರಕರಣಗಳು ಹಾಗೂ ಮಹಿಳಾ ದೌರ್ಜನ್ಯಗಳು ಕೊನೆಗೊಳ್ಳಬೇಕಾದರೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಮತ ಹಾಕಬೇಕೆಂದು ಅವರು ಹೇಳಿದರು.

ಮುಹಿಮ್ಮಾತ್ ಮುದರ್ರಿಸ್ ಬಶೀರ್ ಹಿಮಮಿ ಉಸ್ತಾದರ ಸಹೋದರಿ ನಫೀಸ ವಫಾತಾದರು

ಮುಹಿಮ್ಮಾತ್ ಮುದರ್ರಿಸ್ ಬಶೀರ್ ಹಿಮಮಿ ಉಸ್ತಾದರ ಸಹೋದರಿ ನಫೀಸ ವಫಾತಾದರು


 ಮುಹಿಮ್ಮಾತ್ ಮುದರ್ರಿಸ್ ಬಶೀರ್ ಹಿಮಮಿ ಉಸ್ತಾದರ ಸಹೋದರಿ ನಫೀಸ ವಫಾತಾದರು

ಮುಹಿಮ್ಮಾತ್ ಮುದರ್ರಿಸ್ ಬಶೀರ್ ಹಿಮಮಿ ಉಸ್ತಾದರ ಸಹೋದರಿ ಪುತ್ತೂರು ಸವನೂರು ನಫೀಸ (41) ವಫಾತಾದರು. ಪತಿ ಯೂಸುಫ್,  ನೌಶೀನ, ನಜೀಮ, ನೌಫಲ್ , ನಈಮ, ನಾಝಿ ಮತ್ತು  ತಾಯಿ ಬೀಫಾತಿಮ ಎಂಬವರನ್ನು ಅಗಲಿದ್ದಾರೆ. ಮಯ್ಯಿತ್ ಉಕ್ಕುಡ (ವಿಟ್ಲ) ಮಸ್ಜಿದಿನಲ್ಲಿ ಧಫನ್ ಮಾಡಲಾಗುವುದು.

ಹತ್ರಾಸ್ ಪ್ರಕರಣದ ವಿಚಾರಣೆ ನಡೆಸಲು ಅಲಹಾಬಾದ್ ಹೈಕೋರ್ಟಿಗೆ ಸುಪ್ರೀಂ ಕೋರ್ಟ್ ಸೂಚನೆ

ಹತ್ರಾಸ್ ಪ್ರಕರಣದ ವಿಚಾರಣೆ ನಡೆಸಲು ಅಲಹಾಬಾದ್ ಹೈಕೋರ್ಟಿಗೆ ಸುಪ್ರೀಂ ಕೋರ್ಟ್ ಸೂಚನೆ

 

ಹತ್ರಾಸ್ ಪ್ರಕರಣದ ವಿಚಾರಣೆ ನಡೆಸಲು ಅಲಹಾಬಾದ್ ಹೈಕೋರ್ಟಿಗೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ (27-10-2020): ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ಅಲಹಾಬಾದ್ ಹೈಕೋರ್ಟ್ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ಪೀಠ ಮಹತ್ವದ ಸೂಚನೆಯನ್ನು ನೀಡಿದ್ದು, ಹತ್ರಾಸ್ ಕೇಸಿಗೆ ಸಂಬಂಧಪಟ್ಟಂತೆ ಸಂತ್ರಸ್ತೆಯ ಕುಟುಂಬಸ್ಥರು ಮತ್ತು ಸಾಕ್ಷಗಳಿಗೆ ನೀಡಿರುವ ಭದ್ರತೆ ಸೇರಿದಂತೆ ಎಲ್ಲಾ ಆಯಾಮಗಳ ಕುರಿತು ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸಲಿದೆ ಎಂದು ಹೇಳಿದ್ದಾರೆ.

ಅಲ್ಲದೆ ಸಿಬಿಐ ಅಲಹಾಬಾದ್ ಹೈಕೋರ್ಟ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಿತಿ ವರದಿಯನ್ನು ಸಲ್ಲಿಸಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.ಇನ್ನು ಸಿಬಿಐ ತನಿಖೆಯನ್ನು ಕೂಡ ಅಲಹಾಬಾದ್ ಹೈಕೋರ್ಟ್ ನಿರ್ವಹಿಸಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಈರುಳ್ಳಿ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಮತ್ತೆ ಟ್ರೋಲ್ ವಿಡಿಯೋಗಳು ವೈರಲ್|

ಈರುಳ್ಳಿ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಮತ್ತೆ ಟ್ರೋಲ್ ವಿಡಿಯೋಗಳು ವೈರಲ್|

 

ಈರುಳ್ಳಿ ಬೆಲೆ ಗಗನಕ್ಕೇರಿದ ಬೆನ್ನಲ್ಲೇ ಮತ್ತೆ ಟ್ರೋಲ್ ವಿಡಿಯೋಗಳು ವೈರಲ್| 

ಬೆಂಗಳೂರು(27-10-2020): ಈರುಳ್ಳಿ ಬೆಲೆ ಗಗನಕ್ಕೇರಿರುವ ಬೆನ್ನಲ್ಲೇ ಮತ್ತೆ ಈರುಳ್ಳಿ ಕುರಿತ ಟ್ರೋಲ್ ಮಾಡುವ ವಿಡಿಯೋಗಳು ವೈರಲ್ ಆಗುತ್ತಿದೆ.

ಮಹಾರಾಷ್ಟ್ರ, ಉತ್ತರ ಕರ್ನಾಟಕದಲ್ಲಿ ಪ್ರವಾಹದಿಂದ ಈರುಳ್ಳಿ ಬೆಲೆ ರಾಜ್ಯದಲ್ಲಿ ಗಗನಕ್ಕೇರಿತ್ತು. ಈರುಳ್ಳಿ ಬೆಲೆ 100ರೂ. ದಾಟಿದ್ದು, 150ರ ಸಮೀಪಕ್ಕೆ ಈರುಳ್ಳಿ ಬೆಲೆ ತಲುಪುವ ಆತಂಕ ಇತ್ತು. ಕಳೆದ ಬಾರಿ ಈರುಳ್ಳಿ ಬೆಲೆ 200ರ ಸಮೀಪಿಸಿತ್ತು. ಮತ್ತು ಭಾರೀ ಟ್ರೋಲ್ ಗೆ ಒಳಗಾಗಿತ್ತು. ಈ ಬಾರಿ ಟ್ರೋಲ್ ಕುರಿತ ವಿಡಿಯೋ ಗಳು ಮತ್ತೆ ವೈರಲ್ ಆಗಿದೆ.

Monday, 26 October 2020

ಆರ್ ಆರ್ ನಗರ ಉಪ ಚುನಾವಣೆ ಹಿನ್ನಲೆ : ಫ್ಲೇಯಿಂಗ್ ಸ್ಕ್ವಾಡ್ ನಿಂದ 7 ಲಕ್ಷ ಹಣ ವಶಕ್ಕೆ

ಆರ್ ಆರ್ ನಗರ ಉಪ ಚುನಾವಣೆ ಹಿನ್ನಲೆ : ಫ್ಲೇಯಿಂಗ್ ಸ್ಕ್ವಾಡ್ ನಿಂದ 7 ಲಕ್ಷ ಹಣ ವಶಕ್ಕೆ


 ಆರ್ ಆರ್ ನಗರ ಉಪ ಚುನಾವಣೆ ಹಿನ್ನಲೆ : ಫ್ಲೇಯಿಂಗ್ ಸ್ಕ್ವಾಡ್ ನಿಂದ 7 ಲಕ್ಷ ಹಣ ವಶಕ್ಕೆ

ಬೆಂಗಳೂರು : ರಾಜರಾಜೇಶ್ವರಿ ನಗರ ಉಪ ಚುನಾವಣೆ ಕಾವೇರಿದೆ. ಇಂದು ಕ್ಷೇತ್ರದಲ್ಲಿ ಘಟಾನುಗಟಿ ನಾಯಕರು ಮತ ಪ್ರಚಾರಕ್ಕೆ ಇಳಿಯಲಿದ್ದಾರೆ. ಕೊರೋನಾ ಸೋಂಕಿನ ಭೀತಿಯ ನಡುವೆಯೂ ನಡೆಯುತ್ತಿರುವ ಚುನಾವಣೆಯಲ್ಲಿ ಆಕ್ರಮ ಹಣ ಆಮಿಷ ಜೋರಾಗಿದೆ. ಇದರ ಮಧ್ಯೆ ಫ್ಲೇಯಿಂಗ್ ಸ್ಕ್ವಾಡ್ ಲಕ್ಷ ಹಣವನ್ನು ವಶಕ್ಕೆ ಪಡೆಯಲಾಗಿದೆ.


ರಾಜರಾಜೇಶ್ವರಿ ನಗರ ಉಪ ಚುನಾವಣೆ ಕಾವು ಏರಿದ ಬೆನ್ನಲ್ಲೇ, ಫ್ಲೇಯಿಂಗ್ ಸ್ಕ್ವಾಡ್ ಕಾರ್ಯಾಚರಣೆ ಕೂಡ ಚುರುಕುಗೊಂಡಿದೆ. ಇಂದು ಮುತ್ತುರಾಯನಗರ ಚೆಕ್ ಪೋಸ್ಟ್ ಬಳಿಯಲ್ಲಿ ಫ್ಲೇಯಿಂಗ್ ಸ್ಕ್ವಾಡ್ ನಿಂದ ಹೊಂಡಾ ಆಯಂಕ್ಟೀವಾ ಬೈಕ್ ನಲ್ಲಿ ತೆರಳುತ್ತಿದ್ದಂತ ಇಬ್ಬರನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ ಲಕ್ಷ ಹಣ ದೊರೆತಿದೆ. ಹೀಗಾಗಿ 7 ಲಕ್ಷ ಹಣ, ರಮೇಶ್, ಮಾಣಿಕ್ ಚಂದ್ ಹಾಗೂ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



 ಸಅದಿಯ್ಯಾ: ಗ್ರ್ಯಾಂಡ್ ಮೌಲಿದ್ ಬುಧವಾರ

ಸಅದಿಯ್ಯಾ: ಗ್ರ್ಯಾಂಡ್ ಮೌಲಿದ್ ಬುಧವಾರ

   

ಸಅದಿಯ್ಯಾ: ಗ್ರ್ಯಾಂಡ್ ಮೌಲಿದ್ ಬುಧವಾರ

ಕಾಸರಗೋಡು, ದೇಳಿ: "ಪುಣ್ಯ ಪ್ರವಾದಿ ಅಸಾಮಾನ್ಯ ವ್ಯಕ್ತಿತ್ವ ಅನುಪಮ ಸಂದೇಶ" ಎಂಬ ಶೀರ್ಷಿಕೆಯಲ್ಲಿ ಒಂದು ತಿಂಗಳ ಕಾಲ ನಡೆದು ಬರುತ್ತಿರುವ ಮೌಲಿದ್ ಕ್ಯಾಂಪೈನಿನ ಭಾಗವಾಗಿ ಗ್ರಾಂಡ್ ಮೌಲಿದ್ ಮಜ್ಲಿಸ್ ಅಕ್ಟೋಬರ್ 28 ರಂದು ಸಾಯಂಕಾಲ 6:30ಕ್ಕೆ ಸರಿಯಾಗಿ ಆನ್ಲೈನ್ ಮೂಲಕ ನಡೆಯಲಿದೆ. 

ಕೋವಿಡ್ ಫ್ರೋಟೋಕಾಲ್ ಪಾಲಿಸಿಕೊಂಡು ಸಅದಿಯ್ಯ ಮಿನಿ ಆಡಿಟೋರಿಯಂನಲ್ಲಿ ನಡೆಯುವ ಸಮಾರಂಭಕ್ಕೆ ಸ್ವಾಲಿಹ್ ಸಅದಿ ತಳಿಪ್ಪರಂಬು, ಹಾಫಿಝ್ ಸಯ್ಯದ್ ಆಝ್'ಹರ್ ಅಲ್ ಬುಖಾರಿ, ಅಬ್ದಲ್ಲ ಅಹ್ಸನಿ ಆಲ್ ಆಫ್ಳಲಿ, ಚಿಯ್ಯೂರ್ ಅಬ್ದುಲ್ಲ ಸಅದಿ, ಜಅಫರ್ ಸಅದಿ ಇರಿಕ್ಕೂರ್, ಅಲ್ ಅಮೀನ್ ಸಅದಿ ಪೆರಾಲ್, ಹಾಫಿಝ್ ಇಮ್ರಾನ್ ಮೊದಲಾದವರು ನೇತೃತ್ವ ವಹಿಸಲಿದ್ದಾರೆ .

 

 ‘ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡಲು ಭೂಮಿ ನೀಡಬಾರದು’ : ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ

‘ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡಲು ಭೂಮಿ ನೀಡಬಾರದು’ : ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ

 

‘ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡಲು ಭೂಮಿ ನೀಡಬಾರದು’ : ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆ

 ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡಲು ಭೂಮಿ ನೀಡಬಾರದು, ದಹನ ಮಾಡಬೇಕು ಎಂದು ಸಂಸದ ಸಾಕ್ಷಿ ಮಹಾರಾಜ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಂಗಾರ್ ಮಾವ್ ವಿಧಾನಸಭೆ ಉಪಚುನಾವಣಾ ಪ್ರಚಾರದ ಸಂಧರ್ಭದಲ್ಲಿ ಮಾತನಾಡಿದ ಅವರು , ಇಡೀ ಭಾರತದಲ್ಲಿ ಒಟ್ಟು 20ಕೋಟಿಯಷ್ಟು ಮುಸ್ಲಿಮರು ಇದ್ದಾರೆ. ಮುಸ್ಲಿಮರು ಮೃತಪಟ್ಟರೆ ಸಮಾಧಿ ಮಾಡಲು ಭೂಮಿ ನೀಡಬಾರದು, ದಹನ ಮಾಡಬೇಕು ಎಂದು ಸಂಸದ ಸಾಕ್ಷಿ ಮಹಾರಾಜ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಸ್ಲಿಮರು ಗ್ರಾಮಗಳಲ್ಲಿ ದೊಡ್ಡ ಸ್ಮಶಾನಗಳನ್ನು ಹೊಂದಿರುವುದರಿಂದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸರ್ಕಾರದ ಪ್ರತಿನಿಧಿಗಳು ಜನರ ಬಳಿ ಹೋಗ್ತಿಲ್ಲ, ಜನರ ಪಾಲಿಗೆ ಸರ್ಕಾರ ಸತ್ತಿದೆ: ಸಿದ್ದರಾಮಯ್ಯ

ಸರ್ಕಾರದ ಪ್ರತಿನಿಧಿಗಳು ಜನರ ಬಳಿ ಹೋಗ್ತಿಲ್ಲ, ಜನರ ಪಾಲಿಗೆ ಸರ್ಕಾರ ಸತ್ತಿದೆ: ಸಿದ್ದರಾಮಯ್ಯ

 

ಸರ್ಕಾರದ ಪ್ರತಿನಿಧಿಗಳು ಜನರ ಬಳಿ ಹೋಗ್ತಿಲ್ಲ, ಜನರ ಪಾಲಿಗೆ ಸರ್ಕಾರ ಸತ್ತಿದೆ: ಸಿದ್ದರಾಮಯ್ಯ

ಬೆಂಗಳೂರು: ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ನೀಡಬೇಕು ಅಂತ ಕಾಯುತ್ತಾ ಇದ್ದರೆ ಯಡಿಯೂರಪ್ಪ ಅವರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಬೇರೆ ಯಾರಿಗೂ ಸಿಗದೆ ವಾಪಾಸು ಹೋಗಿದ್ದಾರೆ. ಜನರ ಕಷ್ಟ ಕೇಳೋಕೆ ಸರ್ಕಾರದ ಪ್ರತಿನಿಧಿಗಳು ಯಾರೂ ಜನರ ಬಳಿ ಹೋಗ್ತಿಲ್ಲ ಅಂದರೆ ಜನರ ಪಾಲಿಗೆ ಸರ್ಕಾರ ಸತ್ತಿದೆ ಅಂತಲ್ಲವೇ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಪ್ರಶ್ನಿಸಿದ್ದಾರೆ.

ಪ್ರವಾಹದಿಂದ ಹಾನಿ ಸಂಭವಿಸಿದ ಜಿಲ್ಲೆಗಳಿಗೆ ಭೇಟಿ ನೀಡಿದ ಬಳಿಕ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ನಿನ್ನೆ ಬೀದರ್ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೆ, ಅಲ್ಲಿ ಸುಮಾರು ಎರಡೂವರೆ ಲಕ್ಷ ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ನಾಶವಾಗಿದೆ. ಮನೆ ಕುಸಿತ, ಜಾನುವಾರುಗಳ ಸಾವು, ಆಸ್ತಿ ಹಾನಿ ಹೀಗೆ ಒಟ್ಟು ಅಂದಾಜು ರೂ.2,000 ಕೋಟಿ ನಷ್ಟ ಸಂಭವಿಸಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಸುಮಾರು 1 ಲಕ್ಷದ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ನಾಶವಾಗಿದೆ, ಅಂದರೆ ಸುಮಾರು ರೂ.100 ಕೋಟಿ ಮೌಲ್ಯದ ಬೆಳೆ ನಷ್ಟವಾಗಿದೆ. ಇದರ ಜೊತೆಗೆ ರಸ್ತೆಗಳು, ಶಾಲೆಗಳು, ಮನೆ, ಜಾನುವಾರು, ಆಸ್ತಿಪಾಸ್ತಿ ಎಲ್ಲವೂ ಸೇರಿ ಒಟ್ಟು ನಷ್ಟ ರೂ.700 ಕೋಟಿ ನಷ್ಟ ಸಂಭವಿಸಿದೆ ಎಂದು ಸರ್ಕಾರ ಅಂದಾಜಿಸಿದೆ ಎಂದಿದ್ದಾರೆ.


ಅತಿವೃಷ್ಟಿ- ಪ್ರವಾಹ ಹಾನಿ ಚರ್ಚೆಗೆ ವಿಶೇಷ ಅಧಿವೇಶನ ಕರೆಯಬೇಕು: ಸಿದ್ದರಾಮಯ್ಯ ಆಗ್ರಹ

ಅಫ್ಜಲ್‌ಪುರ, ಜೇವರ್ಗಿ, ಶಹಾಪುರ, ಯಾದಗಿರಿ ಭಾಗಗಳ ಪ್ರವಾಹಪೀಡಿತ ಪ್ರದೇಶಗಳಿಗೆ ನಾನು ಇಂದು ಭೇಟಿ ನೀಡಲಿದ್ದೇನೆ. ಅಫ್ಜಲ್‌ಪುರ ಕ್ಷೇತ್ರದಲ್ಲಿ ಮೂರು ಸಣ್ಣನೀರಾವರಿ ಕೆರೆಗಳು ಒಡೆದು ಹೋಗಿ ನೂರಾರು ಎಕರೆ ಬೆಳೆ ನಷ್ಟವಾಗಿದೆ. ಕೃಷಿಭೂಮಿ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿ ರೈತರ ಬದುಕು ದುಸ್ತರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕಲಬುರ್ಗಿ ಜಿಲ್ಲೆ ಆಗಸ್ಟ್‌ನಿಂದ ಈವರೆಗೆ ಮೂರು ಬಾರಿ ಪ್ರವಾಹದಿಂದ ಹಾನಿಗೊಳಗಾಗಿದೆ, ಇದರ ಜೊತೆಗೆ ಕೋವಿಡ್ ದಿಂದ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಇಂತಹ ಕಷ್ಟಕಾಲದಲ್ಲಿ ರೈತರು, ಬಡವರ ಜೊತೆಗಿದ್ದು ಅವರಿಗೆ ಸಾಂತ್ವನ ಹೇಳಬೇಕಿದ್ದ ಜಿಲ್ಲಾ ಉಸ್ತುವಾರಿ ಸಚಿವರು ಇತ್ತ ಕಡೆ ತಲೆ ಹಾಕಿಲ್ಲ. ಕಲಬುರ್ಗಿ ಜಿಲ್ಲೆಗೆ ಭೇಟಿನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಿಸಿ, ಪರಿಹಾರ ಕಾರ್ಯಗಳಲ್ಲಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿ, ನಂತರ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಜವಾಬ್ದಾರಿ ಹೊತ್ತ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರಿಗೆ ಜನರ ಬಗ್ಗೆ ಕಾಳಜಿ ಇಲ್ಲ ಅಂತಾದ್ರೆ ಇನ್ನು ಅಧಿಕಾರಿಗಳು ಎಷ್ಟರ ಮಟ್ಟಿಗೆ ಸ್ಪಂದಿಸಬಹುದು ಎಂದು ಟೀಕಿಸಿದ್ದಾರೆ.

ಕಂದಾಯ ಸಚಿವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಪಿಕ್‌ನಿಕ್‌ಗೆ ಬಂದಂತೆ ಬಂದು ಹೋಗಿದ್ದಾರೆ, ಯಡಿಯೂರಪ್ಪ ಅವರು ವೈಮಾನಿಕ ಸಮೀಕ್ಷೆ ಮಾಡಿದ್ರು ಅವರಿಗೆ ಪ್ರವಾಹದ ಹಾನಿ ಎಷ್ಟು ಕಂಡಿದ್ಯೋ ಬಿಟ್ಟಿದ್ಯೋ ಅವರಿಗೆ ಗೊತ್ತು. ಸ್ಥಳೀಯ ಜನಪ್ರತಿನಿಧಿಗಳ ಜೊತೆ ಸಭೆ ಮಾಡಿದ್ರೆ ವಾಸ್ತವ ಪರಿಸ್ಥಿತಿ ಅರಿವಾಗಿರೋದು, ಅದನ್ನೇ ಸರ್ಕಾರ ಮಾಡಿಲ್ಲ ಎಂದಿದ್ದಾರೆ.

ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ನೀಡಬೇಕು ಅಂತ ಕಾಯುತ್ತಾ ಇದ್ದರೆ ಯಡಿಯೂರಪ್ಪ ಅವರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಸಭೆ ನಡೆಸಿ, ಬೇರೆ ಯಾರಿಗೂ ಸಿಗದೆ ವಾಪಾಸು ಹೋಗಿದ್ದಾರೆ. ಜನರ ಕಷ್ಟ ಕೇಳೋಕೆ ಸರ್ಕಾರದ ಪ್ರತಿನಿಧಿಗಳು ಯಾರೂ ಜನರ ಬಳಿ ಹೋಗ್ತಿಲ್ಲ ಅಂದರೆ ಜನರ ಪಾಲಿಗೆ ಸರ್ಕಾರ ಸತ್ತಿದೆ ಅಂತಲ್ಲವೇ? ನನ್ನ ವಿಧಾನಸಭಾ ಕ್ಷೇತ್ರದಲ್ಲೇ ಕಳೆದ ವರ್ಷದ ನೆರೆ ಪರಿಹಾರದ ಹಣವೇ ಇನ್ನೂ ಎಲ್ಲರನ್ನು ತಲುಪಿಲ್ಲ. ಸರ್ಕಾರ ಅನುದಾನ ಬಿಡುಗಡೆ ಮಾಡಿದ್ರೆ ತಾನೆ ಜನರಿಗೆ ಪರಿಹಾರದ ಹಣ ತಲುಪಲು ಸಾಧ್ಯ. ಹೋಗಲಿ ಇವರಿಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ತೆಗೆದುಕೊಂಡು ಹೋಗಿ ಪರಿಹಾರ ಕೇಳುವ ಧೈರ್ಯವಾದರೂ ಇದೆಯಾ? ಅದೂ ಇಲ್ಲ ಎಂದು ಸಿದ್ದರಾಮಯ್ಯ ಸರ್ಕಾರವನ್ನು ಟೀಕೆ ಮಾಡಿದ್ದಾರೆ

ಕಲ್ಲಿದ್ದಲು ಹಗರಣ - ಕೇಂದ್ರ ಮಾಜಿ ಸಚಿವ ದಿಲೀಪ್ ರಾಯ್ ಸೇರಿ ಮೂವರಿಗೆ ಜೈಲು ಶಿಕ್ಷೆ

ಕಲ್ಲಿದ್ದಲು ಹಗರಣ - ಕೇಂದ್ರ ಮಾಜಿ ಸಚಿವ ದಿಲೀಪ್ ರಾಯ್ ಸೇರಿ ಮೂವರಿಗೆ ಜೈಲು ಶಿಕ್ಷೆ

 



ಕಲ್ಲಿದ್ದಲು ಹಗರಣ - ಕೇಂದ್ರ ಮಾಜಿ ಸಚಿವ ದಿಲೀಪ್ ರಾಯ್ ಸೇರಿ ಮೂವರಿಗೆ ಜೈಲು ಶಿಕ್ಷೆ

ನವದೆಹಲಿ, ಅ.26 (ಹಿ.ಸ) : ಜಾರ್ಖಂಡ್​ನ ಕಲ್ಲಿದ್ದಲು ಹಗರಣ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ)ದ ವಿಶೇಷ ನ್ಯಾಯಾಲಯ ಕೇಂದ್ರ ಮಾಜಿ ಸಚಿವ ದಿಲೀಪ್​ ರಾಯ್​ ಹಾಗು ಇತರೆ ಮೂವರು ಅಪರಾಧಿಗಳಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

1999ರಲ್ಲಿ ಜಾರ್ಖಂಡ್​ನ ಕಲ್ಲಿದ್ದಲು ಹಂಚಿಕೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ ಅಂದಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಲ್ಲಿದ್ದಲು ರಾಜ್ಯ ಸಚಿವರಾಗಿದ್ದ ದಿಲೀಪ್​ ರಾಯ್ ಅವರ ಪಿತೂರಿ ಇರುವುದು ಸಾಬೀತಾಗಿತ್ತು.

ಅಕ್ಟೋಬರ್​ 6 ರಂದು ದಿಲೀಪ್​ ರಾಯ್​ ಜೊತೆ ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳಾದ ಪ್ರದೀಪ್ ಕುಮಾರ್ ಬ್ಯಾನರ್ಜಿ ಮತ್ತು ನಿತ್ಯಾನಂದ್ ಗೌತಮ್, ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ ನ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲ್​ರನ್ನು ಅಪರಾಧಿಗಳೆಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭಾರತ್ ಪರಾಶರ್ ತೀರ್ಪು ನೀಡಿತ್ತು. ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣದ ಕುರಿತು ಇಂದು ವಿಚಾರಣೆ ನಡೆಸಿರುವ ಸಿಬಿಐ ಸ್ಪೆಷಲ್​​ ಕೋರ್ಟ್​, ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಮಹಾರಾಷ್ಟ್ರ ಡಿಸಿಎಂಗೆ ಕರೊನಾ ಪಾಸಿಟಿವ್​; ಆಸ್ಪತ್ರೆಗೆ ದಾಖಲು

ಮಹಾರಾಷ್ಟ್ರ ಡಿಸಿಎಂಗೆ ಕರೊನಾ ಪಾಸಿಟಿವ್​; ಆಸ್ಪತ್ರೆಗೆ ದಾಖಲು

 

ಮಹಾರಾಷ್ಟ್ರ ಡಿಸಿಎಂಗೆ ಕರೊನಾ ಪಾಸಿಟಿವ್​; ಆಸ್ಪತ್ರೆಗೆ ದಾಖಲು

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್​ ಪವಾರ್​ ಅವರಿಗೆ ಕೋವಿಡ್​-19 ಪಾಸಿಟಿವ್ ದೃಢಪಟ್ಟಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ ಕರೊನಾ ಪಾಸಿಟಿವ್​ ಬಂದಿರುವ ವಿಚಾರವನ್ನು ಪವಾರ್​ ಖುದ್ದು ಟ್ವೀಟ್ ಮೂಲಕ ತಿಳಿಸಿ ಖಚಿತಪಡಿಸಿದ್ದಾರೆ.

ಸದ್ಯ ಅವರಲ್ಲಿ ಸೋಂಕಿನ ಲಕ್ಷಣಗಳು ಇರದಿದ್ದರೂ ಅವರು ವೈದ್ಯರ ಸಲಹೆ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಆರೋಗ್ಯ ಸರಿಯಾಗೇ ಇದೆ, ನನ್ನ ಬಗ್ಗೆ ಯಾರೂ ಚಿಂತಿಸಬೇಕಾಗಿಲ್ಲ. ಸ್ವಲ್ಪ ವಿಶ್ರಾಂತಿಯ ಬಳಿಕ ನಾನು ನಿಮ್ಮೆಲ್ಲರ ನಡುವೆ ಕಾಣಿಸಿಕೊಳ್ಳುತ್ತೇನೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.

ನಾಲ್ಕು ದಿನಗಳ ಹಿಂದೆಯೇ ಜ್ವರ ಕಾಣಿಸಿದ್ದರಿಂದ ಅವರು ಕ್ವಾರಂಟೈನ್​ಗೆ ಒಳಗಾಗಿದ್ದರು. ಆದರೆ ಕರೊನಾ ನೆಗೆಟಿವ್​ ಬಂದಿದೆ ಎಂದು ಅವರ ಪಕ್ಷದ ವಕ್ತಾರರು ಹೇಳಿದ್ದರು. ಅಲ್ಲದೆ ಕಳೆದ ಒಂದು ವಾರದಿಂದ ಅವರು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವೇ ಇದ್ದರು.

ಅಜಿತ್ ಪವಾರ್ ಸೇರಿ ಮಹಾರಾಷ್ಟ್ರದಲ್ಲಿ 15ಕ್ಕೂ ಅಧಿಕ ಸಚಿವರು ಈಗಾಗಲೇ ಸೋಂಕಿಗೆ ಒಳಗಾದಂತಾಗಿದೆ. ಎರಡು ದಿನಗಳ ಹಿಂದೆ ವಿರೋಧ ಪಕ್ಷದ ನಾಯಕ, ಬಿಜೆಪಿಯ ದೇವೇಂದ್ರ ಫಡ್ನವಿಸ್​ ಅವರಲ್ಲಿ ಸೋಂಕು ದೃಢಪಟ್ಟಿತ್ತು. (ಏಜೆನ್ಸೀಸ್​)

Sunday, 25 October 2020

'ಅಶ್ವಥ್ ನಾರಾಯಣಗೆ ಧಮ್ ಇದ್ದರೆ ಮೋದಿ ಬಳಿ ಹೋಗಿ ನೆರೆ ಪರಿಹಾರ ತರಲಿ'

'ಅಶ್ವಥ್ ನಾರಾಯಣಗೆ ಧಮ್ ಇದ್ದರೆ ಮೋದಿ ಬಳಿ ಹೋಗಿ ನೆರೆ ಪರಿಹಾರ ತರಲಿ'

 

'ಅಶ್ವಥ್ ನಾರಾಯಣಗೆ ಧಮ್ ಇದ್ದರೆ ಮೋದಿ ಬಳಿ ಹೋಗಿ ನೆರೆ ಪರಿಹಾರ ತರಲಿ'

 ಕಲಬುರಗಿ, ಅಕ್ಟೋಬರ್ 25: ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್‌ ಅವರಿಗೆ ಧಮ್ ಇದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ನೆರೆ ಪರಿಹಾರ ತೆಗೆದುಕೊಂಡು ಬರಲಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅಶ್ವಥ್ ನಾರಾಯಣ ಅವರಿಗೆ ಸವಾಲು ಹಾಕಿದರು. ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ, ""ಸಿದ್ದರಾಮಯ್ಯ ಅವರಿಗಿಂತ ಹೆಚ್ಚು ಧಮ್ ಇದೆ ಎಂದು ಅಶ್ವಥ್ ನಾರಾಯಣ್ ಅವರು ಹೇಳಿದ್ದಾರೆ. ಹಾಗಾದರೆ, ಅವರಿಗೆ ಧಮ್ ಇದ್ದರೆ ಪ್ರಧಾನಿ ಮೋದಿ ಅವರ ಮುಂದೆ ಕೂತು ಪರಿಹಾರ ತೆಗೆದುಕೊಂಡು ಬರಲಿ'' ಎಂದು ಹೇಳಿದರು. ಮುಂದಿನ ಮುಖ್ಯಮಂತ್ರಿ ಯಾರು ಆಗಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಜನರು ಅಭಿಮಾನದಿಂದ ಮುಖ್ಯಮಂತ್ರಿ ಆಗಲಿ ಎ‌ನ್ನುತ್ತಿದ್ದಾರೆ ಎಂದರು. ರಾಜರಾಜೇಶ್ವರಿ ನಗರ ಹಾಗೂ ಶಿರಾ ಕ್ಷೇತ್ರಗಳ ಉಪ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ. ಪ್ರವಾಹ ಪರಿಸ್ಥಿತಿಯನ್ನು ಸರ್ಕಾರ ಉತ್ತಮವಾಗಿ ನಿರ್ವಹಿಸಿಲ್ಲ. ಇನ್ನು ಡಿಸಿಎಂ ಲಕ್ಷ್ಮಣ್ ಸವದಿ ಅವರು ಬಿಜೆಪಿಗೆ ಕಾಂಗ್ರೆಸ್‌ ಶಾಸಕರು ಬರುತ್ತಾರೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಆದರೆ, ರಾಜಕೀಯವಾಗಿ ಈ ಹೇಳಿಕೆ ನೀಡುತ್ತಿದ್ದಾರೆ ಎಂದು ತಿಳಿಸಿದರು. ಸಿಎಂ ಅವರು ವೈಮಾನಿಕ ಸಮೀಕ್ಷೆಯ ಸಂದರ್ಭ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಇದರಿಂದ ಯಾವುದೇ ರೀತಿಯಾದ ಪ್ರಯೋಜನವಾಗಿಲ್ಲ. ಅಲ್ಲದೇ ರಾಜ್ಯದಲ್ಲಿ 25 ಮಂದಿ ಬಿಜೆಪಿ ಸಂಸದರು ಇದ್ದರೂ ಕೂಡಾ ಯಾವುದೇ ಪ್ರಯೋಜನವಿಲ್ಲ ಎಂದು ಟೀಕಿಸಿದರು.


 ವಿವಾಹ ಪ್ರಾಯ ಅಧಿಕಗೂಳಿಸಬಾರದು; ಪ್ರಧಾನ ಮಂತ್ರಿಗೆ ಸಮಸ್ತ ಪತ್ರ ಬರೆಯಿತು.

ವಿವಾಹ ಪ್ರಾಯ ಅಧಿಕಗೂಳಿಸಬಾರದು; ಪ್ರಧಾನ ಮಂತ್ರಿಗೆ ಸಮಸ್ತ ಪತ್ರ ಬರೆಯಿತು.

 

ವಿವಾಹ ಪ್ರಾಯ ಅಧಿಕಗೂಳಿಸಬಾರದು; ಪ್ರಧಾನ ಮಂತ್ರಿಗೆ ಸಮಸ್ತ ಪತ್ರ ಬರೆಯಿತು.

ಕಲ್ಲಿಕೋಟೆ: ವಿವಾಹ ಪ್ರಾಯ ಅಧಿಕಗೊಳಿಸುವುದಕ್ಕೆ ಸಂಬಂಧಿಸಿ ಭಾರತದ ವಿವಿಧ ಸಮುದಾಯಗಳ ಮತ್ತು  ಸಾಮೂಹಿಕ ವಿಭಾಗಗಳ ಅಭಿಪ್ರಾಯ ಪರಿಗಣಿಸಬೇಕೆಂದು ವಿನಂತಿಸುತ್ತಾ ಸಮಸ್ತ ಕೇರಳ  ಜಂಇಯ್ಯತುಲ್ ಉಲಮ ಪ್ರೆಸಿಡೆಂಟ್ ಇ ಸುಲೈಮಾನ್ ಮುಸ್ಲಿಯಾರ್, ಜನರಲ್ ಸೆಕ್ರೆಟರಿ ಕಾಂಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಮುಂತಾದವರು ಪ್ರಧಾನ ಮಂತ್ರಿಗೆ ಪತ್ರ ಕಳುಹಿಸಿದರು. ವಿವಾಹ ಪ್ರಾಯ 21 ಕ್ಕೆ ಅಧಿಕಗೊಳಿಸುವುದು ಸಾಮೂಹಿಕವಾದ ಸಮಸ್ಯೆಗಳನ್ನು ಉಂಟು ಮಾಡುತ್ತದೆ.

ಲೋಕದ 160 ರಷ್ಟು ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳು ವಿವಾಹ ಆಗಬೇಕಾದ ಪ್ರಾಯವಾಗಿ ನಿಯಮವಿರುವುದು ಹದಿನೆಂಟು ಆಗಿದೆ. ಅವುಗಳಲ್ಲಿ , ತಂದೆತಾಯಂದಿರ ಅಥವಾ  ನ್ಯಾಯಾಂಗದ ಅನುಮತಿ ಇದ್ದರೆ ಹದಿನೆಂಟಕ್ಕಿಂತ ಮುಂಚೆಯೇ  ವಿವಾಹ ಅನುಮತಿಸುವ ಹಲವಾರು ರಾಷ್ಟ್ರಗಳಿವೆ.

ಇಂತಹ ಪರಿಸ್ಥಿತಿ ಲೋಕದಲ್ಲಿ ಸಾಮಾನ್ಯವಾಗಿಯೇ ಇರುವಾಗ, ಭಾರತದಲ್ಲಿ  ಇಂತಹ ಒಂದು ನಿಯಮ ತರುವುದು ನಮ್ಮ ಸಾಮೂಹಿಕ  ಪರಿಸ್ಥಿತಿಗಳನ್ನು  ಕೀಳುಮಟ್ಟಕ್ಕೆ ತಳ್ಳಬಹುದು. ವಿವಾಹ ಪ್ರಾಯ ಅಧಿಕಗೊಳಿಸುವುದು ಬಡ ಕುಟುಂಬಗಳನ್ನು ಆತಂಕಗೊಳಿಸುತ್ತದೆ. ಉನ್ನತ ವಿದ್ಯಾಭ್ಯಾಸ  ಅತಿಯಾಗಿ ನಡೆಯುತ್ತಿರುವ ನಮ್ಮ ರಾಷ್ಟ್ರದಲ್ಲಿ, ಸಾಂಪತ್ತಿಕವಾಗಿ ಕಷ್ಟಪಡುವ ಹೆಣ್ಣುಮಕ್ಕಳಲ್ಲಿ ಹಲವರ ವಿದ್ಯಾಭ್ಯಾಸ  ಮುಂದುವರಿಯಲು ಕಾರಣ, ವಿವಾಹದ ನಂತರ  ಗಂಡಂದಿರು ನೀಡುವ ಹಣ ಮತ್ತು  ಮಾನಸಿಕ ಪ್ರೇರಣೆಗಳಾಗಿದೆ.

ಧಾರ್ಮಿಕ ಮತ್ತು ಸಾಮೂಹಿಕ  ಘಟಕಗಳನ್ನು ಪರಿಗಣಿಸಿಕೊಂಡು, ವಿವಾಹ ಪ್ರಾಯ ನಿಯಮದಲ್ಲಿ ಬದಲಾವಣೆ ತರಬಾರದು ಎಂದು  ಸಮಸ್ತ ನಾಯಕರು ಪತ್ರದ ಮೂಲಕ ವಿನಂತಿಸಿದರು.

ಮೈಸೂರು ದಸರಾ: ಜಂಬೂ ಸವಾರಿಗೆ ಕ್ಷಣಗಣನೆ, ಇಂದು ನಂದಿ ಧ್ವಜಕ್ಕೆ ಸಿಎಂ ಯಡಿಯೂರಪ್ಪ ಪೂಜೆ

ಮೈಸೂರು ದಸರಾ: ಜಂಬೂ ಸವಾರಿಗೆ ಕ್ಷಣಗಣನೆ, ಇಂದು ನಂದಿ ಧ್ವಜಕ್ಕೆ ಸಿಎಂ ಯಡಿಯೂರಪ್ಪ ಪೂಜೆ


 ಮೈಸೂರು ದಸರಾ: ಜಂಬೂ ಸವಾರಿಗೆ ಕ್ಷಣಗಣನೆ, ಇಂದು ನಂದಿ ಧ್ವಜಕ್ಕೆ ಸಿಎಂ ಯಡಿಯೂರಪ್ಪ ಪೂಜೆ

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಿರ್ಣಾಯಕ ಹಂತ ತಲುಪಿದ್ದು, ಸೋಮವಾರದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ನಿರ್ಣಾಯಕ ಹಂತ ತಲುಪಿದ್ದು, ಸೋಮವಾರದ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.

ಸೋಂಕು ನಿಯಂತ್ರಣ ಕ್ರಮಗಳ ನಡುವೆ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಜಂಬೂ ಸವಾರಿ ಅರಮನೆಗೆ ಮಾತ್ರ ಸೀಮಿತವಾಗಿದೆ.

ಸೋಮವಾರ ನಡೆಯಲಿರುವ ಜಂಬೂ ಸವಾರಿಗೆ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರ ಎಸ್ ಟಿ ಸೋಮಶೇಖರ್ ಅವರು ತಿಳಿಸಿದ್ದಾರೆ

ಆಯುಧಪೂಜೆಯ ಹಿನ್ನೆಲೆಯಲ್ಲಿ ದಸರಾ ಮಹೋತ್ಸವ ನಡೆಯುತ್ತಿರುವ ಅರಮನೆಗೆ ಬೇಟಿ ನೀಡಿ ಗಜ ಪಡೆಗಳಿಗೆ ಪೋಜೆ ಸಲ್ಲಿಸಿ ನಂತರ ಮಾತನಾಡಿದ ಅವರು, ಕೊವಿಡ್ 19 ರ ಸಲಹ ಸಮಿತಿಯವರು ನೀಡಿರುವ ಸಲಹೆ ಸೂಚನೆಗಳನ್ನು ಚಾಚು ತಪ್ದದೆ ಪಾಲಿಸುತ್ತಿದ್ದು, ಜಂಬೂಸವಾರಿ ಕಾರ್ಯಕ್ರಮಕೆ 300 ಜನರಿಗಷ್ಟೆ ಅನುಮತಿ ನೀಡಲಾಗಿದೆ ಎಂದರು. 

ಇಂದು ಮಧ್ಯಾಹ್ನ 2.59ಕ್ಕೆ ಸಿಎಂ ಯಡಿಯೂರಪ್ಪ ಅವರು ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಲಿದ್ದಾರೆ. ಚಿನ್ನದ ಅಂಬಾರಿಯಲ್ಲಿ ವಿಶೇಷವಾಗಿ ಅಲಂಕೃತಗೊಂಡ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ. ಈ ವೇಳೆ ಸಿಎಂ ಸೇರಿ ಆರು ಮಂದಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಈ ಬಾರಿ ಜಂಬೂಸವಾರಿ ಮೆರವಣಿಗೆ ಅರಮನೆಗೆ ಮಾತ್ರ ಸೀಮಿತವಾಗಿದ್ದು, 30 ರಿಂದ 40 ನಿಮಿಷಗಳ ಒಳಗೆ ಮುಗಿಯಲಿದೆ. ಸೋಮವಾರ ಅರಮನೆ ಸುತ್ತ ಇರುವ ಎಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಆಹ್ವಾನಿತರಿಗೆ ಮಾತ್ರ ಅರಮನೆ ಒಳಗಡೆ ಪ್ರವೇಶವಿದ್ದು, ಸಾರ್ವಜನಿಕರಿಗೆ ಅರಮನೆ ಪ್ರವೇಶ ಇರುವುದಿಲ್ಲ. ಜಂಬೂಸವಾರಿ ದಿನ ಅರಮನೆ ಸುತ್ತ ಇರುವ ಎಲ್ಲಾ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಇರುತ್ತದೆ. ಜಂಬೂಸವಾರಿಯಲ್ಲಿ ಭಾಗವಹಿಸುವ ಕಲಾವಿದರು ವೀರಗಾಸೆ, ನಾದಸ್ವರ, ಸಾಂಸ್ಕೃತಿಕ ತಂಡ, ಅಶ್ವಪಡೆ, ಪೊಲೀಸ್ ಬ್ಯಾಂಡ್, ಒಂದು ಸ್ತಬ್ಧ ಚಿತ್ರದಲ್ಲಿ ಭಾಗವಹಿಸುವ ಜನರಿಗೆ ಮಾತ್ರ ಅರಮನೆ ಒಳಗೆ ಪ್ರವೇಶ ಇರುತ್ತದೆ. ಉಳಿದ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.

ಸಿದ್ದರಾಮಯ್ಯರ ಸರ್ಕಾರದಲ್ಲಿ 1 ಲಕ್ಷ ಹುದ್ದೆಗಳ ಭರ್ತಿ

ಸಿದ್ದರಾಮಯ್ಯರ ಸರ್ಕಾರದಲ್ಲಿ 1 ಲಕ್ಷ ಹುದ್ದೆಗಳ ಭರ್ತಿ


ಸಿದ್ದರಾಮಯ್ಯರ ಸರ್ಕಾರದಲ್ಲಿ 1 ಲಕ್ಷ ಹುದ್ದೆಗಳ ಭರ್ತಿ

ಹುಬ್ಬಳ್ಳಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆದ ಸುಧಾರಣೆಗಳಿಂದಾಗಿ 1 ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳಿಗೆ ನೇಮಕಾತಿಗಳು ನಡೆದವು. ಇದು ಕಾಂಗ್ರೆಸ್‌ನ ಹೆಮ್ಮೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ಇಲ್ಲಿನ ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ನೆಹರೂ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಆರ್. ಕುಬೇರಪ್ಪ ಪರ ಮತಯಾಚಿಸಿ ಮಾತನಾಡಿದರು.

'ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ 7,905 ಪ್ರಾಥಮಿಕ, 1,689 ಪ್ರೌಢಶಾಲಾ ಶಿಕ್ಷಕರ ನೇಮಕಾತಿ, 10 ಸಾವಿರ ಪದವೀಧರ ವಿಷಯವಾರು ಶಿಕ್ಷಕರು ಹಾಗೂ ಗ್ರಂಥಪಾಲಕರ ನೇಮಕಾತಿ ನಡೆದಿದೆ. ನೇಮಕಾತಿ ಮಾತ್ರವಲ್ಲದೇ ವೇತನ ಹೆಚ್ಚಳ ವಿಚಾರದಲ್ಲೂ ನಮ್ಮ ಸರ್ಕಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿತ್ತು. ಆದ್ದರಿಂದ ಈ ಸಲದ ಚುನಾವಣೆಯಲ್ಲಿ ಕುಬೇರಪ್ಪ ಅವರನ್ನು ಬೆಂಬಲಿಸಬೇಕು' ಎಂದು ಕೋರಿದರು.

ಅಂಜುಮನ್-ಏ-ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಯೂಸೂಫ್ ಸವಣೂರು ಮಾತನಾಡಿ, 'ಚುನಾವಣೆ ಸಂದರ್ಭದಲ್ಲಿ ಕೇವಲ ಭರವಸೆ ನೀಡಿ ಮರಳು ಮಾಡುವ ಪಕ್ಷಗಳನ್ನು ತಿರಸ್ಕರಿಸಿ, ನಿಜವಾಗಿಯೂ ಪದವೀಧರರ ಸಂಕಷ್ಟಗಳಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು' ಎಂದು ಮನವಿ ಮಾಡಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರು, ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರು, ಪದಾಧಿಕಾರಿಗಳಾದ ಬಶೀರ್ ಹಳ್ಳೂರು, ಅಬ್ದುಲ್ ಮುನಾಫ್ ದೇವಗಿರಿ, ಮಹ್ಮದ್ ಖಾನ್ ಪಠಾಣ್, ಹಜ್ಜುಖಾನ್ ಧಾರವಾಡ, ಮೆಹಮೂದ್ ಕೋಳೂರು, ಶಬ್ಬೀರ್ ಚುಹೇ, ಸಲೀಂ ಸುಂಡಕೆ, ಇಮಾಂ ಹುಸೇನ್ ಮಡಕಿ, ಸಂಸ್ಥೆಯ ಪ್ರಾಚಾರ್ಯರಾದ ಡಾ. ಎಸ್.ಎಸ್. ಮೌಲ್ವಿ, ಫಿರೋಜ್, ಶಿವಳ್ಳಿ, ಅನ್ಸಾರಿ ಪಾಲ್ಗೊಂಡಿದ್ದರು. 

ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಡಿಹೊಗಳಿದ 'ಬಿಜೆಪಿ ಅಭ್ಯರ್ಥಿ'

ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಡಿಹೊಗಳಿದ 'ಬಿಜೆಪಿ ಅಭ್ಯರ್ಥಿ'


 ಕಾಂಗ್ರೆಸ್ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹಾಡಿಹೊಗಳಿದ 'ಬಿಜೆಪಿ ಅಭ್ಯರ್ಥಿ'

ಬೆಂಗಳೂರು : ರಾಜ್ಯದಲ್ಲಿ ಉಪ ಚುನಾವಣೆಯ ಕಾವು ರಂಗೇರಿದೆ. ದಿನಕ್ಕೊಂದು ವಿದ್ಯಾಮಾನಗಳಿಗೂ ಕಾರಣವಾಗುತ್ತಿದೆ. ಕಾಂಗ್ರೆಸ್-ಬಿಜೆಪಿ ವಾಕ್ ಸಮರದ ನಡುವೆಯೂ ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ರಾಜರಾಜೇಶ್ವರಿನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ, ಹಾಡಿಹೊಗಳಿದ್ದಾರೆ.

ಹೌದು.. ಬಿಜೆಪಿಯ ನೋಟು, ಕಾಂಗ್ರೆಸ್ ಗೆ ವೋಟು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಮಾತಿಗೆ ತಿರುಗೇಟು ನೀಡಿರುವಂತ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ, ಡಿಕೆ ಶಿವಕುಮಾರ್ ಬೆಂಬಲಕ್ಕಿ ಇರೋದು ಕೇವಲ ಓರ್ವ ಶಾಸಕರಷ್ಟೇ, ಸಿದ್ದರಾಮಯ್ಯ ಅವರ ಬೆಂಬಲಕ್ಕೆ 65 ಶಾಸಕರಿದ್ದಾರೆ ಎಂಬುದಾಗಿ ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಮುಖಂಡ, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಹೊಗಳಿದ್ದಾರೆ.

Saturday, 24 October 2020

 

ಭಾರತ ಯಾವತ್ತಿಗೂ ನೆರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತದೆ: ರಾಜನಾಥ್ ಸಿಂಗ್

ಭಾರತ ಯಾವತ್ತಿಗೂ ತನ್ನ ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ, ಆದರೆ ಕಾಲ ಕಾಲಕ್ಕೆ ತನ್ನ ದೇಶದ ಸಾರ್ವಭೌಮತ್ಯ ಮತ್ತು ಪ್ರಾಂತೀಯ ಐಕ್ಯತೆಯನ್ನು ಕಾಪಾಡಲು ಸರ್ವಶ್ರೇಷ್ಟ ತ್ಯಾಗಗಳನ್ನು ಸೇನೆಯ ಯೋಧರು ಮಾಡುವ ಪರಿಸ್ಥಿತಿ ಬರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ನವದೆಹಲಿ: ಭಾರತ ಯಾವತ್ತಿಗೂ ತನ್ನ ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ, ಆದರೆ ಕಾಲ ಕಾಲಕ್ಕೆ ತನ್ನ ದೇಶದ ಸಾರ್ವಭೌಮತ್ಯ ಮತ್ತು ಪ್ರಾಂತೀಯ ಐಕ್ಯತೆಯನ್ನು ಕಾಪಾಡಲು ಸರ್ವಶ್ರೇಷ್ಟ ತ್ಯಾಗಗಳನ್ನು ಸೇನೆಯ ಯೋಧರು ಮಾಡುವ ಪರಿಸ್ಥಿತಿ ಬರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಡಾರ್ಜಿಲಿಂಗ್ ಜಿಲ್ಲೆಯ ಸುಕ್ನಾದಲ್ಲಿ ಭಾರತೀಯ ಸೇನೆಯ 33 ಕಾರ್ಪ್ಸ್ ನ ಸೈನಿಕರನ್ನುದ್ದೇಶಿಸಿ ಅವರು ನಿನ್ನೆ ಮಾತನಾಡಿದರು. ಅದಕ್ಕೂ ಮುನ್ನ ಅವರು, ಸಿಕ್ಕಿಮ್ ವಲಯದಲ್ಲಿ ಗಡಿ ವಾಸ್ತವ ರೇಖೆಯಲ್ಲಿ ಮಿಲಿಟರಿ ನೆಲೆ ಕಾವಲು ಕಾಯುತ್ತಿರುವ, ಸೇನೆ ನಡೆಸುತ್ತಿರುವ ತಯಾರಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದರು.

ನಂತರ ಸೈನಿಕರನ್ನುದ್ದೇಶಿಸಿ ಮಾತನಾಡಿ, ಜೂನ್ 15ರಂದು ಗಲ್ವಾನ್ ಕಣಿವೆ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದದ್ದನ್ನು ಸ್ಮರಿಸಿಕೊಂಡರು. ಭಾರತ ಯಾವತ್ತಿಗೂ ನೆರೆ ದೇಶಗಳೊಂದಿಗೆ ಯುದ್ಧ, ಸಂಘರ್ಷವನ್ನು ಬಯಸುವುದಿಲ್ಲ. ನೆರೆ ದೇಶಗಳೊಂದಿಗೆ ಯಾವತ್ತಿಗೂ ಶಾಂತಿಯನ್ನೇ ಬಯಸುತ್ತದೆ. ಆದರೆ ಕೆಲವೊಂದು ಸಂದರ್ಭದಲ್ಲಿ ಎದುರಾಗುವ ಸನ್ನಿವೇಶಗಳು ನಮ್ಮ ಸ್ವಾಯತ್ತತೆ ಮತ್ತು ಪ್ರಾಂತೀಯ ಐಕ್ಯತೆಯನ್ನು ಕಾಪಾಡಲು ಸೈನಿಕರು ಕಠಿಣ ತ್ಯಾಗಗಳನ್ನು ಮಾಡಬೇಕಾಗುತ್ತದೆ ಎಂದರು.

ಈ ಬಾರಿ ಕೂಡ ಬಿಹಾರ ರೆಜಿಮೆಂಟ್ ನ 20 ಸೈನಿಕರು ದೇಶಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಬೇಕಾಯಿತು. ಈ ಸಂದರ್ಭದಲ್ಲಿ ಚೀನಾಕ್ಕೆ ಏನಾಯಿತು ಎಂದು ನಾನು ಹೇಳಲು ಇಚ್ಛಿಸುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು. ಅವರು ನಿನ್ನೆ ಅಪರಾಹ್ನ ಡಾರ್ಜಿಲಿಂಗ್ ನ ಮಿಲಿಟರಿ ನೆಲೆ ತ್ರಿಶಕ್ತಿ ಕಾರ್ಪ್ಸ್ ಗೆ ಆಗಮಿಸಿದ್ದರು. ಪೂರ್ವ ಲಡಾಕ್ ನಲ್ಲಿ ಚೀನಾದೊಂದಿಗೆ ಗಡಿ ಸಂಘರ್ಷ ಮುಂದುವರಿದಿರುವ ಸಂದರ್ಭದಲ್ಲಿ ಮಿಲಿಟರಿ ಯಾವ ರೀತಿ ತಯಾರಿ ನಡೆಸಿಕೊಂಡಿದೆ ಎಂದು ಪರಾಮರ್ಶೆ ನಡೆಸಲು ಮತ್ತು ಸೈನಿಕರೊಂದಿಗೆ ದಸರಾ ಆಚರಿಸಲು ಎರಡು ದಿನಗಳ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ಭೇಟಿ ನಡೆಸುತ್ತಿದ್ದಾರೆ. ರಾಜನಾಥ್ ಸಿಂಗ್ ಅವರ ಜೊತೆಗೆ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವನೆ ಕೂಡ ಇದ್ದರು.

 ಬಿಹಾರ ಚುನಾವಣೆ: ಆರ್ ಜೆಡಿ ಪ್ರಣಾಳಿಕೆ ಬಿಡುಗಡೆ, 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ

ಬಿಹಾರ ಚುನಾವಣೆ: ಆರ್ ಜೆಡಿ ಪ್ರಣಾಳಿಕೆ ಬಿಡುಗಡೆ, 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ

 

ಬಿಹಾರ ಚುನಾವಣೆ: ಆರ್ ಜೆಡಿ ಪ್ರಣಾಳಿಕೆ ಬಿಡುಗಡೆ, 10 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ

 ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾ ದಳ ( ಆರ್ ಜೆಡಿ) ಶನಿವಾರ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಬಿಹಾರದಲ್ಲಿನ ಲಕ್ಷಾಂತರ ಯುವಕರಿಗೆ ಉದ್ಯೋಗವಕಾಶ ಒದಗಿಸಲು ಬದ್ಧವಾಗಿರುವುದಾಗಿ ಪುನರ್ ಉಚ್ಛರಿಸಿದೆ.


ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನತಾ ದಳ ( ಆರ್ ಜೆಡಿ) ಶನಿವಾರ ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಬಿಹಾರದಲ್ಲಿನ ಲಕ್ಷಾಂತರ ಯುವಕರಿಗೆ ಉದ್ಯೋಗವಕಾಶ ಒದಗಿಸಲು ಬದ್ಧವಾಗಿರುವುದಾಗಿ ಪುನರ್ ಉಚ್ಛರಿಸಿದೆ.

ಉದ್ಯೋಗ, ಉನ್ನತ ಶಿಕ್ಷಣ, ಸ್ಮಾರ್ಟ್ ಹಳ್ಳಿಗಳು, ಸ್ವ ಸ್ವಹಾಯ ಗುಂಪುಗಳು, ಕೈಗಾರಿಕೆಗಳು ಮತ್ತು ಕೃಷಿ ಕ್ಷೇತ್ರಕ್ಕೆ  ಆರೋಗ್ಯ ಮತ್ತಿತರ ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ 17 ವಿಚಾರಗಳ ಬಗ್ಗೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ.

''ಹಮರಾ ಪ್ರಾಣ್ ' ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಆರ್ ಜೆಡಿ ಪ್ರಣಾಳಿಕೆ  16 ಪುಟಗಳನ್ನು ಹೊಂದಿದ್ದು, 10 ಲಕ್ಷ ಉದ್ಯೋಗದ ಭರವಸೆಯನ್ನು ನೀಡಲಾಗಿದೆ.

ನಮ್ಮ ಸರ್ಕಾರ ಪ್ರತಿಯೊಂದು ಜಿಲ್ಲೆಗಳಲ್ಲಿ ಉದ್ಯೋಗ ಕೇಂದ್ರಗಳನ್ನು ಸ್ಥಾಪಿಸಲಾಗುವುದು, ಮನೇಗ್ರಾ ಮಾನವ ದಿನಗಳನ್ನು ಗರಿಷ್ಠ 200ದಿನಗಳಿಗೆ ಹೆಚ್ಚಿಸಲಾಗುವುದು ಎಂದು ಆರ್ ಜೆಡಿ ಹೇಳಿಕೊಂಡಿದೆ.

ರಾಜ್ಯದಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲಾಗುವುದು, ವಿಭಿನ್ನ ತೆರಿಗೆಯೊದಿಗೆ ಉದ್ಯೋಗವಕಾಶ ಸೃಷ್ಟಿಸುವ ಹೊಸ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದು, ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಯಸುವ ಬಿಹಾರ ಯುವಕರಿಗೆ ಅರ್ಜಿ ಶುಲ್ಕವನ್ನು ಮನ್ನಾ ಮಾಡಲಾಗುವುದು, ಮನೆಯಿಂದ ಬಂದು ಪರೀಕ್ಷೆ ಬರುವ ವಿದ್ಯಾರ್ಥಿಗಳಿಗೆ ಪ್ರಯಾಣ ದರವನ್ನು ನೀಡಲಾಗುವುದು ಎಂದು ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದರು.

ಕಚೇರಿ ಸಹಾಯಕರು, ಗ್ರಂಥಪಾಲಕರು, ಉರ್ದು ಶಿಕ್ಷಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಗ್ರಾಮೀಣ ವೈದ್ಯರ ಬೇಡಿಕೆಗಳನ್ನು ಪೂರ್ಣಗೊಳಿಸಲು ಯೋಜನೆ ರೂಪಿಸಲಾಗುವುದು, ಆರೋಗ್ಯ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಾಗುವುದು, ಜೀವಿಕಾ ಕಾರ್ಯಕರ್ತರಿಗೆ ಬಡ್ಡಿ ರಹಿತ ಸಾಲವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.


'ಪರಿಸರ ಸ್ನೇಹಿ ದೀಪಾವಳಿ' ಆಚರಿಸಿ - ಸಚಿವ ಬಿ.ಸಿ.ಪಾಟೀಲ್ ಕರೆ

'ಪರಿಸರ ಸ್ನೇಹಿ ದೀಪಾವಳಿ' ಆಚರಿಸಿ - ಸಚಿವ ಬಿ.ಸಿ.ಪಾಟೀಲ್ ಕರೆ


ಪರಿಸರ ಸ್ನೇಹಿ ದೀಪಾವಳಿ' ಆಚರಿಸಿ - ಸಚಿವ ಬಿ.ಸಿ.ಪಾಟೀಲ್ ಕರೆ

ಬೆಂಗಳೂರು : ಬೆಳಕಿನ ಹಬ್ಬ ದೀಪಾವಳಿಯನ್ನು ಪರಿಸರ ಸ್ನೇಹಿ ದೀಪಾವಳಿಯನ್ನಾಗಿ ಆಚರಿಸಲು ಒತ್ತು ನೀಡಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಈ ಬಾರಿಯ ದೀಪಾವಳಿಯನ್ನು ಕಾಮಧೇನು(ಗೋಮಯ) ದೀಪಾವಳಿಯನ್ನಾಗಿಸಲು ಕರೆ ನೀಡಿದ್ದಾರೆ. ರಾಸಾಯನಿಕಯುಕ್ತ ಹಣತೆ,ಅಪಾಯಕಾರಿ ಪಟಾಕಿಗಳನ್ನು ಬಳಸುವುದನ್ನು ಬಿಟ್ಟು ಮನಸಿಗೆ ಮುದ ನೀಡುವ ಹಾನಿಕಾರಕವಲ್ಲದ ಗೋಮಯ ದೀಪಗಳನ್ನು ಬಳಸಲು ಕರೆ ನೀಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ರೈತರ ಸ್ವಾವಲಂಬನೆ ಹಾಗೂ ಆದಾಯ ದ್ವಿಗುಣ ಕಾರ್ಯಯೋಜನೆಯನ್ನು ಆತ್ಮ ನಿರ್ಭರ್ ಭಾರತದ ಸಂಕಲ್ಪವನ್ನು ಸಾಕಾರ ಗೊಳಿಸಲು ಕೇಂದ್ರ ಪಶು ಸಂಗೋಪನಾ ಸಚಿವಾಲಯದ ರಾಷ್ಟ್ರೀಯ ಕಾಮಧೇನು ಆಯೋಗದಿಂದ ಪ್ರಾಯೋಜಿತವಾದ ಸಗಣಿಯಿಂದ ತಯಾರಿಸಿದ ಗೋಮಯ ಹಣತೆಯನ್ನು ಈ ದೀಪಾವಳಿಯ ಸಂದರ್ಭದಲ್ಲಿ ದೇಶದಾದ್ಯಂತ ಉರಿಸುವ ಯೋಜನೆ ರೂಪಿಸಿದೆ ಎಂದರು

ಈ ನಿಟ್ಟಿನಲ್ಲಿ ರಾಷ್ಟ್ರೀಯ ಕಾಮಧೇನು ಆಯೋಗ,ರಾಷ್ಟ್ರೋತ್ಥಾನ ಗೋಶಾಲೆ, ಗೋಸೇವಾ ಗತಿವಿಧಿ ಹಾಗೂ ಪ್ರಾಣಿ ಕಲ್ಯಾಣ ಮಂಡಳಿ ಈ ಬಾರಿಯ ದೀಪಾವಳಿಯನ್ನು ಪರಿಸರ ಸ್ನೇಹಿ ಗೋಮಯ ದೀಪಗಳಿಂದ ಆಚರಿಸಬೇಕೆಂದು ಯೋಜ‌ನೆ ರೂಪಿಸಿದ್ದು, ದೇಶದಲ್ಲಿ 33 ಕೋಟಿ ದೀಪಗಳನ್ನು ರಾಜ್ಯದಲ್ಲಿ 3ಕೋಟಿ ಗೋಮಯ ದೀಪಗಳನ್ನು ಬಳಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಈ ಗೋಮಯ ದೀಪಗಳನ್ನು ಬಳಸುವುದರಿಂದ ರೈತರ ಬೆನ್ನೆಲುಬಾದ ಭಾರತೀಯ ದೇಶಿ ಗೋತಳಿಯ ಉಳಿವಿಗೆ ಪ್ರಯತ್ನ ಮಾಡುವುದರ ಜೊತೆಗೆ ಆರೋಗ್ಯದ ಹಿತದೃಷ್ಟಿಯಿಂದಲೂ ಉತ್ತಮವಾಗಿದೆ.ಅಲ್ಲದೇ ಇದರಿಂದ ದೇಶೀಯ ದೀಪಗಳಿಗೆ ಉತ್ತೇಜನ ತಯಾರಿಕರಿಗೆ ಪ್ರೋತ್ಸಾಹ ದೊರೆಯುವಂತಾಗುತ್ತದೆ ಎಂದು ಬಿ.ಸಿ.ಪಾಟೀಲ್ ಹೇಳಿದ್ದಾರೆ. 

 ಶಾಕಿಂಗ್ : ರಾಜ್ಯದಲ್ಲಿ ಕೊರೋನಾದಿಂದ ಚೇತರಿಸಿಕೊಂಡ ಕೆಲ ರೋಗಿಗಳಲ್ಲಿ ಮತ್ತೆ ಜ್ವರ

ಶಾಕಿಂಗ್ : ರಾಜ್ಯದಲ್ಲಿ ಕೊರೋನಾದಿಂದ ಚೇತರಿಸಿಕೊಂಡ ಕೆಲ ರೋಗಿಗಳಲ್ಲಿ ಮತ್ತೆ ಜ್ವರ

 

ಶಾಕಿಂಗ್ : ರಾಜ್ಯದಲ್ಲಿ ಕೊರೋನಾದಿಂದ ಚೇತರಿಸಿಕೊಂಡ ಕೆಲ ರೋಗಿಗಳಲ್ಲಿ ಮತ್ತೆ ಜ್ವರ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದರ ನಡುವೆ ಕೋವಿಡ್-19 ನಿಂದ ಚೇತರಿಸಿಕೊಂಡ ರೋಗಿಗಳಲ್ಲಿ 14 ದಿನಗಳ ನಂತರ ಮತ್ತೆ ಜ್ವರ ಕಾಣಿಸಿಕೊಳ್ಳುತ್ತಿದ್ದು, ಸ್ಪಷ್ಟ ಕಾರಣ ಇಲ್ಲದೆ ವೈದ್ಯರು ಗೊಂದಲಕ್ಕೊಳಗಾಗಿದ್ದಾರೆ.

ಕೊರೋನಾ ಚೇತರಿಕೆಯ ನಂತರ ಕಾಣಿಸಿಕೊಂಡ ಜ್ವರವು 4-5 ದಿನಗಳವರೆಗೆ ಇರುತ್ತದೆ ಮತ್ತು ಎಲ್ಲಾ ವರ್ಗದ ರೋಗಿಗಳಲ್ಲಿಯೂ ಕಂಡುಬರುತ್ತದೆ. ಸಾಮಾನ್ಯವಾಗಿ ಈ ಜ್ವರವು ಸೋಂಕನ್ನು ಸೂಚಿಸುತ್ತಿರುತ್ತದೆ. ಆದರೆ, ರಕ್ತ ಮತ್ತು ಮೂತ್ರ ಪರೀಕ್ಷೆ ನಡೆಸಿದಾಗ ಮತ್ತೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಕೋವಿಡ್- ಸೋಂಕು ತಗುಲಿದ 14 ದಿನಗಳ ನಂತರ ಮತ್ತೆ ಜ್ವರ ಬರುವುದಕ್ಕೂ ದೇಹದಲ್ಲಿ ಕೋವಿಡ್-19 ಸೋಂಕು ಹೆಚ್ಚುವುದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುತ್ತಾರೆ ಮಣಿಪಾಲ್ ಆಸ್ಪತ್ರೆಯ ವೈಜ್ಞಾನಿಕ ಮಂಡಳಿಯ ಮುಖ್ಯಸ್ಥ ಡಾ. ಅನೂಪ್ ಅಮರನಾಥ್. ಇದಕ್ಕೆ ಸ್ಪಷ್ಟ ಕಾರಣ ಗೊತ್ತಾಗುತ್ತಿಲ್ಲ. ಇದು ವೈರಸ್ ನ ಅವಶೇಷಗಳು ಅಥವಾ ದೇಹದಲ್ಲಿನ ಸೈಟೊಕಿನ್ ತೀವ್ರತೆಯಿಂದಾಗಿ ಜ್ವರ ಕಾಣಿಸಿಕೊಳ್ಳುತ್ತಿರಬಹುದೆಂದು ಅಮರನಾಥ್ ಹೇಳಿದ್ದಾರೆ.

Friday, 23 October 2020

 ಪ್ರಚೋದನಾಕಾರಿ ಪೋಸ್ಟ್ ಹಾಕಿ ಗಲಭೆಗೆ ಕಾರಣನಾಗಿದ್ದ ನವೀನ್ ನಿಂದ ಕ್ಷಮೆಯಾಚನೆ

ಬೆಂಗಳೂರು(23/10/2020): ಪ್ರಚೋದನಕಾರಿ ಪೋಸ್ಟ್ ಹಾಕಿ ನಾನು ತಪ್ಪು ಮಾಡಿದ್ದೇನೆ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇ‌ನೆ ಎಂದು ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಗೆ ಕಾರಣವಾಗಿದ್ದ ಪ್ರಚೋದನಕಾರಿ ಪೋಸ್ಟ್ ಹಾಕಿ ಜೈಲು ಸೇರಿದ್ದ ನವೀನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೆ ಪೋಸ್ಟ್ ಮಾಡಿದ್ದು ತಪ್ಪು. ನಾನದನ್ನು ಒಪ್ಪಿಕೊಳ್ಳುತ್ತೇನೆ. ನನ್ನಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಆದ್ದರಿಂದ ನಾನು ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

ಮೆಲ್ಕಾರ್: ಯುವಕನ ಕೊಲೆ ಆರೋಪಿ ಮೇಲೆ ಫೈರಿಂಗ್


ಬಂಟ್ವಾಳ(24-10-2020): ಮೆಲ್ಕಾರ್ ಬಳಿಯ ಗುಡ್ಡೆಯಂಗಡಿ ಉಮರ್ ಫಾರೂಕ್ ಬರ್ಬರ ಕೊಲೆ ಆರೋಪಿಯೊಬ್ಬನಿಗೆ ಬಂಟ್ವಾಳ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಇಂದು ಮುಂಜಾನೆ ನಡೆದಿದೆ.

ನಂದಾವರ ನಿವಾಸಿ ಖಲೀಲ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ  ಆರೋಪಿಯ ಕಾಲಿಗೆ ಗಾಯವಾಗಿದ್ದು, ಆತನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಇತರ ಆರೋಪಿಗಳು ಪರಾರಿಯಾಗಿದ್ದಾರೆ.

ಉಮರ್ ಪಾರೂಕ್ ನನ್ನು ತನ್ನ ಸಹಚರರ ಜತೆ ಸೇರಿ ಕೊಲೆ ಮಾಡಿದ್ದಾನೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಖಲೀಲ್ ನನ್ನು ಬಂಧಿಸಲು‌ ತೆರಳಿದ್ದರು.ಈ ವೇಳೆ ತಪ್ಪಿಸಲು ಯತ್ನಿಸಿದ್ದು, ಪೊಲೀಸರು ಖಲೀಲ್ ಮೇಲೆ ಫೈರಿಂಗ್ ಮಾಡಿದ್ದಾರೆ.

 ನೆರೆ ಪರಿಹಾರ ಪ್ಯಾಕೇಜ್ ಘೋಷಿಸಿ: ಪ್ರಧಾನಿ ಮೋದಿಗೆ ಯಡಿಯೂರಪ್ಪ ಪತ್ರ

 

ಬೆಂಗಳೂರು, ಅಕ್ಟೋಬರ್ 24: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಅನೇಕ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನೆರೆ ಪರಿಹಾರಕ್ಕೆ 10 ಸಾವಿರ ಕೋಟಿ ರೂ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಪ್ರಧಾನಿಗೆ ಅವರು ಅಕ್ಟೋಬರ್ 17ರಂದು ಮೂರು ಪುಟಗಳ ಪತ್ರ ಬರೆದಿದ್ದು, ರಾಜ್ಯದಲ್ಲಿ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ರೈತರು ಹಾಗೂ ಜನಸಾಮಾನ್ಯರಿಗೆ ಪುನರ್ ವಸತಿ ಕಲ್ಪಿಸಲು ಆರ್ಥಿಕ ನೆರವಿನ ಅಗತ್ಯವಿದೆ ಎಂದು ಅವರು ವಿವರಿಸಿದ್ದಾರೆ ಎನ್ನಲಾಗಿದೆ.

 ಕಳೆದ ಮೂರು ತಿಂಗಳ ಅವಧಿಯಲ್ಲಿ ಸುರಿದ ಭಾರಿ ಮಳೆಯಿಂದ ರಾಜ್ಯಕ್ಕೆ ಸುಮಾರು 21,609 ಕೋಟಿ ರೂ.ಗಳಿಗೂ ಅಧಿಕ ನಷ್ಟವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಜನರು ಮನೆ-ಮಠ ಕಳೆದುಕೊಂಡಿದ್ದಾರೆ. ಅಪಾರ ಬೆಳೆ ನಾಶವಾಗಿದೆ. ಇವರೆಲ್ಲರಿಗೂ ಕೂಡಲೇ ಪರಿಹಾರ ನೀಡಬೇಕಾಗ ಅಗತ್ಯವಿದೆ. ಹೀಗಾಗಿ ಸಹಾಯ ಹಸ್ತ ಚಾಚುವಂತೆ ಅವರು ಮನವಿ ಮಾಡಿದ್ದಾರೆ.

 ಮೂರು ತಿಂಗಳಲ್ಲಿ ನಷ್ಟದ ವಿವರ ಆಗಸ್ಟ್‌ನಿಂದ ಸೆಪ್ಟೆಂಬರ್ 15ರವರೆಗೆ ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಭಾರಿ ಮಳೆಯಿಂದ ಅಂದಾಜು 9,441 ಕೋಟಿ ರೂ ಹಾನಿಯಾಗಿದೆ. ಸೆಪ್ಟೆಂಬರ್ 15ರ ಬಳಿಕ ಉಂಟಾದ ಮಳೆ ಹಾಗೂ ಪ್ರವಾಹದಿಂದ ಸುಮಾರು 5,668 ಕೋಟಿ ರೂ ನಷ್ಟ ಸಂಭವಿಸಿದೆ. ಈಗ ಅಕ್ಟೋಬರ್ ಮೊದಲ ವಾರದಿಂದ ಸುರಿಯುತ್ತಿರುವ ಮಳೆಯಿಂದ ಇದುವರೆಗೂ 6,500 ಕೋಟಿ ರೂ ನಷ್ಟ ಉಂಟಾಗಿದೆ ಎಂದು ಹೇಳಿದ್ದಾರೆ. 30,000 ಮನೆಗಳಿಗೆ ಹಾನಿ ಈ ಮೂರು ತಿಂಗಳಲ್ಲಿ ಉಂಟಾದ ಮಳೆ-ಪ್ರವಾಹದಿಂದ ರಾಜ್ಯದಲ್ಲಿ 30 ಸಾವಿರಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಆರು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಬೆಳೆ ನಾಶವಾಗಿದೆ. ರಸ್ತೆ, ಸೇತುವೆಗಳು, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳು ಹಾಗೂ ವಿದ್ಯುತ್ ವ್ಯವಸ್ಥೆಗೆ ತೀವ್ರ ಹಾನಿಯಾಗಿದೆ ಎಂದು ತಿಳಿಸಿದ್ದಾರೆ. ಜನರು ಅತಂಕದಲ್ಲಿದ್ದಾರೆ ಸತತ ಎರಡು ವರ್ಷಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆ ತೀವ್ರವಾಗಿದೆ. ಪ್ರವಾಹ, ಭೂಕುಸಿತ ಮುಂತಾದ ಅವಘಡಗಳಿಂದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿ ವರ್ಷವೂ ಉಂಟಾಗುತ್ತಿರುವ ಪ್ರವಾಹದ ಹಾನಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ವಿವರಿಸಿದ್ದಾರೆ. ಪರಿಹಾರ ಕ್ರಮ ಕೈಗೊಳ್ಳಲಾಗಿದೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ವೈಮಾನಿಕ ಸಮೀಕ್ಷೆ ನಡೆಸಿದ್ದೇನೆ. ತಕ್ಷಣದ ಪರಿಹಾರ ಕ್ರಮವಾಗಿ ತಲಾ 10 ಸಾವಿರ ರೂ ನೀಡಲಾಗುತ್ತಿದೆ. ಸಂಪೂರ್ಣ ಮತ್ತು ಭಾಗಶಃ ಮನೆ ಕಳೆದುಕೊಂಡವರಿಗೆ ಮನೆಗಳ ಪುನರ್ ನಿರ್ಮಾಣಕ್ಕೆ ತಲಾ 5 ಲಕ್ಷ ರೂ. ಹಾಗೂ ಮನೆಗಳ ಸಣ್ಣಪುಟ್ಟ ದುರಸ್ತಿಗೆ 50 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.


 ಪಾಕ್ ಗೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗ! 

ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಉಂಟಾಗಿದ್ದು, ಉಗ್ರರ ಪೋಷಣೆ ನಿಲ್ಲಿಸುವಲ್ಲಿ ಪಾಕ್ ವಿಫಲವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ 


ನವದೆಹಲಿ: ಪಾಕಿಸ್ತಾನಕ್ಕೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಉಂಟಾಗಿದ್ದು, ಉಗ್ರರ ಪೋಷಣೆ ನಿಲ್ಲಿಸುವಲ್ಲಿ ಪಾಕ್ ವಿಫಲವಾಗಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ (Financial Action Task Force) ಹೇಳಿದೆ. 

ಎಫ್ಎಟಿಎಫ್ ನ ವರ್ಚ್ಯುಯಲ್ ಸಭೆ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದು, ಈ ಸಭೆಯಲ್ಲಿ ಪಾಕಿಸ್ತಾನ ಫೆಬ್ರವರಿ ವರೆಗೂ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ ಎಂಬ ನಿರ್ಧಾರ ಕೈಗೊಳ್ಳಲಾಗಿದೆ. 

ಭಾರತಕ್ಕೆ ಬೇಕಾಗಿರುವ ಇಬ್ಬರು ಪ್ರಮುಖ ಉಗ್ರರಾದ ಮೌಲಾನಾ ಮಸೂದ್ ಅಜರ್ ಹಾಗೂ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಪಾಕ್ ವಿಫಲವಾಗಿದೆಯಷ್ಟೇ ಅಲ್ಲದೇ ಜಾಗತಿಕ ಹಣಕಾಸು ಕ್ರಿಯಾ ಕಾರ್ಯಪಡೆ ಹಾಗೂ ಭಯೋತ್ಪಾದಕರ ಆರ್ಥಿಕತೆಗೆ ತಡೆಯೊಡ್ಡುವ ಸಂಸ್ಥೆಯ 6 ಪ್ರಮುಖ ಅಂಶಗಳನ್ನು ಈಡೇರಿಸುವುದಕ್ಕೆ ಪಾಕ್ ವಿಫಲಗೊಂಡಿದೆ. 

ಭಯೋತ್ಪಾದನೆ ನಿಗ್ರಹದ ವಿಷಯದಲ್ಲಿ ಪಾಕಿಸ್ತಾನದ ಪ್ರಗತಿಯನ್ನು ಪರಿಶೀಲಿಸಿ ಫೆಬ್ರವರಿವರೆಗೂ ಗ್ರೇ ಪಟ್ಟಿಯಲ್ಲೇ ಪಾಕಿಸ್ತಾನವನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ. 

ಫತ್ಫ್ ನ ಗ್ರೇ ಪಟ್ಟಿಯಿಂದ ಹೊರಬರಲು ಪಾಕಿಸ್ತಾನಕ್ಕೆ ನಿಷೇಧಿತ 88 ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಸೂಚಿಸಲಾಗಿತ್ತು. ಇದರಲ್ಲಿ 26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್-ಉದ್-ದವಾ (ಜುಡಿ) ಮುಖ್ಯಸ್ಥ ಹಫೀಜ್ ಸಯೀದ್, ಜೈಶ್- ಇ-ಮೊಹಮ್ಮದ್ (ಜೆಎಂ) ಮುಖ್ಯಸ್ಥ ಮಸೂದ್ ಅಜರ್ ಮತ್ತು ಭೂಗತ ಡಾನ್ ದಾವೂದ್ ಇಬ್ರಾಹಿಂ ಸೇರಿದ್ದಾರೆ. 


ಮಾಸ್ಕ್ ಧರಿಸದವರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳ ತಂಡ ರಚಿಸಿ; ಸರ್ಕಾರಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು: ನಗರದಲ್ಲಿ ಮಾಸ್ಕ್ ಧರಿಸುವುದು ಹಾಗೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಸೇರಿ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಧಿಕಾರಿಗಳ ತಂಡ ರಚಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.

ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಹಲವು ಪಿಐಎಲ್‌ಗಳನ್ನು ಶುಕ್ರವಾರ ವಿಚಾರಣೆ ನಡೆಸಿದ ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ, ನ.28ರೊಳಗೆ ಅಧಿಕಾರಿಗಳ ತಂಡ ರಚಿಸಿ ಆದೇಶ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

ತಂಡದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸಾಕಷ್ಟು ಪ್ರಮಾಣದಲ್ಲಿರಬೇಕು. ಅವರಿಗೆ ಕರೊನಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಮುಖ್ಯವಾಗಿ ಮಾಸ್ಕ್ ಧರಿಸದ ಹಾಗೂ ವ್ಯಕ್ತಿಗತ ಅಂತರ ಪಾಲಿಸದವರ ವಿರುದ್ಧ ಕ್ರಮ ಜರುಗಿಸುವ ಜವಾಬ್ದಾರಿಯನ್ನಷ್ಟೇ ನಿಗದಿಪಡಿಸಬೇಕು. ಬೆಂಗಳೂರಿನ ಎಲ್ಲ ಪ್ರದೇಶಗಳನ್ನೂ ಮೇಲ್ವಿಚಾರಣೆ ನಡೆಸುವಂತೆ ತಂಡದ ಅಧಿಕಾರಿಗಳನ್ನು ನಿಯೋಜಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.

ಅನುಮತಿ ನೀಡುವಾಗ ಷರತ್ತು ವಿಧಿಸಿ: ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 31(1)(ಒ) ಅಡಿಯಲ್ಲಿ ‘ಸಾರ್ವಜನಿಕ ಸಭೆ ಮತ್ತು ಮೆರವಣಿಗೆಗಳಿಗೆ ಅನುಮತಿ ಹಾಗೂ ನಿಯಂತ್ರಣ (ಬೆಂಗಳೂರು ನಗರ) ಆದೇಶ-2008ರ ಅನುಸಾರ ರ‌್ಯಾಲಿ ಮತ್ತು ಮೆರವಣಿಗಳಿಗೆ ಅನುಮತಿ ನೀಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳಬೇಕು ಎಂಬ ಷರತ್ತುಗಳನ್ನು ವಿಧಿಸಬೇಕು. ರ‌್ಯಾಲಿ ವೇಳೆ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಮೇಲ್ವಿಚಾರಣೆ ನಡೆಸಲು ಸ್ಥಳದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೋಲೀಸ್ ಸಿಬ್ಬಂದಿ ನಿಯೋಜಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.

ವರದಿ ಕೇಳಿದ ಹೈಕೋರ್ಟ್: ಸಂಸದ ತೇಜಸ್ವಿ ಸೂರ್ಯ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಲ್ಲೇಶ್ವರದ ಬಿಜೆಪಿ ಕಚೇರಿ ವರೆಗೆ ನಡೆದ ಬೈಕ್ ರ‌್ಯಾಲಿ ವೇಳೆ ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಪ್ರಕರಣ ಕುರಿತು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಲು ಸರ್ಕಾರಕ್ಕೆ ಕೊನೆಯದಾಗಿ ಕಾಲಾವಕಾಶ ನೀಡಿದ ಪೀಠ, ನ್ಯಾಯಾಲಯದ ಈ ಎಲ್ಲ ಆದೇಶಗಳ ಅನುಪಾಲನಾ ವರದಿಯನ್ನು ನ.4ರೊಳಗೆ ಸಲ್ಲಿಸಬೇಕೆಂದು ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು. 

 ಲಡಾಕ್ ನಲ್ಲಿ ಚೀನಾ ಆಕ್ರಮಿಸಿಕೊಂಡ ಜಾಗವನ್ನು ಯಾವಾಗ ವಶಪಡಿಸಿಕೊಳ್ಳುತ್ತೀರಿ: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ

ಲಡಾಕ್ ನಲ್ಲಿ ಚೀನಾ ಆಕ್ರಮಿಸಿಕೊಂಡ ಜಾಗವನ್ನು ಯಾವಾಗ ವಶಪಡಿಸಿಕೊಳ್ಳುತ್ತೀರಿ: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ


 ಲಡಾಕ್ ನಲ್ಲಿ ಚೀನಾ ಆಕ್ರಮಿಸಿಕೊಂಡ ಜಾಗವನ್ನು ಯಾವಾಗ ವಶಪಡಿಸಿಕೊಳ್ಳುತ್ತೀರಿ: ಪ್ರಧಾನಿಗೆ ರಾಹುಲ್ ಗಾಂಧಿ ಪ್ರಶ್ನೆ

ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಗಲ್ವಾಣ್ ಕಣಿವೆ ಸಂಘರ್ಷದಲ್ಲಿ ಯೋಧರ ಪ್ರಾಣತ್ಯಾಗವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿಗೆ ಪ್ರಶ್ನೆ ಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಡಾಕ್ ನಲ್ಲಿ ಭಾರತೀಯ ಪ್ರಾಂತ್ಯದೊಳಗೆ ಚೀನಾದ ಸೇನೆ ಒಳನುಗ್ಗಿಲ್ಲ ಎಂದು ಪ್ರಧಾನಿ ದೇಶಕ್ಕೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.


ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಗಲ್ವಾಣ್ ಕಣಿವೆ ಸಂಘರ್ಷದಲ್ಲಿ ಯೋಧರ ಪ್ರಾಣತ್ಯಾಗವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿಗೆ ಪ್ರಶ್ನೆ ಹಾಕಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಲಡಾಕ್ ನಲ್ಲಿ ಭಾರತೀಯ ಪ್ರಾಂತ್ಯದೊಳಗೆ ಚೀನಾದ ಸೇನೆ ಒಳನುಗ್ಗಿಲ್ಲ ಎಂದು ಪ್ರಧಾನಿ ದೇಶಕ್ಕೆ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದ್ದಾರೆ.

ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಲಡಾಕ್ ನಲ್ಲಿ ಒಳನುಸುಳಲಿಲ್ಲ ಎಂದು ಸುಳ್ಳು ಹೇಳಿ ಪ್ರಧಾನಿ ಭಾರತೀಯ ಸೇನೆಗೆ ಅವಮಾನ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

 ಬಿಹಾರದ ನವಾಡ ಜಿಲ್ಲೆಯಲ್ಲಿ ಇಂದು ಮೊದಲ ಬಾರಿಗೆ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಚೀನಾದ ಸೇನೆ ಲಡಾಕ್ ನಲ್ಲಿ 1200 ಚದರ ಕಿಲೋ ಮೀಟರ್ ಗಳಷ್ಟು ಭಾರತದ ಪ್ರಾಂತ್ಯದೊಳಗೆ ಬಂದು ನಮ್ಮ ಜಾಗವನ್ನು ಆಕ್ರಮಿಸಿಕೊಂಡಿದೆ. ನಮ್ಮ ಸೈನಿಕರು ಚೀನಾದ ಸೈನಿಕರು ಒಳನುಗ್ಗಿದಾಗ ಯುದ್ಧ ಮಾಡಿ ಪ್ರಾಣ ತ್ಯಾಗ ಮಾಡಿಕೊಂಡರು. ಆದರೆ ಪ್ರಧಾನಿ ಮೋದಿ ಮಾತ್ರ ಚೀನಾದ ಸೇನೆ ಭಾರತದ ಪ್ರಾಂತ್ಯದೊಳಗೆ ನುಗ್ಗಿಲ್ಲ ಎಂದು ಹೇಳಿದ್ದಾರೆ. ಚೀನಾ ಸೇನೆ ಆಕ್ರಮಿಸಿಕೊಂಡಿರುವ ಜಾಗವನ್ನು ಯಾವಾಗ ತೆರವು ಮಾಡುತ್ತಾರೆ ಎಂದು ಪ್ರಧಾನಿ ಹೇಳಬೇಕು ಎಂದು ಹೇಳಿದರು.ದೇಶವನ್ನು ಮತ್ತು ರಾಜ್ಯವನ್ನು ಕಾಪಾಡಲು ನಿತೀಶ್ ಕುಮಾರ್ ನೇತೃತ್ವದ ಸರ್ಕಾರಕ್ಕೆ ಮತ ನೀಡಬೇಡಿ ಎಂದು ರಾಹುಲ್ ಗಾಂಧಿ ಪ್ರಚಾರ ವೇಳೆ ಮನವಿ ಮಾಡಿಕೊಂಡರು.

Thursday, 22 October 2020

 ಮಾಸ್ಕ್ ಧರಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಹೈಕೋರ್ಟ್

ಮಾಸ್ಕ್ ಧರಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಹೈಕೋರ್ಟ್

 

ಮಾಸ್ಕ್ ಧರಿಸದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ: ಹೈಕೋರ್ಟ್

ಬೆಂಗಳೂರು: ಮಾಸ್ಕ್ ಧರಿಸದ ಮತ್ತು ಅಂತರ ಕಾಪಾಡದವರ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್‌ ಹೇಳಿದೆ.

ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 35 ಪ್ರತಿಭಟನೆಗಳು ನಡೆದಿವೆ. ಮಾಸ್ಕ್ ಧರಿಸಬೇಕು, ಅಂತರ ಕಾಪಾಡಿಕೊಳ್ಳಬೇಕು ಎಂಬ ನಿಯಮ ಇಲ್ಲಿ ಪಾಲನೆಯೇ ಆಗಿಲ್ಲ. ಈ ರೀತಿಯ ಪ್ರತಿಭಟನೆಗಳನ್ನು ನಿರ್ಬಂಧಿಸಬೇಕು ಎಂದು ಕೋರಿ ಸಾಯಿದತ್ತ ಸಲ್ಲಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

‘ಸೆಪ್ಟೆಂಬರ್ 25ರಂದು ನಡೆದ ಪ್ರತಿಭಟನೆ ಆಯೋಜಕರಲ್ಲಿ ಒಬ್ಬರಾದ ಹೋರಾಟಗಾರ ಮಾರುತಿ ಮಾನ್ಪಡೆ ಕೋವಿಡ್‌ನಿಂದ ಮೃತಪಟ್ಟಿದ್ದಾರೆ’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

‘ಪ್ರತಿಭಟನೆಯ ಚಿತ್ರಗಳನ್ನು ನೋಡಿದರೆ ಮಾಸ್ಕ್ ಧರಿಸದ ಹಲವರು ಕಾಣಿಸುತ್ತಾರೆ. ಅಂತರ ಕಾಪಾಡಬೇಕು ಎಂಬ ನಿಯಮ ಸಂಪೂರ್ಣ ಉಲ್ಲಂಘನೆಯಾಗಿದೆ. ಇದು ಕೋವಿಡ್ ಹರಡಲು ಕಾರಣವಾಗಿದೆ. ಈ ರೀತಿಯ ಉಲ್ಲಂಘನೆ ತಡೆಯಲು ರಾಜ್ಯ ಸರ್ಕಾರ ಮತ್ತು ಸಂಬಂಧಿಸಿದ ಪ್ರಾಧಿಕಾರಿಗಳು ದೊಡ್ಡದಾಗಿ ಕಾರ್ಯಾಚರಣೆಗೆ ಇಳಿಯಬೇಕು. ನಿಯಮ ಪಾಲಿಸದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು’ ಎಂದು ಪೀಠ ತಿಳಿಸಿತು.


ಆರ್ಥಿಕತೆ ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿತ್ತು: ಹೀಗೆ ಹೇಳಿದ್ದೇಕೆ ಮಾಜಿ ವಿತ್ತ ಸಚಿವ ಚಿದಂಬರಂ

ಆರ್ಥಿಕತೆ ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿತ್ತು: ಹೀಗೆ ಹೇಳಿದ್ದೇಕೆ ಮಾಜಿ ವಿತ್ತ ಸಚಿವ ಚಿದಂಬರಂ


ಆರ್ಥಿಕತೆ ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿತ್ತು: ಹೀಗೆ ಹೇಳಿದ್ದೇಕೆ ಮಾಜಿ ವಿತ್ತ ಸಚಿವ ಚಿದಂಬರಂ

ದೇಶದ ಆರ್ಥಿಕತೆ ಬಗ್ಗೆ ಆರ್ ಬಿಐ ಗೌರ್ನರ್, ಸೆಬಿ ಮುಖ್ಯಸ್ಥ ಹಾಗೂ ಡಿಇಎ ಕಾರ್ಯದರ್ಶಿ ಮಾತನಾಡಿರುವ ಬೆನ್ನಲ್ಲೇ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, ಆರ್ಥಿಕತೆ ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 

ನವದೆಹಲಿ: ದೇಶದ ಆರ್ಥಿಕತೆ ಬಗ್ಗೆ ಆರ್ ಬಿಐ ಗೌರ್ನರ್, ಸೆಬಿ ಮುಖ್ಯಸ್ಥ ಹಾಗೂ ಡಿಇಎ ಕಾರ್ಯದರ್ಶಿ ಮಾತನಾಡಿರುವ ಬೆನ್ನಲ್ಲೇ ಮಾಜಿ ವಿತ್ತ  ಸಚಿವ ಪಿ.ಚಿದಂಬರಂ ಪ್ರತಿಕ್ರಿಯೆ ನೀಡಿದ್ದು, ಆರ್ಥಿಕತೆ ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿರುತ್ತಿತ್ತು ಎನಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. 

ಸರ್ಕಾರ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿರುವ ಕುಟುಂಬಗಳ ಕೈಲಿ ಹಣ ಚಲಾವಾಣೆಯಾಗುವಂತೆ ನೋಡಿಕೊಳ್ಳುವವರೆಗೂ ಆರ್ಥಿಕತೆ ಪುನಶ್ಚೇತನ ಕಾಣುವುದಿಲ್ಲ ಎಂದೂ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ. 

ಸರಣಿ ಟ್ವೀಟ್ ಮಾಡಿರುವ ಚಿದಂಬಂದರಂ, ಬಡವರ ತಟ್ಟೆಗೆ ಅನ್ನ ಹಾಗೂ ಕುಟುಂಬಗಳಿಗೆ ಹಣ ಬರುವ ವ್ಯವಸ್ಥೆಯಾಗುವವರೆಗೂ ಆರ್ಥಿಕತೆ ಪುನಶ್ಚೇತನಗೊಳ್ಳುವುದಿಲ್ಲ ಎಂದೂ ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

 ದೇಶದ ಆರ್ಥಿಕತೆ ಬಗ್ಗೆ ಆರ್ ಬಿಐ ಗೌರ್ನರ್, ಸೆಬಿ ಮುಖ್ಯಸ್ಥ ಹಾಗೂ ಡಿಇಎ ಕಾರ್ಯದರ್ಶಿ ಏಕ ಕಾಲಕ್ಕೆ ಮಾತನಾಡಿರುವುದರ ಹಿಂದೆ ಏನೋ ಮರ್ಮವಿದೆ ಎನಿಸುವುದಿಲ್ಲವೆ? ಎಂದು ಚಿದಂಬರಂ ಹೇಳಿದ್ದಾರೆ. 

ಆರ್ಥಿಕತೆ  ರಿಂಗ್ ಮಾಸ್ಟರ್ ಮಾತು ಕೇಳುವ ಸರ್ಕಸ್ ಸಿಂಹವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತೇನೆ, ಬಹುತೇಕ ಮಂದಿಗೆ ಖರೀದಿಸಲು ದುಡ್ಡೇ ಇಲ್ಲ, ಅಥವಾ ಮನಸಿಲ್ಲ, ಎಂಬುದನ್ನು ಈ ಮೂವರೂ ಮಹನೀಯರು ವಿತ್ತ ಸಚಿವರಿಗೆ ತಿಳಿಸಬೇಕೆಂದು ಚಿದಂಬರಂ ಹೇಳಿದ್ದಾರೆ. 

ನನ್ನ ಮಾತಲ್ಲಿ ಅನುಮಾನವಿದ್ದರೆ, ಬಿಹಾರದಲ್ಲಿನ ಮತದಾರರ ಮಾತು ಕೇಳಿ, ಕೆಲಸವೇ ಇರುವುದಿಲ್ಲ, ಇದ್ದರೂ ಕಡಿಮೆ ಕೆಲಸ, ಎಷ್ಟೋ ಮಂದಿಗೆ ವೇತವಿಲ್ಲ, ಇದ್ದರೂ ತುಂಬಾ ಕಡಿಮೆ, ಅವರೆಲ್ಲರ ಚಿಂತೆ ಬದುಕುವುದರತ್ತ ಆಗಿದೆಯೇ ಹೊರತು ಖರೀದಿಸುವತ್ತ ಅಲ್ಲ ಎಂದು ಮಾಜಿ ವಿತ್ತ ಸಚಿವರು ಹೇಳಿದ್ದಾರೆ. 


 

 ಹಿಮಾಲಯದಲ್ಲಿ ಭಾರಿ ಭೂಕಂಪ ಸಾಧ್ಯತೆ: ಅಧ್ಯಯನ

ಹಿಮಾಲಯದಲ್ಲಿ ಭಾರಿ ಭೂಕಂಪ ಸಾಧ್ಯತೆ: ಅಧ್ಯಯನ

 

ಹಿಮಾಲಯದಲ್ಲಿ ಭಾರಿ ಭೂಕಂಪ ಸಾಧ್ಯತೆ: ಅಧ್ಯಯನ

ನವದೆಹಲಿ: ಹಿಮಾಲಯ ಪರ್ವತ ಶ್ರೇಣಿಯಲ್ಲಿ ಸರಣಿ ಭೂಕಂಪನದ ಜೊತೆಗೆ ನಮ್ಮ ಜೀವಿತಾವಧಿಯಲ್ಲೇ 8 ಮ್ಯಾಗ್ನಿಟ್ಯೂಡ್‌ ತೀವ್ರತೆಗಿಂತ ಅಧಿಕವಾದ ಭಾರಿ ಭೂಕಂಪನ ಸಂಭವಿಸುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ಉಲ್ಲೇಖಿಸಿದೆ.

 ಇಂಥ ದುರ್ಘಟನೆ ಸಂಭವಿಸಿದರೆ ಹಿಮಾಲಯ ಪರ್ವತದ ವ್ಯಾಪ್ತಿಯಲ್ಲಿರುವ ರಾಷ್ಟ್ರಗಳಲ್ಲಿ ಸಂಭವಿಸುವ ಸಾವುನೋವು ಅಪಾರವಾಗಿರಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. 20ನೇ ಶತಮಾನದಲ್ಲಿ ಗಲ್ಫ್‌ ಆಫ್‌ ಅಲಾಸ್ಕದಿಂದ ಪೂರ್ವ ರಷ್ಯಾದ ಆಯಮ್‌ಚಟ್ಕಾದವರೆಗಿರುವ ಲ್ಯೂಷನ್‌ ಸಬ್‌ಡಕ್ಷನ್‌ ವಲಯದಲ್ಲಿ ಸಂಭವಿಸಿದ ಭೂಕಂಪದ ರೀತಿಯೇ ಹಿಮಾಲಯ ಶ್ರೇಣಿಯಲ್ಲೂ ಸರಣಿ ಭೂಕಂಪ ಸಂಭವಿಸಲಿದೆ ಎಂದು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ.

‘ಸೆಸ್ಮೊಲೊಜಿಕಲ್‌ ರಿಸರ್ಚ್‌ ಲೆಟರ್ಸ್‌’ ಹೆಸರಿನ ನಿಯತಕಾಲಿದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದ್ದು, ‘ಭಾರತದ ಅರುಣಾಚಲ ಪ್ರದೇಶದ ಪೂರ್ವ ಗಡಿಭಾಗದಿಂದ ಪಾಕಿಸ್ತಾನದವರೆಗೆ ವ್ಯಾಪಿಸಿರುವ ಹಿಮಾಲಯ ಶ್ರೇಣಿಯು ಈ ಹಿಂದೆಯೂ ಭೂಕಂಪದ ಮೂಲವಾಗಿದೆ. ಈ ಶ್ರೇಣಿಯಲ್ಲಿ ಭೂಕಂಪಗಳು ಮುಂದುವರಿಯಲಿದ್ದು, ಅತಿ ಹೆಚ್ಚು ತೀವ್ರತೆಯ ಭೂಕಂಪ ನಮ್ಮ ಜೀವಿತಾವಧಿಯಲ್ಲೇ ಸಂಭವಿಸದರೆ ಆಶ್ಚರ್ಯಪಡಬೇಕಾಗಿಲ್ಲ’ ಎಂದು ಅಮೆರಿಕದ ನೆವಾಡ ವಿಶ್ವವಿದ್ಯಾಲಯದ ಭೂಗರ್ಭಶಾಸ್ತ್ರ ವಿಭಾಗದ ಪ್ರಾಧ್ಯಾಪಕ ವೆಸ್‌ನೌಸ್ಕಿ ತಿಳಿಸಿದರು.


ದೆಹಲಿ ಗಲಭೆಯಿಂದ ದೇಶದ ಆತ್ಮಸಾಕ್ಷಿಗೆ ಆಳವಾದ ಗಾಯವಾಗಿದೆ: ಕೋರ್ಟ್

ದೆಹಲಿ ಗಲಭೆಯಿಂದ ದೇಶದ ಆತ್ಮಸಾಕ್ಷಿಗೆ ಆಳವಾದ ಗಾಯವಾಗಿದೆ: ಕೋರ್ಟ್


 ದೆಹಲಿ ಗಲಭೆಯಿಂದ ದೇಶದ ಆತ್ಮಸಾಕ್ಷಿಗೆ ಆಳವಾದ ಗಾಯವಾಗಿದೆ: ಕೋರ್ಟ್

ಹೊಸದೆಹಲಿ(22/10/2020): ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದಿದ್ದ ಗಲಭೆ ದೇಶ ವಿಭಜನೆ ಬಳಿಕ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅತ್ಯಂತ ಕೆಟ್ಟ ಗಲಭೆ ಎಂದು ಹೆಚ್ಚುವರಿ ಸೆಷನ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಗಲಭೆಯು ದೇಶದ ಆತ್ಮಸಾಕ್ಷಿಯ ಮೇಲಿನ ಆಳವಾದ ಗಾಯವಾಗಿದೆ ಎಂದು ಕೋರ್ಟ್ ಹೇಳಿದೆ. ಮಾಜಿ ಆಪ್ ಕೌನ್ಸಿಲರ್ ತಾಹಿರ್ ಹುಸೇನ್ ಅವರ ಜಾಮೀನು ಅರ್ಜಿ ವಿಚಾರಣೆಯ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

 6 ವರ್ಷದ ಬಾಲಕಿಯನ್ನು ರೇಪ್ ಮಾಡಿ, ಸುಟ್ಟ ಕಿರತಕರು

6 ವರ್ಷದ ಬಾಲಕಿಯನ್ನು ರೇಪ್ ಮಾಡಿ, ಸುಟ್ಟ ಕಿರತಕರು

 

6 ವರ್ಷದ ಬಾಲಕಿಯನ್ನು ರೇಪ್ ಮಾಡಿ, ಸುಟ್ಟ ಕಿರತಕರು

ಪಂಜಾಬ್: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಸಜೀವ ದಹನ ಮಾಡಿದ ಭೀಕರ ಘಟನೆ ಪಂಜಾಬ್ ನ ಹೋಶಿಯಾರ್ ಪುರದ ಜಲಾಲ್ ಪುರದಲ್ಲಿ ನಡೆದಿದೆ.

ಅರ್ಧ ಸುಟ್ಟುಹೋಗಿರುವ ದೇಹ ಮನೆಯೊಂದರಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಗುರ್ ಪ್ರೀತ್ ಸಿಂಗ್ ಹಾಗೂ ಆತನ ಅಜ್ಜ ಸುರ್ಜಿತ್ ಸಿಂಗ್ ಇಬ್ಬರನ್ನೂ ಕೊಲೆ, ಅತ್ಯಾಚಾರದ ಆರೋಪದಡಿ, ಪೋಸ್ಕೋ ಕಾಯ್ದೆಯಡಿ ಬಂಧಿಸಲಾಗಿದೆ.

ಸಂತ್ರಸ್ತ ಬಾಲಕಿ ವಲಸೆ ಕಾರ್ಮಿಕನ ಮಗಳಾಗಿದ್ದು, ಗುರ್ ಪ್ರೀತ್ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಆಗಲೇ ಆಕೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ ಎಂದು ಸಂತ್ರಸ್ತ ಬಾಲಕಿಯ ತಂದೆ ಆರೋಪಿಸಿದ್ದಾರೆ. ಆರೋಪಿಗಳ ಮನೆಯಲ್ಲೇ ಸಂತ್ರಸ್ತ ಬಾಲಕಿಯ ದೇಹ ಪತ್ತೆಯಾಗಿದೆ.


ಗಡ್ಡ ಬಿಟ್ಟ ಕಾರಣಕ್ಕೆ ಮುಸ್ಲಿಂ ಸಬ್ ಇನ್ಸ್ ಪೆಕ್ಟರ್ ಕರ್ತವ್ಯದಿಂದ ವಜಾ!

ಗಡ್ಡ ಬಿಟ್ಟ ಕಾರಣಕ್ಕೆ ಮುಸ್ಲಿಂ ಸಬ್ ಇನ್ಸ್ ಪೆಕ್ಟರ್ ಕರ್ತವ್ಯದಿಂದ ವಜಾ!


 ಗಡ್ಡ ಬಿಟ್ಟ ಕಾರಣಕ್ಕೆ ಮುಸ್ಲಿಂ ಸಬ್ ಇನ್ಸ್ ಪೆಕ್ಟರ್ ಕರ್ತವ್ಯದಿಂದ ವಜಾ!

ಉತ್ತರಪ್ರದೇಶ(22-10-2020): ಗಡ್ಡ ಬಿಟ್ಟ ಕಾರಣಕ್ಕೆ ಮುಸ್ಲಿಂ ಸಬ್ ಇನ್ಸ್ ಪೆಕ್ಟರನ್ನು ಕರ್ತವ್ಯದಿಂದ ವಜಾಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

  3 ವರ್ಷಗಳಿಂದ ಸಬ್​ ಇನ್​ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇಂತೆಸರ್ ಅಲಿ ಎಂಬವರು ಉದ್ದನೆಯ ದಾಡಿ ಬಿಟ್ಟಿದ್ದ ಕಾರಣಕ್ಕೆ ಬಾಘ್​ಪಟ್​ನ ಎಸ್​ಪಿ ಅಭಿಷೇಕ್ ಸಿಂಗ್ ಅಮಾನತು ಮಾಡಿದ್ದಾರೆ.

ಇಂತೆಸರ್ ಅಲಿ ಎಂಬವರು ಉದ್ದನೆಯ ದಾಡಿ ಬಿಟ್ಟಿದ್ದರು.  ಗಡ್ಡ ಬೋಳಿಸಿಕೊಂಡು ಬರುವಂತೆ ಅಥವಾ ಗಡ್ಡ ಉಳಿಸಿಕೊಳ್ಳಲು ಮೇಲಧಿಕಾರಿಗಳ ಅನುಮತಿ ಪಡೆಯಲಿಲ್ಲ ಎಂದು ಎಸ್ ಪಿ ಅವರ ವಿರುದ್ಧ ಆಪಾದನೆಯನ್ನು ಮಾಡಿದ್ದಾರೆ.

 ಅಸ್ಸಾದಾತ್' ಕೃತಿ ನಾಳೆ ಬಿಡುಗಡೆ

ಅಸ್ಸಾದಾತ್' ಕೃತಿ ನಾಳೆ ಬಿಡುಗಡೆ

 

ಅಸ್ಸಾದಾತ್' ಕೃತಿ ನಾಳೆ ಬಿಡುಗಡೆ

ಬೆಳ್ತಂಗಡಿ: ಪ್ರವಾದಿ ಮುಹಮ್ಮದ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ರವರ ವಂಶಸ್ಥರಿಗೆ 'ಅಹ್ಲ್ ಬೈತ್' ಎಂಬ ಹೆಸರಲ್ಲಿ ಇಸ್ಲಾಮಿನಲ್ಲಿ ಪ್ರತ್ಯೇಕ ಸ್ಥಾನ, ಗೌರವ ಕಲ್ಪಿಸಲಾಗಿದೆ.  ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಬೆಳ್ತಂಗಡಿ ತಾಲೂಕಿನಲ್ಲಿ ಗಣನೀಯ ಸಂಖ್ಯೆಯಲ್ಲಿದ್ದು ವಿವಿಧೆಡೆ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆಯ ಮೂಲಕ ಸಕ್ರಿಯರಾಗಿ, ಜನಾದರಣೀಯರಾಗಿರುವ ಹಲವು ಸಾದಾತುಗಳ ಪರಿಚಯವನ್ನು ಹೊಂದಿರುವ 'ಅಸ್ಸಾದಾತ್' ಎಂಬ ಕೃತಿ ಯನ್ನು ಹೊರತರುವ ಪ್ರಯತ್ನ ವನ್ನು ಬೆಳ್ತಂಗಡಿ ತಾಲೂಕಿನ ಮುರ -ನಾವೂರು ಜಮಾತಿನ  ಅನಿವಾಸಿ ಗಲ್ಫ್  ಸಂಘಟನೆಯಾದ 'ಬದ್ರುಲ್ ಹುದಾ ಗಲ್ಫ್ ಅಸೋಸಿಯೇಶನ್' ಮಾಡಿದೆ.  ಈ ಕೃತಿಯ ಬಿಡುಗಡೆ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಯೋಜಿಸಲಾಗಿದ್ದು ತಾಲೂಕಿನ 10 ಜಮಾತಿನಲ್ಲಿ ಇದೇ ಅಕ್ಟೋಬರ್ 23 ರಂದು ಶುಕ್ರವಾರ ಜುಮಾ ನಮಾಜಿನ ನಂತರ ಸ್ಥಳೀಯ ಸಾದಾತುಗಳು, ಉಲಮಾಗಳು ಹಾಗೂ ಜಮಾತಿನ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಏಕಕಾಲಕ್ಕೆ ಬಿಡುಗಡೆಗೊಳ್ಳಲಿದೆ.  ಎಂದು ಸಂಘಟನೆಯ ಅಧ್ಯಕ್ಷ ಇಲ್ಯಾಸ್ ಮದನಿ ನಾವೂರು (ತಾಯಿಫ್, ಸೌದಿ ಅರೇಬಿಯಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃತಿ ಬಿಡುಗಡೆ ಗೊಳ್ಳಲಿರುವ ಸ್ಥಳಗಳು: ಮುರ, ಗುರುವಾಯನಕೆರೆ, ಕಾಜೂರು, ಕಿಲ್ಲೂರು,  ಬೆಳ್ತಂಗಡಿ,  ಬೆಳಾಲು, ಕುಪ್ಪೆಟ್ಟಿ, ಮನ್ಶರ್ ಗೇರುಕಟ್ಟೆ,  ಜಮಲಾಬಾದ್, ಅಳಕೆ

 ಬಿಹಾರ ರಾಜ್ಯ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ: ಎಲ್ಲರಿಗೂ ಉಚಿತ ಕೊರೋನಾ ಲಸಿಕೆ ನೀಡುವ ಭರವಸೆ!

ಬಿಹಾರ ರಾಜ್ಯ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ: ಎಲ್ಲರಿಗೂ ಉಚಿತ ಕೊರೋನಾ ಲಸಿಕೆ ನೀಡುವ ಭರವಸೆ!

 

ಬಿಹಾರ ರಾಜ್ಯ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆ ಬಿಡುಗಡೆ: ಎಲ್ಲರಿಗೂ ಉಚಿತ ಕೊರೋನಾ ಲಸಿಕೆ ನೀಡುವ ಭರವಸೆ!

ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆಯನ್ನು ನೀಡಿದೆ. 

ಪಾಟ್ನಾ: ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಬಿಹಾರ ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪ್ರಣಾಳಿಕೆಯಲ್ಲಿ ಎಲ್ಲರಿಗೂ ಉಚಿತ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆಯನ್ನು ನೀಡಿದೆ. 

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ನಿರ್ಮಲಾ ಸೀತಾರಾಮನ್ ಅವರೊಂದಿಗೆ ಬಿಜೆಪಿ ಹಿರಿಯ ಮುಖಂಡ ಭೂಪೇಂದರ್ ಯಾದವ್, ಅಶ್ವಿನಿ ಚೌಹೆ, ಪ್ರಮೋದ್ ಕುಮಾರ್, ನಿತ್ಯಾನಂದ ರೇ ಅವರು ಉಪಸ್ಥಿತರಿದ್ದರು. 

ಪ್ರಣಾಳಿಕೆ ಬಿಡುಗಡೆಗೊಳಿಸಿರುವ ಬಿಜೆಪಿ, ಎಲ್ಲರಿಗೂ ಉಚಿಕ ಕೊರೋನಾ ವೈರಸ್ ಲಸಿಕೆ ನೀಡುವ ಭರವಸೆ, ರಾಜ್ಯ ಕಾರ್ಮಿಕರಿಗೆ ಬಿಹಾರ ರಾಜ್ಯದಲ್ಲಿಯೇ ಉದ್ಯೋ ಸೃಷ್ಟಿಸುವುದಕ್ಕೆ ಮೊದಲ ಆದ್ಯತೆಯನ್ನು ನೀಡುವುದಾಗಿ ತಿಳಿಸಿದೆ. 

ಕೊರೋನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶಕ್ಕೆ ಎನ್'ಡಿಎ ಸರ್ಕಾರ ಉದಾಹರಣೆಯಾಗಿದೆ. ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಿದ ಕೂಡಲೇ ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡುವುದು ನಮ್ಮ ಸಂಕಲ್ಪವಾಗಿದೆ. ಲಸಿಕೆಗೆ ಅನುಮತಿ ದೊರಕಿದ ಕೂಡಲೇ ಪ್ರತೀಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡಲಾಗುತ್ತದೆ. ಪ್ರಣಾಳಿಕೆಯಲ್ಲಿ ಇದು ನಾವು ನೀಡುತ್ತಿರುವ ಮೊದಲ ಭರವಸೆಯಾಗಿದೆ. 

ಬಿಜೆಪಿ ಹಿರಿಯ ನಾಯಕ ಮಾತನಾಡಿ, ಬಿಹಾರವು ಒಂದು ರಾಜ್ಯವಾಗಿದ್ದು, ಇಲ್ಲಿರುವ ಪ್ರತೀಯೊಬ್ಬ ನಾಗರಿಕ ರಾಜಕೀಯವಾಗಿ ಸೂಕ್ಷ್ಮವಾಗಿದ್ದಾನೆ. ಮತ್ತು ರಾಜಕೀಯದ ಕುರಿತು ಉತ್ತಮ ಮಾಹಿತಿಗಳನ್ನು ತಿಳಿದಿರುವವರಾಗಿದ್ದಾರೆ. ಪಕ್ಷಗಳು ಮಾಡುವ ಭರವಸೆಗಳನ್ನು ಉತ್ತಮವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ನಮ್ಮ ಪ್ರಣಾಳಿಕೆ ಕುರಿತು ಯಾರೇ ಪ್ರಶ್ನೆ ಮಾಡಿದರೂ, ಆ ಪ್ರಶ್ನೆಗೆ ಉತ್ತರಿಸಲು ನಾವು ಸಿದ್ಧರಿದ್ದೇವೆ. ಭರವಸೆಯನ್ನು ಈಡೇರಿಸುವ ವಿಶ್ವಾಸ ಹೊಂದಿದ್ದೇವೆಂದು ಹೇಳಿದ್ದಾರೆ. 

ನಿರ್ಮಲಾ ಸೀತಾರಾಮನ್ ಅವರು ಮಾತನಾಡಿ, ಬಿಹಾರದಲ್ಲಿ ಒಟ್ಟು ದೇಶೀಯ ಉತ್ಪನ್ನವು ಎನ್‌ಡಿಎ ಅಧಿಕಾರದ ಅವಧಿಯಲ್ಲಿ ಭಾರೀ ಏರಿಕೆ ಕಂಡಿದೆ ಎಂದು ಮಾಹಿತಿ ನೀಡಿದ್ದು, ಬಿಹಾರದಲ್ಲಿ ಜಿಡಿಪಿ ಶೇ 3 ರಿಂದ 11.3 ಕ್ಕೆ ಏರಿದೆ ಎಂದು ತಿಳಿಸಿದ್ದಾರೆ. 

ಕೊರೋನಾ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.

ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ಜೆಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.


 ಬೆಳ್ಳಂಬೆಳಿಗ್ಗೆ ಅಸಿಸ್ಟೆಂಟ್ ಇಂಜಿನಿಯರ್ ನಿವಾಸದ ಮೇಲೆ ಎಸಿಬಿ ದಾಳಿ

ಬೆಳ್ಳಂಬೆಳಿಗ್ಗೆ ಅಸಿಸ್ಟೆಂಟ್ ಇಂಜಿನಿಯರ್ ನಿವಾಸದ ಮೇಲೆ ಎಸಿಬಿ ದಾಳಿ

 

ಬೆಳ್ಳಂಬೆಳಿಗ್ಗೆ ಅಸಿಸ್ಟೆಂಟ್ ಇಂಜಿನಿಯರ್ ನಿವಾಸದ ಮೇಲೆ ಎಸಿಬಿ ದಾಳಿ

ಬಾಗಲಕೋಟೆ: ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಬೆಳ್ಳಂಬೆಳಿಗ್ಗೆ ಬಾಗಲಕೋಟೆಯಲ್ಲಿ ಅಧಿಕಾರಿಯ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದೆ.

ಬಾಗಲಕೋಟೆಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಸಿಸ್ಟಂಟ್ ಇಂಜಿನಿಯರ್ ಅಶೋಕ ತೋಪಲಕಟ್ಟಿ ಅವರ ನಿವಾಸ, ಕಚೇರಿ ಹಾಗೂ ಗ್ಯಾಸ್ ಎಜೆನ್ಸಿ‌ ಸೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬಾಗಲಕೋಟೆಯ ವಿದ್ಯಾಗಿರಿಯ 8ನೇ ಕ್ರಾಸ್ ನಲ್ಲಿರುವ ಅಶೋಕ ಅವರ ನಿವಾಸ, 17ನೇ ಕ್ರಾಸ್ ನಲ್ಲಿರುವ ಗ್ಯಾಸ್ ಏಜೆನ್ಸಿ ಹಾಗೂ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಕಚೇರಿ ಸೇರಿ ಮೂರು ಕಡೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

Wednesday, 21 October 2020

ಆಗ್ನೇಯ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ: ಬಿಜೆಪಿಗೆ ಮಗ್ಗುಲ ಮುಳ್ಳಾಗಿರುವ ಬಂಡಾಯ ಅಭ್ಯರ್ಥಿಗಳು!

ಆಗ್ನೇಯ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ: ಬಿಜೆಪಿಗೆ ಮಗ್ಗುಲ ಮುಳ್ಳಾಗಿರುವ ಬಂಡಾಯ ಅಭ್ಯರ್ಥಿಗಳು!

 

ಆಗ್ನೇಯ ಪದವೀಧರ ಕ್ಷೇತ್ರದ ಪರಿಷತ್ ಚುನಾವಣೆ: ಬಿಜೆಪಿಗೆ ಮಗ್ಗುಲ ಮುಳ್ಳಾಗಿರುವ ಬಂಡಾಯ ಅಭ್ಯರ್ಥಿಗಳು!

ದಾವಣಗೆರೆ/ಚಿತ್ರದುರ್ಗ: ಚುನಾವಣಾ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪ್ರಚಾರದ ಭರಾಟೆ ಹೆಚ್ಚಿದೆ.

ಅಕ್ಟೋಬರ್ 28 ರಂದು ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿರುವುದರಿಂದ ಅಭ್ಯರ್ಥಿಗಳು ತಮ್ಮ ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳ 15 ಅಭ್ಯರ್ಥಿಗಳು ಹಾಗೂ ಇಬ್ಬರು ಬಿಜೆಪಿ ಬಂಡಾಯ ಸ್ಪರ್ಧಿಗಳು ಕಣದಲ್ಲಿದ್ದಾರೆ.

ಕಾಂಗ್ರೆಸ್ ನ ರಮೇಶ್ ಬಾಬು ಮತ್ತು ಜೆಡಿಎಸ್ ನ ಚೌಡರೆಡ್ಡಿ ತೋಪಳ್ಳಿ ಅವರಿಗೆ ಪಕ್ಷದ ಬಂಡಾಯಗಾರರ ಕಾಟವಿಲ್ಲ. ಆಜದರೆ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ ಗೌಡ ಅವರಿಗೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ ತೊಡಕಾಗಿದ್ದಾರೆ. ಅವರ ಜೊತೆಗೆ ಮತ್ತೊಬ್ಬ ಬಿಜೆಪಿ ಅಭ್ಯರ್ಥಿ ಡಾ.ಹಲನೂರು ಲೇಪಾಕ್ಷಿ ಕೂಡ ಸ್ವತಂತ್ರ್ಯವಾಗಿ ಸ್ಪರ್ಧಿಸಿದ್ದಾರೆ.

ಈ ಇಬ್ಬರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸದಂತೆ ತಡೆಯಲು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ, ಚಿದಾನಂದ ಪರವಾಗಿ ಪಕ್ಷದ ಘಟಾನುಘಟಿಗಳು ಪ್ರಚಾರ ನಡೆಸುತ್ತಿದ್ದಾರೆ.

ತನ್ನ ಪತಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು ಮುಜುಗರ ತಂದಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ. ಆದರೆ ತಮ್ಮ ಪತಿಗೆ ಬೆಂಬಲ ನೀಡುತ್ತಾರೋ ಇಲ್ಲವೋ ಎಂಬುದನ್ನು ಅವರು ಸ್ಪಷ್ಟ ಪಡಿಸಿಲ್ಲ.

ಚುನಾವಣೆಯಲ್ಲಿ ತಾವು ಗೆಲ್ಲುವುದಾಗಿ ಲೇಪಾಕ್ಷಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಅನುಕಂಪ ತಮ್ಮ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಇದುವರೆಗೂ ಮೂರು ಬಾರಿ ಲೇಪಾಕ್ಷಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ.

ಇನ್ನೂ ವಿಧಾನಸಭೆ, ಸಂಸತ್ ಮತ್ತು ಎಂಎಲ್ ಸಿ ಚುನಾವಣೆಯಲ್ಲಿ ಬಿಜೆಯನ್ನು ಟೀಕಿಸಿದ್ದ ಚಿದಾನಂದ ಗೌಡ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಮತದಾರರಿಗೆ ಅವರು ಯಾರು ಎಂಬುದು ತಿಳಿದಿಲ್ಲ, ಕಳೆದ 30 ವರ್ಷಗಳಿಂದ ನಾನು ಪದವೀಧರಿಗಾಗಿ ಕೆಲಸ ಮಾಡುತ್ತಿದ್ದೇನೆ, ಜೊತೆಗೆ ಶಿಕ್ಷಕರ ಪರವಾಗಿ ಹಲವು ಉತ್ತಮ ಕೆಲಸ ಮಾಡಿದ್ದೇನೆ,ನಾನು ಲಿಂಗಾಯತ ಸಮುದಾಯದ ಪ್ರಬಲ ಅಭ್ಯರ್ಥಿ ಎಂದು ಲೇಪಾಕ್ಷಿ ತಿಳಿಸಿದ್ದಾರೆ.

ಬಿಜೆಪಿಗೆ ಇಬ್ಬರು ಬಂಡಾಯ ಅಭ್ಯರ್ಥಿಗಳು ತಲೆನೋವಾಗಿದ್ದಾರೆ, ಆದರೆ ವಿದ್ಯಾವಂತರ ಮನಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ, ಅವರೆಲ್ಲಾ ಸೂಕ್ಷ್ಮ ಮನಸ್ಸಿನವರು ಎಂದು ಕ್ಷೇತ್ರದ ಉಸ್ತುವಾರಿ ಕೆಎಸ್ ನವೀನ್ ತಿಳಿಸಿದ್ದಾರೆ. ಪಕ್ಷದ ಮುಖಂಡರು ಚಿದಾನಂದ ಪರವಾಗಿ ಪ್ರಚಾರಮಾಡುವುದರಿಂದ ಸಹಾಯವಾಗಲಿದೆ ಎಂದು ತಿಳಿಸಿದ್ದಾರೆ.

ಇಂದು, ನಾಳೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ:   ಬೆಂಗಳೂರಿಗೆ  ಯೆಲ್ಲೋ ಅಲರ್ಟ್ ಎಚ್ಚರಿಕೆ

ಇಂದು, ನಾಳೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ

 

ಇಂದು, ನಾಳೆ ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ:                 ಬೆಂಗಳೂರಿಗೆ  ಯೆಲ್ಲೋ ಅಲರ್ಟ್ ಎಚ್ಚರಿಕೆ

ಬೆಂಗಳೂರು: ಕಳೆದ ಕೆಲ ದಿನಗಳಿಂದ ಅಬ್ಬರಿಸುತ್ತಿರುವ ವರುಣ ಗುರುವಾರ ಮತ್ತು ಶುಕ್ರವಾರ ಕೂಡ ಆರಂಭಿಸುವ ಸಾಧ್ಯತೆಗಳಿದ್ದು, ಈ ನಡುವಲ್ಲೇ ಬೆಂಗಳೂರು ನಗರ ಜಿಲ್ಲೆಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಅ.22 ರಂದು ಬೆಂಗಳೂರು ನಗರದಲ್ಲಿ ಗುಡುಗು, ಮುಂಚು ಸಹಿತ ಧಾರಾಕಾರ ಮಳೆ ಬೀಳಲಿದೆ. ಮಂಗಳವಾರ ತಡರಾತ್ರಿ ಅಂದಾಜು 700 ಮಿ.ಮೀ ನಷ್ಟು ಮಳೆಯಾಗಿತ್ತು. ಅದೇ ರೀತಿ ಗುರುವಾರವೂ ಮಳೆ ಬರುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಬಂಗಾಳಕೊಲ್ಲಿಯಲ್ಲಿ ಗಾಳಿಯ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಳೆ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ನಿನ್ನೆ ನಗರದಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದ್ದು, ಮೋಡ ಕವಿದ ಹಾಗೂ ಚಳಿಯ ವಾತಾವರಣವಿತ್ತು. ನಿನ್ನೆ ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣದ ಜೊತೆಗೆ ಆಗಾಗ ಬಿಸಿಲು ಕಂಡು ಬಂದಿತ್ತು. ಮಧ್ಯಾಹ್ನದ ನಂತರ ವಿಜಯನಗರ, ಹಂಪಿನಗರ, ಅತ್ತಿಗುಪ್ಪೆ, ಆರ್.ಆರ್.ನಗರ, ನೆಲಗುಳಿ, ಕಾಡುಗೋಡಿ, ಹಗದೂರು, ದೇವನಹಳ್ಳಿಯ ಕೊಯಿರಾ ಭಾಗದಲ್ಲಿ ತುಂತುರು ಮಳೆ ಬಿದ್ದಿದೆ. ಇದರ ಹೊರತು ಎಲ್ಲಿಯೂ ಅಷ್ಟಾಗಿ ಮಳೆ ದಾಖಲಾದ ಬಗ್ಗೆ ವರದಿಯಾಗಿಲ್ಲ .

ಇನ್ನೆರಡು ದಿನ ಭಾರೀ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಎಚ್ಚರಿಗೆ ನೀಡಲಾಗಿದೆ. ಕರಾವಳಿಯಲ್ಲಿ ಅ.22ರಿಂದ 24ರವರೆಗೆ ಮೂರು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

 ಶಾಕಿಂಗ್ ಸುದ್ದಿ| ಎಟಿಎಂ ಬಳಕೆಗೂ ಬೀಳುತ್ತೆ ಶುಲ್ಕ!

ಶಾಕಿಂಗ್ ಸುದ್ದಿ| ಎಟಿಎಂ ಬಳಕೆಗೂ ಬೀಳುತ್ತೆ ಶುಲ್ಕ!

 ಶಾಕಿಂಗ್ ಸುದ್ದಿ| ಎಟಿಎಂ ಬಳಕೆಗೂ ಬೀಳುತ್ತೆ ಶುಲ್ಕ!

ನವದೆಹಲಿ(22-10-2020): ಎಟಿಎಂನಿಂದ 5 ಸಾವಿರ ರೂ.ಕ್ಕಿಂತ ಹೆಚ್ಚು ಹಣ ವಿತ್ ಡ್ರವಲ್ ಮಾಡಿದರೆ ಶುಲ್ಕ ವಿಧಿಸಲು ನಿಯಮವನ್ನು ಜಾರಿಗೆ ತರುವ ಸಾದ್ಯತೆಯಿದೆ ಎಂದು ವರದಿಯಾಗಿದೆ.

    ಹೊಸ ಎಟಿಎಂ ನಿಯಮ ಜಾರಿಗೆ ಬಂದರೆ, ತಿಂಗಳಿಗೆ 5 ಬಾರಿ ಉಚಿತ ಎಟಿಎಂ ಸೇವೆ ನೀತಿ ರದ್ದಾಗಲಿದೆ. 5 ಸಾವಿರ ರೂ.ಕ್ಕಿಂತ ಹೆಚ್ಚಿನ ಹಣವನ್ನು ತೆಗೆದರೆ ಅದಕ್ಕೆ ಪ್ರತ್ಯೇಕವಾಗಿ 24 ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ.ಆರ್ ಬಿಐ ನೇಮಿಸಿದ್ದ ಸಮಿತಿಯ ಶಿಫಾರಸಿನ ಮೇರೆಗೆ ಈ ಶುಲ್ಕ ವಿಧಿಸುವ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎನ್ನಲಾಗಿದೆ. ಒಂದು ವೇಳೆ ಈ ನೀತಿ ಜಾರಿಗೆ ಬಂದರೆ ಎಟಿಎಂ  ಬಳಕೆದಾರರಿಗೆ ಮತ್ತಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ. ಬ್ಯಾಂಕ್ ಗಳು ಪ್ರತಿ 5000ಕ್ಕಿಂತ ಅಧಿಕ ವಿತ್ ಡ್ರಾವಲ್ಗೆ ಶುಲ್ಕ ವಿಧಿಸಿ ಜನರ ಎಕೌಂಟ್ ಗೆ ಕನ್ನ ಹಾಕಲಿದೆ.

ಕೋವಿಡ್; ಸೌದಿ ಅರೇಬಿಯಾದಲ್ಲಿ 18 ಮಂದಿ ಮೃತಪಟ್ಟಿದ್ದು, 445 ಮಂದಿ ಗುಣಮುಖರಾಗಿದ್ದಾರೆ

ಕೋವಿಡ್; ಸೌದಿ ಅರೇಬಿಯಾದಲ್ಲಿ 18 ಮಂದಿ ಮೃತಪಟ್ಟಿದ್ದು, 445 ಮಂದಿ ಗುಣಮುಖರಾಗಿದ್ದಾರೆ

 ಕೋವಿಡ್; ಸೌದಿ ಅರೇಬಿಯಾದಲ್ಲಿ 18 ಮಂದಿ ಮೃತಪಟ್ಟಿದ್ದು, 445 ಮಂದಿ ಗುಣಮುಖರಾಗಿದ್ದಾರೆ

ದಮ್ಮಂ | ಸೌದಿ ಅರೇಬಿಯಾದಲ್ಲಿ ಬುಧವಾರ, ಕೋವಿಡ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದ 18 ಜನರು ಸಾವನ್ನಪ್ಪಿದರು ಮತ್ತು 445 ಜನರನ್ನು ಗುಣಪಡಿಸಲಾಯಿತು. 405 ಹೊಸ ಪ್ರಕರಣಗಳು ದೃಡಪಟ್ಟಿದೆ. ಮದೀನಾದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ – 92. ಮಕ್ಕಾ – 44, ರಿಯಾದ್ – 34, ಖಮಿಸ್ ಮುಷೈತ್ – 18, ಅಲ್ – ಮುಬಾರಸ್ – 14, ದಹ್ರಾನ್ – 14, ದಮ್ಮಮ್ – 13, ಅಲ್ – ಹುಫುಫ್ – 12, ಅಲ್ ಐಸ್ – 9, ನಜ್ರಾನ್ – 9, ಆಲಿಕಲ್ಲು -8, ವಾಡಿ ಅಲ್-ದವಾಸಿರ್ -8, ಬಲ್ಲಾಸ್ಮಾರ್ -7 ಮತ್ತು ಜೆಡ್ಡಾ -7.

  ವರದಿಯಾದ ಒಟ್ಟು 3,43,375 ಪ್ರಕರಣಗಳಲ್ಲಿ 3,29,715 ಪ್ರಕರಣಗಳು ಗುಣಮುಖವಾಗಿದ್ದು, ದೇಶದಲ್ಲಿ ಕೋವಿಡ್ ಮುಕ್ತಾಗಳ ಪ್ರಮಾಣ ಶೇ 96.1 ಕ್ಕೆ ಏರಿದೆ. ಒಟ್ಟು ಸಾವಿನ ಸಂಖ್ಯೆ 5,235. ಮರಣ ಪ್ರಮಾಣ 1.5 ಪ್ರತಿಶತ. ದೇಶಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 8,423 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 804 ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ

“ನಿನ್ನ ಸಮಾಧಿ ಗುಂಡಿಯನ್ನು ಜಮ್ಮುವಿನಲ್ಲೇ ತೋಡುತ್ತೇವೆ” ಕಥುವಾ ಸಂತ್ರಸ್ತೆ ಪರ ವಾದಿಸಿದ ವಕೀಲೆಗೆ ಹಿಂದುತ್ವವಾದಿ ಗುಂಪಿನಿಂದ ಜೀವ ಬೆದರಿಕೆ

“ನಿನ್ನ ಸಮಾಧಿ ಗುಂಡಿಯನ್ನು ಜಮ್ಮುವಿನಲ್ಲೇ ತೋಡುತ್ತೇವೆ” ಕಥುವಾ ಸಂತ್ರಸ್ತೆ ಪರ ವಾದಿಸಿದ ವಕೀಲೆಗೆ ಹಿಂದುತ್ವವಾದಿ ಗುಂಪಿನಿಂದ ಜೀವ ಬೆದರಿಕೆ

“ನಿನ್ನ ಸಮಾಧಿ ಗುಂಡಿಯನ್ನು ಜಮ್ಮುವಿನಲ್ಲೇ ತೋಡುತ್ತೇವೆ” ಕಥುವಾ ಸಂತ್ರಸ್ತೆ ಪರ ವಾದಿಸಿದ ವಕೀಲೆಗೆ ಹಿಂದುತ್ವವಾದಿ ಗುಂಪಿನಿಂದ ಜೀವ ಬೆದರಿಕೆ

ಜಮ್ಮು ಕಾಶ್ಮೀರ(21-10-2020): ಜಮ್ಮು ಕಾಶ್ಮೀರದ ಕಥುವಾದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ, ಕ್ರೂರವಾಗಿ ಕೊಲೆಗೀಡಾದ ಅಪ್ರಾಪ್ತ ಬಾಲಕಿಯ ಕುಟುಂಬದ ಪರ ವಾದಿಸಿದ ವಕೀಲೆ ದೀಪಿಕಾ ಸಿಂಗ್ ರಜಾವತಿಗೆ ಜೀವ ಬೆದರಿಕೆ ಹಾಕಲಾಗಿದೆ. ಹಿಂದುತ್ವವಾದಿ ಘೋಷಣೆಗಳನ್ನು ಕೂಗುತ್ತಾ, ವಕೀಲೆಯ ನಿವಾಸದ ಹತ್ತಿರ ಬಂದ ದುಷ್ಕರ್ಮಿಗಳೇ ಈ ಜೀವ ಬೆದರಿಕೆ ಹಾಕಿದವರು. ಸ್ವತಃ ವಕೀಲೆ ಘಟನೆಯ ವೀಡಿಯೋ ಟ್ವಿಟರಿನಲ್ಲಿ ಹಂಚಿದ್ದಾರೆ.

“ಗಮನಿಸಿ, ನನ್ನ ಮನೆಯ ಹೊರಗೆ ಸೇರಿದ ಜನರು ನನ್ನ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.” ಎಂಬ ಬರಹದೊಂದಿಗೆ ವಕೀಲೆ ಈ ವೀಡಿಯೋ ಹಂಚಿದ್ದಾರೆ. ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಪೋಲೀಸರು ಬರುವವರೆಗೂ ಇವರ ಘೋಷಣೆಗಳು ಮುಂದುವರಿಯುತ್ತಲೇ ಇತ್ತು. ಮರುದಿನವೂ ದುಷ್ಕರ್ಮಿಗಳು ಇದನ್ನೇ ಪುನರಾವರ್ತಿಸಿದ್ದರು ಎನ್ನಲಾಗಿದೆ.

ದೀಪಿಕಾರನ್ನು ಕೊಲ್ಲುವೆವು, ದೀಪಿಕಾರ ಸಮಾಧಿ ಗುಂಡಿಯನ್ನು ಜಮ್ಮುವಿನಲ್ಲೇ ತೋಡುತ್ತೇವೆ ಎಂದೆಲ್ಲಾ ದುಷ್ಕರ್ಮಿಗಳು ಘೋಷಣೆ ಮೊಳಗಿಸಿದ್ದರು.

ದೀಪಿಕಾ ಟ್ವೀಟ್ ಮಾಡಿದ ಒಂದು ಕಾರ್ಟೂನ್ ಹಿಂದೂ ದೇವ-ದೇವತೆಗಳನ್ನು ಅವಮಾನ ಮಾಡುತ್ತವೆಯೆಂದೂ, ಆಕೆಯನ್ನು ತಕ್ಷಣವೇ ಬಂಧಿಸಬೇಕೆಂದೂ ದೊಡ್ಡ ಸೈಬರ್ ಅಭಿಯಾನವನ್ನೇ ನಡೆಸಲಾಗಿತ್ತು. ನವರಾತ್ರಿಯ ಸಮಯದಲ್ಲಿ ದೀಪಿಕಾ ಪೋಸ್ಟ್ ಮಾಡಿದ ಒಂದು ಕಾರ್ಟೂನ್ ಈ ಎಲ್ಲಾ ವಿವಾದಗಳನ್ನು ಸೃಷ್ಟಿಸಿತ್ತು. ಆ ಕಾರ್ಟೂನಿನಲ್ಲಿ ನವರಾತ್ರಿಯಂದು ದೇವತೆಯ ಕಾಲು ಮುಟ್ಟಿ ನಮಸ್ಕರಿಸಿದ ಅದೇ ವ್ಯಕ್ತಿ ಮರುದಿನ ಮಹಿಳೆಯೊಬ್ಬಳ ಕಾಲು ಹಿಡಿದು ಕಿರುಕುಳ ನೀಡುವ ದೃಶ್ಯವಿದೆ.

ವಿರೋಧಾಭಾಸ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಲಾದ ಆ ಕಾರ್ಟೂನ್, ಹಿಂದೂ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದಲೇ ನವರಾತ್ರಿಯಂದು ಪೋಸ್ಟ್ ಮಾಡಿರುವುದೆಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲೇ ದೀಪಿಕಾರನ್ನು ಬಂಧಿಸಬೇಕೆಂಬ ಹ್ಯಾಶ್‌ಟ್ಯಾಗ್ ಬಳಸಿ ಸೈಬರ್ ಅಭಿಯಾನ ನಡೆಸಿರುವುದು ಮತ್ತು ಆಕೆಯ ಮನೆಯ ಮುಂದೆ ಸೇರಿ, ಜೀವ ಬೆದರಿಕೆ ಹಾಕಿರುವುದು. 

"ಪ್ರವಾದಿ ಶರೀರ ಸೌಂದರ್ಯ  ನೂತನ ಪುಸ್ತಕ ಬಿಡುಗಡೆ"

"ಪ್ರವಾದಿ ಶರೀರ ಸೌಂದರ್ಯ ನೂತನ ಪುಸ್ತಕ ಬಿಡುಗಡೆ"

"ಪ್ರವಾದಿ ಶರೀರ ಸೌಂದರ್ಯ  ನೂತನ ಪುಸ್ತಕ ಬಿಡುಗಡೆ"

 ಉಳ್ಳಾಲ: ತಲಪಾಡಿ ಕೋಟೆಕಾರು ಮೊಹಲ್ಲಾಗಳ ನೂತನ ಖಾಝಿಯಾಗಿ ಝೈನುಲ್ ಉಲಮಾ ಶೈಖುನಾ ಮಾಣಿ ಉಸ್ತಾದರು ಶುಕ್ರವಾರ ಅಧಿಕಾರ ಸ್ವೀಕರಿಸಿದರು. 

   ಪ್ರಸ್ತುತ  ಸಭೆಯಲ್ಲಿ ಕಾರಂದೂರು ಮರ್ಕಝ್ ವಿದ್ಯಾರ್ಥಿ ಮುಹಮ್ಮದ್ ಮುಸ್ತಫ ಏ‌.ಕೆ ಕೃಷ್ಣಾಪುರ ಬರೆದ "ಪ್ರವಾದಿ ಶರೀರ ಸೌಂದರ್ಯ" ಎಂಬ ವಿಶಿಷ್ಟ ಪುಸ್ತಕವನ್ನು ನೂತನ ಖಾಝಿ ಶೈಖುನಾ ಮಾಣಿ ಉಸ್ತಾದರು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಹಾಗೂ ಸುನ್ನೀ ಯುವಜನ ಸಂಘ ಇದರ ರಾಜ್ಯ ನಾಯಕರು ಉಪಸ್ಥಿತರಿದ್ದರು.

ಗದ್ದಲ ಸೃಷ್ಟಿಸಿ ಚುನಾವಣೆ ತಡೆಯಲು ಕಾಂಗ್ರೆಸ್ ಯತ್ನ: ಮುನಿರತ್ನ; ಸಿದ್ದರಾಮಯ್ಯ ಟೆಸ್ಟ್ ಡ್ರೈವ್ ಕಾರ್ ಎಂದ ಆರ್ ಅಶೋಕ್

ಗದ್ದಲ ಸೃಷ್ಟಿಸಿ ಚುನಾವಣೆ ತಡೆಯಲು ಕಾಂಗ್ರೆಸ್ ಯತ್ನ: ಮುನಿರತ್ನ; ಸಿದ್ದರಾಮಯ್ಯ ಟೆಸ್ಟ್ ಡ್ರೈವ್ ಕಾರ್ ಎಂದ ಆರ್ ಅಶೋಕ್

 ಗದ್ದಲ ಸೃಷ್ಟಿಸಿ ಚುನಾವಣೆ ತಡೆಯಲು ಕಾಂಗ್ರೆಸ್ ಯತ್ನ: ಮುನಿರತ್ನ; ಸಿದ್ದರಾಮಯ್ಯ ಟೆಸ್ಟ್ ಡ್ರೈವ್ ಕಾರ್ ಎಂದ ಆರ್ ಅಶೋಕ್


ಆರ್ ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಲಭೆ, ಗದ್ದಲಗಳನ್ನು ಸೃಷ್ಟಿಸಿ ಉಪ ಚುನಾವಣೆ ಶಾಂತಿಯುತವಾಗಿ ನಡೆಯದಂತೆ ಮಾಡಲು ಕ್ಷೇತ್ರದ ಹೊರಗಿನಿಂದ ಮೂರ್ನಾಲ್ಕು ಸಾವಿರ ಜನರನ್ನು ಕಾಂಗ್ರೆಸ್ ನಾಯಕರು ಕರೆತಂದಿದ್ದಾರೆ...


ಬೆಂಗಳೂರು: ಆರ್ ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಗಲಭೆ, ಗದ್ದಲಗಳನ್ನು ಸೃಷ್ಟಿಸಿ ಉಪ ಚುನಾವಣೆ ಶಾಂತಿಯುತವಾಗಿ ನಡೆಯದಂತೆ ಮಾಡಲು ಕ್ಷೇತ್ರದ ಹೊರಗಿನಿಂದ ಮೂರ್ನಾಲ್ಕು ಸಾವಿರ ಜನರನ್ನು ಕಾಂಗ್ರೆಸ್ ನಾಯಕರು ಕರೆತಂದಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.

ಜೆಡಿಎಸ್ ಮಖಂಡರ ಬಿಜೆಪಿ ಸೇರ್ಪಡೆ ವೇಳೆ ಮಾತನಾಡಿದ ಅವರು, ಆರ್ ಆರ್ ನಗರ ಕ್ಷೇತ್ರದಲ್ಲಿ ಶಾಂತಿಯುತ ಚುನಾವಣೆ ನಡೆಯಬೇಕು ಎನ್ನುವುದು ನಮ್ಮ ಉದ್ದೇಶ. ಆದರೆ ಹೊರಗಿನಿಂದ ಬಂದವರು ಶಾಂತಿಯುತ ಚುನಾವಣೆ ನಡೆಯಬಾರದು. ಗೊಂದಲ, ಗಲಭೆ ಸೃಷ್ಟಿಸಿ ಬಿಜೆಪಿ ಪಕ್ಷದವರು ನಮಗೆ ಹಲ್ಲೆ ನಡೆಸಿ ಬೆದರಿಕೆ ಹಾಕುತ್ತಿದ್ದಾರೆ ಎನ್ನುವ ಆರೋಪ ಹೊರಿಸಿ ಅನುಕಂಪ ಪಡೆಯುವ ಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನ್ಯಾಯಯುತ ಚುನಾವಣೆ ನಡೆಸಲು ಬಿಜೆಪಿ ಹಾಗೂ ಪಕ್ಷದ ಕಾರ್ಯಕರ್ತರು ಸಿದ್ದರಿದ್ದೇವೆ. ನೀವೂ ಕೂಡ ನ್ಯಾಯಯುತವಾಗಿ ಚುನಾವಣೆ ಎದುರಿಸಲು ಸಿದ್ದರಾಗಬೇಕು. ನಾವು ಕೆಟ್ಟವರು ಎಂದು ಬಿಂಬಿಸಿ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಇದೇ ವೇಳೆ ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ನಾರಾಯಣಸ್ವಾಮಿ ಜೆ.ಪಿ.ಪಾರ್ಕ್‌ನಲ್ಲಿ ಪ್ರತಿ ಮನೆಗೆ ಹೋಗಿ ಓಟರ್ ಐಡಿ ಪಡೆದು ಒಂದು ಕಡೆ ಇರಿಸಿ ಇದನ್ನು ಮುನಿರತ್ನ ಮಾಡುತ್ತಿದ್ದಾರೆ ಎಂದು ಬಿಂಬಿಸಲು ಹೊರಟಿದ್ದಾರೆ. ಮಾಜಿ ಸಂಸದ ಧ್ರುವ ನಾರಾಯಣ ನೇತೃತ್ವದಲ್ಲಿ ಈಗ ನಂದಿನಿ ಲೇಔಟ್ ನಲ್ಲಿಯೂ ಅದೇ ರೀತಿ ಮಾಡಲಾಗುತ್ತಿದೆ. ಜಾತಿ, ಧರ್ಮದ ದೂರವಾಣಿ ಸಂಖ್ಯೆ ಪಡೆದು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ. ಕ್ಷೇತ್ರದಲ್ಲಿ ಹಲ್ಲೆ, ದೊಂಬಿ ನಡೆದಿಲ್ಲ. ಇದು ಶಾಂತಿಯುತ ಕ್ಷೇತ್ರ. ಇದನ್ನು ಹೀಗೆಯೇ ಉಳಿಸಿ ಎಂದು ಮನವಿ ಮಾಡಿದರು.

ಮೂರರಿಂದ ನಾಲ್ಕು ಸಾವಿರ ಜನ ಹೊರಭಾಗದಿಂದ ಬಂದಿದ್ದಾರೆ. ಇಷ್ಟು ಜನ ಹೊರಭಾಗದಿಂದ ಬಂದು ಚುನಾವಣಾ ಕೆಲಸ ಮಾಡುವ ಅಗತ್ಯವಿಲ್ಲ. ವಿದ್ಯಾವಂತರ ಕ್ಷೇತ್ರದಲ್ಲಿ ಹೊರಗಡೆಯವರು ಬಂದು ಕೆಲಸ ಮಾಡಬೇಕಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಮುನಿರತ್ನ ಮನವಿ ಮಾಡಿದರು.

ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿ, ಟೆಸ್ಟ್ ಡ್ರೈವ್ ಕಾರನ್ನು ಟೆಸ್ಟ್ ಮಾಡಲು ಮಾತ್ರ ಇರಿಸಲಾಗುತ್ತದೆ. ಅದನ್ನು ಯಾರೂ ಮಾರಾಟ ಮಾಡಲ್ಲ. ಜನರು ಕೂಡ ಅದನ್ನು ತೆಗೆದುಕೊಳ್ಳಲ್ಲ, ಅದೇ ರೀತಿ ಸಿದ್ದರಾಮಯ್ಯ ಅವರನ್ನು ಟೆಸ್ಟ್ ಡ್ರೈವ್ ಕಾರ್ ರೀತಿ ಕಾಂಗ್ರೆಸ್‌ನವರು ಇರಿಸಿಕೊಂಡಿದ್ದಾರೆ. ಅಗತ್ಯವಿದ್ದಾಗ ಬಳಸಿ ಬಿಟ್ಟು ಬಿಡುತ್ತಾರೆ ಎಂದರು. 

ಇನ್ನು ಕನಕಪುರದ ಬಂಡೆ ಎಂದು ಡಿ.ಕೆ ಶಿವಕುಮಾರ್ ಅವ​​​ರನ್ನು ಕರೆಯುತ್ತಾರೆ. ಬಂಡೆಗೆ ಹೃದಯವಿಲ್ಲ, ಅನುಕಂಪವೂ ಇರಲ್ಲ. ಬಂಡೆಯನ್ನು ಯಾರೂ ಮನೆಗೆ ಕೊಂಡೊಯ್ಯಲ್ಲ. ಮುಂಬೈ ಹೋಟೆಲ್ ಮುಂದೆ ಅವರು ರಾಜೀನಾಮೆ ನೀಡಿದ್ದ ಶಾಸಕರನ್ನು ಕರೆತರಲು ಹೋಗಿ ಮಾಡಿದ್ದೆಲ್ಲ ನಾಟಕ ಎಂದು ಹೆಚ್​​ಡಿಕೆ ಈಗಾಗಲೇ ಡಿಕೆಶಿಗೆ ಹೇಳಿದ್ದಾರೆ ಎಂದು ಅಶೋಕ್​ ಟಾಂಗ್​ ನೀಡಿದರು.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಜಗಳ ಶುರುವಾಗಿದೆ. ಶಿರಾದಲ್ಲಿ ಡಿ.ಬಿ.ಜಯ ಚಂದ್ರ ಸೋಲಬೇಕು, ಆರ್‌.ಆರ್.ನಗರದಲ್ಲಿ ಸಿದ್ದರಾಮಯ್ಯಗೆ ಕುಸುಮಾ ಸೋಲಬೇಕು ಇದು ಅವರ ಒಳಜಗಳಾಗಿದೆ ಎಂದು ವ್ಯಂಗ್ಯವಾಡಿದರು.

ಶಿರಾದಲ್ಲಿ ಯಾಕೆ ಜಯಚಂದ್ರಗೆ ಟಿಕೆಟ್ ನೀಡಿದಿರಿ? ಎಂದು ರಾಜ್ಯ ಉಸ್ತು ವಾರಿ ಸುರ್ಜೇವಾಲ ಗದರಿದ್ದರು ಎಂದು ಡಿ.ಕೆ.ಶಿವಕುಮಾರ್ ಸಿದ್ದರಾಮಯ್ಯಗೆ ಮಾಧ್ಯಮದ ಮುಂದೆ ಕಿವಿಯಲ್ಲಿ ಹೇಳುವ ರೀತಿ ನಾಟಕ ಮಾಡಿದ್ದಾರೆ. ಈ ವಿಷಯ ಮಾಧ್ಯಮಕ್ಕೆ ಗೊತ್ತು ಮಾಡುವುದೇ ಶಿವಕುಮಾರ್‌ ಹುನ್ನಾರವಾಗಿತ್ತು ಎಂದರು.

ಮುನಿರತ್ನ ಹೇಳಿರುವಂತೆ ಕಾಂಗ್ರೆಸ್​​ನವರು ಓಟರ್ ಐಡಿ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಇದು ಕಾನೂನು ಬಾಹಿರ.ಯಾರೂ ಕೂಡ ತಮ್ಮ ಮಾಹಿತಿಯನ್ನು ರಾಜಕಾರಣಿಗಳಿಗೆ ನೀಡಬಾರದು ಎಂದು ಜನತೆಗೆ ಸಚಿವ ಆಶೋಕ್ ಮನವಿ ಮಾಡಿದರು.


ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್, 30 ಲಕ್ಷ ಉದ್ಯೋಗಿಗಳಿಗೆ ದಸರಾ ಉಡುಗೊರೆ

ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್, 30 ಲಕ್ಷ ಉದ್ಯೋಗಿಗಳಿಗೆ ದಸರಾ ಉಡುಗೊರೆ

 ಕೇಂದ್ರ ಸರ್ಕಾರಿ ನೌಕರರಿಗೆ ಬೋನಸ್, 30 ಲಕ್ಷ ಉದ್ಯೋಗಿಗಳಿಗೆ ದಸರಾ ಉಡುಗೊರೆ

ಕೇಂದ್ರ ಸರ್ಕಾರ ಬುಧವಾರ ತನ್ನ ನೌಕರರಿಗೆ 2019-2020ನೇ ಸಾಲಿನ ಬೋನಸ್ ಘೋಷಿಸಿದ್ದು, 30 ಲಕ್ಷ ಉದ್ಯೋಗಿಗಳು ಇದರ ಲಾಭ ಪಡೆಯಲಿದ್ದಾರೆ.

ನವದೆಹಲಿ: ಕೇಂದ್ರ ಸರ್ಕಾರ ಬುಧವಾರ ತನ್ನ ನೌಕರರಿಗೆ 2019-2020ನೇ ಸಾಲಿನ ಬೋನಸ್ ಘೋಷಿಸಿದ್ದು, 30 ಲಕ್ಷ ಉದ್ಯೋಗಿಗಳು ಇದರ ಲಾಭ ಪಡೆಯಲಿದ್ದಾರೆ.

ಕೇಂದ್ರ ಸರ್ಕಾರದ ಸಿ ಮತ್ತು ಡಿ ದರ್ಜೆ ನೌಕರರಿಗೆ ಬೋನಸ್ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು  ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ತಿಳಿಸಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾವೇಡಕರ್ ಅವರು, ಬೋನಸ್ ನ ಒಟ್ಟು 3,737 ಕೋಟಿ ರೂಪಾಯಿ ಆಗಿದ್ದು, ಕನಿಷ್ಠ 30 ಲಕ್ಷ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ. ವಿಜಯ ದಶಮಿಗೆ ಮುಂಚೆ ಒಂದೇ ಸಲಕ್ಕೆ ಈ ಬೋನಸ್ ಮೊತ್ತವನ್ನು ವಿತರಣೆ ಮಾಡಲಾಗುತ್ತದೆ ಎಂದರು.

ಕೇಂದ್ರ ಸರ್ಕಾರದ ಈ ಬೋನಸ್ ನೀಡುವ ಕ್ರಮದಿಂದ ದೇಶದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆಂದು ಪ್ರಕಾಶ್ ಜಾವಡೇಕರ್ ನಿರೀಕ್ಷಿಸಿದ್ದಾರೆ. ಮುಂಬರುವ ಹಬ್ಬದ ಸೀಸನ್​ನಲ್ಲಿ ಜನರಿಗೆ ಕೊಳ್ಳುವ ಶಕ್ತಿ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯಡಿಯೂರಪ್ಪ

ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯಡಿಯೂರಪ್ಪ

 

ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ: ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಂಡರು. 

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಉತ್ತರ ಕರ್ನಾಟಕದ ಕಲಬುರ್ಗಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಂಡರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್  ಉಪಸ್ಥಿತರಿದ್ದರು.
"ಜನರಿಗೆ ಯಾವುದೇ ರೀತಿಯ ತೊಂದರೆಯಾಗದ ರೀತಿಯಲ್ಲಿ ಅಗತ್ಯ ಸೌಕರ್ಯ ಒದಗಿಸಲು ತೀರ್ಮಾನ ತೆಗೆದುಕೊಳ್ಳುತ್ತೇವೆ" ಎಂದು ಮುಖ್ಯಮಂತ್ರಿ ಈ ಸಮಯ ಭರವಸೆ ನೀಡಿದ್ದಾರೆ. 


ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 54,044 ಕೇಸ್ ಪತ್ತೆ, 717 ಮಂದಿ ಸಾವು

ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 54,044 ಕೇಸ್ ಪತ್ತೆ, 717 ಮಂದಿ ಸಾವು

 ಕೋವಿಡ್-19: ದೇಶಾದ್ಯಂತ 24 ಗಂಟೆಗಳಲ್ಲಿ 54,044 ಕೇಸ್ ಪತ್ತೆ, 717 ಮಂದಿ ಸಾವು

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 54,044 ಕೇಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 76,51,108ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 54,044 ಕೇಸ್ ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 76,51,108ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. 

ಇನ್ನು ಒಂದೇ ದಿನ 717 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಕೂಡ 1,15,914ಕ್ಕೆ ತಲುಪಿದೆ ಎಂದು ಸಚಿವಾಲಯ ತಿಳಿಸಿದೆ. 

ಪ್ರತಿನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಗಿಂತ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ನಿನ್ನೆ ಒಂದೇ ದಿನ 61,775 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಈ ವರೆಗೂ ದೇಶದಲ್ಲಿ ಒಟ್ಟಾರೆ 67,95,103 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶಲ್ಲಿನ್ನೂ 7,40,090 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

   ಈ ನಡುವೆ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 10,83,608 ಸ್ಯಾಂಪಲ್ಸ್ ಗಳನ್ನು ಪರೀಕ್ಷೆ ನಡೆಸಲಾಗಿದ್ದು, ಇದರೊಂದಿಗೆ ದೇಶದಲ್ಲಿ ಈ ವರೆಗೂ 9,72,00,379 ಕೋವಿಡ್-19 ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.