Sunday, 20 September 2020

ಜಂಇಯ್ಯತುಲ್ ಮುಅಲ್ಲಿಮೀನ್ ಉಪಾದ್ಯಕ್ಷರಾದ ಆದಂ ಸಖಾಫಿ ನಿಧನರಾದರು

 

ಜಂಇಯ್ಯತುಲ್ ಮುಅಲ್ಲಿಮೀನ್ ಉಪಾದ್ಯಕ್ಷರಾದ ಆದಂ ಸಖಾಫಿ ನಿಧನರಾದರು


ಪುತ್ತಿಗೆ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕಾಸರಗೋಡು ಮಾಜಿ ಅದ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಮುಖ ಪಂಡಿತರು ಆದ ಆದಂ ಸಖಾಫಿ ಪಳ್ಳಪ್ಪಾಡಿ (53) ನಿಧನರಾದರು.ಸೋಮವಾರ ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅಂತ್ಯಸAಸ್ಕಾರ ಮಧ್ಯಾನ್ಹ ಪುತ್ತಿಗೆ ಮುಹಿಮ್ಮಾತ್‌ನಲ್ಲಿ.

1998 ರಿಂದ ಮುಹಿಮ್ಮಾತ್ ಮದ್ರಸದ ಪ್ರಧಾನಾಧ್ಯಪಕರಾದ ಆದಂ ಸಖಾಫಿ ಪ್ರಸ್ತುತ ಮುಹಿಮ್ಮಾತ್ ಜನರಲ್‌ಬೋಡಿ ಸದಸ್ಯರು,ಎಸ್ ಜೆ ಎಂ ಪುತ್ತಿಗೆ ರೇಂಜ್ ಅಧ್ಯಕ್ಷರು ಆಗಿದ್ದರು.


ಕುಂಬೋಲ್ ಪಾಂಬಕೋಯ ನಗರ್,ಮಂಗಳೂರು ಕಿನ್ಯ,ಆರಿಕ್ಕಾಡಿ ವಲಿಯ ಪಳ್ಳಿ,ಸುಳ್ಯ ಗಾಂಧಿ ನಗರ ಮುಂತಾದ ಸ್ಥಳಗಳಲ್ಲಿ ಮುಖ್ಯ ಅಧ್ಯಾಪಕರಾಗಿ ಸೇವೆಸಲ್ಲಿಸಿದ್ದರು.


ಅವರಿಗೆ ಪತ್ನಿ ತಾಹಿರಾ ಸುಲಿಯಾ , ಮಕ್ಕಳಾದ ತಮೀಮ್ (14), ಸಲೀಮ್ ಅಬ್ದುಲ್ಲಾ (11), ಫಾತಿಮಾ ತಸ್ತೀಮ್ (10), ಅಮಿನಾ ಶುಹೈಮಾ (5), ಮಹಮ್ಮದ್ ಸುಲೈಮ್ (10 ತಿಂಗಳು), ಸಹೋದರಿಯರಾದ ಆಯೆಷಾ ಮತ್ತು ಮರಿಯುಮ್ಮ,ಆಸಿಯ ಇದ್ದಾರೆ.

ಕಾಂತಪುರ ಎ ಪಿ ಅಬೂಬಕ್ಕರ್ ಮುಸ್ಲಿಯಾರ್,ಸಯ್ಯಿದ್ ಅಲಿ ಬಾಫಖಿ ತಂಙಳ್,ಸಯ್ಯಿದ್ ಕೆ ಎಸ್ ಆಟಕ್ಕೋಯ ತಂಙಳ್ ಕುಂಬೋಲ್,ಸಯ್ಯಿದ್ ಇಬ್ರಾಹೀಂ ಪೂಕುಂಞÂ ತಂಙಳ್ ಕಲ್ಲಕಟ್ಟ,ಸಯ್ಯಿದ್ ಪಿ ಎಸ್ ಆಟಕ್ಕೋಯ ತಂಙಳ್ ಬಾಹಸನ್,ಬಿ ಎಸ್ ಅಬ್ದುಲ್ಲಾ ಕುಂಞÂ ಪೈಝಿ,ಸಯ್ಯಿದ್ ಮುನೀರುಲ್ ಅಹ್ದಲ್ ತಂಙಳ್ ಮುಂತಾದವರು ಸಂತಾಪ ಪಟ್ಟರು.


SHARE THIS

Author:

0 التعليقات: