ಉಸಿರಾಟ ತೊಂದರೆಯಿಂದ ಏಮ್ಸ್ಗೆ ದಾಖಲಾದ ಗೃಹ ಸಚೀವ ಅಮಿತ್ ಶಾ
ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನಾರೋಗ್ಯದ ಕಾರಣದಿಂದ ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶನಿವಾರ ರಾತ್ರಿ 11 ಗಂಟೆಯ ಸುಮಾರಿಗೆ ಅಮಿತ್ ಶಾ ಅವರು ಏಮ್ಸ್ ನ ಕಾರ್ಡಿಯೋ ನ್ಯೂರೋ ಟವರ್ ನಲ್ಲಿ ದಾಖಲಾಗಿದ್ದಾರೆ. 40 ದಿನಗಳ ಅಂತರದಲ್ಲಿ ಮೂರನೇ ಬಾರಿ ಅಮಿತ್ ಶಾ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೋವಿಡ್ ನಿಂದ ಗುಣಮುಖರಾದ ನಂತರ ಅಮಿತ್ ಶಾ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಈ ಕಾರಣದಿಂದ ಅವರನ್ನು ಏಮ್ಸ್ ಗೆ ದಾಖಲಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.
ಕಳೆದ ಆಗಸ್ಟ್ ಎರಡರಂದು ಕೋವಿಡ್ -19 ಪಾಸಿಟಿವ್ ಆದ ಕಾರಣ ಅಮಿತ್ ಶಾ ಅವರು ಗುರುಗ್ರಾಮದ ಮೆದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೋವಿಡ್ ನೆಗೆಟಿವ್ ವರದಿಯಾದ ಕಾರಣ ಆಗಸ್ಟ್ 14ರಂದು ಆಸ್ಪತ್ರೆಯಿಂದ ಬಿಡುಗಡೆಯಾದ ಅವರು ಹೋಮ್ ಐಸೋಲೇಶನ್ ನಲ್ಲಿದ್ದರು.
ನಂತರ ಆಗಸ್ಟ್ 18ರಂದು ಆಯಾಸ ಮತ್ತು ಮೈ ಕೈ ನೋವಿನ ಕಾರಣ ಮತ್ತೆ ಏಮ್ಸ್ ಗೆ ಅಮಿತ್ ಶಾ ದಾಖಲಾಗಿದ್ದರು. ಆಗಸ್ಟ್ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಈಗ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
0 التعليقات: