ಕ.ರಾ.ರ.ಸಾ.ನಿ ಯಿಂದ ಶಾಲಾ ವಾಹನ
ಮಂಗಳೂರು: ಕೆಎಸ್ಆರ್ಟಿಸಿಯು ತನ್ನ ಆರ್ಥಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಸುಮಾರು 9 ಲಕ್ಷ ಕಿ.ಮೀ. ದೂರ ಸಂಚರಿಸಿರುವ ಬಸ್ಗಳನ್ನು ಶಾಲೆಗಳಿಗೆ ರಿಯಾಯಿತಿ ದರದಲ್ಲಿ ನೀಡುವ ಮೂಲಕ ಮಕ್ಕಳ ಸ್ಕೂಲ್ ಬಸ್ ಪ್ರಯಾಣದ ಕನಸನ್ನು ನನಸುಗೊಳಿಸಲು ಹೊರಟಿದೆ. ಕೆಎಸ್ಆರ್ಟಿಸಿ ಬಸ್ಗಳು ಐದರಿಂದ ಹತ್ತು ವರ್ಷದೊಳಗೆ 10 ಲಕ್ಷ ಕಿ.ಮೀ. ದೂರಓಡಿರುತ್ತವೆ. ಬಳಿಕ ಅವುಗಳನ್ನು ನಿರುಪಯುಕ್ತ ವೆಂದು ಪರಿಗಣಿಸಿ ಗುಜುರಿಗೆ ಹಾಕುವ ಬದಲು ಶಾಲೆಗಳಿಗೆ ನೀಡಿದರೆ ಬಾಳ್ವಿಕೆ ಮುಗಿಯುವವರೆಗೆ ಸದ್ಬಳಕೆ ಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ರಾಜ್ಯದ ಎಲ್ಲ ಡಿಪೋಗಳಲ್ಲಿ 10 ಲಕ್ಷ ಕಿ.ಮೀ. ಸಂಚರಿಸಿರುವ ಬಸ್ಗಳನ್ನು ಶಾಲೆಗಳಿಗೆ ರಿಯಾಯಿತಿ ದರದಲ್ಲಿ ನೀಡಲು ತೀರ್ಮಾನಿಸಿದೆ. ಈ ನಿರ್ಧಾರವು ನೂರಾರು ಶಾಲೆಗಳಿಗೆ ಅದರಲ್ಲಿಯೂ ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ “ಸ್ಕೂಲ್ ಬಸ್’ ಸೇವೆ ಪಡೆಯುವುದಕ್ಕೆ ವರದಾನವಾಗಲಿದೆ.
ರಾಜ್ಯದ 17 ಕೆಎಸ್ಆರ್ಟಿಸಿ ವಿಭಾಗಗಳಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ. 8 ವಿಭಾಗಗಳಿಂದ ಈಗಾಗಲೇ 61 ಬಸ್ಗಳನ್ನು ಮಾರಾಟ ಮಾಡಲಾಗಿದೆ. ಕೊರೊನಾ ಕಾರಣ ನಿಗಮ ನಷ್ಟದ ಲ್ಲಿದ್ದು, ಈ ವ್ಯವಸ್ಥೆಯನ್ನು ಮತ್ತಷ್ಟು ಉತ್ತೇಜಿಸಲು ಕೆಎಸ್ಆರ್ಟಿಸಿ ಮುಂದಾಗಿದೆ.
ಕರಾವಳಿಯಲ್ಲಿ ನಿರಾಸಕ್ತಿ
ಈ ವಿನೂತನ ಯೋಜನೆಗೆ ಕರಾವಳಿ ಯಲ್ಲಿ ಯಾರೂ ಉತ್ಸಾಹ ತೋರಿಸಿಲ್ಲ. ಮಂಗಳೂರು ವಿಭಾಗ ದಿಂದ ಕೇವಲ ಒಂದು ಬಸ್ ಮಾತ್ರ ರಿಯಾಯಿತಿ ದರದಲ್ಲಿ ಶಾಲೆಗೆ ಮಾರಾಟವಾಗಿದೆ. ಪುತ್ತೂರು ವಿಭಾಗದಿಂದ ಕೆಲವು ವರ್ಷಗಳ ಹಿಂದೆ 2 ಶಾಲೆಗಳ ಪ್ರಮುಖರು ಕೆಎಸ್ಆರ್ಟಿಸಿಯನ್ನು ಸಂಪರ್ಕಿಸಿದ್ದರು. ಆದರೆ ಯಾವುದೇ ಬಸ್ ಮಾರಾಟವಾಗಿಲ್ಲ.
ವಿನೂತನ ಯೋಜನೆ
ಸರಕಾರಿ ಶಾಲೆಗಳಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕರಾವಳಿ ಸೇರಿದಂತೆ ರಾಜ್ಯದಲ್ಲಿ ಈಗಾಗಲೇ ಕೊರೊನಾ ಮೊಬೈಲ್ ಕ್ಲಿನಿಕ್ಗೆ ಕೆಎಸ್ಆರ್ಟಿಸಿ ಬಸ್ಸನ್ನು ಬಳಸಲಾಗುತ್ತಿದೆ. ಅದೇ ರೀತಿ ರಾಜ್ಯದಲ್ಲಿರುವ ಹಳೆ ಬಸ್ಗಳಲ್ಲಿ ಹೈಟೆಕ್ ಮಹಿಳಾ ಶೌಚಾಲಯ ನಿರ್ಮಿಸಲು ಮುಂದಾಗಿದೆ. ಇನ್ನು ಪ್ರಮುಖ ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ಡಬಲ್ ಡೆಕ್ಕರ್ ಬಸ್ ಕಾರ್ಯಾಚರಣೆ ನಡೆಸಲು ಕೆಎಸ್ಆರ್ಟಿಸಿ ಚಿಂತಿಸಿದೆ ಎನ್ನುತ್ತಾರೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ.
ಕೆಲವು ತಿಂಗಳ ಹಿಂದೆ ಕೆಎಸ್ಆರ್ಟಿಸಿಯಿಂದ ನಮ್ಮ ಶಾಲೆಗೆ ರಿಯಾಯಿತಿ ದರದಲ್ಲಿ ಬಸ್ ಖರೀದಿಸಿದ್ದೇವೆ. ಖರೀದಿ ದರ, ಸರ್ವೀಸ್, ಆಲೆóàಶನ್ ಸೇರಿದಂತೆ ಒಟ್ಟು 6 ಲಕ್ಷ ರೂ. ಖರ್ಚಾಗಿದೆ. ಹೊಸ ಬಸ್ ಖರೀದಿಸುವುದಾದರೆ ಸುಮಾರು 45 ಲಕ್ಷ ರೂ. ತಗಲುತ್ತದೆ.
0 التعليقات: