Saturday, 26 September 2020

ಕೇಂದ್ರದ ಮಾಜಿ ಸಚಿವ `ಜಸ್ವಂತ್ ಸಿಂಗ್' ವಿಧಿವಶ


 ಕೇಂದ್ರದ ಮಾಜಿ ಸಚಿವ `ಜಸ್ವಂತ್ ಸಿಂಗ್'   ವಿಧಿವಶ

ನವದೆಹಲಿ : ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಜಸ್ವಂತ್ ಸಿಂಗ್ (82) ಅವರು ಇಂದು ನಿಧನರಾಗಿದ್ದಾರೆ.


ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಜಸ್ವಂತ್ ಸಿಂಗ್ ಅವರು ದೇಶಕ್ಕಾಗಿ ಮೊದಲು ಸೈನಿಕರಾಗಿ, ನಂತರ ರಾಜಕೀಯ ದೊಂದಿಗೆ ಸುದೀರ್ಘ ಒಡನಾಟ ಹೊಂದಿದ್ದರು. ಅಟಲ್ ಅವರ ಸರ್ಕಾರದ ಅವಧಿಯಲ್ಲಿ ಅವರು ಪ್ರಮುಖ ಖಾತೆಗಳನ್ನು ನಿಭಾಯಿಸಿ, ಹಣಕಾಸು, ರಕ್ಷಣೆ ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಅವರ ಈ ಸಾವನ್ನು ಕೇಳಿ ದುಃಖವಾಯಿತು ಎಂದು ಟ್ವೀಟ್ ಮಾಡಿದ್ದಾರೆ.


SHARE THIS

Author:

0 التعليقات: